ಬಾರಾಬಂಕಿ: ”ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನನ್ನ ಟಿಕೆಟ್ ರದ್ದು ಮಾಡುವವರು ಯಾರಿದ್ದಾರೆ?” ಎಂದು ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹಲವಾರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಉತ್ತರ ಪ್ರದೇಶದಲ್ಲಿ ಕೇಳಿದ್ದಾರೆ. ಈ ಬಗ್ಗೆ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾರಾಬಂಕಿಯಲ್ಲಿ ನಡೆದ ಕಾರ್ಯಕ್ರಮವೊಂದರ ನಂತರ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಿಮಗೆ ಟಿಕೆಟ್ ಸಿಗುತ್ತದೆಯೆ ಎಂಬ ಪತ್ರಕರ್ತರ ಪ್ರಶ್ನೆಗೆ ಆತ್ಮವಿಶ್ವದಿಂದ ಉತ್ತರಿಸಿದ ಲೈಂಗಿಕ ಕಿರುಕುಳದ ಆರೋಪಿ ಬ್ರಿಜ್ ಭೂಷಣ್ ಸಿಂಗ್,”ಕೌನ್ ಕಾಟ್ ರಹಾ ಹೈ ಉಸ್ಕಾ ನಾಮ್ ಬತಾವೋ?… ಕಾತೋಗೇ ಆಪ್? ಕಾಟೋಗೆ?…(ನನ್ನ ಟಿಕೆಟ್ ಅನ್ನು ಯಾರು ರದ್ದು ಮಾಡುತ್ತಾರೆ? ಅವರ ಹೆಸರು ಹೇಳಿ. ನೀವು ರದ್ದು ಮಾಡುತ್ತೀರಾ? ರದ್ದು ಮಾಡುತ್ತೀರಾ?…)” ಎಂದು ಕೇಳಿದ್ದಾರೆ.
ಇದನ್ನೂ ಓದಿ: Kolar| ವೇದಿಕೆ ಮೇಲೆಯೇ ಶಾಸಕ-ಸಂಸದರ ನಡುವೆ ಜಗಳ; ಅವಾಚ್ಯ ಪದಗಳಿಂದ ನಿಂದನೆ
ಬ್ರಿಜ್ ಭೂಷಣ್ ವಿರುದ್ಧದ ಪ್ರಕರಣವು ತನಿಖೆಯಲ್ಲಿದ್ದರೂ ಸಹ ಅವರ “ಅಹಂಕಾರ” ದ ಬಗ್ಗೆ ಹಲವಾರು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಕೂಡ ವಿಡಿಯೋವನ್ನು ಹಂಚಿಕೊಂಡು ತಮ್ಮ ಆಕ್ರೋಶ ಹೊರಹಾಕಿದ್ದಾರೆ. “ಬ್ರಿಜ್ ಭೂಷಣ್ ಸಿಂಗ್ ಅವರ ‘ಅಧಿಕಾರದ ದುರಹಂಕಾರ’ ನೋಡಿದರೆ, ಯಾರೋ ದೊಡ್ಡವರ ಬೆಂಬಲವೇ ಅವರಿಗೆ ಇರಬೇಕು” ಎಂದು ಅವರ ಆರೋಪಿಸಿದ್ದಾರೆ.
देश के लिए मैडल लाने वाली #Wrestler बेटियों के साथ यौन शोषण करने वाला बृजभूषण खुले में ललकार रहा है कि उसकी टिकट काटने की हिम्मत किस में है?
किसी बड़े आदमी का ही हाथ होगा इसके सर पर, तभी सत्ता का इतना घमंड है! #Brijbhushan pic.twitter.com/nURqrwjtpy
— Swati Maliwal (@SwatiJaiHind) September 24, 2023
ಇದನ್ನೂ ಓದಿ: ಬಿಜೆಪಿ ಜೊತೆಗೆ ಹೊಂದಾಣಿಕೆ ಇಲ್ಲ: ಜನರ ತೀರ್ಮಾನವೇ ನನ್ನ ತೀರ್ಮಾನ|ಶಾಸಕಿ ಕರೆಮ್ಮ ಜಿ.ನಾಯಕ್
“ದೇಶಕ್ಕಾಗಿ ಪದಕಗಳನ್ನು ತಂದುಕೊಟ್ಟ ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಶೋಷಿಸಿದ ಬ್ರಿಜ್ ಭೂಷಣ್ ತನ್ನ ಟಿಕೆಟ್ ರದ್ದು ಮಾಡುವ ಧೈರ್ಯ ಯಾರಿಗಿದೆ ಎಂದು ಬಹಿರಂಗವಾಗಿ ಸವಾಲು ಹಾಕುತ್ತಿದ್ದಾರೆ. ಯಾರೋ ದೊಡ್ಡ ಮನುಷ್ಯನೇ ಬೆಂಬಲ ಅವರಿಗೆ ಇದೆ, ಹಾಗಾಗಿಯೆ ಅಧಿಕಾರದ ದುರಹಂಕಾರ ಇಷ್ಟೊಂದಿದೆ”ಎಂದು ಸ್ವಾತಿ ಅವರು ಹೇಳಿದ್ದಾರೆ.
ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ನೀಡುವ ಯಾವ ಅವಕಾಶವನ್ನೂ ಬ್ರಿಜ್ ಭೂಷಣ್ ಕಳೆದುಕೊಂಡಿಲ್ಲ ಎಂದು
ಶನಿವಾರ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಹೇಳಿದ್ದಾರೆ. ಅವರು ಏನು ಮಾಡುತ್ತಿದ್ದಾರೆಂದು ಅವರಿಗೆ ಸಂಪೂರ್ಣವಾಗಿ ತಿಳಿದಿತ್ತು ಎಂದು ಪೊಲೀಸರು ವಾದಿಸಿದ್ದು, “ಆರೋಪಿಯ ಕಡೆಯಿಂದ ಸ್ಪಷ್ಟವಾದ ಉದ್ದೇಶವಿದ್ದು, ಎಲ್ಲಾ ಘಟನೆಗಳು ಪರಸ್ಪರ ಸಂಬಂಧ ಹೊಂದಿವೆ” ಎಂದು ಪ್ರತಿಪಾದಿಸಿದ್ದಾರೆ. ಅವರ ವಾದಗಳನ್ನು ಬೆಂಬಲಿಸಲು, ಕಝಾಕಿಸ್ತಾನ್, ಮಂಗೋಲಿಯಾ, ಬಳ್ಳಾರಿ ಮತ್ತು ನವದೆಹಲಿಯಲ್ಲಿ ನಡೆದ ಘಟನೆಗಳನ್ನು ಪೊಲೀಸರು ಸಾಕ್ಷಿಯಾಗಿ ಉಲ್ಲೇಖಿಸಿದ್ದಾರೆ.
ವಿಡಿಯೊ ನೋಡಿ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ವಿರೋಧಿಸಿ ಬೃಹತ್ ಪ್ರತಿಭಟನೆ, ಮಂಡ್ಯ ಮದ್ದೂರು ಬಂದ್ Janashakthi Media