ಐದನೇ ದೊಡ್ಡ ಅರ್ಥವ್ಯವಸ್ಥೆಯಲ್ಲಿ ರೆವ್ಡಿ ಮತ್ತು ಪ್ರಧಾನಿ ಫೋಟೋ….

ವೇದರಾಜ ಎನ್.ಕೆ.

ಭಾರತ ಈಗ ಜಗತ್ತಿನ ಐದನೇ ಅತಿ ದೊಡ್ಡ ಅರ್ಥವ್ಯವಸ್ಥೆಯಾಗಿದೆ ಎಂಬುದು ಈ ವಾರದ ದೊಡ್ಡ ಸುದ್ದಿ. ಅದರ ಬೆನ್ನಲ್ಲೇ ಹಣಕಾಸು ಮಂತ್ರಿಗಳು ಪಡಿತರ ಅಂಗಡಿಯಲ್ಲಿ ಪ್ರಧಾನಿಗಳ ಫೋಟೋ ಹಾಕಿಲ್ಲ ಎಂದು ತಗಾದೆ ಎಬ್ಬಿಸಿದ್ದರಿಂದಾಗಿ ಮತ್ತೊಮ್ಮೆ ರೆವ್ಡಿ ಚರ್ಚೆ, ಅದರೊಂದಿಗೆ ಸರಕಾರದ ನಿಜವಾದ ರೆವ್ಡಿ ಫಲಾನುಭವಿಗಳಲ್ಲಿ ಪ್ರಮಖರಾದ  ಅಡಾನಿ ಗುಂಪಿನ ಸಾಲಹೊರೆಯ ‘ಸ್ಪಷ್ಟೀಕರಣ’ ಮತ್ತು ಬೆಂಗಳೂರಿನ ಪ್ರವಾಹ… ಈ ವಾರ ವ್ಯಂಗ್ಯಚಿತ್ರಕಾರರ ಗಮನ ಸೆಳೆದ ಮುಖ್ಯ ವಿಷಯಗಳು:

ಭಾರತದ ಅರ್ಥವ್ಯವಸ್ಥೆ, ಇದುವರೆಗೆ ಐದನೇ ಸ್ಥಾನದಲ್ಲಿದ್ದ ಬ್ರಿಟನನ್ನು ಹಿಂದಿಕ್ಕಿ  ಈಗ ವಿಶ್ವದ ಐದನೇ ಅತಿ ದೊಡ್ಡ ಅರ್ಥವ್ಯವಸ್ಥೆ ಯಾಗಿದೆ , “ಇದೊಂದು ವಿಶೇಷ, ನಮ್ಮನ್ನು ಸುಮಾರು 250 ವರ್ಷ ಆಳಿದವರನ್ನು ಹಿಂದಿಕ್ಕಿದ್ದೇವೆ” ಎಂದು ಸ್ವತಃ ಪ್ರಧಾನ ಮಂತ್ರಿಗಳು ಸಂತೋಷದಿಂದ ಹೇಳಿದ್ದಾರೆ.

ಬ್ರಿಟನನ್ನು ದಾಟಿ ಹೋದ ಭಾರತ….
ಹೌದೇ, ಯಾವಾಗ!”
(ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್)

ನಿಜ, ಉದ್ಯೋಗ ಸಿಗದೆ ಅಲೆಯುತ್ತಿರುವ ಯುವಜನ, ಲಾಗುವಾಡುಗಳ ಬೆಲೆಗಳು ಕೈಗೆಟಕದಾಗುತ್ತಿರುವ ರೈತರು, ಅಷ್ಟೇ ಏಕೆ,  ರೂಪಾಯಿ ಬೆಲೆ ಇಳಿಕೆ ಮತ್ತು ಹಣದುಬ್ಬರದಿಂದ ಸಾಲಮರುಪಾವತಿ ಹೇಗೆಂದು ಯೋಚಿಸುತ್ತಿರುವ ಮಧ್ಯಮ ವರ್ಗದ ಜನಗಳಿಗೂ ನಂಬಲು ಕಷ್ಟವೆನಿಸುವ ಸುದ್ದಿ.

ಇದರೊಂದಿಗೇ ನಿರುದ್ಯೋಗ ದರ ಒಮ್ಮೆಲೇ  ಏರಿರುವ ಸುದ್ದಿಯೂ ಬಂದಿದೆ.

ನಿರುದ್ಯೋಗ ದರ ವರ್ಷದಲ್ಲೇ ಅತಿ ಹೆಚ್ಚಿನ ಮಟ್ಟಕ್ಕೆ

(ಸಂದೀಪ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ)

ದೊಡ್ಡ ಕಾರುಗಳಲ್ಲಿ ಓಡಾಡುವವರೇನೋ “ನಾವೀಗ ಐದನೇ ಅತಿದೊಡ್ಡ ಅರ್ಥವ್ಯವಸ್ಥೆ” ಎಂದು ಬೆನ್ನು ತಟ್ಟಿಕೊಳ್ಳಬಹುದು.

ಆದರೆ ರಸ್ತೆಗಳಲ್ಲೇ ಓಡಾಡಬೇಕಾದವರಿಗೆ “ನಿರುದ್ಯೋಗ ದರ ಈ ಒಂದು ವರ್ಷದಲ್ಲೇ ಅತೀ ಹೆಚ್ಚಿನ ಮಟ್ಟಕ್ಕೆ  ಏರಿದೆ” ಎಂಬುದು  ಅಷ್ಟೇ ದೊಡ್ಡ ಸುದ್ದಿ ತಾನೇ, ಏಕೆಂದರೆ ಅವರು ಅದನ್ನು  ಸ್ವತಃ ಅನುಭವಿಸುತ್ತಿದ್ದಾರೆ.

ನಿರುದ್ಯೋಗ ದರ  ಜುಲೈಯಲ್ಲಿ 6.8% ಇದ್ದದ್ದು, ಆಗಸ್ಟ್ ನಲ್ಲಿ 8.3%ಕ್ಕೆ ನೆಗೆದಿದೆ. ಅದರಲ್ಲೂ ನಗರಗಳಲ್ಲಿನ ನಿರುದ್ಯೋಗ ಈಗ ಎರಡಂಕಿಗೆ ಹತ್ತಿರ ಬಂದಿದೆ, ಅಂದರೆ 9.6%.

***

ಆದರೂ ಭಾರತದ ಅರ್ಥವ್ಯವಸ್ಥೆ  5ನೇ ಸ್ಥಾನ ಪಡೆದಿರುವುದಂತೂ ನಿಜ, ಅದೂ ಇದುವರೆಗೆ ಐದನೇ ಸ್ಥಾನದಲ್ಲಿದ್ದ  ಬ್ರಿಟನನ್ನು ಹಿಂದಕ್ಕೆ ಹಾಕಿ ….

ಪ್ರಧಾನ ಮಂತ್ರಿಗಳು ಇನ್ನೂ ಮುಂದೆ ಹೋಗಿ “ಭಾರತ ಒಂದು ಸಾವಿರ ವರ್ಷಗಳ ಗುಲಾಮಿಕೆಯ ಸಂಕೋಲೆಗಳನ್ನು ಮುರಿದಿದೆ, ಅದಿನ್ನು ನಿಲ್ಲುವುದಿಲ್ಲ, ನಾನು ನನ್ನ ದೇಶ ಹಿಂದುಳಿಯಲು ಬಿಡುವುದಿಲ್ಲ” ಎಂದಿದ್ದಾರೆ!

ಆದರೆ ಈ ವ್ಯಂಗ್ಯಚಿತ್ರಕಾರರಿಗೆ ಈ ಸಂದರ್ಭದಲ್ಲಿ ಆಮೆ ಮತ್ತು ಮೊಲದ ಸ್ಪರ್ಧೆಯ ಕತೆ ನೆನಪಾಗಿದೆ.

(ಸುಭಾನಿ, ಡೆಕ್ಕನ್‍ ಕ್ರಾನಿಕಲ್)

ಒಂದು ಗಮನಾರ್ಹ ವ್ಯತ್ಯಾಸವೆಂದರೆ ಬ್ರಿಟನ್ನಿನ ಅರ್ಥವ್ಯವಸ್ಥೆ ತಾನು ಹೇಗೂ ಮುಂದೆ ಇದ್ದೇನೆ ಎಂದು ನಿದ್ದೆಗೆ ಜಾರಿದ್ದಲ್ಲ, ಬಹುಶಃ ಅದರ ಅರ್ಥವ್ಯವಸ್ಥೆ ಬಹಳಷ್ಟು ಕೆಟ್ಟಿದ್ದರಿಂದಲೇ ಭಾರತದ ಅರ್ಥವ್ಯವಸ್ಥೆಯೂ ಅಷ್ಟೇನೂ ಉತ್ತಮ ಸ್ಥಿತಿಯಲ್ಲಿಲ್ಲ ಎಂದು ನಿರುದ್ಯೋಗ, ಹಣದುಬ್ಬರ ದರಗಳೂ ಸೇರಿದಂತೆ ಇತರ ಅಂಕಿ-ಅಂಶಗಳು ಸೂಚಿಸುತ್ತಿದ್ದರೂ, ಈ ಐದನೇ ಸ್ಥಾನ ಪಡೆದಿರಬಹುದು ಎಂದು ಕೆಲವರ ಅಂದಾಜು.

ಬ್ರಿಟನ್ನಿನ ಈಗಿನ ಪರಿಸ್ಥಿತಿಯೂ ಈ ಅಭಿಪ್ರಾಯವನ್ನು ಬಲಪಡಿಸುವಂತದ್ದು. ಏಕೆಂದರೆ ಅಲ್ಲಿನ ಅರ್ಥವ್ಯವಸ್ಥೆ ಎಷ್ಟು ಕೆಟ್ಟಿದೆಯೆಂದರೆ ಅಲ್ಲಿನ ಪ್ರಧಾನ ಮಂತ್ರಿಗಳು ರಾಜೀನಾಮೆ ಕೊಡಲೇ ಬೇಕಾಗಿ ಬಂತು.

ಈ ಸಂದರ್ಭದಲ್ಲಿ ಅವರ ಸ್ಥಾನಕ್ಕೆ ಒಬ್ಬ ಪ್ರಮುಖ  ಸ್ಪರ್ಧಿಯಾಗಿದ್ದ ಭಾರತ ಮೂಲದ ರಿಷಿ ಶುನಕ್‍ ಪ್ರಧಾನ ಮಂತ್ರಿಯಾಗಬೇಕು ಎಂದು ಅಲ್ಲಿನ ಆಳುವ ಪಕ್ಷ ನಿರ್ಧರಿಸಿದ್ದರೆ ಏನಾಗುತ್ತಿತ್ತು?

“ರಿಷಿ ಶುನಕ್‍ ಪ್ರಧಾನ ಮಂತ್ರಿ”
“ನಿರ್ಮಲಾ ಸೀತಾರಾಮನ್ ಹಣಕಾಸು ಮಂತ್ರಿ”
(ಪೊನ್ನಪ್ಪ, ದಿ ಫೆಡರಲ್‍.ಕಾಂ.)

ರಿಷಿ ಪ್ರಧಾನ ಮಂತ್ರಿ ಆಗಿಲ್ಲ, ಆದ್ದರಿಂದ ನಿರ್ಮಲಾರವರು  ಬ್ರಿಟನ್ನಿನ ಹಣಕಾಸು ಮಂತ್ರಿಗಳಾಗುವ ಪ್ರಶ್ನೆಯೇ ಇಲ್ಲ

***

ಆದರೆ ಭಾರತದಲ್ಲಂತೂ ಅವರ ಹುದ್ದೆ ಭದ್ರವಾಗಿದೆ!?

(ಪಿ.ಮಹಮ್ಮದ್, ಫೇಸ್‍ಬುಕ್)

ಕಳೆದ ಕೆಲವು ತಿಂಗಳಿಂದ, ಹಣದುಬ್ಬರ, ಪೆಟ್ರೋಲ್-ಡೀಸೆಲ್, ಎಲ್‍ಪಿಜಿ ಬೆಲೆಗಳಲ್ಲಿ ಸತತ ಹೆಚ್ಚಳ, ರೂಪಾಯಿ ಬೆಲೆ ಇಳಿಕೆ  ಮುಂತಾದ  ವಿಷಯಗಳ ಬಗ್ಗೆ ಪ್ರಧಾನಿಗಳ ಮೌನದಿಂದಾಗಿ  ಬಹಳಷ್ಟು ಟೀಕೆಗ-ಟಿಪ್ಪಣಿಗಳಿಗೆ ಗುರಿಯಾಗುತ್ತಿರುವ ಅವರು  ಈ ವಾರ  ಬೇರೆಯೇ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ.

ಆಳುವ ಪಕ್ಷದ ‘ಪಾರ್ಲಿಮೆಂಟ್‍ ಪ್ರವಾಸ್‍ ಯೋಜನಾ’ದ ಭಾಗವಾಗಿ (ಹಣಕಾಸು ಮಂತ್ರಿಯಾಗಿ ಅಲ್ಲ!) ತೆಲಂಗಾಣಾ ಪ್ರವಾಸದಲ್ಲಿ ಒಂದು ಹಳ್ಳಿಯ ಪಡಿತರ ಅಂಗಡಿಗೆ ಹೋಗಿ ಅಲ್ಲಿದ್ದವರ ಮೇಲೆ ಕೂಗಾಡಿದರಂತೆ- ಅಲ್ಲಿ ಕೊಡುತ್ತಿರುವ ಅಕ್ಕಿ-ಬೇಳೆಗಳ ಬಗ್ಗೆ ಅಲ್ಲ, ಅಲ್ಲಿ ಪ್ರಧಾನ ಮಂತ್ರಿಗಳ ಫೋಟೋ ಹಾಕಿಲ್ಲ ಎಂದು!

“ಎಲ್ಲಿದೆ ಪ್ರಧಾನ ಮಂತ್ರಿಗಳ ಫೋಟೋ?”
(ಮಂಜುಲ್, ವೈಬ್ಸ್ ಆಫ್ ಇಂಡಿಯಾ.ಕಾಂ)

ಮಾರುಕಟ್ಟೆಯಲ್ಲಿ ಕೆಜಿಗೆ 35ರೂ.ನಲ್ಲಿ  ಮಾರುವ ಅಕ್ಕಿಯನ್ನು ಪಡಿತರ ಅಂಗಡಿಗಳಲ್ಲಿ 1ರೂ.ಗೆ ಕೊಡಲಾಗುತ್ತಿದೆ. ಇದರ ಎಲ್ಲ ಖರ್ಚು-ವೆಚ್ಚಗಳನ್ನೂ ಕೇಂದ್ರ ಸರಕಾರವೇ ಹೊತ್ತು ಕೊಂಡಿದೆ, ಆದರೂ ಆ ಮಹಾ ನೇತಾರನ ಫೋಟೋ ಹಾಕುವುದಕ್ಕೆ ನಿಮಗೇಕೆ ಆಕ್ಷೇಪ ಎಂದು ಆಕೆ ಕೂಗಾಡಿದರಂತೆ!

(ಪಿ.ಮಹಮ್ಮದ್, ಫೇಸ್‍ಬುಕ್)

ಪ್ರತಿಕ್ರಿಯೆಯಾಗಿ ತೆಲಂಗಾಣದಲ್ಲಿ ಮರುದಿನ ಪ್ರಧಾನಿಗಳ ಫೋಟೋದೊಂದಿಗೆ ರೂ.1080 ಎಂಬ ಒಕ್ಕಣಿಕೆ ಇದ್ದ ಅಡುಗೆ ಅನಿಲ ಸಿಲಿಂಡರ್ ಗಳ ಪ್ರದರ್ಶನ ನಡೆಯಿತಂತೆ.

ಬಹುಶಃ ಜಿಎಸ್‍ಟಿ ಬಿಲ್‍ಗಳ ಮೇಲೂ ಪ್ರಧಾನಿಗಳ ಫೋಟೋ ಇರಬೇಕಾಗುತ್ತದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಯೆಚುರಿ ಟಿಪ್ಪಣಿ ಮಾಡಿದ್ದಾರೆ.

ಇತ್ತೀಚೆಗೆ ಈ ಸರಕಾರ ಮೊದಲ ಬಾರಿಗೆ ಸಾಮಾನ್ಯ ಜನರು ಬಳಸುವ ಆಹಾರ ಸಾಮಗ್ರಿಗಳ ಪೊಟ್ಟಣಗಳ ಮೇಲೂ ಜಿಎಸ್‍ಟಿ ವಿಧಿಸಿದೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಯಾವುದೂ ಪುಕ್ಕಟೆ ಅಲ್ಲ, ಎಲ್ಲ ಭಾರತೀಯರೂ ತೆರಿಗೆ ತೆರುತ್ತಾರೆ ಎಂದು ಮುಂದುವರೆದು ಯೆಚುರಿ ನೆನಪಿಸಿದ್ದಾರೆ.

ಕಿಸೀಕೇ ಬಾಪ್‍ ಕಾ ಹಿಂದುಸ್ತಾನ್‍ ಥೋಡೀ ಹೈ ಎಂದು ಕೆಲವು ತಿಂಗಳ ಹಿಂದೆ ಹಿಂದಿ/ ಉರ್ದು ಕವಿ ರಾಹತ್‍ ಇಂದೋರಿ ಹೇಳಿದ್ದು ನೆನಪಾಗುವುದು ಸಹಜ.

ಜೋ ಆಜ್‍ ಸಾಹಿಬ್-ಇ-ಮಸ್ನದ್ ಹೈ, ಕಲ್‍ ನಹೀಂ ಹೋಂಗೆ,
ಕಿರಾಯೇದಾರ್ ಹೈ, ಜಾತೀ ಮಕಾನ್‍ ಥೋಡೀ ಹೈ!”

(ಇಂದು ಪೀಠಾಧೀಶರಾಗಿರುವವರು, ನಾಳೆ ಇರಲಿಕ್ಕಿಲ್ಲ; ಬಾಡಿಗೆದಾರರಷ್ಟೇ ತಾನೇ, ಸ್ವಂತ ಮನೆಯೇನೂ ಅಲ್ಲವಲ್ಲ!) ಎನ್ನುತ್ತ  ಅವರು ಈ ಪಂಕ್ತಿ ವಾಚಿಸಿದ್ದರು

***

ಅಂದ್ಹಾಗೆ, ಕೆಲವೇ ದಿನಗಳ ಹಿಂದೆ ಪ್ರಧಾನಿಗಳೇ ‘ರೆವ್ಡಿ ಸಂಸ್ಕೃತಿ’  ಅಂದರೆ ಪುಕ್ಕಟೆ ಉಡುಗೊರೆ (ಅಥವ 35ರೂಪಾಯಿದ್ದನ್ನು 1ರೂಪಾಯಿಗೆ ಕೊಡುವುದನ್ನು) ನಿಲ್ಲಿಸಬೇಕು ಎಂದಿದ್ದರಲ್ಲ! ಆದರೆ ಈಗ ಅವರ ಹಣಕಾಸು ಮಂತ್ರಿಗಳೇ………

“ಪುಕ್ಕಟೆ ರೆವ್ಡಿ ಸಂಸ್ಕೃತಿ ನಿಲ್ಲಿಸಿ!”

“ಈ ರೆವ್ಡಿ ಮೇಲೆ ಪ್ರಧಾನಿಗಳ ಫೋಟೋ ಏಕಿಲ್ಲ??”
(ಅಲೋಕ್ ನಿರಂತರ್, ಫೇಸ್‍ ಬುಕ್)

***

ಪ್ರಧಾನಿಗಳ ಈ ‘ರೆವ್ಡಿ’ ಭಾಷಣದ(ಬೂಟಾಟಿಕೆಯ) ಮೇಲೆ ಎಲ್ಲ ವ್ಯಂಗ್ಯಚಿತ್ರಕಾರರೂ ಮುಗಿಬಿದ್ದಂತೆ ಕಾಣುತ್ತದೆ. ಇನ್ನೂ ಕೆಲವು ಸ್ಯಾಂಪಲ್‍ ಗಳು ಇಲ್ಲಿವೆ.

ನಾವು ಈ ರೆವ್ಡಿಗಳನ್ನು ಅವಲಂಬಿಸಿದ್ದೇವೆ, ಏಕೆಂದರೆ
ಸರಕಾರ ನಮಗೆ ಉದ್ಯೋಗ ಕೊಡಲಾರದಾಗಿದೆ”

ಉದ್ಯೋಗ?.. ಆದರೆ ನಿಮಗೊಂದು ಉದ್ಯೋಗ ಇದೆಯಲ್ಲಾ?!”
(ಸಂದೀಪ ಅಧ್ವರ್ಯು, ಟೈಮ್ಸ್‌ ಆಫ್‍ ಇಂಡಿಯಾ)

ಹೌದು, ಪ್ರಧಾನಿಗಳ ಸಲಹೆಯ ಮೇರೆಗೆ ಪಕೋಡಾ ಮಾರಲು ಇಳಿದರು, ಆದರೆ ಗ್ಯಾಸ್ 1000ರೂ.ದಾಟಿ, ಅದಕ್ಕೂ ಉಳಿಗಾಲವಿಲ್ಲದಾಗಿದೆಯಲ್ಲಾ ಎಂಬ ಇವರ ಚಿಂತೆ ಆ ಭಕ್ತರಿಗೆ ಅರ್ಥವಾಗಿದೆಯೋ ಇಲ್ಲವೋ…

“ಮಧ್ಯಾಹ್ನದ ಊಟ ಪುಕ್ಕಟೆ ಉಡುಗೊರೆಯೇನಲ್ಲ
ಅದಕ್ಕೆ ಪ್ರತಿಯಾಗಿ ನಾನು ಶಾಲೆಗೆ ಹೋಗುತ್ತೇನೆ”

“ಕೃಷಿ ಸಾಲಮನ್ನಾ ಒಂದು ಪುಕ್ಕಟೆ ಉಡುಗೊರೆ; ಕಾರ್ಪೊರೇಟ್‍ ಸಾಲಮನ್ನಾ ಒಂದು ನೀತಿ ಉಪಕ್ರಮ ಎಂದೇ ನನ್ನ ಖಚಿತ ಅಭಿಪ್ರಾಯ”

(ಆರ್.ಪ್ರಸಾದ್, ಇಕನಾಮಿಕ್‍ ಟೈಮ್ಸ್)

***

ಡೋಂಟ್ ವರಿ ಮಾಡ್ಕೊಳ್ಳಿ. ನಮ್ಮ ಸರಕಾರ (ರೆವ್ಡಿಗಳ) ಪ್ರಭಾವ ತಗ್ಗಿಸಲು ಹೊಸ ತೆರಿಗೆಗಳನ್ನು, ಲೆವಿಗಳನ್ನು, ಸೆಸ್‍ಗಳನ್ನು ಹೇರುತ್ತಿದೆ”

(ಸುಭಾನಿ, ಡೆಕ್ಕನ್‍ ಕ್ರಾನಿಕಲ್)

***

ಅದೇನೇ ಇರಲಿ, ಕೇವಲ 1ಶೇ. ಅತೀ ಶ್ರೀಮಂತರು ದೇಶದ ಒಟ್ಟು ಸಂಪತ್ತಿನ 51.5%ವನ್ನು ಗುಡ್ಡೆ ಹಾಕಿಕೊಂಡಿರುವಾಗ ಮತ್ತು ಜನಸಂಖ್ಯೆಯ 60% ಕೇವಲ 5% ಹೊಂದಿರುವಾಗ ಚರ್ಚೆ ನಡೆಯಬೇಕಾದ್ದು ರೆವ್ಡಿ, ಪುಕ್ಕಟೆ ಉಡುಗೊರೆಗಳ ಬಗೆಗಲ್ಲ, ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಬಗ್ಗೆ ., ಇಲ್ಲಿ ಸುಪ್ರಿಂ ಕೋರ್ಟಾಗಲೀ , ಚುನಾವಣಾ ಆಯೋಗವಾಗಲೀ ಮಧ್ಯಪ್ರವೇಶಿಸಬೇಕಾಗಿಲ್ಲ ಎಂದು ಮಾಜಿ ಮಖ್ಯ ಚುನಾವಣಾ ಆಯುಕ್ತ  ಎಸ್‍.ವೈ.ಖುರೇಶಿ ಹೇಳುತ್ತಾರೆ.

***

ಈ ನಡುವೆ, ಜನಗಳಿಗೆ ಕೊಡಬೇಕಾದ ಪರಿಹಾರವನ್ನು ತಮ್ಮ ವೈಯಕ್ತಿಕ  ದಾನಶೂರತ್ವ ಎಂದು ಬಗೆಯುವವರ ಕ್ರಮಗಳಾದ  ಕಂಪನಿ  ತೆರಿಗೆ ದರ ಇಳಿಕೆ, ಉತ್ತೇಜಕಗಳು ಮುಂತಾದವುಗಳಿಂದ  ಗರಿಷ್ಟ ಲಾಭ ಪಡೆದಿದೆ ಎನ್ನಲಾಗಿರುವ ಅಡಾನಿ ುದ್ದಿಮೆ ಸಮೂಹ ಬಹಳ ಸುದ್ದಿಯಲ್ಲಿದೆ…

(ಪಿ.ಮಹಮ್ಮದ್, ವಾರ್ತಾಭಾರತಿ)

ಅಡಾನಿ ಏಷ್ಯಾದ ನಂಬರ್‍ 1 ಮತ್ತು ಜಗತ್ತಿನ ನಂಬರ್ 3 ಅತಿ ಶ್ರೀಮಂತನೆಂಬ ಸ್ಥಾನಕ್ಕೇರಿರುವುದು ಒಂದೆಡೆಯಾದರೆ, ಅಡಾನಿಯವರ ಕಂಪನಿ ಸಮೂಹ ‘ಅಳತೆಮೀರಿ ಪ್ರಯೋಜನ’  ಪಡೆದಿರುವ ಸಮೂಹ ಎಂದು ಸಾಲಾರ್ಹತೆಯ ಮಟ್ಟವನ್ನು ಲೆಕ್ಕ ಹಾಕುವ ಫಿಚ್‍ ಕಂಪನಿಯ ಘಟಕವಾದ ‘ಕ್ರೆಡಿಟ್‍ಸೈಟ್ಸ್’ ಹೇಳಿರುವುದು ಮತ್ತೊಂದು ಸುದ್ದಿ. (ಇಂಡಿಯನ್‍ ಎಕ್ಸ್ ಪ್ರೆಸ್, ಆಗಸ್ಟ್ 25)

ಅಂದರೆ ಇದರರ್ಥ ಅಡಾನಿ ಸಮೂಹ ಹಲವಾರು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಎಷ್ಟೊಂದು ಸಾಲ ಮಾಡಿದೆಯೆಂದರೆ ಅದು ಸಾಲದ ಬಲೆಯಲ್ಲಿ ಸಿಲುಕಿಕೊಳ್ಳುವ, ಸಾಲ ಮರುಪಾವತಿ ಮಾಡಲಾಗದ ಸ್ಥಿತಿ ತಲುಪುವ ಅಪಾಯಗಳು ಇವೆ ಎಂದು ಇದರ ಆಧಾರದಲ್ಲಿ ಇನ್ನೊಂದು ಹಣಕಾಸು ವೀಕ್ಷಣಾ ಸಂಸ್ಥೆ ಬ್ಲೂಮ್‍ಬರ್ಗ್ ಹೇಳಿದೆ.

ಕ್ರೆಡಿಟ್‍ಸೈಟ್ಸ್ ಹೇಳಿಕೆಯ ನಂತರ ತನ್ನ ಸಾಲ ಅಷ್ಟೊಂದು ಅಪಾಯಕಾರೀ ಮಟ್ಟದಲ್ಲಿ ಇಲ್ಲ ಎಂದು ಸಮಜಾಯಿಷಿ ನೀಡಲು ಅಡಾನಿ ಸಮೂಹ  ‘ಸ್ಪಷ್ಟೀಕರಣ’ ನೀಡಿದೆ.

2015-16ರಲ್ಲಿ,( ಅಂದರೆ ಮೋದಿ ಸರಕಾರ ಬಂದ ಒಂದು ವರ್ಷದಲ್ಲಿ) ಅದರ ಸಾಲಗಳಲ್ಲಿ 55% ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಬಂದಿದ್ದರೆ, 31% ಖಾಸಗಿ ಬ್ಯಾಂಕುಗಳಿಂದ ಬಂದಿತ್ತು. 2021-22ರಲ್ಲಿ ಅದು ಅನುಕ್ರಮವಾಗಿ 21% ಮತ್ತು 11% ಕ್ಕೆ ಇಳಿದಿದೆ ಎಂದು ಸ್ವತಃ ಅಡಾನಿ ಗುಂಪು ತನ್ನ 15ಪುಟಗಳ ‘ಪ್ರತ್ಯುತ್ತರ’ದಲ್ಲಿ ಹೇಳಿದೆ ಎಂದು ವರದಿಯಾಗಿದೆ.

“ಅಡಾನಿ ಸಮೂಹದ ಮೇಲೆ ಭಾರೀ ಸಾಲ ಹೊರೆ”

“ಸರ್ ಚೆಕ್ ಸೀದಾ ಆ ಬಾಕ್ಸಿನೊಳಕ್ಕೆ ಹಾಕಿ ಬಿಡಿ..”
(ಅಲಂಕಾರ್ ಗೋಸ್ವಾಮಿ, ಫೇಸ್‍ ಬುಕ್)

ಮಾರ್ಚ್  2022ರಲ್ಲಿ ಅಡಾನಿ ಸಮೂಹದ ಒಟ್ಟು ಸಾಲ ಹೊರೆ 1.88 ಲಕ್ಷ ಕೋಟಿ ರೂ. ಎಂದು ವರದಿಯಾಗಿದೆ.

ಗಮನಾರ್ಹ ಸಂಗತಿಯೆಂದರೆ “ಬ್ಯಾಂಕುಗಳೊಂದಿಗೆ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಡಳಿತದೊಂದಿಗೆ ಈ ಸಮೂಹದ ಬಲಿಷ್ಟ ಸಂಬಂಧಗಳಿಂದಾಗಿ ಅವರು ‘ಸಮಾಧಾನ’ ಪಡಬಹುದು ಎಂದು ಬ್ಲೂಮ್‍ ಬರ್ಗ್ ಮುಂದುವರೆದು ಹೇಳಿದೆ   (ದಿ ಹಿಂದು, ಸೆಪ್ಟಂಬರ್ 6)!

ಇದೇ ಸಂದರ್ಭದಲ್ಲಿ, ಭಾರತದಲ್ಲಿ 2016ರಿಂದ 2021ರ ಅವಧಿಯಲ್ಲಿ ಅರ್ಥವ್ಯವಸ್ಥೆಯ ‘ಕ್ರೋನಿ’(ಬಂಟ) ಕ್ಷೇತ್ರದಿಂದ ಶತಕೋಟ್ತಾಧಿಪತಿಗಳ ಸಂಪತ್ತಿನ ಪ್ರಮಾಣ 29%ದಿಂದ 43%ಕ್ಕೆ ಏರಿದೆ ಎಂದೂ ವರದಿಯಾಗಿದೆ.

***

ಕಳೆದ ವಾರ ಬಹಿರಂಗಕ್ಕೆ ಬಂದ ಸಾವರ್ಕರ್ ಮತ್ತು ಬುಲ್‍ಬುಲ್ ಕತೆಯಲ್ಲಿ ಬುಲ್‍ಬುಲ್‍ ಸವಾರಿ ಒಂದು ರೂಪಕವೆಂದು ಕಾಣಬೇಕಷ್ಟೇ ಎಂದು ಸಮಜಾಯಿಷಿ ಕೊಡಲಾಗಿದೆ.. ಅದೇ ವೇಳೆಗೆ ಬುಲ್‍ಬುಲ್‍  ಲೇಖಕರ ಸೃಷ್ಟಿಯೋ ಅಥವ ಸ್ಥಳೀಯ/ ಜಾನಪದ ಕತೆಯೋ ಗೊತ್ತಿಲ್ಲ, ಆದರೆ ಅದು ಲೇಖಕರ ಕಲ್ಪನೆಯಿಂದ ಪುಟಿದೆದ್ದದ್ದಂತೂ ಅಲ್ಲ ಎಂದೂ ಸ್ಪಷ್ಟೀಕರಣ ನೀಡಲಾಗಿದೆ.  ವ್ಯಂಗ್ಯಚಿತ್ರಕಾರರಂತೂ  ಈ ‘ಸಮಜಾಯಿಷಿಯನ್ನು ಸ್ವೀಕರಿಸಿದಂತೆ ಕಾಣುತ್ತಿಲ್ಲ…

ಈ ಕುರಿತು ಪ್ರಕಟವಾಗಿರುವ ಇನ್ನೂ ಕೆಲವು ವ್ಯಂಗ್ಯಚಿತ್ರಾತ್ಮಕ ಟಿಪ್ಪಣಿಗಳು

ಇವುಗಳೂ ರೂಪಕಗಳೇ ತಾನೇ?

ಚರಿತ್ರೆಯ ಪುನರ್ಲೇಖನ………

“ಮೊದಲ ಶಕ್ತಿಯಾಧಾರಿತ ಹಾರಾಟ ನಡೆಸಿದ್ದು ಯಾರು?
“ಅಲ್ಲ ಅದು, ರೈಟ್‍ ಸೋದರರಲ್ಲ”

(ಸಂದೀಪ ಅಧ್ವರ್ಯು, ಟೈಮ್ಸ್ ಆಫ್‍ ಇಂಡಿಯಾ)

ನೈಸ್! (ಸತೀಶ ಆಚಾರ್ಯ , ಮೊಲಿಟಿಕ್ಸ್.ಇನ್)

***

ಸಾರೀ..ಸಾರೀ ಸಾರೀ..ಬುಲ್‍ಬುಲ್‍….

“ಈ ಅಲ್ಪಜೀವಿಗಳನ್ನು ಕಂಡರೆ ನನಗೆ ಅಯ್ಯೋ ಅನಿಸುತ್ತದೆ”
(ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್ )

ಬುಲ್‍ಬುಲ್‍ ಹೇಳುತ್ತದೆ ಸಾರೀ..ಸಾರೀ..ಸಾರೀ..
(ಆರ್‌. ಪ್ರಸಾದ್, ಇಕನಾಮಿಕ್‍ ಟೈಮ್ಸ್)

 ಮತ್ತು ವರ್ತಮಾನ ಕಾಲದಲ್ಲಿ
ಮಂಗಳೂರಿಗೂ ಒಂದು ಟ್ರಿಪ್

(ಪಿ.ಮಹಮ್ಮದ್,)

ಹಾಗೂ ಭವಿಷ್ಯದ ಚರಿತ್ರೆಯ ಪಾಟ ಪುಸ್ತಕದಲ್ಲಿ…..

“…ಮತ್ತು ಕಾಂಗ್ರೆಸ್‍ ಮೋದೀಜೀಯ ವಿದೇಶಿ ಟ್ರಿಪ್‍ಗಳನ್ನು ಬಹಿಷ್ಕರಿಸಿದಾಗ ಮೋದೀಜೀ ವಿದೇಶಗಳಿಗೆ ನವಿಲ ಮೇಲೆ ಕುಳಿತು ಹಾರಿ ಹೋಗುತ್ತಿದ್ದರು!

(ರೆಮಿಕ್ಸ್ ಕಾಮಿಕ್ಸ್, ಫೇಸ್‍ಬುಕ್)

***

ಈ ಬಾರಿಯ ಮಳೆಗಾಲ ಬೆಂಗಳೂರಿನ ‘ಅಭಿವೃದ್ಧಿ’ಯ, ಒಟ್ಟಾರೆಯಾಗಿ , ‘ಅಭಿವೃದ್ಧಿ’ ಪರಿಕಲ್ಪನೆಯ ಓರೆಕೋರೆಗಳನ್ನು ಹಳ್ಳ-ದಿಣ್ಣೆಗಳನ್ನು ಕಣ್ಣಿಗೆ ಕಟ್ಟುವಂತೆ ತೋರಿಸುತ್ತಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

(ದಿನೇಶ್‍ ಕುಕ್ಕುಜಡ್ಕ, ಫೇಸ್‍ ಬುಕ್)

***

ಬಹುಶಃ ದಿಲ್ಲಿಯಲ್ಲಿ ‘ರಾಜಪಥ’ದ ಹೆಸರು ಬದಲಿಸಿ ‘ಕರ್ತವ್ಯ ಪಥ’ ಎಂದು ಮಾಡಿರುವುದು ಡಬಲ್‍ ಇಂಜಿನ್ ಸರಕಾರ ಇರುವ ಕರ್ನಾಟಕಕ್ಕೂ ಮಾದರಿಯಾಗಬಹುದು….

(ಪೊನ್ನಪ್ಪ, ಫೇಸ್‍ಬುಕ್)

***

ಕೊನೆಯದಾಗಿ,   ದಿಲ್ಲಿಯಲ್ಲಿ ಆರೆಸ್ಸೆಸ್‍ನ ಮುಖ್ಯ ಕಚೇರಿಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‍ಎಫ್‍)ಯ ಭದ್ರತೆ ಒದಗಿಸಲಾಗಿದೆಯಂತೆ!

ಸಾಂಸ್ಕೃತಿಕ ರಾಷ್ಟ್ರೀಯವಾದಕ್ಕೆ ಕೈಗಾರಿಕೆಯ ಸ್ಥಾನಮಾನ ಸಿಕ್ಕಿದೆ?

( ಆರ್. ಪ್ರಸಾದ್, ಇಕನಾಮಿಕ್‍ ಟೈಮ್ಸ್)

Donate Janashakthi Media

Leave a Reply

Your email address will not be published. Required fields are marked *