ಸಂಸತ್ತಿನಲ್ಲೆ ದ್ವೇಷ ಭಾಷಣ! | ಮುಸ್ಲಿಂ ಸಂಸದರನ್ನು ‘ಭಯೋತ್ಪಾದಕ’ ಎಂದ ಬಿಜೆಪಿ ಸಂಸದ

ನವದೆಹಲಿ: ಬಿಜೆಪಿ ಸಂಸದ ರಮೇಶ್ ಬಿಧುರಿ ಅವರು ಲೋಕಸಭೆ ಅಧಿವೇಶನದ ವೇಳೆ ಸಂಸತ್ತಿನಲ್ಲಿ ಬಹುಜನ ಸಮಾಜ ಪಕ್ಷದ ಮುಸ್ಲಿಂ ಸಂಸದ ಡ್ಯಾನಿಶ್ ಅಲಿ ಅವರನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಲ್ಲದೆ, ಜನಾಂಗೀಯ ನಿಂದನೆ ಮಾಡಿ ಕೋಮು ದ್ವೇಷ ಭಾಷಣ ಮಾಡಿದ ಘಟನೆ ಸೆಪ್ಟೆಂಬರ್‌ 21ರ ಗುರುವಾರ ರಾತ್ರಿ ನಡೆದಿದ್ದು, ಘಟನೆಯನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಗಿದೆ.

ಸಂಸತ್ತಿನ ಲೋಕಸಭೆ ಅಧಿವೇಶನದಲ್ಲಿ ಮಾತನಾಡುತ್ತಿದ್ದ ದಕ್ಷಿಣ ದೆಹಲಿಯ ಸಂಸದ ರಮೇಶ್‌ ಬಿಧುರಿ, “ಯೇ ಉಗ್ರವಾದಿ, ಯೇ ಆತಂಕ್‌ವಾದಿ ಹೈ (ಭಯೋತ್ಪಾದಕ), ಉಗ್ರವಾದಿ ಹೈ, ಯೇ ಆಂತಂಕ್‌ವಾದಿ  ಹೈ, ಮುಲ್ಲಾ ಆತಂಕ್‌ವಾದಿ,  ಭಡ್‌ವೆ (ಪಿಂಪ್) ಮತ್ತು ಕಟ್‌ವೆ (ಸುನ್ನತಿ)” ಎಂದು ಕಿರುಚಾಡಿ ಜನಾಂಗೀಯ ನಿಂದನೆಗೆ ಗುರಿಪಡಿಸಿ ಅವಮಾನಿಸಿದ್ದಾರೆ. “ಈ ‘ಮುಲ್ಲಾ’ನನ್ನು ಹೊರಗೆ ಎಸೆಯಿರಿ” ಎಂದು ಕೂಡ ಹೇಳಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಜಿ20 ಕಾರ್ಯಕ್ರಮದ ವೇಳೆ ‘ರಘುಪತಿ ರಾಘವ ರಾಜಾ ರಾಮ್’ ಭಜನೆಯಿಂದ ‘ಅಲ್ಲಾಹ್’ ಪದ ಮೋದಿ ತೆಗೆದುಹಾಕಿದರೆ?

ಘಟನೆ ನಡೆಯುವ ವೇಳೆ ಸ್ಪೀಕರ್‌ ಪೀಠದಲ್ಲಿದ್ದ ಕಾಂಗ್ರೆಸ್ ಮುಖಂಡ ಕೋಡಿಕುಂಞಲ್ ಸುರೇಶ್ ಅವರು ಸಂಸದರಿಗೆ ಕುಳಿತುಕೊಳ್ಳುವಂತೆ ಸತತವಾಗಿ ಹೇಳುತ್ತಿರುವುದು ಕಾಣಬಹುದು. ರಮೇಶ್‌ ಬಿಧುರಿ ಅವರ ಹೇಳಿಕೆಗಳನ್ನು ದಾಖಲೆಗಳಿಂದ ಹೊರಹಾಕಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಸುರೇಶ್ ನಂತರ ಹೇಳಿದ್ದಾರೆ ಎಂದು ವರದಿಯಾಗಿದೆ.

ರಮೇಶ್ ಬಿಧುರಿ ಅವರು ದ್ವೇಷ ಭಾಷಣ ಮಾಡಿ ಮುಸ್ಲಿಂ ಸಂಸದರನ್ನು ನಿಂದಿಸುತ್ತಿದ್ದಾಗ, ಮಾಜಿ ಸಚಿವರಾದ, ಬಿಜೆಪಿ ಸಂಸದ ಡಾ. ಹರ್ಷ ವರ್ಧನ್‌ ಮತ್ತು ರವಿ ಶಂಕರ್ ಪ್ರಸಾದ್ ಅವರು ನಗುತ್ತಿರುವುದು ಕೂಡಾ ವಿಡಿಯೊದಲ್ಲಿ ದಾಖಲಾಗಿದೆ. ಈ ಬಗ್ಗೆ ಖ್ಯಾತ ಪರ್ತಕರ್ತ ಮೊಹಮ್ಮದ್ ಜುಬೇರ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿಯನ್ನು ಟ್ಯಾಗ್ ಮಾಡಿ ಪ್ರಶ್ನೆ ಕೇಳಿರುವ ಜುಬೇರ್ ಅವರು, “ಹಲೋ ನರೇಂದ್ರ ಮೋದಿ ಅವರೇ, ನಿಮ್ಮ ಪಕ್ಷದ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರು ‘ಪ್ರಜಾಪ್ರಭುತ್ವದ ದೇವಾಲಯ’ದಲ್ಲಿ ಮುಸ್ಲಿಂ ಸಂಸದರ ವಿರುದ್ಧ ಕೋಮು ದ್ವೇಷದ ಭಾಷಣ ಮಾಡಿದ್ದಾರೆ. ಅವರು ಇದನ್ನು ಸಂಸತ್ತಿನಲ್ಲೆ ಆನ್‌ರೆಕಾರ್ಡ್‌ ಹೇಳುತ್ತಾರೆಂದರೆ, ಅವರು ಮತ್ತು ಅವರಂತಹ ಜನರು ತಮ್ಮ ಕ್ಷೇತ್ರಗಳಲ್ಲಿ ತಮ್ಮ ಮುಸ್ಲಿಂ ಮತದಾರರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ನಾವು ಊಹಿಸಬಹುದಲ್ಲವೆ” ಎಂದು ಕೇಳಿದ್ದಾರೆ.

ಇದನ್ನೂ ಓದಿ: ಬೇರೆ ಸರ್ಕಾರದ ಅವಧಿಯಲ್ಲಿ ಮಹಿಳಾ ಮೀಸಲಾತಿ ವಿರೋಧಿಸಿದ ಬಿಜೆಪಿ ನಾಯಕರಿವರು!

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಟಿಎಂಸಿ ಸಂಸದೆ ಮಹುವಾ ಮೊಹಿತ್ರ ಅವರು, “ಕಳೆದ ರಾತ್ರಿ ಲೋಕಸಭೆಯಲ್ಲಿ ಆನ್‌ ರೆಕಾರ್ಡ್‌ನಲ್ಲೆ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರು ಸಂಸದ ಡ್ಯಾನಿಶ್ ಅಲಿ ಅವರನ್ನು ನಿಂದಿಸಿದ್ದಾರೆ. ಮರ್ಯಾದೆ ಉಳಿಸುವ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ವಿಶ್ವಗುರು ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಗೋದಿ ಮೀಡಿಯಾಗಳು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತವೆಯೆ?” ಎಂದು ಪ್ರಶ್ನಿಸಿದ್ದಾರೆ.

“ಮರ್ಯಾದಾ ಪುರುಷ ಓಂ ಬಿರ್ಲ ಅವರೇ ಇಲ್ಲಿ ನಿಮ್ಮನ್ನು ಪ್ರಶ್ನಿಸಿದ್ದಕ್ಕಾಗಿ ನನ್ನ ವಿರುದ್ಧ ಮುಕ್ತವಾಗಿ ಕ್ರಮ ಗೊಳ್ಳಬಹುದು. ಅದನ್ನು ಸಂತೋಷದಿಂದಲೆ ಎದುರಿಸುತ್ತೇನೆ. ಆದರೆ ನಾನು ಇಲ್ಲಿ ಮತ್ತು ಈಗ ನಿಮ್ಮನ್ನು ಕೇಳುತ್ತಿದ್ದೇನೆ, ರಮೇಶ್ ಬಿಧುರಿ ವಿರುದ್ಧ ನೀವು ಯಾವ ಕ್ರಮವನ್ನು ತೆಗೆದುಕೊಳ್ಳುತ್ತಿದ್ದೀರಿ?” ಎಂದು ಮತ್ತೇ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಆಜ್‌ತಕ್ ಟಿವಿಯಲ್ಲಿ ಗೋಡ್ಸೆಯ ‘ದೇಶಭಕ್ತಿ’ ಬಗ್ಗೆ ಮತ್ತೆ ಪ್ರತಿಪಾದಿಸಿದ ಶಂಕಿತ ಭಯೋತ್ಪಾದಕಿ ಪ್ರಜ್ಞಾ ಠಾಕೂರ್!

“ಮುಸ್ಲಿಮರು ಮತ್ತು ಒಬಿಸಿಗಳನ್ನು ನಿಂದಿಸುವುದು ಬಿಜೆಪಿ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಈಗ ಹೆಚ್ಚಿನವರಿಗೆ ಅದರಲ್ಲಿ ಯಾವುದೇ ತಪ್ಪಿದೆ ಎಂದು ಅನಿಸುತ್ತಿಲ್ಲ. ನರೇಂದ್ರ ಮೋದಿ ಭಾರತೀಯ ಮುಸ್ಲಿಮರನ್ನು ಅವರ ಸ್ವಂತ ನೆಲದಲ್ಲಿ ಭಯದ ಸ್ಥಿತಿಯಲ್ಲಿ ಬದುಕುವಂತಹ ಸ್ಥಿತಿಗೆ ಇಳಿಸಿದ್ದಾರೆ. ಆದರೆ ಅವರು ನಕ್ಕು ಎಲ್ಲವನ್ನೂ ಸಹಿಸಿಕೊಳ್ಳುತ್ತಾರೆ. ಕ್ಷಮಿಸಿ, ಆದರೆ ನಾನು ಇದನ್ನು ವಿರೋಧಿಸುತ್ತಿದ್ದೇನೆ, ತಾಯಿ ಕಾಳಿ ನನ್ನ ಬೆನ್ನ ಹಿಂದೆ ನಿಂತು ಧೈರ್ಯ ತುಂಬುತ್ತಿದ್ದಾಳೆ.” ಎಂದು ಹೇಳಿದ್ದಾರೆ.

ರಮೇಶ್ ಬಿಧುರಿಯ ಹೇಳಿಕೆಯನ್ನು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತೀವ್ರವಾಗಿ ವಿರೋಧಿಸಿದ್ದು, “ಗೌರವಾನ್ವಿತ ಸಂಸದರ ನಾಲಗೆಯಿಂದ ದ್ವೇ‍ಷಪೂರಿತ ಪದಗಳಗು ಎಷ್ಟು ಸುಲಭವಾಗಿ ಉರುಳುತ್ತವೆ! ಮುಸ್ಲಿಮರ ವಿರುದ್ಧದ ದ್ವೇಷವು ಹಿಂದೆಂದಿಗಿಂತಲೂ ಈಗ ಹೆಚ್ಚು ಮುಖ್ಯವಾಹಿನಿಗೆ ಬಂದಿದೆ. ಬಿಜೆಪಿ ತಮ್ಮ ಪಕ್ಷವೆಂದು ಹೇಳಿಕೊಳ್ಳುತ್ತಿರುವ ಮುಸ್ಲಿಮರು ಈ ಮಟ್ಟದ ಹೇಯ ದ್ವೇಷದ ಜೊತೆಯಲ್ಲಿ ಹೇಗೆ ಸಹಬಾಳ್ವೆ ನಡೆಸುತ್ತಾರೆ?” ಎಂದು ಪ್ರಶ್ನಿಸಿದ್ದಾರೆ.

ಸಂಸತ್ತಿನಲ್ಲಿ ಬಿಧುರಿ ಅವರು ದ್ವೇಷ ಭಾಷಣ ಮಾಡದ ಹೊರತಾಗಿಯೂ ಬಿಜೆಪಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರುವ ಬಗ್ಗೆ ಈ ವರೆಗೆ ವರದಿಯಾಗಿಲ್ಲ. ಆದರೆ ರಕ್ಷಣಾ ಸಚಿವ ಮತ್ತು ಲೋಕಸಭೆಯ ಉಪ ನಾಯಕ ರಾಜನಾಥ್ ಸಿಂಗ್ ಹೇಳಿಕೆಗಳ ಬಗ್ಗೆ “ವಿಷಾದ ವ್ಯಕ್ತಪಡಿಸಿದ್ದಾರೆ” ಎಂದು ವರದಿಯಾಗಿದೆ. “ನಾನು ಟೀಕೆಗಳನ್ನು ಕೇಳಿಲ್ಲ, ನಮ್ಮ ಸದಸ್ಯ ಮಾಡಿದ ಟೀಕೆಗಳಿಂದ ಪ್ರತಿಪಕ್ಷಗಳಿಗೆ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ” ಎಂದು ರಾಜನಾಥ್ ಸಿಂಗ್ ಹೇಳಿದ್ದಾಗಿ ವರದಿಯಾಗಿದೆ.

ವಿಡಿಯೊ ನೋಡಿ: ಬಹುಮನಿ ಸುಲ್ತಾನರ ಕಾಲದ ಸುರಂಗ ಬಾವಿ (ವಾಟರ್ ಕರೇಜ್‌) ಬೀದರ್ನಲ್ಲಿದೆ ಅಚ್ಚರಿಯ ಇತಿಹಾಸ Janashakthi Media

Donate Janashakthi Media

Leave a Reply

Your email address will not be published. Required fields are marked *