ಕಲಬುರಗಿ| ಮತಕ್ಷೇತ್ರದಿಂದ ಬಿಜೆಪಿ ಶಾಸಕ ಕಾಣೆ : ಪೋಸ್ಟರ್‌ ಅಂಟಿಸಿ ರೈತರ ಆಕ್ರೋಶ

ಕಲಬುರಗಿ: ಮತಕ್ಷೇತ್ರದಿಂದ ಚಿಂಚೋಳಿ ಮತಕ್ಷೇತ್ರದ ಮತದಾರರಿಂದ ಚುನಾಯಿತರಾದ ಬಿಜೆಪಿ ಶಾಸಕ ಡಾ. ಅವಿನಾಶ್ ಜಾಧವ್ ಕ್ಷೇತ್ರದ ಜನರ ಸಮಸ್ಯೆ ಆಲಿಸದೆ ಕಾಣೆಯಾಗಿದ್ದಾರೆ ಎಂದು ಕಾಳಗಿ ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿ ಶಾಸಕರ ಭಾವಚಿತ್ರ ಇರುವ ಪೋಸ್ಟರ್ ಅಂಟಿಸಿ ಕರ್ನಾಟಕ ಪ್ರಾಂತರೈತ ಸಂಘ ಹಾಗೂ ತಾಲೂಕು ರೈತ ಸೇನೆ ಹಾಗೂ ರೈತ ಸಂಘದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಳಗಿ ತಾಲೂಕು ಕೇಂದ್ರ ರಚನೆಯಾಗಿ ಸುಮಾರು ಏಳು ವರ್ಷಗಳೇ ಕಳೆಯುತ್ತಿದ್ದರೂ ತಾಲೂಕು ಕಚೇರಿಗಳನ್ನು ತರುವಲ್ಲಿ ವಿಫಲರಾಗಿದ್ದಾರೆ. ಅಧಿವೇಶನದಲ್ಲಿ ಕಮಲಾಪೂರ, ಶಹಬಾದ್‌ ನೂತನ ತಾಲೂಕಿಗೆ 100ಹಾಸಿಗೆ ಆಸ್ಪತ್ರೆ ಮೇಲ್ದರ್ಜೆಗೆ ಅನುದಾನ ‌ನೀಡಲಾಗಿದೆ. ಆದರೆ ಕಾಳಗಿ ತಾಲೂಕಿಗೆ ಅನ್ಯಾಯವಾದರೂ, ಒಮ್ಮೆಯೂ ಕೂಡ ಧ್ವನಿ ಎತ್ತಲ್ಲಿಲ್ಲ, ಪ್ರತಿಭಟಿಸಲಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಇದನ್ನ ಓದಿ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಪರಿಚಲನೆ; ಭಾರೀ ಮಳೆ ಮುನ್ಸೂಚನೆ

ಮತಕ್ಷೇತ್ರದ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತರಬೇಕೆಂದರೇ ಶಾಸಕರು ಕೈಗೆ ಸಿಗುವುದಿಲ್ಲ. ಪೋನ್ ಮಾಡಿದರೆ ಸಂಪರ್ಕಕ್ಕೆ ಸಿಗಲ್ಲ, ಕಚೇರಿಗೆ ಹಾಗೂ ಕಲಬುರಗಿ ಮನೆಗೂ ಹೋದರು ಅಲ್ಲಿಯೂ ಸಿಗುವುದಿಲ್ಲ. ಇದರಿಂದ ಬೇಸತ್ತು ಶಾಸಕ ಡಾ.ಅವಿನಾಶ್ ಜಾಧವ್ ಕಾಣೆಯಾಗಿದ್ದಾರೆ ಎಂದು ಅವರ ಭಾವಚಿತ್ರ ಇವರು ಪೋಸ್ಟರ್ ಅಂಟಿಸಿ ಆಕ್ರೋಶ ಹೋರಹಾಕುತ್ತಿದ್ದೆವೆ ಎಂದು ರೈತ ಸೇನೆ ತಾಲೂಕಾಧ್ಯಕ್ಷ ವೀರಣ್ಣ ಗಂಗಾಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಪ್ರಾಂಥ ರೈತ ಸಂಘ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ರಟಕಲ್ ಗ್ರಾಮಸ್ಥರ ಮತದಾರರಿಂದಲೇ ಗೆಲುವು ಸಾಧಿಸಿದ ಶಾಸಕ ಡಾ.ಅವಿನಾಶ್ ಜಾಧವ್ ಉಂಡ ಮನೆಗೆ ದ್ರೋಹ ಬಗೆದಂತೆ ರಟಕಲ್ ಗ್ರಾಮಕ್ಕೆ ಅನ್ಯಾಯ ಮಾಡಿದ್ದಾರೆ. ರಟಕಲ್ ಜಿಪಂ ಕ್ಷೇತ್ರ, ಎಸೆಸೆಲ್ಸಿ ಪರೀಕ್ಷಾ ಕೇಂದ್ರ, ಹೋಬಳಿ ಕೇಂದ್ರಗಳು ಕೈ ತಪ್ಪಿ ಹೋದರು ಧ್ವನಿ ಎತ್ತಲಿಲ್ಲ. ಮತಕ್ಷೇತ್ರದಲ್ಲಿ ಬೆಳೆಹಾನಿಯಿಂದ ರೈತರು ಸಮಸ್ಯೆಯಲ್ಲಿದ್ದು, ರೈತರ ಆತ್ಮಹತ್ಯೆ ನಡೆಯುತ್ತಿದ್ದರೂ ರೈತರಿಗೆ ಸಾಂತ್ವನ ಹೇಳುವ ಕೆಲಸ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ನೋಡಿ: CITU| ಶ್ರಮಿಕರ ಅಹೋರಾತ್ರಿ ಹೋರಾಟ 5ನೇ ದಿನಕ್ಕೆ | ಅಂಗವಾಡಿ ನೌಕರರ ಸಂಘಟನೆಯಿಂದ ಧರಣಿ

Donate Janashakthi Media

Leave a Reply

Your email address will not be published. Required fields are marked *