ಕರ್ನಾಟಕದಲ್ಲಿ 20 ಲಕ್ಷ, ಭಾರತದಲ್ಲಿ 5.8 ಕೋಟಿ ಪಡಿತರ ಚೀಟಿಗಳ ರದ್ದು: ಜನರನ್ನು ತೀವ್ರವಾಗಿ ತಟ್ಟುತ್ತಿರುವ WTO ಜೊತೆಗಿನ ಒಪ್ಪಂದ

ಸಿ.ಸಿದ್ದಯ್ಯ
ಕೆಲ ದಿನಗಳಿಂದ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದುಗೊಳ್ಳುತ್ತಿರುವ ಬಗ್ಗೆಯೇ ಎಲ್ಲೆಡೆ ಮಾತುಗಳು ಕೇಳಿಬರುತ್ತಿವೆ. ಇದರಿಂದ ಅರ್ಹ ಕುಟುಂಬಗಳೂ ವಂಚಿತರಾಗುತ್ತಿದ್ದಾರೆ. ಬಿಪಿಎಲ್ ಕಾರ್ಡ್ ಗಳನ್ನು ಕಳೆದುಕೊಂಡ ಬಡ ಕುಟುಂಬದವರು ರಾಜ್ಯ ಸರ್ಕಾರದ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕರ್ನಾಟಕ

ಅನರ್ಹರು ಪಡೆದಿರುವ ಬಿಪಿಎಲ್ ಕಾರ್ಡ್ ಗಳನ್ನು ಮಾತ್ರ ರದ್ದುಗೊಳಿಸುತ್ತೇವೆ, ಅರ್ಹರಿಗೆ ಯಾವುದೇ ಕಾರಣಕ್ಕೂ ಬಿಪಿಎಲ್ ಕಾರ್ಡ್ ರದ್ದುಗೊಳಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ‘ಬಿಟ್ಟಿ ಭಾಗ್ಯ’ ಎಂದು ಕರೆಯುತ್ತಿದ್ದ ಬಿಜೆಪಿ ನಾಯಕರು ಜನರ ಆಕ್ರೋಶ ಮತ್ತು ಅಸಹಾಯಕತೆಯನ್ನು ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳತೊಡಗಿದ್ದಾರೆ. ವಿಶ್ವ ವಾಣಿಜ್ಯ ಸಂಘಟನೆ ಜೊತೆಗಿನ ಒಪ್ಪಂದವನ್ನು ಜಾರಿಗೊಳಿಸುತ್ತಿರುವ ಪರಿಣಾಮ ಇದಾಗಿದೆ ಎಂಬ ಸತ್ಯವನ್ನು ಈ ಎರಡೂ ರಾಜಕೀಯ ಪಕ್ಷಗಳು ಜನರಿಂದ ಮುಚ್ಚಿಟ್ಟು ಜನರನ್ನು ಮತ್ತೆ ವಂಚಿಸತೊಡಗಿವೆ. ಕರ್ನಾಟಕ

* ಕಾಂಗ್ರೆಸ್ ಬಡವರ ಅನ್ನ ಕಸಿಯುತ್ತಿದೆ. ದೇವರು ಒಳ್ಳೇದು ಮಾಡ್ತಾನಾ ಇವರಿಗೆ? ಪಾಪಿಗಳ ಸರ್ಕಾರ ಇದು:  ಆರ್. ಅಶೋಕ
* ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸುವುದನ್ನು ತಕ್ಷಣ ನಿಲ್ಲಿಸಿ: ಅಶ್ವತ್ ನಾರಾಯಣ:
* 14 ಲಕ್ಷ ಬಡವರ ಬಿಪಿಎಲ್ ಕಾರ್ಡ್ ಕಿತ್ತುಕೊಳ್ಳುವುದು ಘೋರ ಅಪರಾಧ. ಅದರಲ್ಲೂ ಜಾತಿ ಹುಡುಕಿ ಕಾರ್ಡ್ ರದ್ದು. ಬಡವರ ಅನ್ನಕ್ಕೂ ಕನ್ನ ಹಾಕುವ ಪರಮ ಅನ್ಯಾಯ ಇದಾಗಿದೆ: ಸಿ.ಟಿ.ರವಿ
* ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತಿದ್ದಾರೆ; ಬಸನಗೌಡ ಪಾಟೀಲ್‌ ಯತ್ನಾಳ್‌
* ರಾಜ್ಯ ಸರ್ಕಾರವು ದಿವಾಳಿಯಾಗಿದ್ದು, ಇದೇ ಕಾರಣಕ್ಕೆ ಬಿಪಿಎಲ್ ಕಾರ್ಡ್ ರದ್ದು ಪ್ರಕ್ರಿಯೆ ಪ್ರಾರಂಭಿಸಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರವು ಎಡವಿದೆ. ಇದರಿಂದಲೇ ಆರ್ಥಿಕ ನಷ್ಟವಾಗುತ್ತಿದ್ದು, ಇದನ್ನು ಸರಿದೂಗಿಸಲು ಈ ಕ್ರಮ ಅನುಸರಿಸಲಾಗುತ್ತಿದೆ:  ಬಿಜೆಪಿ ಹಾಗೂ ಜೆಡಿಎಸ್‌. ಕರ್ನಾಟಕ
*ಅನರ್ಹರು ಹೊಂದಿರುವ ಬಿಪಿಎಲ್‌ ಕಾರ್ಡ್‌ ಅನ್ನು ರದ್ದುಗೊಳಿಸಲಾಗುತ್ತದೆ ಅಷ್ಟೇ. ಇದರಿಂದ ಬಡವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಮಾತ್ರ ಈ ವಿಚಾರದಲ್ಲಿ ಮೊಸರಲ್ಲೂ ಕಲ್ಲು ಹುಡುಕುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ: ಡಿಕೆಶಿ ಮತ್ತು ಸಿದ್ದರಾಮಯ್ಯ.

ಇದನ್ನೂ ಓದಿ: ಜೆಡಿಯು ಶಾಸಕರ ನಿವಾಸ ಧ್ವಂಸ; 1.5 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಲೂಟಿ

ಏನಿದು ಇವರ ನಾಟಕ? ನಿಜವಾದ ಕಾರಣವನ್ನು ಯಾಕಾಗಿ ಮರೆಮಾಚುತ್ತಿದ್ದಾರೆ? ಕೇಂದ್ರದಲ್ಲಿ ಆಡಳಿತ ನಡೆಸಿದ ಈ ಎರಡು ರಾಜಕೀಯ ಪಕ್ಷಗಳ ಗುರಿ ಏನು? ಇವೆಲ್ಲಕ್ಕೂ ಉತ್ತರ: ವಿಶ್ವ ವಾಣಿಜ್ಯ ಸಂಘಟನೆ ಜೊತೆಗೆ ಮಾಡಿಕೊಂಡಿರುವ ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದ ಸಾಮಾನ್ಯ ಒಪ್ಪಂದ (GATT)ವನ್ನು ಜಾರಿಗೆ ತರುವುದೇ ಇವರ ಗುರಿಯಾಗಿದೆ. ಈ ಒಪ್ಪಂದವನ್ನು ಜಾರಿಗೆ ತರಬೇಕಾದರೆ, ಕೃಷಿ ಉತ್ಪನ್ನಗಳಿಗೆ ಸರ್ಕಾರ ನೀಡುತ್ತಿರುವ ಬೆಂಬಲ ಬೆಲೆ ಕಡಿತಗೊಳಿಸಬೇಕು, ಧಾನ್ಯಗಳ ಸಂಗ್ರಹ ಮತ್ತು ದಾಸ್ತಾನು ಕಡಿಮೆ ಮಾಡಬೇಕು ಮತ್ತು ಪಡಿತರ ವ್ಯವಸ್ಥೆಯನ್ನು ಇಲ್ಲವಾಗಿಸಬೇಕು. ಇದರ ಪರಿಣಾಮವೇ ಇಂದು ಅನರ್ಹರು ಎಂಬ ಹೆಸರಿನಲ್ಲಿ ರಾಜ್ಯದಲ್ಲಿ ಲಕ್ಷಾಂತರ ಬಿಪಿಎಲ್ ಕಾರ್ಡ್ ಗಳ ರದ್ದು. ದೇಶದಲ್ಲಿ ಇದುವರೆಗೆ 5.8 ಕೋಟಿ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಲಾಗಿದೆ.

ಡಿಜಿಟಲೈಸೇಶನ್ ಡ್ರೈವ್ ನಿಂದಾಗಿ ಭಾರತದಲ್ಲಿ 5,8 ಕೋಟಿ ಚೀಟಿಗಳ ರದ್ದು!

ಕರ್ನಾಟಕದಲ್ಲಿ ಮಾತ್ರವೇ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಮಾಡುತ್ತಿರುವುದಲ್ಲ. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿಯೂ ಪಡಿತರ ಚೀಟಿಗಳನ್ನು ರದ್ದು ಮಾಡತೊಡಗಿದ್ದಾರೆ.  ಸಬ್ಸಿಡಿ ದರದ ಅಕ್ಕಿ ಮತ್ತು ಗೋಧಿಯನ್ನು ಪಡೆಯುವ ಅನರ್ಹ ಫಲಾನುಭವಿಗಳನ್ನು ಹೊರಹಾಕುವ ಧಾವಂತದ ನಡುವೆ, ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅರ್ಹ ಕುಟುಂಬಗಳನ್ನೂ ಪಡಿತರ ಸೌಲಭ್ಯ ಪಡೆಯುವುದರಿಂದ ಹೊರಹಾಕುತ್ತಿವೆ. ಕರ್ನಾಟಕ

ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದುಗೊಳಿಸುತ್ತಿರುವುದನ್ನು ರಾಜ್ಯ ಬಿಜೆಪಿ ನಾಯಕರು ರಾಜ್ಯ ಸರ್ಕಾರವನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿರುವ ಸಂದರ್ಭದಲ್ಲಿಯೇ 2024ರ ನವೆಂಬರ್ 19ರಂದು ಕೇಂದ್ರ ಆಹಾರ ಸಚಿವಾಲಯದಿಂದ ಮತ್ತಷ್ಟು ಆತಂಕಗೊಳ್ಳುವ ವರದಿ ಬಂದಿದೆ. ಡಿಜಿಟಲ್ ಕ್ರಾಂತಿ ಹೆಸರಿನಲ್ಲಿ ದೇಶದಲ್ಲಿನ 5.8 ಕೋಟಿ ಕುಟುಂಬಗಳು ಪಡಿತರ ಚೀಟಿಗಳನ್ನು ಸರ್ಕಾರ ಕಸಿದುಕೊಂಡಿದೆ. ಕರ್ನಾಟಕ

ಸಾರ್ವಜನಿಕ ವಿತರಣಾ ವ್ಯವಸ್ಥೆಯು (PDS) ಆಧಾರ್ ಆಧಾರಿತ ದೃಢೀಕರಣ ಮತ್ತು ಎಲೆಕ್ಟ್ರಾನಿಕ್ ನೋ ಯುವರ್ ಕಸ್ಟಮರ್ (eKYC) ಮೂಲಕ 5.8 ಕೋಟಿ ನಕಲಿ ಪಡಿತರ ಕಾರ್ಡ್‌ಗಳನ್ನು ತೆಗೆದುಹಾಕಿದೆ. 80.6 ಕೋಟಿ ಫಲಾನುಭವಿಗಳನ್ನು ಒಳಗೊಂಡಿರುವ ಡಿಜಿಟಲೀಕರಣದ ಚಾಲನೆಯು ಉದ್ದೇಶಿತ ಆಹಾರ ಧಾನ್ಯ ವಿತರಣೆಯನ್ನು ಖಚಿತಪಡಿಸುತ್ತದೆ, ಸೋರಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ ಎಂದು ಆಹಾರ ಇಲಾಖೆ ಹೇಳುತ್ತದೆ.

WTO ಒಪ್ಪಂದದಲ್ಲಿ ಏನಿದೆ?

ವಿಶ್ವ ವಾಣಿಜ್ಯ  ಸಂಘಟನೆ(WTO) ಸದಸ್ಯರಾಗಿರುವ ಭಾರತವು ತನ್ನನ್ನು ಒಳಗೊಂಡಂತೆ ಅದರ ಸದಸ್ಯರಿಂದ ಸಹಿ ಮಾಡಿದ ಮತ್ತು ಅನುಮೋದಿಸಲಾದ ಒಪ್ಪಂದಗಳಿಗೆ ಬದ್ಧವಾಗಿ ನಡೆದುಕೊಳ್ಳುತ್ತಿದೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು ಒದಗಿಸುವುದು ವಿರೂಪವೆಂದು ಆ ಒಪ್ಪಂದದ ಆರ್ಟಿಕಲ್ 6  ಪರಿಗಣಿಸುತ್ತದೆ ಮತ್ತು ಇದು ಮಿತಿಗಳಿಗೆ ಒಳಪಟ್ಟಿರುತ್ತದೆ. “ಕನಿಷ್ಠ ಬೆಂಬಲ” ದಿಂದ ಉಂಟಾಗುವ ಸಹಾಯಧನವು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕೃಷಿ ಉತ್ಪಾದನೆಯ ಮೌಲ್ಯದ 10 ಪ್ರತಿಶತವನ್ನು ಮೀರಬಾರದು ಎಂದು ಅದು ಹೇಳುತ್ತದೆ. ಕರ್ನಾಟಕ

ಭಾರತದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ(PDS) ಅಂದರೆ, ಪಡಿತರ ವ್ಯವಸ್ಥೆಯು ಕನಿಷ್ಠ ಬೆಂಬಲ ಬೆಲೆಗಳು ಮತ್ತು ಆಹಾರ ಧಾನ್ಯಗಳ ಸಾರ್ವಜನಿಕ ದಾಸ್ತಾನುಗಳನ್ನು ಒಳಗೊಂಡಿರುತ್ತದೆ. ಭಾರತವು ಡಬ್ಲ್ಯೂಟಿಒ ಜತೆಗಿನ ಈ ಕೃಷಿ ಒಪ್ಪಂದವನ್ನು ಜಾರಿಗೆ ತರಲು ಮುಂದಾಗಿದೆ. ಈ ಕಾರಣದಿಂದಾಗಿಯೇ ಆಹಾರ ಭದ್ರತೆ ನೀಡುವ ತನ್ನ ಜವಾಬ್ದಾರಿಯಿಂದ ನಿಧಾನವಾಗಿ ನುಣುಚಿಕೊಳ್ಳತೊಡಗಿದೆ.  ಹಸಿವು ಮತ್ತು ಆಹಾರ ಧಾನ್ಯಗಳ ಕೊರತೆಯ ಸಮಸ್ಯೆಗಳನ್ನು ಪರಿಹರಿಸಲು ಭಾರತವು ಪಿಡಿಎಸ್ ನೊಂದಿಗೆ ಮುಂದುವರಿಯಬೇಕು. ಇದು ಆಹಾರ ಧಾನ್ಯಗಳ ಸಂಗ್ರಹಣೆ ಮತ್ತು ಸಾರ್ವಜನಿಕ ದಾಸ್ತಾನುಗಳನ್ನು ಒಳಗೊಂಡಿರುತ್ತದೆ.

ಆದರೆ, ಭಾರತವು WTO ಹಾಕಿರುವ ಷರತ್ತುಗಳನ್ನು ಪೂರೈಸುವತ್ತ ಹೆಜ್ಜೆ ಇಡುತ್ತಿದೆ. ಅಂದಿನ ಪಿ.ವಿ. ನರಸಿಂಹರಾವ್ ಸರ್ಕಾರ, ನಂತರದ ಮನಮೋಹನ್ ಸಿಂಗ್ ಸರ್ಕಾರ (60 ಸಂಸದರಿದ್ದ ಎಡಪಕ್ಷಗಳ ಬೆಂಬಲ ಪಡೆದಿದ್ದ ಯುಪಿಎ ಒಂದರ ಅವಧಿಯಲ್ಲಿ ಇದಕ್ಕೆ ತಡೆ ಉಂಟಾಗಿತ್ತು), ಈಗ ನರೇಂದ್ರ ಮೋದಿ ಸರ್ಕಾರ ಇವರೆಲ್ಲರೂ ವಿಶ್ವ ವಾಣಿಜ್ಯ ಸಂಘಟನೆಯ ಎದುರು ಶರಣಾಗುವ ಮೂಲಕ ಭಾರತದ ಜನರ ಅನ್ನ ಕಸಿಯುತ್ತಿದ್ದಾರೆ. ಮೂರು ಕೃಷಿ ಕಾಯ್ದೆಗಳ ಜಾರಿ (ರೈತರ ಒಂದು ವರ್ಷದ ದಿಟ್ಟ ಹೋರಾಟದ ನಂತರ ಈ ಕಾಯ್ದೆಗಳನ್ನು ಮೋದಿ ಸರ್ಕಾರ ಹಿಂಪಡೆಯಿತಾದರೂ, ಹಿಂಬಾಗಿಲ ಮೂಲಕ ಇವುಗಳನ್ನು ಜಾರಿಗೊಳಿಸುತ್ತಿದೆ), ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡದೇ ಇರುವುದು, ಇನ್ನೂ ಹಲವು ಯೋಜನೆಗಳು ಇದೇ ಕಾರಣಕ್ಕಾಗಿ. ಆದರೂ ಈ ಎರಡು ರಾಜಕೀಯ ಪಕ್ಷಗಳ ನಾಯಕರು ಪರಸ್ಪರ ಕೆಸರೆರಚಾಟದ ನಾಟಕವಾಡುತ್ತಾ ಜನರಿಂದ ಸತ್ಯವನ್ನು ಮರೆಮಾಚತೊಡಗಿದ್ದಾರೆ.

ಧಾನ್ಯಗಳ ಬದಲು ನೇರ ನಗದು ಯೋಜನೆ

30, ಮಾರ್ಚ್ 2022ರಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಪ್ರಕಟಣೆಯ ಮೂಲಕ ಸರ್ಕಾರ ಈ ರೀತಿ ಹೇಳಿದೆ: ಆಹಾರ ಸಬ್ಸಿಡಿಯನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ‘ನೇರ ನಗದು ವರ್ಗಾವಣೆ’ ಯನ್ನು ಮೂರು ಕೇಂದ್ರಾಡಳಿತ ಪ್ರದೇಶಗಳಾದ-ಚಂಡೀಗಢ ಮತ್ತು ಪುದುಚೇರಿಯಲ್ಲಿ ಸೆಪ್ಟೆಂಬರ್, 2015 ರಿಂದ ಮತ್ತು ದಾದ್ರಾ ಮತ್ತು ನಗರ ಹವೇಲಿಯ ನಗರ ಪ್ರದೇಶಗಳಲ್ಲಿ ಮಾರ್ಚ್, 2016 ರಿಂದ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ.

ನೇರ ನಗದು ವರ್ಗಾವಣೆ (DBT) ಆಹಾರ ಧಾನ್ಯಗಳ ಬೃಹತ್ ಭೌತಿಕ ಚಲನೆಯ ಅಗತ್ಯವನ್ನು ಕಡಿಮೆ ಮಾಡಲು, ಫಲಾನುಭವಿಗಳಿಗೆ ತಮ್ಮ ಬಳಕೆಯ ಬುಟ್ಟಿಯನ್ನು ಆಯ್ಕೆ ಮಾಡಲು ಹೆಚ್ಚಿನ ಸ್ವಾಯತ್ತತೆಯನ್ನು ಒದಗಿಸಲು, ಆಹಾರದ ವೈವಿಧ್ಯತೆಯನ್ನು ಹೆಚ್ಚಿಸಲು, ಸೋರಿಕೆಯನ್ನು ಕಡಿಮೆ ಮಾಡಲು, ಉತ್ತಮ ಗುರಿಯನ್ನು ಸುಲಭಗೊಳಿಸಲು ಮತ್ತು ಆರ್ಥಿಕ ಸೇರ್ಪಡೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಆ ಪ್ರಕಟಣೆ ತಿಳಿಸಿದೆ.

ಇದರ ಭಾಗವಾಗಿ ಪಾಂಡಿಚೇರಿ, ಲಕ್ಷ ದ್ವೀಪ ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳಲ್ಲಿ ಧಾನ್ಯಗಳ ಬದಲು ನೇರ ನಗದು ಯೋಜನೆ ಪ್ರಾರಂಭವಾಗಿದೆ. 2016ರಲ್ಲಿ ಅಕ್ಕಿಗೆ ಬದಲಾಗಿ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಪುದುಚೇರಿ ಸರ್ಕಾರ ಘೋಷಿಸಿತು. ಅಂದಿನ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಪಡಿತರದಲ್ಲಿ ನೀಡುತ್ತಿರುವ ಅಕ್ಕಿಯ ಗುಣಮಟ್ಟ ಉತ್ತಮವಾಗಿಲ್ಲ ಎಂದು ಹೇಳಿ, ಗುಣಮಟ್ಟದ ಅಕ್ಕಿ ನೀಡುವ ಬದಲು ಪಡಿತರ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಿದ್ದರು. ಈ ರಾಜ್ಯಗಳಲ್ಲಿ ಬಹುತೇಕ ಪಡಿತರ ಅಂಗಡಿಗಳು ಬಾಗಿಲು ಮುಚ್ಚಿವೆ. ನಮಗೆ ನಗದು ಬೇಡ, ಪಡಿತರ ಅಂಗಡಿಗಳ ಬಾಗಿಲು ತೆರೆದು ಧಾನ್ಯಗಳ ವಿತರಣೆ ಮಾಡಿ ಎಂದು ಪಾಂಡಿಚೇರಿಯ ಜನರು ಹೋರಾಟ ನಡೆಸುತ್ತಿದ್ದಾರೆ. ಕರ್ನಾಟಕ

ಇಕೆವೈಸಿ ವ್ಯವಸ್ಥೆಯಿಂದ ಕಡು ಬಡವರು ವಂಚಿತರಾಗುತ್ತಾರೆ.

ಕೇಂದ್ರ ಸರ್ಕಾರ ಪಡಿತರ ಕಾರ್ಡ್‌ಗಳ ರದ್ದತಿಗೆ ವಿಶೇಷ ಒತ್ತು ನೀಡುತ್ತಿದೆ. ಡಿಜಿಟಲೀಕರಣ, ಆಧಾರ್‌ ನೊಂದಿಗೆ ಸೀಡ್, ಇಕೆವೈಸಿ ಇವುಗಳ ಮೂಲಕ, ನಕಲಿ ಪಡಿತರ ಕಾರ್ಡ್‌ಗಳು ಅಥವಾ ಅನರ್ಹ ಕುಟುಂಬಗಳು ಎಂಬ ಹೆಸರಿನಲ್ಲಿ ಪಡಿತರ ಕಾರ್ಡ್‌ಗಳನ್ನು ರದ್ದುಗೊಳಿಸತೊಡಗಿದ್ದಾರೆ. ಇದು ಕಡು ಬಡವರು, ಅದರಲ್ಲೂ ಇಂಟರ್ ನೆಟ್ ಸೌಲಭ್ಯವಿಲ್ಲದ ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶದ ಬಡ ಕುಟುಂಬಗಳು ಪಡಿತರ ಪಡೆಯುವುದರಿಂದ ವಂಚಿತರಾಗಿದ್ದಾರೆ. ಈಗ ಕರ್ನಾಟಕದಲ್ಲಿ ಬಿಪಿಎಲ್ ಚೀಟಿ ಕಳೆದುಕೊಳ್ಳುತ್ತಿರುವ ಕಡು ಬಡವರಲ್ಲಿ ಇಂತಹ ಕುಟುಂಬಗಳೂ ಇವೆ. ಕರ್ನಾಟಕ

ಉತ್ತರ ಪ್ರದೇಶದಲ್ಲಿ

ಉತ್ತರ ಪ್ರದೇಶದಲ್ಲಿ 2014 ರಿಂದ 2021 ರವರೆಗೆ 1.74 ಕೋಟಿ ಪಡಿತರ ಚಿಟಿಗಳನ್ನು ರದ್ದುಗೊಳಿಸಲಾಗಿದೆ. ಫಲಾನುಭವಿಗಳಲ್ಲಿ ಯಾರಾದರೂ ಆದಾಯ ತೆರಿಗೆ ಪಾವತಿಸುವವರಾಗಿದ್ದರೆ ಅಥವಾ ನಾಲ್ಕು ಚಕ್ರದ ವಾಹನ/ಟ್ರಾಕ್ಟರ್/ಹಾರ್ವೆಸ್ಟರ್ ಹೊಂದಿದ್ದರೆ ಅಥವಾ ಯಾವುದೇ ಕುಟುಂಬದ ಸದಸ್ಯರ ಸ್ವಾಧೀನದಲ್ಲಿ ಐದು ಎಕರೆಗಿಂತ ಹೆಚ್ಚು ನೀರಾವರಿ ಜಮೀನು ಹೊಂದಿದ್ದರೆ ಅಥವಾ 5 ಕೆವಿ ಜನರೇಟರ್ ಹೊಂದಿದ್ದರೆ. ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಸಶಸ್ತ್ರ ಲೈಸೆನ್ಸ್ ಹೊಂದಿರುವವರು ಕೂಡ ಪಡಿತರ ಚೀಟಿ ಹೊಂದಲು ಅನರ್ಹರಾಗಿದ್ದಾರೆ. ಕರ್ನಾಟಕ

ಇದನ್ನೂ ಓದಿ: ಬೆಳ್ತಂಗಡಿ| ಮಕ್ಕಳನ್ನು ಶಾಲೆಗೆ ಕೊಂಡೊಯ್ಯುವಾಗ ಕಾಡಾನೆ ದಾಳಿ

“ರಾಜ್ಯ ಸರ್ಕಾರವು ಅನರ್ಹ ಪಡಿತರ ಚೀಟಿ ಹೊಂದಿರುವವರು ಈ ಕಾರ್ಡ್‌ಗಳನ್ನು ಒಪ್ಪಿಸುವಂತೆ ಎಚ್ಚರಿಕೆ ನೀಡಿದ್ದು, ಪಡಿತರ ಅಂಗಡಿಗಳಿಂದ ಪಡೆದ ಮೊತ್ತಕ್ಕೆ ಕೆಜಿ ಗೋಧಿಗೆ ರೂ 24 ಮತ್ತು ಕೆಜಿ ಅಕ್ಕಿಗೆ 32 ರೂ.ನಂತೆ ಮರುಪಡೆಯುವಿಕೆ ಪ್ರಾರಂಭಿಸಲಾಗುವುದು” ಎಂದು ಉತ್ತರ ಪ್ರದೇಶದ ಅಧಿಕಾರಿ ಹೇಳಿದ್ದಾರೆ ಎಂದು ಬಿಸಿನೆಸ್ ಲೈನ್, ಆಗಸ್ಟ್ 29, 2024ರ ವರದಿಯಲ್ಲಿ ಹೇಳಿದೆ.

ತೆರಿಗೆ ಪಾವತಿದಾರರು!!

‘ತೆರಿಗೆ ಪಾವತಿದಾರರು’ ಎಂಬ ಕಾರಣಕ್ಕೆ ರಾಜ್ಯದಲ್ಲಿ ಹಲವು ಬಿಪಿಎಲ್ ಕಾರ್ಡುಗಳನ್ನು ರದ್ದುಗೊಳಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಬಿಪಿಎಲ್ ಕಾರ್ಡ್ ಕಳೆದುಕೊಂಡ ಅರ್ಹ ಬಡ ಕುಟುಂಬಗಳೂ ಈ ರೀತಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಉದಾಹರಣೆಗೆ: ಬಳ್ಳಾರಿ ನಗರದ ಟೀಚರ್ಸ್ ಕಾಲೋನಿಯಲ್ಲಿ ವಾಸವಿರುವ ವರಲಕ್ಷ್ಮಿ ಎಂಬುವವರ ಬಿಪಿಎಲ್ ಕಾರ್ಡ್ ಅನ್ನು ‘ತೆರಿಗೆ ಪಾವತಿದಾರರು’ ಎಂಬ ಕಾರಣ ನೀಡಿ ರದ್ದುಗೊಳಿಸಿದ್ದಾರೆ ಎನ್ನುತ್ತಿದ್ದಾರೆ. ಆಕೆಗೆ ಬ್ರೈನ್ ಟ್ಯೂಮರ್‌, ಆಕೆಯ ಪತಿ ವೆಂಕಟೇಶ ಚಾಲಕ ವೃತ್ತಿ ಮಾಡಿಕೊಂಡಿದ್ದಾರೆ. ಬಹಳಷ್ಟು ಬಡ ಕುಟುಂಬಗಳು ಇದೇ ರೀತಿ ಅಳಲು ತೋಡಿಕೊಂಡಿದ್ದಾರೆ.

ಬಡ ಕುಟುಂಬಗಳನ್ನೂ ತೆರಿಗೆ ಪಾವತಿದಾರರು ಎನ್ನುತ್ತಿದ್ದಾರೆ ಎಂಬ ಆರೋಪದಲ್ಲಿ ಸತ್ಯವಿದೆಯೋ ಇಲ್ಲವೋ ಗೊತ್ತಿಲ್ಲ. ಹಣಕಾಸಿನ ಎಲ್ಲ ವ್ಯವಹಾರವೂ ಬಹುತೇಕ ನಗದು ರಹಿತ ವ್ಯವಹಾರ ಆಗಿರುವಾಗ, ಮೊಬೈಲ್ ಹಣ ವರ್ಗಾವಣೆಗಳನ್ನೂ ‘ಆ ಕುಟುಂಬದ ಆದಾಯ’ ಎಂದು ಲೆಕ್ಕ ಹಾಕಿ ಆದಾಯ ಇಲಾಖೆಯು ತೆರಿಗೆ ಪಾವತಿದಾರರು ಎನ್ನುತ್ತದೆಯೆ? ಇದರ ಬಗ್ಗೆ ತೆರಿಗೆ ಇಲಾಖೆಯು ಜನರಿಗೆ ಸ್ಪಷ್ಟನೆ ನೀಡಬೇಕಾಗಿದೆ. ತೆರಿಗೆ ಪಾವತಿ ಕಾರಣದಿಂದ ಬಿಪಿಎಲ್ ಕಾರ್ಡ್ ರದ್ದಾಗಿದೆಯೋ ಅಥವಾ ಬೇರೆ ಕಾರಣದಿಂದಲೋ ಎಂಬುದನ್ನು ಸಂಬಂಧಪಟ್ಟ ಆಹಾರ ಸರಭರಾಜು ಇಲಾಖೆ ಸ್ವಸ್ಟಪಡಿಸಬೇಕಿದೆ.

ಬಿಪಿಎಲ್ ಮಾನದಂಡ ಬದಲಾಗಬೇಕು

ಬಡತನ ರೇಖೆ ನಿಗಧಿಗೆ ಇರುವ ಮಾನದಂಡವೇನು? ಅಂದು ಗ್ರಾಮೀಣ ಪ್ರದೇಶದಲ್ಲಿ ದಿನಕ್ಕೆ 26 ರೂ.ಗಿಂತ ಹೆಚ್ಚು ಆದಾಯ ಇರುವ ವ್ಯಕ್ತಿ ಬಡವನಲ್ಲ ಎಂಬ ತೆಂಡೂಲ್ಕರ್  ಸಮಿತಿ 2009ರಲ್ಲಿ ನಿಗದಿಪಡಿಸಿದ ಮಾನದಂಡವೇ? ಬಿಪಿಎಲ್ ಕಾರ್ಡ್ ಪಡೆಯಲು ಇಂದು ರಾಜ್ಯ ಸರ್ಕಾರ ನಿಗದಿಪಡಿಸಿರುವ ಮಾನದಂಡವೆಂದರೆ, ಗ್ರಾಮೀಣ ಪ್ರದೇಶದ ಕುಟುಂಬದ ವಾರ್ಷಿಕ ಆದಾಯ 1,20,000 ರೂಪಾಯಿ. ಅಂದರೆ, ಒಬ್ಬ ವ್ಯಕ್ತಿ ದಿನಕ್ಕೆ ರೂ. 66, ತಿಂಗಳಿಗೆ ರೂ. 2000 ಕ್ಕಿಂತ ಕಡಿಮೆ ಆದಾಯ ಇರಬೇಕು. ಐವರು ಸದಸ್ಯರ ಕುಟುಂಬದ ತಿಂಗಳ ಆದಾಯ 10,000 ರೂಪಾಯಿ. ನಗರ ಪ್ರದೇಶದಲ್ಲಿ 1,50,000 ರೂಪಾಯಿಗಿಂತ ಹೆಚ್ಚಿನ ವಾರ್ಷಿಕ ಆದಾಯ ಇರುವ ಕುಟುಂಬದವರು ಬಡವರಲ್ಲ! ಹೀಗಾಗಿ ಇಂತಹ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ!!  ಇಷ್ಟು ಕನಿಷ್ಟ ಆದಾಯದಲ್ಲಿ ಕುಟುಂಬವೊಂದು ಬದುಕು ಸಾಗಿಸಲು ಸಾಧ್ಯವೇ? (ಈ ಕುರಿತು 2024ರ ಸಂಚಿಕೆ 41ರಲ್ಲಿ ಪ್ರಕಟವಾಗಿರುವ ಲೇಖನವನ್ನು ನೋಡಿ) ಕರ್ನಾಟಕ

ಇಂದು ಬಿಪಿಎಲ್ ಕಾರ್ಡ್ ಕಳೆದುಕೊಂಡವರಿಗಾಗಿ ಮೊಸಳೆ ಕಣ್ಣೀರು ಸುರಿಸುತ್ತಿರುವ ರಾಜ್ಯ ಬಿಜೆಪಿ ನಾಯಕರು ಮತ್ತು ಅರ್ಹ ಕುಟುಂಬಗಳು ಪಡಿತರದಿಂದ ವಂಚಿತರಾಗದಂತೆ ನೋಡಿಕೊಳ್ಳುವುದಾಗಿ ಹೇಳುತ್ತಿರುವ  ಕಾಂಗ್ರೆಸ್ ನಾಯಕರು, ಬಡತನ ರೇಖೆಯನ್ನು ಅಳೆಯುವ ಈಗಿನ ಮಾನದಂದ ಬದಲಾಗಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬಹುದಲ್ಲವೆ?  ಇವರು ಹಾಗೆ ಮಾಡಲಾರರು. ಹೀಗೆ ಮಾಡುವಂತೆ ಜನರು ಇವರ ಮೇಲೆ ಒತ್ತಡ ತರಬೇಕು. ಮಾತ್ರವಲ್ಲ, ದೇಶದ ಆಹಾರ ಭದ್ರತೆಯ ಮೇಲೆ ಕೆಟ್ಟ ಪರಿಣಾಮ ಬೀರುವ ವಿಶ್ವ ವಾಣಿಜ್ಯ ಸಂಸ್ಥೆಯ ಷರತ್ತುಗಳಿಂದ ಹಿಂದೆ ಸರಿಯುವಂತೆ ಜನತೆ ಹೋರಾಟ ನಡೆಸಬೇಕಿದೆ. ಭಾರತ ಸರ್ಕಾರ ಒಪ್ಪಿ ಅನುಸರಿಸುತ್ತಿರುವ ಮುಕ್ತ ಆರ್ಥಿಕ ನೀತಿಗಳ ವಿರುದ್ದ ಒಗ್ಗಟ್ಟಿನ ಹೋರಾಟ ನಡೆಸಬೇಕಿದೆ. ಆಗ ಮಾತ್ರ ಇದಕ್ಕೆಲ್ಲಾ ಪರಿಹಾರ ಸಾಧ್ಯ.

30 ಕೆಜಿ ಅಕ್ಕಿ ಸೋಮಾರಿತನವನ್ನು ಹೆಚ್ಚು ಮಾಡುತ್ತದೆ ಎಂದಿದ್ದ ಪ್ರತಾಪ್ ಸಿಂಹ

“ಸರ್ಕಾರ 30 ಕೆ.ಜಿ ಅಕ್ಕಿಯನ್ನೂ ಕೊಡುತ್ತದೆ, ನರೇಗಾವೆಂಬ ಕಳ್ಳಾಟಕ್ಕೂ 120 ಕೊಡುತ್ತದೆ. ಹೀಗಾಗಿ ನಮ್ಮ ಜನ ಸಾರಾಯಿಗಷ್ಟೇ ಚಿಂತೆಪಡಬೇಕೇ ಹೊರತು, ಅನ್ನಕ್ಕಲ್ಲ. ಮೈ ಬಗ್ಗಿಸಿ ದುಡಿದಿದ್ದರೆ ಆರೋಗ್ಯವಾದರೂ ಸರಿಯಿರುತ್ತಿತ್ತು. ಆದರೆ ಆಗುತ್ತಿರುವುದೇನು? ಇಂತಹ ಉಚಿತ ಸೌಲಭ್ಯಗಳು, ಯೋಜನೆಗಳಿಂದ ಮನುಷ್ಯರಲ್ಲಿ ಆಲಸೀತನ, ಸೋಮಾರಿತನವನ್ನು ಹೆಚ್ಚು ಮಾಡಲಾಗುತ್ತಿದೆಯೇ ಹೊರತು, ಅದರಿಂದ ಜನಕ್ಕಾಗಲಿ, ದೇಶಕ್ಕಾಗಲಿ ಒಳಿತಾಗುತ್ತಿಲ್ಲ.” ಇದು 27 ಏಪ್ರಿಲ್, 2013ರ ಕನ್ನಡಪ್ರಭ ಪತ್ರಿಕೆಯಲ್ಲಿನ ‘ಬೆತ್ತಲೆ ಪ್ರಪಂಚ’ ಎಂಬ ತಮ್ಮ ಅಂಕಣದಲ್ಲಿನ ಲೇಖನದಲ್ಲಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಬಡವರ ಬಗೆಗಿನ ವ್ಯಂಗ್ಯದ ಮಾತುಗಳು. ಕರ್ನಾಟಕ

ಅದೇ ಲೇಖನದಲ್ಲಿ ಅವರು ಹೀಗೆ ಬರೆದಿದ್ದರು: “2004ರಲ್ಲಿ ಪ್ರಧಾನಿ ಸ್ಥಾನವನ್ನು ನಿರಾಕರಿಸುವ ನಾಟಕವಾಡಿ, ರಾಷ್ಟ್ರೀಯ ಸಲಹಾ ಮಂಡಳಿ (ಎನ್ಎಸಿ) ಮೂಲಕ ಪರೋಕ್ಷವಾಗಿ ಸರ್ಕಾರದ ಕಡಿವಾಣ ಕೈಗೆತ್ತಿಕೊಂಡ ಸೋನಿಯಾ ಗಾಂಧಿ ನೇತೃತ್ವದ ಈ ಸಮಿತಿಯಲ್ಲಿ ತರ್ಲೆ ಕಮ್ಯುನಿಸ್ಟರೇ ತುಂಬಿಕೊಂಡಿದ್ದಾರೆ. ಇವರ ಸಲಹೆಯ ಫಲವೇ ನರೇಗಾ ಯೋಜನೆ. ವರ್ಷಕ್ಕೆ 100 ದಿನಗಳು ಖಚಿತ ಕೆಲಸ, ದಿನವೊಂದಕ್ಕೆ ಈಗ 120 ಕೂಲಿ ನೀಡುವ ಈ ಯೋಜನೆಯಿಂದ ಎಂಥ ಅನಾಹುತ ಸಂಭವಿಸಿದೆಯೆಂದರೆ ಅಸ್ಸಾಂನ ಟೀ ಎಸ್ಟೇಟ್ ಗಳಿಂದ ಕರ್ನಾಟಕದ ಬತ್ತ ಬೆಳೆಯುವವರೆಗೂ ಕಾರ್ಮಿಕರ ಕೊರತೆ ಕಾಡುತ್ತಿದೆ. ಈ ಯೋಜನೆಗೆ ಇದುವರೆಗೂ 1.25 ಲಕ್ಷ ಕೋಟಿ ವ್ಯಯವಾಗಿದೆ! ಆದರೆ ನರೇಗಾದಿಂದಾಗಿ ಯಾವುದಾದರೂ ಎದ್ದು ಕಾಣುವ ಅಭಿವೃದ್ಧಿ ಕಾರ್ಯಗಳಾಗಿದ್ದನ್ನು ನೋಡಿದ್ದೀರಾ? ನಕಲಿ ಕೂಲಿಕಾರರ ಸೃಷ್ಟಿ, ಕೆಲಸದ ವಿಷಯದಲ್ಲೂ ನಿರ್ದಿಷ್ಟ ಗುರಿಯಿಲ್ಲ. ಹೀಗಾಗಿ 55 ಸಾವಿರ ಕೋಟಿ ವಿನಾಕಾರಣ ಪೋಲಾಗಿದೆ.”

ಬಿಜೆಪಿ ಇದೇ ಪ್ರತಾಪ್ ಸಿಂಹನಿಗೆ ಲೋಕಸಭಾ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಂಡಿತು. ಪ್ರತಾಪ್ ಸಿಂಹ ಮಾತ್ರವಲ್ಲ, ಬಡವರಿಗಾಗಿ ತಂದಿರುವ ಯಾವುದೇ ಯೋಜನೆಗಳನ್ನು ‘ಬಿಟ್ಟಿ ಭಾಗ್ಯ’ ಎಂದೇ ಕರೆಯುತ್ತಾರೆ. ಅಂದರೆ, ಬಿಜೆಪಿ ಪಡಿತರ ವ್ಯವಸ್ಥೆಯ ಬಗ್ಗೆ ಹೊಂದಿರುವ ನಿಲುವೇನು ಎಂಬುದನ್ನು ಇದು ತೋರಿಸುತ್ತದೆ. ಇವೆಲ್ಲವನ್ನೂ ನೋಡಿದರೆ, ಇಂದು ಬಿಪಿಎಲ್ ಕಾರ್ಡ್ ಗಳನ್ನು ಕಳೆದುಕೊಂಡವರ ಪರವಾದ ಅದರ ಕನಿಕರದ ಮಾತುಗಳು ಮೊಸಳೆ ಕಣ್ಣೀರಲ್ಲದೆ ಮತ್ತೇನು?

ಇದನ್ನೂ ನೋಡಿ: SCZIEF Conference| wealth is not the value of development – Says Ashsok Dhavale | AIIEA

Donate Janashakthi Media

Leave a Reply

Your email address will not be published. Required fields are marked *