ಕೆನಡಾ ನೂತನ ಪ್ರಧಾನಿ ಮಾರ್ಕ್ ಕಾರ್ನಿ: ಲಿಬರಲ್ ಪಕ್ಷದ ನಾಯಕರಾಗಿ ಆಯ್ಕೆ

ಒಟ್ಟಾವಾ: ಕೆನಡಾದ ಲಿಬರಲ್ ಪಕ್ಷವು ದೇಶದ ಮುಂದಿನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಅವರನ್ನು ಬಹುಮತದಿಂದ ಆಯ್ಕೆ ಮಾಡಿದೆ. ಕಾರ್ನಿಯವರು ಆಯ್ಕೆಯಾಗುತ್ತಿದ್ದಂತೆ ಅಮೆರಿಕಾ ಅಧ್ಯಕ್ಷರ ಮೇಲೆ ಹರಿಹಾಯ್ದಿದ್ದು, ಕೆನಡಾದ ಕಾರ್ಮಿಕರು, ಕುಟುಂಬಗಳು ಮತ್ತು ವ್ಯವಹಾರಗಳ ಮೇಲೆ ಅಮೆರಿಕ ದಾಳಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಅವರನ್ನು ಯಶಸ್ವಿಯಾಗಲು ನಾವು ಬಿಡುವುದಿಲ್ಲ ಎಂದು 59 ವರ್ಷದ ಮಾರ್ಕ್ ಕಾರ್ನಿಯವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಡುಗಿದ್ದಾರೆ. ನಿರ್ಗಮಿತ ಲಿಬರಲ್ ನಾಯಕ ಪ್ರಧಾನಿ ಜಸ್ಟಿನ್ ಟ್ರುಡೊ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:-ಹಾಸನ| ಪಾಳುಬಿದ್ದ ಕಟ್ಟಡ ಕುಸಿತ; 4 ಮಹಿಳೆಯರು ಸಾವು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ಸಮರ ಮತ್ತು ದೇಶವನ್ನು ವಶಪಡಿಸಿಕೊಳ್ಳುವ ಬೆದರಿಕೆಯನ್ನು ಎದುರಿಸುತ್ತಿರುವ ಮತ್ತು ಫೆಡರಲ್ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ನೂತನ ಪ್ರಧಾನಿ ಆಯ್ಕೆ ಮಹತ್ವ ಪಡೆದುಕೊಂಡಿದೆ.

ಕೆನಡಾ ಅಕ್ಟೋಬರ್ ವೇಳೆಗೆ ಚುನಾವಣೆಗಳನ್ನು ನಡೆಸಬೇಕು ಆದರೆ ಅದಕ್ಕೂ ಮೊದಲು ಚುನಾವಣೆ ಬರುವ ಸಾಧ್ಯತೆಯಿದೆ. ಪ್ರಸ್ತುತ ಸಮೀಕ್ಷೆಗಳು ವಿರೋಧ ಪಕ್ಷ ಕನ್ಸರ್ವೇಟಿವ್ ಪರವಾಗಿವೆ.

ಒಟ್ಟಾವಾದಲ್ಲಿ ಪಕ್ಷದ ಬೆಂಬಲಿಗರ ಗುಂಪನ್ನು ಉದ್ದೇಶಿಸಿ ತಮ್ಮ ವಿಜಯ ಭಾಷಣದಲ್ಲಿ ಮಾರ್ಕ್ ಕಾರ್ನಿ, ಡೊನಾಲ್ಡ್ ಟ್ರಂಪ್ ನೇತೃತ್ವದ ಯುನೈಟೆಡ್ ಸ್ಟೇಟ್ಸ್ ಕೆನಡಾವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿವೆ, ರಿಕನ್ನರು ನಮ್ಮ ಸಂಪನ್ಮೂಲಗಳು, ನಮ್ಮ ನೀರು, ನಮ್ಮ ಭೂಮಿ, ನಮ್ಮ ದೇಶವನ್ನು ಬಯಸುತ್ತಾರೆ, ಆದರೆ ನಮ್ಮ ಒಳಿತನ್ನು ಬಯಸುತ್ತಿಲ್ಲ ಎಂದಿದ್ದಾರೆ.

ಈ ಹಿಂದೆ ಬ್ಯಾಂಕ್ ಆಫ್ ಕೆನಡಾ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್ ಎರಡನ್ನೂ ಮುನ್ನಡೆಸಿದ್ದ ಕಾರ್ನಿ, ತಮ್ಮ ಪ್ರಮುಖ ಪ್ರತಿಸ್ಪರ್ಧಿ ಟ್ರೂಡೊ ಅವರ ಮಾಜಿ ಉಪ ಪ್ರಧಾನ ಮಂತ್ರಿ ಕ್ರಿಸ್ಟಿಯಾ ಫ್ರೀಲ್ಯಾಂಡ್ ಅವರನ್ನು ಸೋಲಿಸಿದರು, ಅವರು 2015 ರಲ್ಲಿ ಮೊದಲು ಆಯ್ಕೆಯಾದ ಲಿಬರಲ್ ಸರ್ಕಾರದಲ್ಲಿ ಹಲವಾರು ಹಿರಿಯ ಕ್ಯಾಬಿನೆಟ್ ಹುದ್ದೆಗಳನ್ನು ಹೊಂದಿದ್ದರು.

ಕಾರ್ನಿ ಸುಮಾರು 1,2,000 ಮತಗಳಲ್ಲಿ 85.9 ಶೇಕಡಾ ಗೆದ್ದರು. ಫ್ರೀಲ್ಯಾಂಡ್ ಕೇವಲ ಎಂಟು ಪ್ರತಿಶತ ಮತಗಳನ್ನು ಪಡೆದರು.

Donate Janashakthi Media

Leave a Reply

Your email address will not be published. Required fields are marked *