ಬೆಂಗಳೂರು: ಬೆಂಗಳೂರಿನ ಜಯನಗರದಲ್ಲಿ ಭಾರತೀಯ ಸೇನೆ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳ ಮೇಲೆ ಆಪರೇಷನ್ ಸಿಂಧೂರ ಮೂಲಕ ನಡೆಸಿದ ದಾಳಿಯ ಸಂಭ್ರಮ ಆಚರಣೆ ಮಾಡಲು ನಡೆದ ಸಿಹಿ ಹಂಚಿಕೆ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಹಾಗೂ ಬಿಜೆಪಿ ನಾಯಕರು ಕರವಸ್ತ್ರದಂತೆ ಬಳಸಿ ಅಪಮಾನಿಸಿದ್ದಾರೆ ಎಂದು ಕಾಂಗ್ರೆಸ್ ಕಿಡಿಗಾರಿದೆ. ಬಿಜೆಪಿಗರು
ಮೇ 8 ಗುರುವಾರ ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಬಿಜೆಪಿ ನಾಯಕರೊಬ್ಬರು ರಾಷ್ಟ್ರಧ್ವಜವನ್ನು ಕರವಸ್ತ್ರದಂತೆ ಬಳಸಿರುವ ವಿಡಿಯೋವನ್ನು ಹಂಚಿಕೊಂಡಿರುವ ಕಾಂಗ್ರೆಸ್, ನಕಲಿ ದೇಶಪ್ರಮಿ ಬಿಜೆಪಿಗರು ಭಾರತದ ರಾಷ್ಟ್ರಧ್ವಜ, ಸಂವಿಧಾನವನ್ನು ಎಂದಿಗೂ ಒಪ್ಪಿಲ್ಲ. ಮನುವಾದಿಗಳು ಸಮಾನತೆ, ಐಕ್ಯತೆ, ಸಮಗ್ರತೆ ಸಾರುವ ರಾಷ್ಟಧ್ವಜವನ್ನು ಒಪ್ಪಲು ಸಾಧ್ಯವೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಹಿಟ್ಲರ್ ಫ್ಯಾಸಿಸಂನಿಂದ ಮಾನವ ಕುಲವನ್ನು ಉಳಿಸಿದ ಮಹಾನ್ ವಿಜಯಕ್ಕೆ 80 ವರ್ಷಗಳು
ಶಾಸಕ ರಾಮಮೂರ್ತಿ ಮತ್ತು ಅವರ ಬೆಂಬಲಿಗರು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮ ಆಚರಣೆ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಶಾಸಕರ ಪಕ್ಕದಲ್ಲಿದ್ದ ಬಿಜೆಪಿ ಮುಖಂಡರೊಬ್ಬರು ಸಿಹಿ ಹಂಚಿದ ಕೈಯನ್ನು ರಾಷ್ಟ್ರಧ್ವಜಕ್ಕೆ ಒರೆಸಿಕೊಂಡರು. ಇದನ್ನು ರಾಮಮೂರ್ತಿ ನೋಡಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದನ್ನೂ ನೋಡಿ: ಪಿಚ್ಚರ್ ಪಯಣ 157| ‘ಫುಲೆ’ ಚಿತ್ರ ವಿಮರ್ಶೆ | ಎಮ್.ನಾಗರಾಜ ಶೆಟ್ಟಿ Janashakthi Media