ಸಂಧ್ಯಾ ಸೊರಬ
ಒಂದು ಒಳ್ಳೆಯ ಕಥಾಹಂದರವುಳ್ಳ ಚಿತ್ರವನ್ನು ಹಾಳುಮಾಡುವುದು ಪ್ರೇಕ್ಷಕರಿಗೆ ಬೋರ್ ಮಾಡಿಸುವುದೆಂದರೆ ಅದು ಸದ್ಯಕ್ಕೆ “ ಲವ್ಲೀ ಚಿತ್ರ.
ನಮಗೆ ಗೊತ್ತಿಲ್ಲದೆಯೇ ಅದೆಷ್ಟೋ ಮಂದಿ ಏಡ್ಸ್ ಅಥವಾ ಹೆಚ್ಐವಿ ಪಾಸಿಟಿವ್ ಆಗ್ತಾರೆ. ಅದು ಹೇಗೆ?ಯಾಕಾಯ್ತು? ಅನ್ನೋದು ಗೊತ್ತೇ ಇರಲ್ಲ. ಇದನ್ನು ಅರಿಯುವ ಪರಿಯ ಕಥಾಹಂದರವುಳ್ಳ ಚಿತ್ರ ಲವ್ಲೀಯಾದರೂ ಬೇಕು ಅಂತಲೇ ತುರುಕಿರುವ ದೃಶ್ಯಗಳು. ಎಲ್ಲಿಂದಲೋ ಎತ್ತಲೋ ಬಂದು ನಡುನಡುಗೆ ಬರೋ ಉಪಕಥೆಗಳು ಇವು ಸಿನಿಮಾದ ಕಥೆಗೆ ಸಂಬಂಧಿಸದರಾದರೂ ಎಲ್ಲಿಯೋ ತುರುಕುವುದಲ್ಲ. ತುರುಕುವ ಭರಾಟೆಯಲ್ಲಿ ಕಥೆಯನ್ನೇ ಹಾಳುಮಾಡುವುದಲ್ಲ.
ಇತ್ತೀಚೆಗೆ ಥಿಯೇಟರ್ ಗಳಿಗೆ ಪ್ರೇಕ್ಷಕರು ಕನ್ನಡ ಸಿನಿಮಾ ನೋಡೋಕೆ ಬರೋದಿಲ್ಲ ಎಂಬ ಗೊಣಗು ಇದ್ದೇಇದೆ. ಮತ್ತೊಂದುಕಡೆ ಟೆಕ್ನಾಲಜಿಯ ಫೈರಸಿಯ ಹಾವಳಿ. ಈ ಆರೋಪಗಳಿರಲಿ. ಅದರತ್ತ ಪರಿಹಾರವೂ ಮುಖ್ಯ ಅಂಬೋಣ. ಅದೊಂದುಕಡೆ ಇರಲೀ,. ಲವ್ಲೀಯತ್ತ ಬರೋದಾದರೆ ಚಿತ್ರದ ಕಥೆಗೂ ಶೀರ್ಷಿಕೆಗೂ ಸಂಬಂಧವೇ ಇಲ್ಲ. ಚೇತನ್ ಕೇಶವ್ ಮತ್ತು ಪ್ರಜ್ವಲ್ ಕೆ.ಪಿ. ರಚನೆಯ ಹಾಡುಗಳು ಹಾಡಿಗೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಇವರ ಈ ಹಾಡಿಗೆ ಲವ್‌ಲೀ ಹೀರೋ ವಸಿಷ್ಠ ಸಿಂಹ ಧ್ವನಿ ಆಗಿದ್ದಾರಾದರೂ ಹಾಡಂತೂ ಒಂದೂ ಗುನುಗುನಿಸಲು ಬರುವುದೇ ಇಲ್ಲ.
ಇದನ್ನು ಓದಿ : ನಾಟಕ ವಿಮರ್ಶೆ | “ಗೋರ್ ಮಾಟಿ”
ನಟ ವಸಿಷ್ಠಸಿಂಹ ಮಾಸ್ ಆಗಿ ಕಾಣಿಸಿದರೂ ಬಾಯಿಬಿಟ್ಟು ಡೈಲಾಗ್ ಹೇಳಿದಂತೆ ಕಾಣೋದಿಲ್ಲ. ಬೇರೆಭಾಷೆಯ ನಟಿಯನ್ನು ಲವ್ಲೀಗೆ ತಂದಿದ್ದಾರಾದರೂ ಅದು ಡಬ್ ಎನಿಸುವುದು ಸಹಜವೇ. ನಟನೆಯಲ್ಲಿ ಈ ನಟಿ ʼಸ್ಟೆಫಿ ಪಟೇಲ್ʼ ಪರ್ವಾಗಿಲ್ಲ ಅನಿಸುತ್ತೆ. ಕಥೆ ಈಗ ಮುಗಿಯತ್ತೆ ಆಗ ಮುಗಿಯತ್ತೆ ಅಂತಾ ಪ್ರೇಕ್ಷಕ ಕಾಯುತ್ತಲೇ ಇರಬೇಕಾಗುತ್ತದೆ. ಸಸ್ಪೆಂಸ್ ಅನ್ನ ಕ್ಲೈಮ್ಯಾಕ್ಸ್‌ನಲ್ಲಿ ಉಳಿಸಿಕೊಳ್ಳುವುದು ಮುಖ್ಯವೇ ಆದರೂ ಅದು ಬೋರಿಂಗ್ ಎಂದನಿಸಬಾರದು. ಕೊಟ್ಟ ದುಡ್ಡಿಗೆ ಫುಲ್ ಮೂವಿ ನೋಡಬೇಕಷ್ಟೇ.
ನಟನೆಯ ಜೊತೆ ಗಾಯಕನೂ ಆಗಿರುವ ಲವ್ಲೀಯ ವಸಿಷ್ಠ ಸಿಂಹನ ಪ್ರಯತ್ನವನ್ನು ಮೆಚ್ಚಲೇಬೇಕು. ಲುಕ್ ವೈಸ್ ಆಕ್ಟಿಂಗ್ ವೈಸ್ ವಸಿಷ್ಟ ಸಿಂಹ ಓಕೆ ಅನಿಸಿದರೂ ಭರವಸೆಯ ನಾಯಕ ಎಂದೆನಿಸಿಕೊಳ್ಳುವುದಿಲ್ಲ. ಪೋಷಕ ಪಾತ್ರಗಳ ಅಭಿನಯ ಚೆನ್ನಾಗಿಯೇ ಇದೆಯಾದರೂ ಎಲ್ಲೆಲ್ಲೋ ಕಥೆ ಹಾದಿತಪ್ಪಿದಂತೆ ಕಾಣುವುದರಿಂದ ಸ್ಪಷ್ಟನೆ ಆ ನಟನೆಗಳಿಗೆ ಸಿಗುತ್ತಿಲ್ಲ. ರೋಹಿತ್ ಪದಕಿಯ ನಿರ್ದೇಶನ ದಿಕ್ಕುತಪ್ಪಿದ ಲವ್ಲಿಗೆ ದಾರಿಯಾದಂತಿದೆ. ಟೈಮ್ ಕಿಲ್ಲಿಂಗ್ ಮೂವಿ ” ಲವ್ಲೀ”.
ಇದನ್ನು ನೋಡಿ : ನಾಟಕ | ದೇವರ ಹೆಣ – ಕಥೆ : ಕುಂ. ವೀರಭದ್ರಪ್ಪ, ನಿರ್ದೇಶನ : ವಸಂತ ಗಂಗೇರ್ Janashakthi Media