ಉತ್ತರಪ್ರದೇಶ : ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತವಾಗಿದ್ದು, ಪಿಲಿಭಿತ್-ತನಕಪುರ ರಸ್ತೆಯ ವಿಯೋರಾ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ. ಕಾರು
ಸುಮಾರು 11 ಜನರನ್ನು ಹೊತ್ತೊಯುತ್ತಿದ್ದ ಕಾರು ಮತ್ತೊಂದು ವಾಹನವನ್ನು ಹಿಂದಿಕ್ಕಲು ಪ್ರಯತ್ನಿಸಿದಾಗ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಜೂಜಾಟದ ಚಟಕ್ಕೆ ಬಿದ್ದ ವಿದ್ಯಾರ್ಥಿ: ಸಾಲ ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ
ಮೃತರನ್ನು ಮುಲ್ಕಿ (65), ಮಂಜೂರ್ ಅಹ್ಮದ್ (60), ಬಹಿಯುದ್ದೀನ್ (55), ಷರೀಫ್ ಅಹ್ಮದ್ (60), ಸಾಹೇ ಆಲಂ (35), ಮತ್ತು ರಕೀಮ್ (11) ಎಂದು ಗುರುತಿಸಲಾಗಿದೆ. ಗಾಯಗೊಂಡವರಲ್ಲಿ ಮೂವರನ್ನು ಹೆಚ್ಚು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ ಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಬಿಡುಗಡೆಗೊಳಿಸಲಾಯಿತು.
ಉತ್ತರಾಖಂಡದ ಖತಿಮಾ ಜಿಲ್ಲೆಯ ಜಮೂರ್ ಗ್ರಾಮದ ನಿವಾಸಿಗಳಾದ ಸಂತ್ರಸ್ತರು, ಪಿಲಿಭಿಡ್‌ನ ಚಂದೋಮ್ ಗ್ರಾಮದಲ್ಲಿ ನಡೆದ ವಿವಾಹದ ನಂತರದ ಆಚರಣೆಯಿಂದ ಹಿಂತಿರುಗುತ್ತಿದ್ದಾಗ ಈ ಒಂದು ಭೀಕರ ಅಪಘಾತ ಸಂಭವಿಸಿದೆ.
ಇದನ್ನೂ ನೋಡಿ : ಸೇಡಂ ಸನಾತನಿ ಉತ್ಸವ : ಸಂವಿಧಾನ ವಿರೋಧ ಉತ್ಸವ – ಚಿಂತಕರ ಅಭಿಮತ Janashakthi Media