ಪೆನ್ಸಿಲ್ವೇನಿಯಾದ ಲ್ಯಾಂಕಾಸ್ಟರ್ ಕೌಂಟಿಯಲ್ಲಿ ಮೇ 10ರಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕ್ಲೀವ್ಲ್ಯಾಂಡ್ ಸ್ಟೇಟ್ ಯೂನಿವರ್ಸಿಟಿಯ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಮೃತರನ್ನು 23 ವರ್ಷದ ಸೌರವ್ ಪ್ರಭಾಕರ್ ಮತ್ತು 20 ವರ್ಷದ ಮಾನವ್ ಪಟೇಲ್ ಎಂದು ಗುರುತಿಸಲಾಗಿದೆ. 
ಇದನ್ನು ಓದಿ :-ಒಂದು ವಾರ ರಾಜ್ಯಾದ್ಯಂತ ಮಳೆ; ಯೆಲ್ಲೊ ಅಲರ್ಟ್ ನೀಡಿದ ಐಎಂಡಿ
ಅಪಘಾತದ ವೇಳೆ ಸೌರವ್ ಪ್ರಭಾಕರ್ ಕಾರು ಚಾಲನೆ ಮಾಡುತ್ತಿದ್ದರು. ಅವರು ಮತ್ತು ಮಾನವ್ ಪಟೇಲ್ ಸ್ಥಳದಲ್ಲೇ ಸಾವನ್ನಪ್ಪಿದರು. ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಮತ್ತೊಬ್ಬ ಪ್ರಯಾಣಿಕ ಗಾಯಗೊಂಡು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ವಾಹನವು ರಸ್ತೆಯಿಂದ ಹೊರಟು ಮರಕ್ಕೆ ಡಿಕ್ಕಿ ಹೊಡೆದು ನಂತರ ಸೇತುವೆಗೆ ಡಿಕ್ಕಿ ಹೊಡೆದಿರುವುದು ಕಂಡುಬಂದಿದೆ. ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ಇದನ್ನು ಓದಿ :-ಅಸ್ಮಿತೆ ಆಧಾರಿತ ದ್ವೇಷದಿಂದ ದೂರವಿರಬೇಕು
ಈ ದುರ್ಘಟನೆಯ ಕುರಿತು ನ್ಯೂಯಾರ್ಕ್ನಲ್ಲಿರುವ ಭಾರತೀಯ ಕಾನ್ಸುಲೇಟ್ ತೀವ್ರ ದುಃಖ ವ್ಯಕ್ತಪಡಿಸಿದೆ.