ಮೈಸೂರು: ಜಿಲ್ಲೆಯ ನಂಜನಗೂಡು ತಾಲೂಕಿನ ಪಾಳ್ಯಾ ಗ್ರಾಮದಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೇಲೆ ಆಕೆಯ ಸೋದರ ಮಾವನೇ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಪಿಯುಸಿ
ಪೂರ್ಣಿಮಾ ಹಲ್ಲೆಗೆ ಒಳಗಾದ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಪರೀಕ್ಷೆ ಬರೆಯಲು ಹೋಗಬಾರದು ಎಂಬ ದುರುಳ ಉದ್ದೇಶವೂ ಈ ಹಲ್ಲೆಯ ಹಿಂದೆ ಇದೆ ಎಂದು ಗೊತ್ತಾಗಿದೆ.
ಇದನ್ನೂ ಓದಿ: ಮಾರ್ಚ್ 24ರಂದು ದಿಲ್ಲಿಯಲ್ಲಿ ಬೃಹತ್ ಮತಪ್ರದರ್ಶನ – ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ
ಆಕೆ ಪರೀಕ್ಷೆ ಮುಗಿಸಿ ಮನೆಗೆ ಬಂದಾಗ ವಿದ್ಯಾರ್ಥಿನಿಯ ಸೋದರ ಮಾವ ಸೋಮಣ್ಣ ಎಂಬಾತ ಏಕಾಏಕಿ ಮನೆಗೆ ನುಗ್ಗಿ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಹಳೇ ದ್ವೇಷದ ಹಿನ್ನಲೆಯಲ್ಲಿ, ನೀನು ಓದಬಾರದು ಅಂತ ಹಲ್ಲೆ ಮಾಡಿದ್ದಾನೆ. ಯುವತಿಯ ನೆರವಿಗೆ ಬಂದ ಕುಟುಂಬಸ್ಥರ ಮೇಲೆಯೂ ಹಲ್ಲೆ ಮಾಡಿದ್ದಾನೆ.
ಸೋದರ ಮಾವ ಸೋಮಣ್ಣನ ಆಶ್ರಯದಲ್ಲಿ ಬೆಳೆಯುತ್ತಿರುವ ಪೂರ್ಣಿಮಾ, ಓದಬಾರದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬಾರದು ಎಂದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಸದ್ಯ ಯುವತಿ ಪೂರ್ಣಿಮಾಳನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮಣ್ಣ ಸೇರಿ 7 ಜನರ ವಿರುದ್ಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇದನ್ನೂ ನೋಡಿ: “ಯು.ಎಸ್. ಸಾಮ್ರಾಜ್ಯಶಾಹಿ: ಓದುಗರ ಅಲೆ ಎಬ್ಬಿಸಿದ ಪುಸ್ತಕ” Janashakthi Media
