ಬೆಂಗಳೂರು: ಪೊಲೀಸ್ ಅಧಿಕಾರಿಗಳು ಕರ್ತವ್ಯ ಲೋಪ, ನಿರ್ಲಕ್ಷ್ಯ ಅಥವಾ ಕರ್ತವ್ಯದಲ್ಲಿ ದುರ್ನಡತೆ ಎಸಗಿದಾಗ ಅವರನ್ನು ವರ್ಗಾಯಿಸಲು ಪೊಲೀಸ್ ಸ್ಥಾಪನಾ ಮಂಡಳಿಗೆ ಅಧಿಕಾರ ನೀಡಲು ಕರ್ನಾಟಕ ಪೊಲೀಸ್ ಕಾಯ್ದೆ, 1963 (ಕರ್ನಾಟಕ ಕಾಯ್ದೆ 4, 1964) ಕ್ಕೆ ಮತ್ತಷ್ಟು ತಿದ್ದುಪಡಿ ತರಲು ಪ್ರಸ್ತಾಪಿಸಲಾಗಿದೆ. ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಪಟ್ಟಂತೆ ಕರ್ನಾಟಕ ಪೊಲೀಸ್ (ತಿದ್ದುಪಡಿ) ವಿಧೇಯಕ 2025ಕ್ಕೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಬೆಂಗಳೂರು
ಪ್ರಸ್ತುತ ಈ ವರ್ಗಾವಣೆಗಳು ಪೊಲೀಸ್ ಸಿಬ್ಬಂದಿ ಮಂಡಳಿಯ ವ್ಯಾಪ್ತಿಯಲ್ಲಿರುವುದಿಲ್ಲ ಮತ್ತು ಸರ್ಕಾರ ಸಕ್ಷಮ ಪ್ರಾಧಿಕಾರವಾಗಿದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಲ್ಲಿ ಮತ್ತು ಆದೇಶವನ್ನು ಪಡೆಯುವಲ್ಲಿ ವಿಳಂಬವಾಗುತ್ತಿದೆ. ಕರ್ತವ್ಯ ಲೋಪ, ನಿರ್ಲಕ್ಷ್ಯ ಅಥವಾ ಕರ್ತವ್ಯದಲ್ಲಿ ದುರ್ನಡತೆ ಎಸಗಿದ ಪೊಲೀಸ್ ಅಧಿಕಾರಿಗಳನ್ನು ವರ್ಗಾಯಿಸಲು ತುರ್ತಾಗಿ ಆದೇಶ ಹೊರಡಿಸುವ ಅಗತ್ಯವಿದೆ. ಪೊಲೀಸ್ ಸಿಬ್ಬಂದಿ ಮಂಡಳಿ ಪೊಲೀಸ್ ಸಿಬ್ಬಂದಿ ಮತ್ತು ಪೊಲೀಸ್ ಉಪ ಅಧೀಕ್ಷಕರ ಶ್ರೇಣಿಯವರೆಗಿನ ಅಧಿಕಾರಿಗಳನ್ನು ವರ್ಗಾಯಿಸಲು, ಇತರ ಎಲ್ಲಾ ವರ್ಗಾವಣೆಗಳಿಗೆ ಸಕ್ಷಮ ಪ್ರಾಧಿಕಾರವಾಗಿರುವುದರಿಂದ, ಪೊಲೀಸ್ ಸ್ಥಾಪನಾ ಮಂಡಳಿಗೆ ಅಧಿಕಾರ ನೀಡಲು ಕರ್ನಾಟಕ ಪೊಲೀಸ್ ಅಧಿನಿಯಮ, 1963ರ ಕಲಂ 20 (ಎಫ್) (1) ಮತ್ತು (2)ಗಳಿಗೆ ತಿದ್ದುಪಡಿ ಪ್ರಸ್ತಾಪಿಸಲಾಗಿದೆ. ಬೆಂಗಳೂರು
ಇದನ್ನೂ ಓದಿ : ಬೆಂಗಳೂರು ಚಿತ್ರೋತ್ಸವದಲ್ಲಿ ಇಂದು – ಭಾನುವಾರದ ವಿಶೇಷ ಚಿತ್ರಗಳು
ಸಂಪುಟದ ಇತರೆ ಪ್ರಮುಖ ತೀರ್ಮಾನಗಳು:
- ಕೃಷಿ ಇಲಾಖೆಯ ಅಧೀನದ ಕರ್ನಾಟಕ ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮ ನಿಯಮಿತ (ಕೆಮಿಕ್) ಸಂಸ್ಥೆಯಲ್ಲಿ ಪ್ರಸ್ತುತ ಯಾವುದೇ ಚಟುವಟಿಕೆಗಳು ಚಾಲ್ತಿಯಲ್ಲಿರದ ಕಾರಣ ಸಂಸ್ಥೆಯನ್ನು ಕಂಪನಿ ಕಾಯ್ದೆ, 2013ರ ಕಲಂ: 248(2) ರನ್ವಯ ಸಮಾಪನಗೊಳಿಸಲು ತೀರ್ಮಾನ. ಈ ನಿಗಮ ಯಾವುದೇ ಷೇರುದಾರರ ಹಕ್ಕು ಬಾಧ್ಯತೆ, ಆಸ್ತಿ ಹೊಂದಿಲ್ಲ. ವೆಚ್ಚ ಕಡಿತ ಅಂಗವಾಗಿ ನಿಗಮವನ್ನು ಸಮಾಪನಗೊಳಿಸಲು ತೀರ್ಮಾನಿಸಲಾಗಿದೆ.
- ಬೆಂಗಳೂರು ನಗರ ಮಲ್ಲೇಶ್ವರಂನಲ್ಲಿರುವ ಶ್ರೀಕಾಡುಮಲ್ಲೇಶ್ವರಸ್ವಾಮಿ ದೇವಾಲಯಕ್ಕೆ ಸೇರಿದ ಸಿಟಿಎಸ್ ನಂ.1408ರಲ್ಲಿನ 6,000 ಚದರ ಅಡಿ ಜಾಗ ಹಾಗೂ ಸದರಿ ಜಾಗದಲ್ಲಿ ನಿರ್ಮಿಸಿರುವ ಸಾಯಿಮಂದಿರ ಪಕ್ಕದಲ್ಲಿರುವ ಅನೆಕ್ಸ್ ಕಟ್ಟಡವನ್ನು ‘ಶ್ರೀ ಸಾಯಿ ಮಂಡಳಿ ಸಂಸ್ಥೆ’ಯವರಿಗೆ ಗುತ್ತಿಗೆ ನೀಡಲು ಒಪ್ಪಿಗೆ.
- ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯಲ್ಲಿ ಮಾನವ-ವನ್ಯಜೀವಿ ಸಂಘರ್ಷ ತಡೆಗಟ್ಟಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಕಾಮಗಾರಿಯನ್ನು 11.65 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ ಸಮಾಲೋಚನೆ.
- ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ, ಸಾರಥಿ ಯೋಜನೆಯಡಿ ಆಟೋ ರಿಕ್ಷಾ ಅಥವಾ ಕಾರುಗಳನ್ನು ಖರೀದಿಸಲು ಒಟ್ಟು 19.18 ಕೋಟಿ ರೂ.ಗಳ ಸಹಾಯಧನ ಹಾಗೂ ಇ-ವೆಂಡಿಂಗ್ ಯೋಜನೆಯಡಿ ಇ-ವೆಂಡಿಂಗ್ ವಾಹನಗಳನ್ನು ಖರೀದಿಸಲು 42.84 ಕೋಟಿ ರೂ.ಗಳ ಸಹಾಯಧನವನ್ನು ಅರ್ಹ ಬದಿ ಫಲಾನುಭವಿಗಳು ಮತ್ತು ಬೀದಿ ವ್ಯಾಪಾರಿಗಳಿಗೆ ಒದಗಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
- AB-Ark ಯೋಜನೆಯಡಿ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಾಗುವ ಕ್ಷೇಮ್ ರೆವಿನ್ಯೂ ಉಪಯೋಗಕ್ಕೆ ಮಾನದಂಡಗಳ ಅನುಮೋದನೆ ಮತ್ತು ಪ್ರಾಯೋಗಿಕ ಅನುಷ್ಠಾನದ ನಂತರ ಇ-ವೌಚರ್ ವ್ಯವಸ್ಥೆ ಜಾರಿಗೆ ತರಲು ಅನುಮೋದನೆ.
- ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ಆರ್ಥಿಕ ವರ್ಷ 2013-14ರಿಂದ 2018-19ನೇ ಸಾಲಿನಲ್ಲಿ ವಿವಿಧ ಯೋಜನೆಗಳಡಿ ನೀಡಲಾಗಿರುವ ಸಾಲದ ಮೊತ್ತವನ್ನು ಪೂರ್ಣವಾಗಿ ಅಸಲು ಪಾವತಿಸಿದ ಫಲಾನುಭವಿಗಳಿಗೆ ಬಡ್ಡಿಯನ್ನು ಮನ್ನಾ ಮಾಡಲು ಒ.ಟಿ.ಎಸ್ (One Time Settlement) ಯೋಜನೆಗೆ ಸಮ್ಮತಿ.
- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 05 ಮೌಲಾನಾ ಆಜಾದ್ ಮಾದರಿ ಶಾಲೆಗಳ ಹಾಗೂ 18 ವಸತಿ ನಿಲಯಗಳ ನಿರ್ಮಾಣಕ್ಕಾಗಿ 17.71 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಾಗರಿಕ ಸೌಲಭ್ಯ ನಿವೇಶನಗಳನ್ನು ಸ್ಥಳೀಯ ಸಂಸ್ಥೆಗಳಿಂದ ಖರೀದಿಸಲು ಒಪ್ಪಿಗೆ.
- ಕರ್ನಾಟಕ ರಾಜ್ಯದ CADA ಪ್ರಾಧಿಕಾರಗಳ ಅಡಿಯಲ್ಲಿ ಯೋಜನಾ ಮಾರ್ಗಸೂಚಿಗಳ ಅನ್ವಯ ಕೈಗೊಳ್ಳಬೇಕಾದ ಪ್ರಾಯೋಜಿತ ಕೇಂದ್ರದ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಆಧುನೀಕರಣ (Modernization of Command Area Development) MCAD (ಸಮೃದ್ಧಿ) ಪ್ರಸ್ತಾವನೆಗಳನ್ನು (ಕೇಂದ್ರ 60%, ರಾಜ್ಯ 40%) ಕೈಗೊಳ್ಳಲು ತಾತ್ವಿಕ ಅನುಮೋದನೆ.
- ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (KPCL)2 ಯಲಹಂಕ ಕಂಬೈನ್ಸ್ ಸೈಕಲ್ ಪವರ್ ಪ್ಲಾಂಟ್ (YCCPP)ಗೆ ತೃತೀಯ ಸಂಸ್ಕರಿಸಿದ ನೀರನ್ನು ಪೂರೈಸಲು ಜಕ್ಕೂರಿನಲ್ಲಿರುವ 15 MLD ತೃತೀಯ ಸಂಸ್ಕರಿಸುವ ಘಟಕದ (TTP) 5 ವರ್ಷಗಳ ಸಮಗ್ರ ಕಾರ್ಯಾಚರಣೆ ಮತ್ತು ನಿರ್ವಹಣೆ (O&M)ಯನ್ನು 39.10 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.
- ಚಿಕ್ಕಬಳ್ಳಾಪುರ ಜಿಲ್ಲೆ, ಗುಡಿಬಂಡೆ ತಾಲೂಕು, ಸೋಮೇನಹಳ್ಳಿ ಹೋಬಳಿ, ದೊಡ್ಡಕುರುಬರಹಳ್ಳಿ ಗ್ರಾಮದ ಸ.ನಂ. 96ರಲ್ಲಿ 3-00 ಎಕರೆ ಸರ್ಕಾರಿ ಖರಾಬು ಜಮೀನನ್ನು ಶೈಕ್ಷಣಿಕ ಉದ್ದೇಶಕಾಗಿ ಶ್ರೀ ಆದಿಜಾಂಬವ ಮಹಾಗುರು ಸಂಸ್ಥಾನ ಮಠ (ರಿ) ಇವರಿಗೆ ಗುತ್ತಿಗೆ ನೀಡಲಿ ಒಪ್ಪಿಗೆ.
- ರಾಯಚೂರು ತಾಲೂಕು, ಯರಮರಸ್ ಗ್ರಾಮದ ಸ.ನಂ.55/*ರಲ್ಲಿ 1 ಎಕರೆ ಗೋಮಾಳ ಜಮೀನನ್ನು ಸಮುದಾಯ ಭವನ, ವಿದ್ಯಾರ್ಥಿ ನಿಲಯ ನಿರ್ಮಾಣ ಹಾಗೂ ಶೈಕ್ಷಣಿಕ ಉದ್ದೇಶಕ್ಕಾಗಿ ಕರ್ನಾಟಕ ಪ್ರದೇಶ ಕುರುಬರ ಸಂಘ, ರಾಯಚೂರು ಇವರಿಗೆ ಮಂಜೂರು.
- ಉಡುಪಿ ಜಿಲ್ಲೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ನೂತನ ಸೌಪರ್ಣಿಕಾ ಅತಿಥಿಗೃಹ ನಿರ್ಮಾಣ ಕಾಮಗಾರಿಯನ್ನು 16 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಗ್ರಾಮದ ರಿ.ಸ.ನಂ.29ರಲ್ಲಿ 20 ಗುಂಟೆ ಜಮೀನನ್ನು ಕಾಂಗ್ರೆಸ್ ಕಚೇರಿ ಕಟ್ಟಡ ನಿರ್ಮಾಣದ ಉದ್ದೇಶಕ್ಕೆ ಕಾಂಗ್ರೆಸ್ ಭವನ ಟ್ರಸ್ಟ್(ರಿ) ಬೆಂಗಳೂರುಗೆ ಮಂಜೂರು.
- ರಾಜ್ಯದಲ್ಲಿ ಒತ್ತುವರಿಯಾಗಿರುವ 328 ದೇವಾಲಯಗಳ ಆಸ್ತಿಗಳನ್ನು ಸಂರಕ್ಷಿಸಲು ಒತ್ತುವರಿಯನ್ನು ತೆರವುಗೊಳಿಸಿ, ‘ಭೂ ವರಾಹ ದೇವಾಲಯಗಳ ಯೋಜನೆ’ಯಡಿ ಈ ದಾಖಲೀಕರಣಗೊಳಿಸುವ ಸ್ಥಿರಾಸ್ತಿಗಳನ್ನು 15 ಕೋಟಿಗಳ ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
- ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ, 2026ಕ್ಕೆ ಅನುಮೋದನೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಇವಿಎಂ ಬದಲು ಮತಪತ್ರ ಬಳಕೆ ಮಾಡಲು ಅನುವು ಮಾಡುವ ಸಂಬಂಧ ತಿದ್ದುಪಡಿ ವಿಧೇಯಕ ಇದಾಗಿದೆ.
- ಕಲಬುರಗಿಯಲ್ಲಿ ಹೊಸದಾಗಿ ಜಿಲ್ಲಾ ಪಂಚಾಯತ್ ಕಟ್ಟಡವನ್ನು 49.65 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ.
- ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನಲ್ಲಿ ಹೊಸ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC) ವನ್ನು 73.75 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ KKRDB ಅನುದಾನದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ.
- ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಿಗೆ 37.80 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕಂಪ್ಯೂಟರ್ ಲ್ಯಾಬ್‌ಗಳನ್ನು ಸ್ಥಾಪಿಸಲು ಆಡಳಿತಾತ್ಮಕ ಒಪ್ಪಿಗೆ
ಇದನ್ನೂ ನೋಡಿ : “ಮನರೇಗಾ ನಮ್ಮ ಹಕ್ಕು: V B GRAM G ವಿರುದ್ಧ ಜನಪಂಚಾಯತ್” | ಉದ್ಯೋಗ ಖಾತರಿ Janashakthi Media
