ಮೂರು ಬಾರಿ ಗೆದ್ದ ಬಿಜೆಪಿಗೆ ಬಿಸಿ ಮುಟ್ಟಲಿದೆಯೇ..?

ಮಂಜುನಾಥ ದಾಸನಪುರ

ಕ್ಷೇತ್ರದಲ್ಲಿ ಒಕ್ಕಲಿಗರ ಸಂಖ್ಯೆಯೇ ಹೆಚ್ಚಿರುವುದರಿಂದ ಕಳೆದ 3 ಬಾರಿ ಶಾಸಕರಾಗಿ ಸತೀಶ್ ರೆಡ್ಡಿ ಅವರನ್ನು ಆಯ್ಕೆ ಮಾಡಿದ್ದೇವೆ. ಈ ಬಾರಿ ನಮ್ಮವರೆ ಆದ ಉಮಾಪತಿ ಶ್ರೀನಿವಾಸ ಗೌಡರನ್ನು ಆಯ್ಕೆ ಮಾಡೋಣ ಎಂಬ ಲೆಕ್ಕಾಚಾರವು ಕ್ಷೇತ್ರದ ಒಕ್ಕಲಿಗ ಸಮುದಾಯದ ಮನಃದಲ್ಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

 

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರವನ್ನು ಒಂದು ಸುತ್ತು ಬಂದರೆ ಗಾರ್ಮೆಂಟ್ಸ್, ಐಟಿಬಿಟಿ ಕಂಪೆನಿಗಳು ಹೆಚ್ಚಾಗಿ ಕಂಡುಬರುತ್ತದೆ. ಜೊತೆಗೆ ಆಟೋ ಓಡಿಸುವವರು, ಬೀದಿ ವ್ಯಾಪಾರಿಗಳು, ಮಧ್ಯಮ ವರ್ಗದ ವ್ಯಾಪಾರಸ್ತರ ನೆಲೆಬೀಡೆಂದರೆ ತಪ್ಪಾಗಲಾರದು. ಈ ಕ್ಷೇತ್ರದಲ್ಲಿ ದುಡಿಮೆಗಾಗಿ ಬೇರೆ ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಬಂದು ಬದುಕನ್ನು ಕಟ್ಟಿಕೊಂಡು ಬಹುತೇಕ ಮಂದಿ ಇಲ್ಲಿಯವರೆಗೆ ಆಗಿ ಹೋಗಿದ್ದಾರೆ.

ಇನ್ನು ಬೊಮ್ಮನಹಳ್ಳಿ ಸುತ್ತಮುತ್ತ ಗ್ರಾಮಗಳ ಮಂದಿ ತಮ್ಮ ಜಮೀನುಗಳನ್ನು ಮಾರಿಕೊಂಡು ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬಾಡಿಗೆ ಮನೆ, ವಾಣಿಜ್ಯ ಮಳಿಗೆಗಳನ್ನು ಕಟ್ಟಿ ಬಾಡಿಗೆ ಕೊಟ್ಟು ಜೀವನ ನಡೆಸುವವರು ಇದ್ದಾರೆ. ಇನ್ನುಳಿದಂತೆ ಆ ಭಾಗದಲ್ಲಿ ನೂರಾರು ವರ್ಷಗಳಿಂದ ನೆಲೆ ನಿಂತಿರುವ ಬಲಿಷ್ಟ ಜಾತಿ ಸಮುದಾಯಗಳು ರಿಯಲ್ ಎಸ್ಟೇಟ್, ಬ್ಯುಸಿನೆಸ್ ಮಾಡಿಕೊಂಡಿದ್ದರೆ, ದುರ್ಬಲ ವರ್ಗದವರು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

ಬೆಂಗಳೂರು, ಹೊಸೂರು ಮಾರ್ಗದ ರಾಷ್ಟ್ರೀಉ ಹೆದ್ದಾರಿಯು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮಧ್ಯೆಭಾಗದಲ್ಲಿ ಹಾದು ಹೋಗುವುದರಿಂದ ಸದಾ ಜನಜಂಗುಳಿ, ವಾಹನಗಳ  ಭರಾಟೆ, ಟ್ರಾಫಿಕ್ ಜಾಮ್ ಸಾಮಾನ್ಯವಾಗಿವೆ. ಹಾಗೂ ಪ್ರತಿ ದಿನವೂ ರಾಜ್ಯ ಹಾಗೂ ದೇಶದ ಇತರೆ ಭಾಗಗಳಿಂದ ವಲಸಿಗರು ಇಲ್ಲಿ ಬದುಕನ್ನು ಕಟ್ಟಿಕೊಳ್ಳಲು ಹವಣಿಸಲು ಪ್ರಯತ್ನ ಮಾಡುತ್ತಲೆ ಇರುತ್ತಲೆ ಇರುವುದನ್ನು ನಾವು ಕಾಣಬಹುದಾಗಿದೆ.

ಇದನ್ನೂ ಓದಿಆನೇಕಲ್ ವಿಧಾನಸಭಾ ಕ್ಷೇತ್ರ ಚುನಾವಣೆ : ಕಾಂಗ್ರೆಸ್-ಬಿಜೆಪಿ ಜಿದ್ದಾಜಿದ್ದಿಗೆ ದಲಿತ ಮತಗಳೇ ನಿರ್ಣಾಯಕ

ಬಿಜೆಪಿ ಶಾಸಕ ಸತೀಶ್‌ರೆಡ್ಡಿ

ಇಂತಹ ವಿಭಿನ್ನ, ವಿಶಿಷ್ಟ, ವೈವಿಧ್ಯಮ ಹೊಂದಿರುವ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರವು 2008 ಕ್ಷೇತ್ರಗಳ ಪುನರ್‌ವಿಂಗಡನೆ ಸಂದರ್ಭದಲ್ಲಿ ರಚನೆಗೊಂಡಿತು. ಆಗಿನಿಂದಲೂ ಸತತವಾಗಿ ಮೂರು ಬಾರಿ ಬಿಜೆಪಿ ಅಭ್ಯರ್ಥಿ ಸತೀಶ್‌ರೆಡ್ಡಿ ಅವರೇ ಶಾಸಕರಾಗಿ, ನಾಲ್ಕನೇ ಬಾರಿಯೂ ಶಾಸಕರಾಗುವ ಉತ್ಸಾಹದಲ್ಲಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕನ್ನಡ ಚಿತ್ರರಂಗದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಕಣದಲ್ಲಿದ್ದಾರೆ. ಇವರ ರಾಜಕೀಯ ಹಿನ್ನೆಲೆಗಿಂತಲೂ ಚಿತ್ರರಂಗದಲ್ಲಿ ಹೆಚ್ಚು ಹೆಸರು ಮಾಡಿದ ಯುವ ಉದ್ಯಮಿಯಾಗಿದ್ದಾರೆ. ಹಾಗೂ ಕಳೆದ ಬಾರಿ ನಡೆದ ಒಕ್ಕಲಿಗರ ಚುನಾವಣೆಯಲ್ಲೂ ಜಯಭೇರಿ ಭಾರಿಸಿದ್ದಾರೆ. ಹಾಗೂ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಹೆಚ್ಚು ಗುರುತಿಸಿಕೊಂಡಿರುವುದರಿಂದ ಇವರಿಗೆ ಹೆಚ್ಚಿನ ಮಾನ್ಯತೆ ಸಿಕ್ಕಿದೆ.

ಇದಕ್ಕೂ ಮಿಗಿಲಾಗಿ ಕ್ಷೇತ್ರದಲ್ಲಿ ಒಕ್ಕಲಿಗರ ಸಂಖ್ಯೆಯೇ ಹೆಚ್ಚಿರುವುದರಿಂದ ಕಳೆದ 3 ಬಾರಿ ಶಾಸಕರಾಗಿ ಸತೀಶ್ ರೆಡ್ಡಿ ಅವರನ್ನು ಆಯ್ಕೆ ಮಾಡಿದ್ದೇವೆ. ಈ ಬಾರಿ ನಮ್ಮವರೆ ಆದ ಉಮಾಪತಿ ಶ್ರೀನಿವಾಸ ಗೌಡರನ್ನು ಆಯ್ಕೆ ಮಾಡೋಣ ಎಂಬ ಲೆಕ್ಕಾಚಾರವು ಕ್ಷೇತ್ರದ ಒಕ್ಕಲಿಗ ಸಮುದಾಯದ ಮನಃದಲ್ಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಾರಾಯಣರಾಜು ಸ್ಪರ್ಧಿಸುತ್ತಿದ್ದಾರೆ. ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಕಂಡುಬಂದಂತೆ ಜನತಾದಳದ ಮತಗಳು ಹಲವು ವರ್ಷಗಳ ಹಿಂದೆಯೇ ಬಿಜೆಪಿ ಕಡೆಗೆ ವಾಲಿರುವುದರಿಂದ ಬೊಮ್ಮನಹಳ್ಳಿ ಕ್ಷೇತ್ರದಲ್ಲೂ ಜೆಡಿಎಸ್ ಪಕ್ಷವೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.

ಇನ್ನು ಮುಸ್ಲಿಮ್, ದಲಿತ ಸಮುದಾಯಗಳ ಶೇಕಡಾವಾರು ಓಟುಗಳು ಕಾಂಗ್ರೆಸ್‌ಗೆ ಬಿದ್ದರೆ, ಬಲಿಷ್ಟ ಜಾತಿಗಳ ಮತಗಳು ಬಿಜೆಪಿಗೆ ಕಡೆಗೆ ಹೋಗಲಿದೆ. ಇದರ ನಡುವೆ ಜನಸಂಖ್ಯೆ ಹೆಚ್ಚಿರುವಂತಹ ಒಕ್ಕಲಿಗ ಸಮುದಾಯದ ಹೆಚ್ಚಿನ ಮತದಾರರು ಯಾರನ್ನು ಬೆಂಬಲಿಸಲಿದ್ದಾರೆಂಬ ಆಧಾರದ ಮೇಲೆ ಸೋಲು-ಗೆಲುವು ನಿರ್ಣಯವಾಲಿದೆ ಎಂದು ಎನ್ನುತ್ತಾರೆ ಇಲ್ಲಿನ ಹಿರಿಯ ರಾಜಕೀಯ ಧುರೀಣರು.

ಬೊಮ್ಮನಹಳ್ಳಿ ಕ್ಷೇತ್ರ ಸಮಸ್ಯೆಗೇನು ಕಡಿಮೆಯಿಲ್ಲ: ಬೆಂಗಳೂರಿನ ಐತಿಹಾಸಿಕ ಪ್ರದೇಶವಾಗಿರುವ ಬೊಮ್ಮನಹಳ್ಳಿ-ಬೇಗೂರು ರಸ್ತೆಯ ಅಗಲೀಕರಣ ಕುರಿತು ಬಿಜೆಪಿ ಶಾಸಕ ಸತೀಶ್ ರೆಡ್ಡಿ ಕಳೆದ 15 ವರ್ಷಗಳಿಂದಲೂ ಭರವಸೆಯನ್ನು ನೀಡುತ್ತಾ ಬರುತ್ತಿದ್ದಾರೆ. ಆದರೆ, ಇದುವರೆಗೂ ಅದು ಸಾಕಾರಗೊಳ್ಳದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಹಾಗೆಯೇ ಜೋರು ಮಳೆ ಬಿದ್ದರೆ ಎಚ್‌ಎಸ್‌ಆರ್ ಲೇಔಟ್ ಸುತ್ತಮುತ್ತಲ ಪ್ರದೇಶಗಳು ಜಲಾವೃತಗೊಳ್ಳುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಹಾಗೆಯೆ ಎಚ್‌ಎಸ್‌ಆರ್ ಲೇಔಟ್ ಹೊರತು ಪಡಿಸಿದರೆ ಎಲ್ಲಿಯೂ ಉದ್ಯಾನವಿಲ್ಲ. ಆಟದ ಮೈದಾನವಿಲ್ಲದಿರುವ ಕೊರತೆ ಎದ್ದು ಕಾಣುತ್ತಿದೆ. ಇವೆಲ್ಲ ಸಮಸ್ಯೆಗಳು ಕೂಡ ಚುನಾವಣೆಯಲ್ಲಿ ನಿರ್ಣಯಕ ಪಾತ್ರ ವಹಿಸಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನು ಕ್ಷೇತ್ರದಲ್ಲಿ ಅಂದಾಜು 2,32,487 ಪುರುಷ ಮತದಾರರು, 2,00,194 ಮಹಿಳಾ ಮತದಾರರಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *