ಬೆಂಗಳೂರು: ಪ್ರತಿದಿನ ಲಕ್ಷಾಂತರ ಮಂದಿ ಸಾರ್ವಜನಿಕ ಸಾರಿಗೆ ಮೂಲಕ ಪ್ರಯಾಣಿಸುತ್ತಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರು ಬೆಳೆಯುತ್ತಿರುವ ನಗರ, ಮತ್ತೊಂದೆಡೆ ಉತ್ತಮ ಸಾರಿಗೆ ವ್ಯವಸ್ಥೆ ನೀಡುವಲ್ಲಿ ಸರ್ಕಾರ ವಿಫಲವಾಗಿವೆ. ಈ ನಡುವೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತಷ್ಟು ಉತ್ತಮಪಡಿಸಿ, ಹೆಚ್ಚಿನ ಉದ್ಯೋಗಿಗಳನ್ನು ನೇಮಿಸಿಕೊಂಡು ಜನಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ರೂಪಿಸುವ ಬದಲು ಇರುವ ಸಾರಿಗೆ ಸಿಬ್ಬಂದಿಗಳನ್ನೇ ನಿರ್ವಹಿಸಲು ಇಲಾಖೆ ಮುಂದಾಗಿದೆ.
ಹೌದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಇದೀಗ ನಗರದಲ್ಲಿ ಸಾರಿಗೆ ನಿರ್ವಾಹಕರು ಇಲ್ಲದೆ ಬಸ್ಸುಗಳನ್ನು ರಸ್ತೆಗಿಳಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಸ್ನೇಹಿಯಾಗಲು ಹೊರಟಿದೆ. ಈ ಮೂಲಕ ಬಸ್ಸುಗಳಲ್ಲಿ ಚಾಲಕರು ಮಾತ್ರ ಇರಲಿದ್ದು, ನಿರ್ವಾಹಕರು ಇಲ್ಲದೆ ರಸ್ತೆಯಲ್ಲಿ ಸಂಚರಿಸಲಿದೆ.
ಸದ್ಯ ಸಾರಿಗೆ ನಿಗಮವು ಆರ್ಥಿಕ ಹೊರೆ ಎದುರಿಸುತ್ತಿದ್ದು, ಚಾಲಕರ ಕೊರತೆಯೂ ಕಾಡುತ್ತಿದೆ. ಹೊಸ ನೇಮಕಾತಿಗೆ ಸರ್ಕಾರ ಒಪ್ಪಿಗೆ ಸೂಚಿಸುತ್ತಿಲ್ಲ. ಇರುವ ನೌಕರರಿಗೆ ಸಂಬಳ ಕೊಡಲಾಗದೇ ನಿಗಮ ಹೆಣಗಾಡುತ್ತಿದೆ. ಹೀಗಿರುವಾಗ ನಷ್ಟದ ಸುಳಿಯಿಂದ ಬಿಎಂಟಿಸಿಯನ್ನು ಮೇಲೆತ್ತಲು ಆಧುನೀಕ ತಂತ್ರಜ್ಞಾನ ಅಳವಡಿಸಲು ಮುಂದಾಗಿದೆ.
ಕಾಮನ್ ಮೊಬಿಲಿಟಿ ಕಾರ್ಡ್, ಇ-ಪಾಸ್ ಸೇರಿ ಹಲವು ಡಿಜಿಟಲ್ ಸೌಲಭ್ಯವನ್ನು ಜಾರಿಗೆ ತಂದು ಪ್ರಯಾಣ ಚೀಟಿ ನಿರ್ವಹಣೆಯನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲು ಬಿಎಂಟಿಸಿ ತೀರ್ಮಾನಿಸಿದೆ. ಸದ್ಯ ಇರುವ ಪ್ರತಿಯೊಬ್ಬ ಸಿಬ್ಬಂದಿಯೂ ಚಾಲಕ ಕಂ ನಿರ್ವಾಹಕರು ಆದವರೇ. ಈ ಮೂಲಕ ನಿಗಮದಲ್ಲಿರುವ ಎಲ್ಲಾ ನಿರ್ವಾಹಕರನ್ನು ಕೆಲಸದಿಂದ ಮುಕ್ತರಾಗಲಿದ್ದಾರೆ.
ಇಲಾಖೆಯು ನಿರ್ವಾಹಕರ ಕೆಲಸವನ್ನು ಬದಲಿಸಲು ಮುಂದಾಗಿದೆ. ಹೀಗಾಗಿ, ನಿರ್ವಾಹಕರಿಲ್ಲದೇ ಪ್ರಯಾಣ ಚೀಟಿಯನ್ನು ನಿರ್ವಹಣೆಗಾಗಿ ಆಧುನೀಕ ತಂತ್ರಜ್ಞಾನಗಳನ್ನು ಅಳವಡಿಕೊಳ್ಳಲು ಮುಂದಾಗಿದೆ. ಈ ಬಗ್ಗೆ ದೊಡ್ಡ ಮಟ್ಟದ ಸಿದ್ದತೆಗಳನ್ನು ಆರಂಭಿಸಿದೆ ಎಂದು ವರದಿಯಾಗಿದೆ.
ಎಲ್ಲಾ ನಿರ್ವಾಹಕರನ್ನು ಚಾಲಕರನ್ನಾಗಿ ನಿಯೋಜಿಸಲು ಬಿಎಂಟಿಸಿ ತೀರ್ಮಾನಿಸಿದೆ. ಈ ಮೂಲಕ ಹೊಸ ನೇಮಕಾತಿ ಇಲ್ಲದೇ ಹೆಚ್ಚುವರಿ ಬಸ್‍ಗಳನ್ನು ರಸ್ತೆಗಿಳಿಸಲು ಬಿಎಂಟಿಸಿ ಮುಂದಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ನಿರ್ವಾಹಕರಿಲ್ಲದೇ ಬಸ್ಸುಗಳ ಸಂಚಾರ ಊಹಿಸುವುದು ಅಸಾಧ್ಯ, ಹೆಚ್ಚಿನ ಮಂದಿಗೆ ಡಿಜಿಟಲ್ ತಂತ್ರಜ್ಞಾನ ಒಪ್ಪಿಕೊಳ್ಳುವುದಕ್ಕೆ ಸಮಯ ಬೇಕಾಗಲಿದೆ. ಆದರೂ ಬಿಎಂಟಿಸಿ ಸಿಬ್ಬಂದಿ ಹೊರೆ ತಪ್ಪಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ಮುಂದಾಗಿದೆ.
ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳದೆ, ಇರುವ ಉದ್ಯೋಗಿಗಳನ್ನೇ ನಿರ್ವಹಿಸಲು ಮುಂದಾಗಿರುವ ಬಿಎಂಟಿಸಿ ಕ್ರಮಕ್ಕೆ ಕಾರ್ಮಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದೆ. ಕಾರ್ಮಿಕರ ಹೊಟ್ಟೆ ಮೇಲೆ ಹೊಡೆಯುವ ಹುನ್ನಾರ. ಬಿಎಂಟಿಸಿಯನ್ನು ಸಂಪೂರ್ಣ ಖಾಸಗೀಕರಣ ಮಾಡುವ ಕ್ರಮ ಇದಾಗಿದೆ. ಬಿಎಂಟಿಸಿ ಸಂಸ್ಥೆಯ ನೌಕರರು ಬೀದಿಗೆ ಬರುತ್ತಾರೆ. ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು ಎಂದು ಕಾರ್ಮಿಕ ಸಂಘಟನೆಗಳು ತಿಳಿಸಿವೆ.
Ksrtc application new