“ಸೈನಿಕ” ಮತ್ತೆ ಕಾಂಗ್ರೆಸ್‌ನತ್ತ? : ಆಡಿಯೋ ಲೀಕ್ ನಂತರ ಹೊಸ ಚರ್ಚೆ

ಬೆಂಗಳೂರು : 2023ರ ವಿಧಾನಸಭಾ ಚುನಾವಣೆ ಕುರಿತು  ಎಂಎಲ್ಸಿ ಸಿ.ಪಿ.ಯೋಗೇಶ್ವರ್​ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್​ ಆದ ಬೆನ್ನಲ್ಲೇ ಮತ್ತೊಂದು ಚರ್ಚೆ ಶುರುವಾಗಿದೆ.

ಯೋಗೇಶ್ವರ್​ ಕಾಂಗ್ರೆಸ್​ ಬಾಗಿಲು ತಟ್ಟಲು ಸಿದ್ಧವಾಗಿದ್ದು, ಗ್ರೀನ್​ ಸಿಗ್ನಲ್​ಗಾಗಿ ಕಾಯುತ್ತಿರುವ ಹಿನ್ನೆಲೆಯಲ್ಲಿಯೇ ಅದಕ್ಕೆ ಪೂರಕ ವಾತಾವರಣ ಸೃಷ್ಟಿ ಮಾಡಲು ತಾವೇ ಆಡಿಯೋ ಲೀಕ್​ ಮಾಡಿದ್ದಾರೆ ಎಂದು ವಿಧಾನಸೌಧ ಪಡಸಾಲೆಯಿಂದ ಕೇಳಿ ಬಂದಿದೆ. ಈಗ ಈ ಬಿಸಿ ಬಿಸಿ ರಾಜಕೀಯ ಚರ್ಚೆ ಸಾಕಷ್ಟು ಕಾವುಪಡೆದುಕೊಂಡಿದೆ.

ಇದನ್ನೂ ಓದಿರಾಜ್ಯ ರಾಜಕಾರಣದಲ್ಲಿ ಮತ್ತೊಂದು ಆಡಿಯೋ ಸ್ಫೋಟ: ಆಡಿಯೋದಲ್ಲಿ ಏನಿದೆ?

ಬಿಜೆಪಿಯಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಹೋರಾಟ ನಡೆಸಿದ ಯೋಗೇಶ್ವರ್​ಗೆ ಅಲ್ಲಿ ಸಂಕಷ್ಟ ಎದುರಾಗಿರುವ ಕಾರಣ, ಕಾಂಗ್ರೆಸ್​ ಕಡೆಗೆ ಒಲವು ತೋರಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಬಗ್ಗೆ ಮೃದು ಧೋರಣೆ ಹೊಂದಿರುವ ಅವರು, ಕಾಂಗ್ರೆಸ್​ಗೆ ಹತ್ತಿರವಾಗುತ್ತಿದ್ದಾರೆ ಎಂದು ಕೆಪಿಸಿಸಿ ಅಂಗಳದಲ್ಲಿ ಚರ್ಚೆಯಾಗುತ್ತಿರುವುದು ಚುನಾವಣೆ ಹೊತ್ತಿನಲ್ಲಿ ಹೊಸ ಸಂಚಲನ ಸೃಷ್ಟಿ ಮಾಡಿದೆ.

ಚುನಾವಣೆ ಬಳಿಕ ಬಿಜೆಪಿ ಸರ್ಕಾರ ಜನಾಭಿಪ್ರಾಯದ ಮೂಲಕ ಅಧಿಕಾರಕ್ಕೆ ಬರುವುದಿಲ್ಲ. ಅಮಿತ್​ ಷಾ ಒಂಥರಾ ರೌಡಿ ರೀತಿ. ದೇವೇಗೌಡರು ಅಂಡರ್​ ಸ್ಟ್ಯಾಂಡಿಗ್​ ರಾಜಕೀಯ ಮಾಡ್ತಾರೆ ಎನ್ನುವ ಮಾತುಗಳು ಬಿಜೆಪಿ ಬಗ್ಗೆ ಇರುವ ಅಸಮಾಧಾನಕ್ಕೆ ಹಿಡಿದ ಕನ್ನಡಿಯಾಗಿದೆ.

ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್ ಈ ಹಿಂದೆ ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದಲೇ ಶಾಸಕರಾಗಿದ್ದರು. ಸಮಾಜವಾದಿ ಪಕ್ಷ ಹಾಗೂ ಪಕ್ಷೇತರರಾಗಿಯೂ ಅವರು ಶಾಸಕರಾಗಿದ್ದರು. ಕಾಂಗ್ರೆಸ್‌ ಸೇರ್ಪಡೆ ವಿಚಾರ ಕಳೆದ ವರ್ಷದಿಂದ ಚರ್ಚೆಯಾಗುತ್ತಲೇ ಇದೆ. ಇದು ಕೇವಲ ಊಹಾಪೋಹ ಎಂದು ತಳ್ಳಿಹಾಕಲಾಗುತ್ತಿತ್ತು. ಈಗ ಚುನಾವಣಾ ಹೊತ್ತಿನಲ್ಲಿ ಈ ಚರ್ಚೆ ನಡೆಯುತ್ತಿರುವುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

 

 

Donate Janashakthi Media

Leave a Reply

Your email address will not be published. Required fields are marked *