ಹೊಸದಿಲ್ಲಿ | ನೂತನ ಉಪರಾಷ್ಟ್ರಪತಿಯಾಗಿ ಸಿ.ಪಿ.ರಾಧಾಕೃಷ್ಣನ್‌ ಆಯ್ಕೆ

ಹೊಸದಿಲ್ಲಿ: ಜಗದೀಪ್‌ ಧನಕರ್‌ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪರಾಷ್ಟ್ರಪತಿ ಹುದ್ದೆಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಎನ್‌ಡಿಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್‌ ಅವರು ನಿರೀಕ್ಷೆಯಂತೆ ಗೆಲುವು ಸಾಧಿಸಿದರು.  ಹೊಸದಿಲ್ಲಿ

ಅವರು, ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಬಿ.ಸುದರ್ಶನ ರೆಡ್ಡಿ ಅವರಿಗಿಂತ 152 ಹೆಚ್ಚುವರಿ ಮತಗಳನ್ನು ಪಡೆದು ದೇಶದ 15ನೇ ಉಪ ರಾಷ್ಟ್ರಪತಿಯಾಗಿ ಚುನಾಯಿತರಾದರು.

ಇದನ್ನೂ ಓದಿ: ಕೋಲ್ಕತ್ತಾ | ಗಡಿ ಭಾಗದ ಬಂಗಾಳಿಗರು ಶಾಂತಿಯಿಂದ ಇರುವಂತೆ ಸಿಎಂ ಮಮತಾ ಬ್ಯಾನರ್ಜಿ ಮನವಿ

ಇಬ್ಬರೂ ಅಭ್ಯರ್ಥಿಗಳ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಎನ್‌ಡಿಎ ಮೈತ್ರಿಕೂಟದ ಬಳಿ ಬಹುಮತ ಇದ್ದ ಕಾರಣ ರಾಧಾಕೃಷ್ಣನ್‌ ಗೆಲುವು ಬಹುತೇಕ ಖಚಿತವಾಗಿತ್ತು. ರಾಧಾಕೃಷ್ಣನ್‌ ಅವರ ಪರವಾಗಿ ಒಟ್ಟು 452 ಮತಗಳು ಚಲಾವಣೆಯಾಗಿದ್ದರೆ, ಪ್ರತಿಸ್ಪರ್ಧಿ ಸುದರ್ಶನ ರೆಡ್ಡಿ ಅವರಿಗೆ 300 ಮತಗಳು ಬಂದಿವೆ ಎಂದು ಚುನಾವಣಾ ಅಧಿಕಾರಿ ಪಿ.ಸಿ. ಮೋದಿ ಅವರು ಪ್ರಕಟಿಸಿದರು.

‘ಒಟ್ಟು 767 ಸಂಸದರು (ಶೇ 98.2) ಮತಚಲಾಯಿಸಿದ್ದು, ಅವುಗಳಲ್ಲಿ 752 ಮತಗಳು ಮಾನ್ಯಗೊಂಡಿವೆ ಮತ್ತು 15 ಮತಗಳು ಅಮಾನ್ಯಗೊಂಡಿವೆ. ಅಂಚೆ ಮತಪತ್ರ ಸಲ್ಲಿಸಿದ್ದ ಸಂಸದರೊಬ್ಬರು ‘ಅದನ್ನು ಪರಿಗಣಿಸಬೇಡಿ’ ಎಂದು ಆನಂತರ ಹೇಳಿದ್ದರಿಂದ ಅದನ್ನು ಪರಿಗಣಿಸಿಲ್ಲ’ ಎಂದು ಅವರು ವಿವರಿಸಿದರು.

ನೂತನ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಮತದಾನದ ಅಂಕಿ – ಅಂಶಗಳನ್ನು ನೋಡಿದರೆ ವಿರೋಧ ಪಕ್ಷಗಳಿಂದ ಭಾರೀ ಪ್ರಮಾಣದಲ್ಲಿ ಅಡ್ಡ ಮತದಾನ ನಡೆದಿರುವಂತೆ ಭಾಸವಾಗುತ್ತಿದೆ. ಕನಿಷ್ಠ 19 ಸಂಸದರು ಎನ್‌ಡಿಎ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಸಿಪಿ ರಾಧಾಕೃಷ್ಣನ್ ಅವರು ಸುಲಭವಾಗಿ ಗೆಲುವಿನ ನಗೆಯನ್ನು ಬೀರಿದ್ದಾರೆ.

ಇದನ್ನೂ ನೋಡಿ: ಸಾಂಸ್ಕೃತಿಕ ಲೋಕದ ಮುಖ್ಯ ಉಸಿರು ಸಮುದಾಯ ; ಬರಗೂರು ರಾಮಚಂದ್ರಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *