ಬಿಎಂಟಿಸಿಗೆ ತೈಲ ಸಮಸ್ಯೆ: ಹೆಚ್ಚಿನ ಬಸ್ಸುಗಳು ರಸ್ತೆಗಿಳಿಯೋದು ಅನುಮಾನ

ಬೆಂಗಳೂರು: ನಗರದಲ್ಲಿ ಬಿಎಂಟಿಸಿ ಬಸ್ಸುಗಳನ್ನೇ ನಂಬಿಕೊಂಡು ಸರಿಸುಮಾರು 30 ರಿಂದ 35 ಲಕ್ಷ ಜನ ಸಂಚಾರಿಸುತ್ತಿದ್ದಾರೆ. ವಿದ್ಯಾರ್ಥಿಗಳಿಂದ ಹಿಡಿದು ನೌಕರರ ತನಕ ಎಲ್ಲರೂ ಸರ್ಕಾರಿ ಬಸ್ಸು​ಗಳಲ್ಲಿ ಓಡಾಡುತ್ತಾರೆ. ಆದರೆ, ಈ ಬಸ್ಸುಗಳ ಸಂಚಾರಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಡಿಸೇಲ್ ಪೂರೈಕೆಯಲ್ಲಿ ಸಮಸ್ಯೆ ಎದುರಾಗಿದೆ.

ಆದರೆ ಬಿಎಂಟಿಸಿ ಡಿಪೋಗಳಲ್ಲಿ ಡೀಸೆಲ್​ಗೆ ಕೊರತೆ ಗಂಭೀರವಾಗಿ ಪರಿಣಮಿಸಿದೆ. ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಗಳಿದೆ. ಕೆಲವು ದಿನಗಳ ಹಿಂದೆ ಡಿಪೋಗಳಲ್ಲಿ ಡೀಸೆಲ್ ಕೊರತೆ ಎದುರಾಗಿತ್ತು. ಇಂದು ಬಹುತೇಕ ಡಿಪೋಗಳಲ್ಲಿ ಡೀಸೆಲ್ ಖಾಲಿ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಕಳೆದ ಎರಡು ದಿನಗಳಿಂದ ಡಿಪೋಗಳಿಗೆ ಡೀಸೆಲ್ ಪೂರೈಕೆ ಆಗಿಲ್ಲ. ಇದರಿಂದ ನಗರದ ಬಹುತೇಕ ಡಿಪೋಗಳಲ್ಲಿ ಪರದಾಡುವ ಸ್ಥಿತಿ ಉಂಟಾಗಿದೆ. ಇಂಧನ ಪೂರೈಕೆಯಾಗದೆ, ಖಾಸಗಿ ಪೆಟ್ರೋಲ್ ಬಂಕುಗಳಲ್ಲಿ ಸರ್ಕಾರಿ ಬಸ್ಸುಗಳು ಸಾಲುಗಟ್ಟಿ ನಿಲ್ಲುವಂತಾಗಿದೆ. ಡೀಸೆಲ್‌ ನ ಸಗಟು ಖರೀದಿ ದರ ಪ್ರತಿ ಲೀಟರ್ ಗೆ ₹119 ಇದೆ. ಚಿಲ್ಲರೆ ವ್ಯಾಪಾರದಲ್ಲಿ ಡೀಸೆಲ್ ಲೀಟರ್‌ ದರ ₹87 ಇದೆ.

ಅಂದಿನ ಡೀಸೆಲ್ ಮೊತ್ತವನ್ನು ಅಂದೇ ಪಾವತಿಸಿ ಬಿಎಂಟಿಸಿ ಕೈತೊಳೆದುಕೊಳ್ಳುತ್ತಿತ್ತು. ಈ ಪ್ರಕ್ರಿಯೆ ಎರಡು ತಿಂಗಳಿಂದ ನಡೆದುಕೊಂಡು ಬಂದಿದೆ. ಈಗ ಎರಡು ದಿನಗಳಿಂದ ಡೀಸೆಲ್‌  ಪೂರೈಕೆ ಮಾಡುವುದನ್ನು ವ್ಯಾಪಾರಿಗಳು ಸ್ಥಗಿತಗೊಳಿಸಿದ್ದಾರೆ. ಕೆಲವು ಡಿಪೊಗಳಲ್ಲಿ ಮೂರು ದಿನಕ್ಕೆ ಸಾಕಾಗುವಷ್ಟು ದಾಸ್ತಾನು ಇದ್ದರೆ, ಇನ್ನೂ ಕೆಲವು ಡಿಪೊಗಳಲ್ಲಿ ಡೀಸೆಲ್ ಖಾಲಿಯಾಗಿದೆ. ಆದರೆ ಸಮಸ್ಯೆ ಪರಿಹಾರವಾಗದಿದ್ದರೆ ಸಂಚಾರದಲ್ಲಿ  ವ್ಯತ್ಯಯವಾಗುವ ಸಾಧ್ಯತೆ ಇದೆ.

ಸಗಟು ಖರೀದಿ ದರ ಹೆಚ್ಚಳದಿಂದ ನಿಗಮ ಚಿಲ್ಲರೆ ವ್ಯಾಪಾರದಲ್ಲಿ ತೈಲ ಖರೀದಿ ಮಾಡುತ್ತಿದೆ. ನಿತ್ಯ ಚಿಲ್ಲರೆ ವ್ಯಾಪಾರಿಗಳು ಟ್ಯಾಂಕರ್ ​ಗಳ ಮೂಲಕ ಬಿಎಂಟಿಸಿ ಡಿಪೋಗಳಿಗೆ ಇಂಧನ ಪೂರೈಕೆ ಮಾಡುತ್ತಿದ್ದರು. ಆದರೆ ಇಂದು ಕಂಪನಿಗಳು ಬಂಕ್​ಗಳಿಗೆ ಇಂಧನ ಪೂರೈಕೆ ಮಾಡಲಿಲ್ಲ.

ಆದರೆ, ಕೆಲವು ದಿನಗಳಿಂದ ತೈಲ ಪೂರೈಕೆ  ಮಾಡುತ್ತಿದ್ದ ಚಿಲ್ಲರೆ ವ್ಯಾಪಾರಿಗಳಿಗೂ ಸರಿಯಾದ ಹಣ ನೀಡದೆ ಇದ್ದು ಇಂಧನ ಪೂರೈಕೆ ಸ್ಥಗಿತಗೊಳಿಸಲಾಗಿದೆ.

ಈಗಾಗಲೇ ತೈಲ ಕಂಪೆನಿಗಳಿಗೆ 70 ರಿಂದ 80 ಕೋಟಿ ಬಾಕಿ ಹಣ ಉಳಿಸಿಕೊಂಡಿರುವ ಬಾಕಿ ಹಣವನ್ನು ಕೂಡಲೆ ಪಾವತಿ ಮಾಡಿ ಸಮಸ್ಯೆ ಕೂಡಲೆ ಬಗೆಹರಿಸುವುದಾಗಿ ಬಿಎಂಟಿಸಿ ವ್ಯವಸ್ಥಾಪಕರು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *