ವಿರೋಧ ಪಕ್ಷದ ನಾಯಕನಿಲ್ಲ ಎಂಬ ಸಂಗತಿಯನ್ನು ಜನತೆ ಹಾಗೂ ಬಿಜೆಪಿ ಪಕ್ಷ ಬಹುತೇಕ ಮರೆತೇ ಹೋಗಿದ್ದಾರೆ: ಕಾಂಗ್ರೆಸ್

ಬೆಂಗಳೂರು: ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕನಿಲ್ಲ ಎಂಬ ಸಂಗತಿಯನ್ನು ಜನತೆ ಹಾಗೂ ಬಿಜೆಪಿ ಪಕ್ಷ ಬಹುತೇಕ ಮರೆತೇ ಹೋಗಿದ್ದಾರೆ ಎಂದು ಕಾಂಗ್ರೆಸ್‌ ಹೇಳಿದೆ.

‌ಈ ಕುರಿತು ಕಾಂಗ್ರೆಸ್‌ “ಕರ್ನಾಟಕ ಜನತೆ ಮರೆತಿರುವ ಸಂಗತಿಯನ್ನು ಮತ್ತೊಮ್ಮೆ ನೆನಪಿಸುತ್ತಿದ್ದೇವೆ, ಕರ್ನಾಟಕದಲ್ಲಿ ಸಾಂವಿಧಾನಿಕ ಹುದ್ದೆಯಾದ ವಿಧಾನಸಭೆಯ ವಿರೋಧ ಪಕ್ಷದ ನಾಯಕ”ನ ಸ್ಥಾನ ಖಾಲಿ ಇದೆ ಎಂದು ಎಕ್ಸ್‌ನಲ್ಲಿ ಪೋಸ್ಟರ್‌ ಒಂದನ್ನು ಹಂಚಿಕೊಂಡಿದೆ.

ಇದನ್ನೂ ಓದಿ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಕಾರಿಗೆ ಈರುಳ್ಳಿ, ಟೊಮೆಟೊ ಎಸೆದ ಉದ್ರಿಕ್ತ ರೈತರು

 ಪ್ರಮುಖ ಸಾಂವಿಧಾನಿಕ ಹುದ್ದೆಯೊಂದನ್ನು ಖಾಲಿ ಬಿಟ್ಟಿರುವ ಬಿಜೆಪಿ ಪ್ರಜಾತಂತ್ರ ವ್ಯವಸ್ಥೆಗೆ ಹಾಗೂ ಸಂವಿಧಾನಕ್ಕೆ ಅಪಚಾರ ಮಾಡುತ್ತಿದೆ. ಬಿಜೆಪಿಗೆ ಆಡಳಿತದಲ್ಲಿ ಮಾತ್ರ ಅಸಾಮರ್ಥ್ಯವಿರುವುದಲ್ಲ, ಆಂತರಿಕ ಕಲಹ ನಿಭಾಯಿಸುವುದರಲ್ಲಿ, ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವುದರಲ್ಲೂ ಅಸಮರ್ಥವಾಗಿದೆ ಎಂದು ಕಿಡಿಕಾರಿದೆ.

ವಿರೋಧ ಪಕ್ಷದ ನಾಯಕನ ಆಯ್ಕೆಗೆ ನಿಮ್ಮ ವರಿಷ್ಠರಿಗೆ “ಸೂಕ್ತ ಸಮಯ” ಬರಲಿಲ್ಲವೇ? ಕುಮಾರಸ್ವಾಮಿಯವರನ್ನು ಭೇಟಿ ಮಾಡಲು ಸಮಯವಿರುವ ಹೈಕಮಂಡಿಗೆ ಸ್ವಂತ ಪಕ್ಷದ ಸಮಸ್ಯೆ ಬಗೆಹರಿಸಲು ಸಮಯವಿಲ್ಲವೇ? ಅಥವಾ ನಿಮ್ಮಲ್ಲಿ ಆ ಹುದ್ದೆಗೆ ಯೋಗ್ಯತೆ, ಅರ್ಹತೆ ಇರುವ ವ್ಯಕ್ತಿ ಯಾರೂ ಇಲ್ಲವೇ? ಎಂದು ಕಾಂಗ್ರೆಸ್‌ ಪ್ರಶ್ನೆಮಾಡಿದೆ.

ವಿಡಿಯೋ ನೋಡಿ: “ಬಿಜೆಪಿ ತೊಲಗಿಸಿ, ಮಹಿಳೆಯರನ್ನು ರಕ್ಷಿಸಿ, ದೇಶ ಉಳಿಸಿ”ಅಕ್ಟೋಬರ್ 5ರಂದು ಮಹಿಳೆಯರ ‘ಮಹಾ ಧರಣಿ’ Janashakthi Media

Donate Janashakthi Media

Leave a Reply

Your email address will not be published. Required fields are marked *