ಏಕೀಕೃತ ಪಿಂಚಣಿ ಯೋಜನೆ (UPS) ವಿರೋಧಿಸಿ ಸೆಪ್ಟೆಂಬರ್ 26ರಂದು ಪ್ರತಿಭಟನೆ

ಬೆಂಗಳೂರು: ಆಗಸ್ಟ್ 24 ರಂದು ಕೇಂದ್ರ ಸರ್ಕಾರವು ಘೋಷಿಸಿರುವ ಏಕೀಕೃತ ಪಿಂಚಣಿ ಯೋಜನೆ (UPS) ಯನ್ನು ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಮತ್ತು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು ಖಂಡಿಸುತ್ತದೆ. ರಾಷ್ಟ್ರೀಯ

25 ಆಗಸ್ಟ್ 2024 ರಂದು ಆನ್‌ಲೈನ್‌ ವೇದಿಕೆಯಲ್ಲಿ ಜರುಗಿದ ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ (All India State Govt. Employees Federation) ಸಚಿವಾಲಯದ ಸಭೆಯು ಯುಪಿಎಸ್‌ (Unified Pensions Scheme – UPS) ಯೋಜನೆ ಕುರಿತಂತೆ ಲಭ್ಯವಿರುವ ವಿವರಗಳನ್ನು ಪರಿಶೀಲಿಸಿತು ಮತ್ತು ಇದು ದೇಶಾದ್ಯಂತ ನೌಕರರು ಮತ್ತು ಶಿಕ್ಷಕರನ್ನು ವಂಚಿಸುವ ಸಂಶಯಾಸ್ಪದ ಪ್ರಯತ್ನವಾಗಿದೆ ಎಂಬ ನಿಲುವಿಗೆ ಬಂದಿದೆ ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಹೆಚ್.ಎಸ್ ಜೈಕುಮಾರ್ ಹೇಳಿದ್ದಾರೆ. ರಾಷ್ಟ್ರೀಯ

ಇದು ಎನ್‌ಪಿಎಸ್ ವಿರುದ್ಧ ಕಳೆದ ಎರಡು ದಶಕಗಳಿಂದ ಹೋರಾಟ ನಡೆಸುತ್ತಿರುವ ನೌಕರರ ಕಣ್ಣೊರೆಸುವ ಪಿತೂರಿ ಮತ್ತು ಪ್ರಯತ್ನವಾಗಿದೆ ಎಂದರು.

ಇದನ್ನೂ ಓದಿ: ಒಡಲಲ್ಲಿರುವ ಭ್ರಷ್ಟತೆಯೂ ರಾಜಕಾರಣದ ಹೊದಿಕೆಯೂ ಬಂಡವಾಳಶಾಹಿ ಆಳ್ವಿಕೆಯಲ್ಲಿ ಭ್ರಷ್ಟಾಚಾರದ ವಾಮ ಮಾರ್ಗಗಳಿಗೆ ಹಲವು ಕವಲುಗಳಿರುತ್ತವೆ

ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವಂತೆ ಒತ್ತಾಯಿಸುತ್ತೇವೆ.

2003ರ ಡಿಸೆಂಬರ್ 26 ರಂದು ಆಗಿನ NDA ಸರ್ಕಾರವು ಎ.ಬಿ. ವಾಜಪೇಯಿ ನೇತೃತ್ವದಲ್ಲಿ ಪಿಎಫ್‌ಆರ್‌ಡಿಎ ಕುರಿತು ಸುಗ್ರೀವಾಜ್ಞೆ ಹೊರಡಿಸಲಾಯಿತು. 2004 ಜನವರಿ  1 ರಿಂದ ಹೊಸದಾಗಿ ನೇಮಕಗೊಂಡ ಎಲ್ಲಾ ಕೇಂದ್ರ ಸರ್ಕಾರಿ ನೌಕರರು ಮತ್ತು ಹಲವು ರಾಜ್ಯಗಳ ಸರ್ಕಾರಿ ನೌಕರರನ್ನು ಯಾವುದೇ ಕಾಯಿದೆಯ ಬೆಂಬಲವಿಲ್ಲದೆ ಹೊರಡಿಸಿದ ಸುಗ್ರೀವಾಜ್ಞೆಯ ಆಧಾರದ ಮೇಲೆ ಹೊಸ ಪಿಂಚಣಿ ಯೋಜನೆಗೆ ಕಡ್ಡಾಯವಾಗಿ ನೊಂದಣಿ ಮಾಡಲಾಯಿತು. ರಾಷ್ಟ್ರೀಯ

ನಂತರ ಯುಪಿಎ ಸರ್ಕಾರವು ಇದನ್ನು ರಾಷ್ಟ್ರೀಯ ಪಿಂಚಣಿ ಯೋಜನೆ ಎಂದು ಮರು ನಾಮಕರಣ ಮಾಡಿತು ಮತ್ತು ಪ್ರಮುಖ ವಿರೋಧ ಪಕ್ಷವಾದ ಎನ್.ಡಿ.ಎ ಕೂಟದ ಬೆಂಬಲದೊಂದಿಗೆ ಸಂಸತ್ತಿನಲ್ಲಿ ಮಸೂದೆಯನ್ನು ಅಂಗೀಕರಿಸಲಾಯಿತು. ಇದರ ಪರಿಣಾಮವಾಗಿ PFRDA ಕಾಯಿದೆ ಜಾರಿಗೆ ಬಂದಿತು.

ಮೊದಲಿನಿಂದಲೂ, ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ನೇತೃತ್ವದಲ್ಲಿ ನೌಕರ ಸಂಘಟನೆಗಳು NPS ಯೋಜನೆಯನ್ನು ಬಲವಾಗಿ ವಿರೋಧಿಸುತ್ತಾ ಬಂದಿವೆ. NPS ಮತ್ತು ಗುತ್ತಿಗೆ ನೇಮಕಾತಿಯನ್ನು ಪ್ರಮುಖ ಸಮಸ್ಯೆಗಳೆಂದು ಪರಿಗಣಿಸಿ ಕೇಂದ್ರ ಟ್ರೇಡ್ ಯೂನಿಯನ್‌ಗಳು ಕರೆದ ಎಲ್ಲಾ ರಾಷ್ಟ್ರೀಯ ಮುಷ್ಕರಗಳಲ್ಲಿ ಒಕ್ಕೂಟವು ಭಾಗವಹಿಸಿದೆ. ರಾಷ್ಟ್ರೀಯ

ಕೇರಳ, ತಮಿಳುನಾಡು, ಮಹಾರಾಷ್ಟ್ರದಲ್ಲಿ ನಡೆದ ಅನಿರ್ದಿಷ್ಟಾವಧಿ ಮುಷ್ಕರಗಳು ಮತ್ತು ದೇಶದ ಇತರ ಹಲವು ಭಾಗಗಳಲ್ಲಿನ ನಿರಂತರ ಹೋರಾಟಗಳು ಎನ್‌ಪಿಎಸ್ ಕುರಿತಂತೆ ರಾಜಕೀಯ ಪಕ್ಷಗಳನ್ನು ಮರುಚಿಂತನೆಗೆ ಒತ್ತಾಯಿಸಿದವು. ರಾಜಸ್ತಾನ, ಜಾರ್ಖಂಡ್, ಛತ್ತೀಸ್‌ಗಡ, ಹಿಮಾಚಲ ಪ್ರದೇಶಗಳು ಇದನ್ನು ಹಿಂಪಡೆಯಲು (roll back) ಆದೇಶ ಹೊರಡಿಸಿವೆಯಾದರೂ, PFRDA ನಿಧಿಯ ಫಂಡ್‌ ಮ್ಯಾನೇಜರುಗಳಿಗೆ ಠೇವಣಿ ಮಾಡಿದ ನೌಕರರ ವಂತಿಗೆ ಮತ್ತು ಸರ್ಕಾರದ ವಂತಿಗೆಯ ಸಂಪೂರ್ಣ ಹಣವನ್ನು ಇಲ್ಲಿಯವರೆಗೆ PFRDA ಯಿಂದ ರಾಜ್ಯಗಳಿಗೆ ಮರುಪಾವತಿ ಮಾಡಿಲ್ಲ. ರಾಷ್ಟ್ರೀಯ

ಈಗಾಗಲೇ 31.7.2024ರ ವೇಳೆಗೆ ಈ ಎನ್.ಪಿ.ಎಸ್.  ಅಡಿಯಲ್ಲಿ 99,77,165 ನೌಕರರ ಒಟ್ಟು 10,53,850 ಕೋಟಿ ರೂಗಳನ್ನು PFRDA ನಿಧಿಯಲ್ಲಿ ಹೂಡಿಕೆ ಮಾಡಲಾಗಿದೆ. ಇದು ಎನ್.ಪಿ.ಎಸ್‌ಯೋಜನೆಯನ್ನು ಹಿಂಪಡೆದಿದ್ದಇತರ ರಾಜ್ಯ ಸರ್ಕಾರಗಳಿಗೆ ಸಮಸ್ಯೆಯಾಗಿ, ಆದೇಶವನ್ನು ಸ್ಥಗಿತಗೊಳಿಸಿರುತ್ತವೆ.

ಪ್ರಸ್ತಾಪಿತ ಯುಪಿಎಸ್ ಯೋಜನೆ ಯಡಿಯಲ್ಲಿ 25 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಚಂದಾದಾರರು ಕಳೆದ ಹನ್ನೆರಡು ತಿಂಗಳುಗಳ ಸರಾಸರಿ ವೇತನದ 50% ಅನ್ನು ಪಡೆಯುತ್ತಾರೆ ಮತ್ತು ಬೆಲೆಹಣ ದುಬ್ಬರ ಸೂಚ್ಯಂಕಕ್ಕೆ ಅರ್ಹರಾಗಿರುತ್ತಾರೆಂದು ಈಗ ಕೇಂದ್ರ ಸರ್ಕಾರವು ಹೇಳುತ್ತಿದೆ. ಪಿಂಚಣಿಯ ಶೇ. 60 ರಷ್ಟು ಮೊತ್ತ ಕುಟುಂಬ ಪಿಂಚಣಿ ಮತ್ತು ಪೂರ್ಣಗೊಂಡ ಆರು ತಿಂಗಳ ಸೇವೆಗೆ ಕೊನೆಯ ವೇತನದ ಹತ್ತನೇ ಒಂದು ಭಾಗ ವರ್ಷಾಶನ(ಆನ್ಯೂಟಿ) ನೀಡಲಾಗುವುದೆಂದು ಅವರು ಹೇಳುತ್ತಿದ್ದಾರೆ. 10ವರ್ಷ ಸೇವೆ ಸಲ್ಲಿಸಿದವರಿಗೆ ಮಾತ್ರ ಕನಿಷ್ಠ ಪಿಂಚಣಿ10,000 ರೂ ಎಂದು ಘೋಷಿಸಲಾಗಿದೆ.

NPS ಅಡಿಯಲ್ಲಿ ಇರುವವರು ತಮ್ಮ ಸೇವಾವಧಿಯಲ್ಲಿ ಪಿ.ಎಫ್.ಆರ್.ಡಿ.ಎ ಚಂದಾದಾರಿಕೆಗೆ ದೊಡ್ಡ ಮೊತ್ತವನ್ನು ನೀಡುತ್ತಿದ್ದಾರೆ. ಎನ್‌ಪಿಎಸ್‌ನಲ್ಲಿ ನಿವೃತ್ತಿಯ ಸಮಯದಲ್ಲಿ ವರ್ಷಾಶನವಾಗಿ ಸಂಗ್ರಹವಾದ ಮೊತ್ತದ ಶೇ. 60ರಷ್ಟನ್ನು ನೌಕರರಿಗೆ ಮರುಪಾವತಿ ಮಾಡಲು ಅವಕಾಶವಿದೆ. ಯುಪಿಎ ಸ್ ಯೋಜನೆಯಲ್ಲಿ ಅಂತಹ ವರ್ಷಾಶನ ಇರುವುದಿಲ್ಲ. ಬದಲಾಗಿ ಅಲ್ಪ ಮೊತ್ತ ನೀಡಲು ಪ್ರಸ್ತಾಪಿಸಲಾಗಿದೆ.

ಆಂಧ್ರ ಪ್ರದೇಶದಲ್ಲಿ ಜಾರಿಗೊಳಿಸಲಾದ ಖಾತರಿ ಪಿಂಚಣಿ ಯೋಜನೆಯನ್ನೇ ಕೇಂದ್ರ ಸರ್ಕಾರದಿಂದ ಏಕೀಕೃತ ಪಿಂಚಣಿ ಯೋಜನೆ ಎಂಬ ಹೊಸ ಹೆಸರಿನಲ್ಲಿ ಘೋಷಿಸಲಾಗಿದೆ. ಆಂಧ್ರ ಪ್ರದೇಶ ವಿಧಾನ ಸಭೆಯು ಕಳೆದ ವರ್ಷ ಖಾತರಿ ಪಿಂಚಣಿ ಯೋಜನೆ (GPS) ಮಸೂದೆಯನ್ನು ಅಂಗೀಕರಿಸಿದ್ದು ಪ್ರಸ್ತುತ ಅದನ್ನು ತಡೆಹಿಡಿಯಲಾಗಿದೆ. ಕೇಂದ್ರ ಸರ್ಕಾರಿ ನೌಕರರಿಗೂ ಕೂಡ ಇದೇ ಸೂತ್ರವನ್ನು ಅಳವಡಿಸಲಾಗಿದೆ.

ಈಗ ಯುಪಿಎಸ್‌ನಲ್ಲಿಯೂ ಸಹ ಸರ್ಕಾರದ ವಂತಿಗೆಯನ್ನು ಪ್ರಸ್ತುತ 14% ರಿಂದ 18.5% ಕ್ಕೆ ಹೆಚ್ಚಿಸಲಾಗಿದೆ. ಇದು ಕಾರ್ಪೊರೇಟ್ ಸಂಸ್ಥೆಗಳಿಗೆ ಖಂಡಿತವಾಗಿಯೂ ಸಹಾಯ ಮಾಡುತ್ತದೆ. ಕಳೆದ ಆರ್ಥಿಕ ವರ್ಷದವರೆಗೆ ಎನ್‌ಪಿಎಸ್ ಮೂಲಕ ಸಂಗ್ರಹಿಸಿದ ಹತ್ತು ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿದೆ. ಸರ್ಕಾರದ ವಂತಿಗೆಯನ್ನು 4.5% ರಷ್ಟು ಹೆಚ್ಚಿಸುವ ಮೂಲಕ ಈ ಪಾಲು ಖಂಡಿತವಾಗಿಯೂ ಪಿಂಚಣಿ ಖಾಸಗೀ ಕರಣದ ನಿಜವಾದ ಫಲಾನುಭವಿಗಳಾಗಿರುವ ಕಾರ್ಪೊರೇಟ್ಕುಳಗಳಿಗೆ* ನೀಡುವ ದೊಡ್ಡ ಕೊಡುಗೆಯಾಗಿದೆ.

ಈ ಹಿನ್ನೆಲೆಯಲ್ಲಿ, ನಮ್ಮ ದೇಶದ ಕಾರ್ಮಿಕರು ಮತ್ತು ರೈತರು ಬೆಂಬಲಿಸಿರುವ ವಿವಿಧ ವಲಯಗಳ ನೌಕರರ ನಿರಂತರ ಹೋರಾಟ ಮತ್ತು ಮುಷ್ಕರದ ಪರಿಣಾಮವಾಗಿ ಎನ್‌ಪಿಎಸ್ ಸಮಸ್ಯೆಯು ಮುನ್ನೆಲೆಗೆ ಬಂದಿದೆ. ಈ ಹೋರಾಟಗಳ ಫಲವಾಗಿ ಷೇರು ಮಾರುಕಟ್ಟೆಯ ಮೂಲಕ ಮಾಡಲಾಗುತ್ತಿರುವ ನೌಕರರ ಹಣದ ಲೂಟಿಯನ್ನು ಬೆಳಕಿಗೆ ತರಲಾಗಿದೆ.

ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು ಎರಡು ದಶಕಗಳಿಗೂ ಹೆಚ್ಚು ಕಾಲ ರಾಜ್ಯನೌಕರರು ಮತ್ತುಶಿಕ್ಷಕರಎಲ್ಲಾಚಳುವಳಿಯನ್ನುಮುನ್ನಡೆಸುತ್ತಿದೆ.

ಕೆಲವು ಕೇಂದ್ರ ಸರ್ಕಾರಿ ನೌಕರರ ಸಂಘಟನೆಯ ನಾಯಕರು UPS ಅನ್ನು ಬಹಿರಂಗವಾಗಿ ಬೆಂಬಲಿಸುತ್ತಿದ್ದಾರೆ ಮತ್ತು ತಮ್ಮ ರಾಜ್ಯಗಳಲ್ಲಿ UPS ಅನ್ನು ಜಾರಿಗೆ ತರುವಂತೆ ಸರ್ಕಾರವನ್ನು ಒತ್ತಾಯಿಸಲು ರಾಜ್ಯ ನೌಕರರಿಗೆ ಸಲಹೆ ನೀಡುತ್ತಿದ್ದಾರೆ. ಸಂಶಯಾಸ್ಪದ ಹಿನ್ನೆಲೆ ಹೊಂದಿರುವ ಇಂತಹ ನಾಯಕರಿಂದ ಯಾವುದೇ ಸಲಹೆ ಅವಶ್ಯವಿಲ್ಲ.

ಪ್ರತಿಬಾರಿಯೂ ನಾವು ಹಳೆಯ ಪಿಂಚಣಿ ಯೋಜನೆಯ ಪರವಾಗಿ ನಿಲ್ಲುತ್ತೇವೆ.

ಇದೀಗ ಯುಪಿಎಸ್ ಅನ್ನು ಬೆಂಬಲಿಸುತ್ತಿರುವ ಇಂತಹ ಅವಕಾಶವಾದಿ ಸಂಘಟನೆಗಳ ಮತ್ತು ನೌಕರರ ಸಮುದಾಯವನ್ನು ವಂಚಿಸುವ ಯಾವುದೇ ನಾಯಕರೊಂದಿಗೆ ಅಖಿಲ ಭಾರತ ಒಕ್ಕೂಟವು ವೇದಿಕೆಯನ್ನು ಹಂಚಿಕೊಂಡಿಲ್ಲ.

ಹಳೆಯ ನಿಶ್ಚಿತ ಪಿಂಚಣಿ ಯೋಜನೆಯ ಮರುಸ್ಥಾಪನೆಗಾಗಿ ನಮ್ಮ ಹೋರಾಟವನ್ನು ಮುಂದುವರೆಸಲು ರಾಜ್ಯಾದ್ಯಂತ ಎಲ್ಲಾ ನೌಕರರು ಮತ್ತು ಶಿಕ್ಷಕರಿಗೆ ಅಖಿಲ ಕರ್ನಾಟಕ ರಾಜ್ಯಸರ್ಕಾರಿ ನೌಕರರ ಅಖಿಲ ಭಾರತ ರಾಜ್ಯಸರ್ಕಾರಿ ನೌಕರರ ಒಕ್ಕೂಟ ಮತ್ತು ಅಖಿಲ ಕರ್ನಾಟಕ ರಾಜ್ಯಸರ್ಕಾರಿ ನೌಕರರ ಒಕ್ಕೂಟವು ಮನವಿ ಮಾಡುತ್ತದೆ. OPS ನಲ್ಲಿ ಯಾವುದೇ ವಂತಿಗೆ ನೀಡಬೇಕಾಗಿಲ್ಲ, ಆದರೆ ವೇತನ ಪರಿಷ್ಕರಣೆಯೊಂದಿಗೆ ನಿಯತಕಾಲಿಕ ಪರಿಶೀಲನೆ ಮತ್ತು ಪಿಂಚಣಿ ಪರಿಷ್ಕರಣೆ ಇದೆ, ಪ್ರತಿಯೊಬ್ಬರೂ commutationನ್ನು ಪಡೆಯುತ್ತಾರೆ ಮತ್ತು ಹೆಚ್ಚಿನ ದರದಲ್ಲಿ ಪ್ರತಿ ಕುಟುಂಬ ಪಿಂಚಣಿಗೆ ಅರ್ಹರಾಗಿರುತ್ತಾರೆ ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಎನ್.ಪಿ.ಎಸ್‌ ರದ್ದು ಮಾಡುವುದಿಲ್ಲ ಎಂದು ಹೇಳುತ್ತಿದ್ದ ಎನ್‌ಡಿಎ ಸರ್ಕಾರವು ಹಿಂದಿನ ಅವಧಿಯಲ್ಲಿ ನೌಕರರ ನಿರಂತರ ಹೋರಾಟಗಳ ಕಾರಣದಿಂದಾಗಿ ಯು.ಪಿ.ಎಸ್‌ ಎಂಬ ಎನ್.ಪಿ.ಎಸ್‌ ನ ಮಾರ್ಪಡಿತ ಯೋಜನೆಯನ್ನು ತರಲು ಹೊರಟಿದೆ. ಹಾಗಾಗಿ, ದೇಶಾದ್ಯಂತ ನೌಕರರ ಒಗ್ಗಟ್ಟಿನ ಹೋರಾಟ ಮುಂದುವರಿದರೆ, ನಾವು PFRDA/NPS ಬದಲಿಗೆ ಹಳೆಯ ನಿಶ್ಚಿತ ಪಿಂಚಣಿ ಯೋಜನೆಯನ್ನು ಮರಳಿತರಬಹುದು ಎಂಬುದನ್ನು ಇದು ಒತ್ತಿ ಹೇಳುತ್ತದೆ.

ಸೆಪ್ಟಂಬರ್ 26 ರಂದು ದೇಶಾದ್ಯಂತ ರಾಷ್ಟ್ರೀಯ ಪ್ರತಿಭಟನಾ ದಿನವನ್ನಾಗಿ ಆಚರಿಸಲು ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು ನಿರ್ಧರಿಸಿದೆ. ಹಾಗಾಗಿ, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟವು ಹಳೆಯ ನಿಶ್ಚಿತ ಪಿಂಚಣಿ ಯೋಜನೆ ಮರುಸ್ಥಾಪನೆಗೆ ಆಗ್ರಹಿಸಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಊಟದ ವಿರಾಮದಲ್ಲಿ ಧರಣಿ ನಡೆಸಲು ಕರೆ ನೀಡುತ್ತದೆ ಎಂದರು.

ಇದನ್ನೂ ನೋಡಿ: ವಚನಾನುಭವ -09| ಅರಿ(ವ)ನರಿತವ ಕೆಡಿಸಿತ್ತು ಬಡತನವೆಂಬ ರಾಹು |ಮೀನಾಕ್ಷಿ ಬಾಳಿ

Donate Janashakthi Media

Leave a Reply

Your email address will not be published. Required fields are marked *