ಪಹಲ್ಗಾಂನ ಹುಲ್ಲುಗಾವಲಿನಲ್ಲಿ ತನ್ನ ಗಂಡನ ಹೆಣದ ಪಕ್ಕ ರೋಧಿಸಲೂ ಆಗದೆ ಸ್ತಬ್ಡವಾಗಿ ಕುಳಿತು ಮೌನ ಪ್ರತಿಮೆಯಾಗಿ ಕುಳಿತ ಹೆಂಗಸಿನ ಫೋಟೋ ಭಯೋತ್ಪಾದನೆಯ ಮಾರನೇ ದಿನ ಪತ್ರಿಕೆಗಳಲ್ಲಿ ಪ್ರಕಟವಾದ ದೃಶ್ಯ ಎಂತವರನ್ನೂ ತೀವ್ರವಾಗಿ ಕಾಡುತ್ತದೆ. ಈ ಮಹಿಳೆ ಹಿಮಾಂಶಿ ನರವಾಲ್. ಈಕೆಯ ಪತಿ ಲೇಫ್ತೆನಂತ್ ವಿನಯ್ ನರವಾಲ್ ಮದುವೆಯಾಗಿ ಒಂದು ವಾರದೊಳಗೇ ಭಯೋತಪಾದಕರ ಗುಂಡಿಗೆ ಏಪ್ರಿಲ್ 22 ರಂದು ಬಲಿಯಾದರು. ಬರೆ
-ಜಿ.ಎಸ್. ಮಣಿ
ಪಹಲ್ಗಾಂ ನ ಭಯೋತ್ಪಾದಕ ಕೊಲೆಗಳ ಒಬ್ಬ ಸಂತ್ರಸ್ತೆಯಾದ ಹಿಮಾಂಶಿ ನರವಾಲ್ ಅವರನ್ನು ಕೇಸರಿ ಪಡೆ ಟ್ರೋಲ್ಲ್ ಮಾಡುತ್ತಿದೆ. ಮನುಷತ್ವದ ಕನಿಷ್ಠ ಸಂಯಮವೂ ಇಲ್ಲದ ಈ ಜನ ಕೆಟ್ಟ ರೀತಿಯಲ್ಲಿ ಈ ಧೀರ, ಸಂಯಮಿ ಮಹಿಳೆಯ ಟ್ರೋಲ್ಲ್ ಮಾಡುತ್ತಿದ್ದಾರೆಂದರೆ ಅವರ ನೀಚತನದ ಅರಿವಾದೀತು. ಪತಿಯನ್ನು ಕಳೆದುಕೊಂಡ ಈ ಮಹಿಳೆಯ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಬಂದಿರುವ ಕಾವಿ ಪಡೆಯ ಹೇಸಿಗೆ ಹುಟ್ಟಿಸುವ ಟ್ರೋಲ್ಲ್ ಗಳು ಮಾನವ ಸಹಜವಾದ ವರ್ತನೆಗೆ ಇವು ಹೊರತಾಗಿ ಇವೆ ಎಂಬುದನ್ನು ಕೂಗಿ ಹೇಳುತ್ತವೆ. ಬರೆ
ಹಿಮಾಂಶಿ ನರವಾಲ್ ಬಹಳ ದಿಟ್ಟ ಮಹಿಳೆ. ‘ರಾಷ್ಟ್ರೀಯ ಏಕತೆಗಾಗಿ ಕಲಾವಿದರು ಮತ್ತು ಕಾರ್ಯಕರ್ತರ ವೇದಿಕೆ’ ಎಂಬ ಸಂಸ್ಥೆ ಲೇಫ್ತೆನಂತ್ ವಿನಯ್ ನರವಾಲ್ ಅವರ ಜನ್ಮ ದಿನದಂದು ಕರ್ನಾಲ್ ನಲ್ಲಿ ರಕ್ತದಾನ ಶಿಬಿರ ಸಂಘಟಿಸಿದರು. ಆ ಶಿಬಿರದಲ್ಲಿ ಭಾಗವಹಿಸಿದ ಹಿಮಾಂಶಿ ಹೇಳಿದ್ದು “ಮುಸ್ಲಿಮರು ಮತ್ತು ಕಾಶ್ಮೀರಿಗಳನ್ನು ದೂರುವುದರಲ್ಲಿ ಅರ್ಥವಿಲ್ಲ. ನಮಗೆ ಶಾಂತಿ ಬೇಕು. ನಮಗೆ ನ್ಯಾಯವೂ ಬೇಕು. ಅದಕ್ಕೆ ಈ ತಪ್ಪುಗಳನ್ನು ಮಾಡಿದವರನ್ನು ಶಿಕ್ಷಿಸಬೇಕು”. ಈ ಹೇಳಿಕೆಯನ್ನು ವಿವಿಧ ಸುದ್ದಿ ಸಂಸ್ಥೆಗಳು ಟ್ವಿಟ್ಟರ್ ನಲ್ಲಿ ಪ್ರಕಟಿಸಿದವು. ಈ ಹೇಳಿಕೆ ನೋಡಿದ ಕಾವಿ ಪಡೆ ಅವರನ್ನು ಟ್ರೋಲ್ಲ್ ಮಾಡಲು ಶುರು ಮಾಡಿತು. ಟ್ರೋಲ್ಲ್ ಮುತ್ತುಗಳು ಒಂದಕ್ಕಿಂತ ಒಂದು ಪ್ರಬಲವಾಗಿ ಬಂದವು. ಆಯ್ದ ಕೆಲವನ್ನು ನೋಡುವುದಾದರೆ: ಬರೆ
ಇದನ್ನೂ ಓದಿ: ಭಯಭೀತಿಯಲ್ಲಿ ಅಮೆರಿಕದ ಕಾಲೇಜು ರಂಗ
“ಈಕೆ ತನ್ನ ಅತ್ತೆ ಮಾವಂದಿರ ಆಸ್ತಿ ಮತ್ತು ಹಣವನ್ನು ಕಬಳಿಸುತ್ತಾಳೆ. ಸರ್ಕಾರ ನೀಡುವ ಹಣವನ್ನೂ ಕಬಳಿಸುತ್ತಾಳೆ”
“ಈಕೆ ತನ್ನ ಗಂಡನನ್ನು ಮುಸ್ಲಿಮ ಭಯೋತ್ಪಾದಕ ಮಿಂಡನಿಂದ ಕೊಲೆ ಮಾಡಿಸಿರುವಂತಿದೆ”
“ಈಕೆ ಎಲ್ಲ ಆಸ್ತಿಗಳನ್ನು ನುಂಗಿ ಅತ್ತೆ ಮಾವಂದಿರನ್ನು ಬೀದಿ ಪಾಲು ಮಾಡುತ್ತಾಳೆ”
ಈ ಶಿಬಿರದಲ್ಲಿ ರಾಜಕಾರಣಿಗಳು ಇದ್ದರು. ಬಿಜೆಪಿ ಯ ಎಮೆಲ್ಲೆ ಜಗಮೋಹನ್ ಆನಂದ್ ಶಿಬಿರದಲ್ಲಿ ಭಾಗವಹಿಸಿದ್ದರು.
ಭಯೋತ್ಪಾದನೆಯ ಸಂತ್ರಸ್ತೆ ಶಾಂತಿಯ ಮಾತನ್ನಾಡಿದರೆ ಈ ರಾಜಕಾರಣಿಗಳು ಮತ್ತು ಕೇಸರಿ ಪಡೆ ಕೋಮು ದ್ವೇಷದ ಕಿಚ್ಚು ಹಚ್ಚಲು ಸಾಧ್ಯವಾದುದನ್ನೆಲ್ಲ ಮಾಡಿದರು. ಅದರ ಪರಿಣಾಮವೇ ಇಂಥ ಟ್ರೋಲ್ಲ್ ಮಾತುಗಳು (ವಿಷ ಮಾತುಗಳು).
ಗಂಡನನ್ನು ಭಯೋತ್ಪಾದಕರ ಗುಂಡಿಗೆ ಕಳೆದುಕೊಂಡ ಈಕೆ ಶಾಂತಿಯ ಮಾತನಾಡುತ್ತಾಳಲ್ಲ ಎಂದು ಕಟುಕಿದವರು ಹಲವರು. ಬರೆ
ಇಂತಹ ಬೆಚ್ಚಿಬಿಳಿಸುವ ಭಯೋತ್ಪಾದನಾ ದಾಳಿ ನಡೆದ ಮೇಲೆ ವಸ್ತು ನಿಷ್ಠ ವಿಶ್ಲೇಷಣೆಯ ಪ್ರಯತ್ನಗಳು ನಡೆಯಬೇಕಾಗಿತ್ತು. ಎರಡು ಸಾವಿರ ಜನ ಪ್ರವಾಸಿಗರು ಬರುವ ತಾಣಕ್ಕೆ ಕನಿಷ್ಠ ಸುರಕ್ಷೆಯ ವ್ಯವಸ್ಥೆ ಇರಬೇಕಿತ್ತಲ್ಲವೇ? ಯಾಕೆ ಇರಲಿಲ್ಲ? ಕೆಲವೇ ಕೆಲವು ದಿನಗಳ ಮೊದಲು ಗೃಹ ಮಂತ್ರಿ ಅಮಿತ್ ಶಾಹ ಅವರು ಉನ್ನತ ಮಟ್ಟದ ಸುರಕ್ಷೆಯ ಸಮೀಕ್ಷಾ ಸಭೆ ನಡೆಸಿದ್ದರು. ಇದು ಬರೀ ಬೂಟಾಟಿಕೆ ಆಗಿತ್ತೇ? ಇದಕ್ಕೂ ಮೊದಲೂ ಹಲವು ಹತ್ಯೆಗಳು ನಡೆದಿದ್ದವು. ಬರೆ
ಹೀಗಿರುವಾಗಲೂ ಕಾಶ್ಮೀರದ ಸ್ಥಿತಿ ಸಹಜ ಎಂಬ ಪ್ರಚಾರವನ್ನು ಕೇಂದ್ರ ಸರ್ಕಾರ ಯಾಕೆ ಮಾಡಿತು? ಯಾಕೆ ಪ್ರವಾಸಗಳ ಮೇಲೆ ನಿರ್ಬಂಧ ಹೆರಲಿಲ್ಲ? ಕಾಶ್ಮೀರದ ತುಂಬಾ ಪಸರಿಸಿರುವ ಸೇನೆ ಇಲ್ಲಿ ಯಾಕೆ ಇರಲಿಲ್ಲ. ಗುಪ್ತಚರ ವರದಿಗಳು ಏನು ಹೇಳಿದ್ದವು. ಗೂಢಚರ್ಯೆಯ ವೈಫಲ್ಯವೇ ಇದು. ಇವೆಲ್ಲವಕ್ಕೂ ಜವಾಬ್ದಾರರು ಯಾರು? ಇಂಥ ಹಲವಾರು ಪ್ರಶ್ನೆಗಳಿಗೆ ಆಢಳಿತ (ಎಲ್ಲ ಲಗಾಮುಗಳನ್ನು ಹೊಂದಿರುವ ಕೇಂದ್ರ ಸರ್ಕಾರ) ಉತ್ತರ ನೀಡಲು ಬಾಧ್ಯಸ್ಥ. ತನ್ನ ಎಲ್ಲ ಇಂತಹ ಭಾದ್ಯತೆಗಳಿಂದ ಗಮನವನ್ನು ಬೇರೆಡೆಗೆ ಹರಿಸಲು ಟ್ರೋಲ್ಲ್ ಪಡೆಯನ್ನೇ ಸಂಘಟಿಸಿ ಮುಂದಕ್ಕೆ ಬಿಟ್ಟಿರುವಂತೆ ಕಾಣಿಸುತ್ತಿದೆ. ಬರೆ
ಹಿಮಾಂಶಿ ಅವರಿಗೆ ಭಯೋತ್ಪಾದಕರ ಜೊತೆಗೆ ಸಂಪರ್ಕ ಇರುವಂತೆ ಕಾಣಿಸುತ್ತಿದೆ. ಅದರ ತನಿಖೆ ಆಗಲಿ ಎಂದೂ ಟ್ವಿಟ್ಟರ್ ನಲ್ಲಿ ಕೆಲವರು ಹೇಳಿದರು!!
ಸ್ವಲ್ಪ ಆಳಕ್ಕೆ ಇಳಿದರೆ ಆಢಳಿತದ ಒಳಪುಕ್ಕಲುತನ ಗೊತ್ತಾಗುತ್ತದೆ. ಕತುವದಲ್ಲಿ ಆರು ವರ್ಷದ ಬಾಲಕಿ ಅತ್ಯಾಚಾರಕ್ಕೊಳಗಾಗಿ ಕೊಲೆ ಆದಾಗ ಹಿಮಾಂಶಿ ನ್ಯಾಯ ಕೇಳಿದ್ದರು. ಈಕೆ ತನ್ನ ಕಾಲೇಜು ದಿನಗಳಲ್ಲಿ ಕಾಶ್ಮೀರಿಗಳ ಜೊತೆ ಸ್ನೇಹದಿಂದ ಇದ್ದರು ಎಂಬುದು ಇನ್ನೊಂದು ಒಳ ಉರಿಯ ಕಾರಣ. ಇವೆಲ್ಲಕ್ಕಿಂತ ದೊಡ್ಡದು ಈಕೆ ಜೆ ಎನ್ ಯು ನಲ್ಲಿ ವಿದ್ಯಾರ್ಥಿನಿ ಆಗಿದ್ದರು ಎನ್ನುವುದು. ಈಕೆಯ ಜಾತ್ಯತೀತತೆ ಜೆ ಎನ್ ಯು ದಿಂದ ಬಂದಿರುವಂತಿಗೆ ಎಂದೂ ಬಲಪಂಥೀಯನೊಬ್ಬ ಫೇಸ್ಬುಕ್ ನಲ್ಲಿ ಉಲ್ಲೇಖಿಸಿದ್ದಾನೆ!!
ಕಾವಿ ಪಡೆಯ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂಬುದು ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ. “ನನ್ನದಲ್ಲದ/ ನಾನು ಒಪ್ಪದ ವಿಚಾರವನ್ನು ಇಟ್ಟುಕೊಳ್ಳಲು ಯಾರಿಗೂ ಹಕ್ಕಿಲ್ಲ” ಎಂಬ ನಿಲುವು ಅವರದು. ಅದೇ ಪ್ರಜಾಪ್ರಭುತ್ವ ಎಂದೂ ಅವರು ಹೇಳುತ್ತಾರೆ. ಬರೆ
“ಸರ್ಕಾರದ ಕೆಲಸದಲ್ಲಿ ಹಿಮಾಂಶಿ ಅಡ್ಡಗಾಲು ಹಾಕಿದ್ದಾರೆ” ಎಂದೂ ಒಬ್ಬ ಮಹಾಶಯ ಹೇಳಿದ್ದಾನೆ!
ಹಿಮಾಂಶಿ ಒಬ್ಬಳೇ ಅಲ್ಲ. ಈ ಭಯೋತ್ಪಾದನೆಯಲ್ಲಿ ತನ್ನ ತಂದೆ ರಾಮಚಂದ್ರನ್ ಅವರನ್ನು ಭಯೋತ್ಪಾದಕರ ಗುಂಡಿಗೆ ಕಳೆದುಕೊಂಡ ಆರತಿ ಮೆನನ್ ಅವರನ್ನೂ ಕಾವಿ ಪಡೆ ಟ್ರೋಲ್ಲ್ ಮಾಡಿದೆ. ಆರತಿ “ ತಂದೆಯನ್ನು ಈ ಭಯೋತ್ಪಾದನೆಯಲ್ಲಿ ಕಳೆದುಕೊಂಡೆ. ಆದರೆ ಇಬ್ಬರು ಸಹೋದರರನ್ನು ಪಡೆದುಕೊಂಡೆ” ಎಂದು ತನ್ನನ್ನು ರಕ್ಷಿಸಿ ಸರಿಯಾದ ಸ್ಥಳಕ್ಕೆ ಕರೆದೊಯ್ದ ಮುಸ್ಲಿಮರ ಬಗ್ಗೆ ಹೇಳಿದ್ದು ಕಾವಿ ಪಡೆಗೆ ಸಹ್ಯವಾಗಿಲ್ಲ.
ಬಿ ಜೆ ಪಿ ಯ ಮಿತ್ರ ಪಕ್ಷ ಎಲ್ ಜೆ ಪಿ ಪಕ್ಷದ ರಾಜಕಾರಣಿಯೊಬ್ಬರು ಟ್ರೋಲ್ಲ್ ಮಾಡಿರುವುದು ಕಾವಿ ಪಡೆಯ ಈ ಮನೋಭಾವಕ್ಕೆ ಇನ್ನೊಂದು ಪುರಾವೆ. “ಇದು ಬುದ್ದಿ ತೊಳೆದುಕೊಂಡ ಭಾರತೀಯ ಜಾತ್ಯಾತೀತತೆಯ ಒಂದು ಮುಖ” ಎಂದೂ ಒಬ್ಬರು ಹೇಳಿದ್ದಾರೆ.
ನೌಕಾ ಪಡೆಯ ಹಿಂದಿನ ಮುಖ್ಯಸ್ಥ ದಿವಂಗತ ರಾಂದಾಸ್ ಅವರ ಪತ್ನಿ ಲಲಿತಾ ರಾಮ್ ದಾಸ್ ಅವರು ಹಿಮಾಂಶಿ ಅವರಿಗೆ ಪತ್ರ ಬರೆದು “ ನೀವು ಧೀರ ಸೈನಿಕನ ಅಪ್ಪಟ ಪತ್ನಿ” ಎಂದು ಶ್ಲಾಘಿಸಿರುವುದನ್ನು ಪರನ್ ಜೋಯ್ ಗುಹ ಥಾಕುರ್ತಾ ಪಾತ್ರದ ಮೂಲಕ ಹಂಚಿಕೊಂಡು ಹಿಮಾಂಶಿ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
ಇಷ್ಟೆಲ್ಲಗಳ ನಡುವೆ ಕೇಂದ್ರದ ಗೃಹ ಸಚಿವ ಅಮಿತ್ ಶಾಹ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ತಣ್ಣಗೆ ಕುಳಿತು ಒಳಗೊಳಗೆ ಪುಳಕ ಹೊಂದುತ್ತಿದ್ದಾರೆ!! ಇಲ್ಲದಿದ್ದರೆ ಕಾವಿ ಪಡೆಯೊಳಗಿನ ಈ ಬಾಯಿ-ಭಯೋತ್ಪಾದಕರ ಬಾಯಿ ಮುಚ್ಚಿಸುವುದು ಇವರಿಗೆ ಆಗದ ಕೆಲಸವೇನಲ್ಲ.
ಭಯೋತ್ಪಾದನೆಗಿಂತ ದೊಡ್ಡ ಪ್ರಜಾಪ್ರಭುತ್ವದ ತಣ್ಣಗಿನ ಕೊಲೆ ಇದು!!!
ಇದನ್ನೂ ನೋಡಿ: ಬಸವ ಜಯಂತಿ ವಿಶೇಷ | ಬಸವಣ್ಣನ ವಚನಗಳು | ಎಚ್.ಸಿ. ಉಮೇಶ್ Janashakthi Media