ಪಶ್ಚಿಮ ರಾಜ್ಯಗಳಲ್ಲೂ ಬಿಜೆಪಿಗೆ ಬಹಳ ನಷ್ಟ

ಬಿಜೆಪಿ ಮತ್ತು ಅದರ ನಾಯಕತ್ವದ ಎನ್.ಡಿ.ಎ ಕೂಟಕ್ಕೆ ಹಿಂದಿ ರಾಜ್ಯಗಳನ್ನು ಬಿಟ್ಟರೆ ಅತ್ಯಂತ ಹೆಚ್ಚು ನಷ್ಟವಾಗಿರುವುದು ಪಶ್ಚಿಮ ಪ್ರದೇಶದಲ್ಲಿ, ಬಿಜೆಪಿ/ಎನ್.ಡಿ.ಎಗೆ ಮಹಾರಾಷ್ಟ್ರದಲ್ಲಿ ಆದ ಭಾರೀ ನಷ್ಟವನ್ನು ಗುಜರಾತಿನ ಸ್ವೀಪ್ಸಹ ಭರಿಸಲಾಗಲಿಲ್ಲ. ಪಶ್ಚಿಮ

ಪಶ್ಚಿಮ ಪ್ರದೇಶದಲ್ಲಿ, ಒಟ್ಟು 78 ಸೀಟುಗಳು ಇದ್ದು, ಅದರಲ್ಲಿ ಎನ್.ಡಿ.ಎ ಕೂಟ 2019ರಲ್ಲಿ ಗಳಿಸಿದ್ದ 29ಸೀಟುಗಳನ್ನು ಕಳೆದು ಕೊಂಡು 44 ಸೀಟುಗಳಿಗೆ ಕುಸಿದಿದೆ. ಅದರಲ್ಲಿ ಹೆಚ್ಚಿನ (28) ಸೀಟು ಕಳೆದು ಕೊಂಡದ್ದು ಮಹಾರಾಷ್ಟ್ರದಲ್ಲಿ. ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಷ್ಟೇ ಮಹಾರಾಷ್ಟ್ರದಲ್ಲಿ ಸಹ ಕಳೆದು ಕೊಂಡಿದೆ ಎಂಬುದು ಗಮನಾರ್ಹ. ಪಶ್ಚಿಮ

ಇದನ್ನೂ ಓದಿ: ಯಾವುದೇ ತನಿಖೆಗೂ ಸಿದ್ದ: ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್

ಇಂಡಿಯಾ ಕೂಟ 32 ಸೀಟುಗಳನ್ನು ಗಳಿಸಿದ್ದು 30 ಹೆಚ್ಚು ಸೀಟುಗಳನ್ನು ಗಳಿಸಿದೆ. ಎನ್.ಡಿ.ಎ ಕೂಟ ಈ ಪ್ರದೇಶದಲ್ಲಿ ಶೇ.14.4 ಮತ ಕಳೆದು ಕೊಂಡು ಶೇ.50.4 ಮತ ಗಳಿಸಿದೆ. ಎಲ್ಲ ಪ್ರದೇಶಗಳಿಗಿಂತ ಹೆಚ್ಚು ಮತ ಪ್ರಮಾಣವನ್ನು ಎನ್.ಡಿ.ಎ ಮಹಾರಾಷ್ಟ್ರದಲ್ಲಿ ಕಳೆದು ಕೊಂಡಿದೆ. ಇಂಡಿಯಾ ಕೂಟ ಶೇ.12.4 ರಷ್ಟು ಮತ ಗಳಿಕೆ ಹೆಚ್ಚಿಸಿಕೊಂಡು ಶೇ. 34.5ಮತ ಗಳಿಸಿದೆ. ಇತರರು ಶೇ.1.9 ಹೆಚ್ಚು ಮತ ಗಳಿಸಿ ಶೇ,.15.1 ಮತ ಗಳಿಸಿದ್ದಾರೆ.

ಪಶ್ಚಿಮ ಪ್ರದೇಶದ ಸೀಟು-ಮತ ಪ್ರಮಾಣ ಗಳಿಕೆ

 

ಮಹಾರಾಷ್ಟ್ರ

ಮಹಾರಾಷ್ಟ್ರದಲ್ಲಿ ಎನ್.ಡಿ.ಎ ಸೀಟುಗಳಲ್ಲೂ (45ರಿಂದ 17ಕ್ಕೆ) ಮತ ಪ್ರಮಾಣದಲ್ಲೂ ಹೆಚ್ಚಿನ ನಷ್ಟ(ಶೇ. 7.8)  ಅನುಭವಿಸಿದೆ. ಇವೆಲ್ಲವೂ ಇಂಡಿಯಾ ಕೂಟಕ್ಕೆ ಲಾಭವಾಗಿದೆ. ಇತರರು 1 ಸೀಟು ಕಳೆದು ಕೊಂಡು ಶೇ. 4.8ರಷ್ಟು ಮತ ಕಳೆದು ಕೊಂಡಿದ್ದಾರೆ. ಈ ಮತಗಳೂ ಮಹಾರಾಷ್ಟ್ರ ವಿಕಾಸ ಅಘಾಡಿ (ಎಂ.ವಿ.ಎ ಅಥವಾ ಇಂಡಿಯಾ) ಕೂಟಕ್ಕೆ ಹೋಗಿದ್ದು ತನ್ನ ಮತ ಪ್ರಮಾಣ ಶೇ.+11.6 ರಷ್ಟು ಹೆಚ್ಚಿಸಿ ಕೊಂಡಿದೆ. ಎನ್.ಡಿ.ಎ ಕೂಟದ ಬಿಜೆಪಿ 28ರಲ್ಲಿ ಸ್ಪರ್ಧಿಸಿ 9 ಸೀಟು, ಶಿವಸೇನಾ 15ರಲ್ಲಿ 7 ಸೀಟು, ಎನ್.ಸಿ.ಪಿ 4 ರಲ್ಲಿ 1 ಸೀಟುಗಳಿಸಿವೆ. ಇಂಡಿಯಾ ಕೂಟದ ಕಾಂಗ್ರೆಸ್ 17 ಸ್ಪರ್ಧಿಸಿ 13 ಸೀಟು, ಶಿವಸೇನಾ (ಉದ್ಭವ) 21ರಲ್ಲಿ 9 ಸೀಟು ಎನ್.ಸಿ.ಪಿ (ಶರದ್ಪವಾರ್) 10 ರಲ್ಲಿ8 ಸೀಟುಗಳಿಸಿದೆ. ಪ್ರಕಾಶ್ ಅಂಬೇಡ್ಕರ್‌ ಅವರ ವಂಚಿತ ಬಹು ಜನ ಅಘಾಡಿ, ಎಐಎಂಐಎಂ ಮತ್ತು ಪಕ್ಷೇತರರು ಇರುವ ಇತರರಲ್ಲಿ ಒಬ್ಬ ಪಕ್ಷೇತರರು ಮಾತ್ರ ಗೆದ್ದಿದ್ದಾರೆ. ವಂಚಿತ ಬಹು ಜನ ಅಘಾಡಿ 35 ಸೀಟುಗಳಲ್ಲಿ ಸ್ಪರ್ಧಿಸಿದ್ದು, 2019ರಲ್ಲಿ 11 ಸೀಟುಗಳಲ್ಲಿಇಂಡಿಯಾಕೂಟದಗೆಲುವಿಗೆತಡೆಯೊಡ್ಡಿದ್ದರೆ, ಈ ಬಾರಿಅದು 4 ಸೀಟುಗಳನ್ನು ಮಾತ್ರ ಎನ್.ಡಿ.ಎ ಗೆ ಹೆಚ್ಚಿಸುವುದರಲ್ಲಿ ಸಹಾಯಕವಾಗಿದೆ. ದೊಡ್ಡ ರಾಜ್ಯಗಳಲ್ಲಿ (ದಕ್ಷಿಣದ ರಾಜ್ಯಗಳನ್ನು ಹೊರತು ಪಡಿಸಿ) ಮಹಾರಾಷ್ಟ್ರದಲ್ಲಿ ಮಾತ್ರ ಇಂಡಿಯಾ ಕೂಟ ಎನ್.ಡಿ.ಎ ಕೂಟಕ್ಕಿಂತ ಹೆಚ್ಚು ಮತಗಳಿಸಿದೆ.

ಮಹಾರಾಷ್ಟ್ರದ ಸೀಟು-ಮತ ಪ್ರಮಾಣ

ಮಹಾರಾಷ್ಟ್ರದ ಬಿಜೆಪಿ/ಎನ್.ಡಿ.ಎ ಸೋಲು ನಿರ್ಣಾಯಕವಾಗಿತ್ತು. 20 ಹಾಲಿ ಸಂಸದರು, 3 ಕೇಂದ್ರ ಮಂತ್ರಿಗಳು ಪರಾಭವಗೊಂಡಿದ್ದಾರೆ. ಅಕ್ಟೋಬರ್ ನಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿದ್ದು ಇಂಡಿಯಾ ಕೂಟದ ಐಕ್ಯತೆ ಮುಂದುವರೆದರೆ ಎನ್.ಡಿ.ಎ ಕೂಟ ಅಧಿಕಾರ ಕಳೆದುಕೊಳ್ಳುವುದು ಖಚಿತವಾಗಿದೆ. ಈ ಚುನಾವಣೆಗಳಲ್ಲೇ ವಿಧಾನಸಭಾ ಕ್ಷೇತ್ರ ವಾರು ಕೂಟಗಳ ಮುನ್ನಡೆ ಪರಿಶೀಲಿಸಿದರೆ ಇಂಡಿಯಾ ಕೂಟಕ್ಕೆ‌ ಬಹು ಮತ ಸಿಕ್ಕಿದೆ ಎಂಬ ವಿಶ್ಲೇಷಣೆಗಳು ಪ್ರಕಟವಾಗಿವೆ.  ಇದಲ್ಲದೆ ಫಲಿತಾಂಶಗಳ ನಂತರ ಚುನಾವಣಾ ಕಮಿಶನ್ ಪ್ರಕಾರ “ಅಸಲಿ”, ನಿಜವಾಗಿಯೂ “ನಕಲಿ”  ಮುಖ್ಯಮಂತ್ರಿ ಶಿಂಧೆಯವರ ಶಿವಸೇನೆ ಬಣದ ಶಾಸಕರು ಆತಂಕಿತರಾಗಿ ಉದ್ಭವ ಠಾಕ್ರೆಕದ ತಟ್ಟುತ್ತಿದ್ದಾರೆ.

ಅದೇ ರೀತಿ ಅಜಿತ್ ಪವಾರ್ ನಾಯಕತ್ವದ ಎನ್.ಸಿ,ಪಿ ಯ ಶಾಸಕರು ಶರದ್ ಪವಾರ್ ಅವರನ್ನು‌ ಸಂಪರ್ಕಿಸಲು‌ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಇದು ನಿಜವಾದರೆ ಎನ್.ಡಿ.ಎ ಕೂಟವೇ ರಾಜ್ಯದಲ್ಲಿ ಕುಸಿದು ಬಿದ್ದಂತೆ. ಆದರೆ ಇಂಡಿಯಾ ಕೂಟದ ವಿಧಾನಸಭಾ ಚುನಾವಣಾ ಸೀಟು ಹೊಂದಾಣಿಕೆಗೆ ಇದು ಹೊಸ ಸಮಸ್ಯೆ ಸೃಷ್ಟಿಸ ಬಹುದು ಎಂಬುದು ಬೇರೆಯೇ ಚರ್ಚೆಯ ವಿಷಯ.

ಬಿಜೆಪಿ ವಿರುದ್ಧ ಮಹಾರಾಷ್ಟ್ರದ ಸುನಾಮಿಯ ಕಾರಣಗಳು ಹಲವು. ಶಿವಸೇನಾ ಮತ್ತು ಎನ್.ಸಿ.ಪಿ ಪಕ್ಷಗಳನ್ನು ಬಿಜೆಪಿ ಅತ್ಯಂತ ಹೇಯ ರೀತಿಯಲ್ಲಿ ವಿಭಜಿಸಿ ಮಹಾರಾಷ್ಟ್ರ ವಿಕಾಸ ಅಘಾಡಿಯ ಸರಕಾರ ಉರುಳಿಸಿದ್ದು, ಆರ್ಥಿಕ ಮತ್ತು ಗ್ರಾಮೀಣ ಸಂಕಟ, ಮರಾಠಾ ಮೀಸಲಾತಿ, ವಂಚಿತ ಬಹುಜನ ಅಘಾಡಿ ಎನ್.ಡಿ.ಎ ಮತಗಳನ್ನು ಒಡೆಯುವುದರಲ್ಲಿವಿ ಫಲವಾದದ್ದು, ಮಹಾರಾಷ್ಟ್ರದ ಪ್ರಾಜೆಕ್ಟುಗಳನ್ನು ಗುಜರಾತಿಗೆ ವರ್ಗಾಯಿಸದ್ದರ ವಿರುದ್ಧ ಆಕ್ರೋಶ, ಸಂವಿಧಾನ ರಕ್ಷಣೆ ಕೋಮುವಾದಿ ಫ್ಯಾಸಿ ಸಂಸೋಲಿಸಲು ಸ್ವತಂತ್ರ ಮಾಧ್ಯಮಗಳ ಮತ್ತು ನಾಗರಿಕ ಸಂಘಟನೆಗಳ ವ್ಯಾಪಕ ಕೆಲಸ, – ಇವು ಪ್ರಮುಖ ಕಾರಣಗಳು.

ಗುಜರಾತ್

ಗುಜರಾತಿನಲ್ಲಿ ಬಿಜೆಪಿ/ಎನ್.ಡಿ.ಎ 1 ಸೀಟು ಮಾತ್ರ ಕಳೆದುಕೊಂಡು ತನ್ನ ಎಂದಿನ ಸ್ವೀಪ್ ಮುಂದುವರೆಸಿದೆ. ಮತ ಪ್ರಮಾಣದಲ್ಲಿ ಸಹಸ್ವಲ್ಪ ನಷ್ಟ (0.5%ರಷ್ಟು) ಅನುಭವಿಸಿದೆ. ಸೂರತ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವನ್ನು ವಿವಾದಾಸ್ಪದ ರೀತಿಯಲ್ಲಿ ತಿರಸ್ಕರಿಸಿ, ಉಳಿದ ಎಲ್ಲಾ ಅಭ್ಯರ್ಥಿಗಳು ನಾಮಪತ್ರ ವಾಪಸು ಪಡೆಯುವಂತೆ ಒತ್ತಡ ಹೇರಿದ್ದು ಮುಂತಾದ ನಗ್ನ ಅನೈತಿಕ ಕಾನೂನು ಬಾಹಿರಕೃತ್ಯಗಳು ಬಿಜೆಪಿ ವಿಜಯಕ್ಕೆ ಕಪ್ಪು ಚುಕ್ಕೆಯಾಗಿದೆ.  ನಾಮಪತ್ರ ವಾಪಸು ಪಡೆಯಲು ಬೆದರಿಕೆ, ಆಮಿಷ, ಒತ್ತಡ ಹೇರುವ ಇಂತಹ ಹಲವು ಅನೈತಿಕ ಕಾನೂನು ಬಾಹಿರ ಕೃತ್ಯಗಳು ಇತರ ಕ್ಷೇತ್ರಗಳಲ್ಲೂ ಆಗಿವೆ ಎಂದು ವರದಿಯಾಗಿದೆ. ಕನಿಷ್ಠ 5 ಕ್ಷೇತ್ರಗಳಲ್ಲಿ ಬಿಜೆಪಿ ಕೆಲವು ಹಂತಗಳಲ್ಲಿ ಹಿಂದಿತ್ತು ಮತ್ತು ಬಿರುಸಿನ ಸ್ಪರ್ಧೆಯಿತ್ತು.

ಈ ಬಾರಿ ಗುಜರಾತಿನಲ್ಲಿ ಇಂಡಿಯಾ ಕೂಟದ ಭಾಗವಾಗಿ ಎಎಪಿ ಮತ್ತು ಕಾಂಗ್ರೆಸ್ ಸೀಟು ಹೊಂದಾಣಿಕೆ ಮಾಡಿಕೊಂಡಿದ್ದು, ಕಾಂಗ್ರೆಸ್ 24 ಸೀಟುಗಳಲ್ಲಿ, ಎಎಪಿ 2 ಸೀಟುಗಳಲ್ಲಿ ಸ್ಪರ್ಧಿಸಿತ್ತು.  ಇಂಡಿಯಾ ಕೂಟದ ಮತ ಪ್ರಮಾಣ ಸ್ವಲ್ಪ (1.9%) ಏರಿಕೆ ಕಂಡಿದೆ. ಕಾಂಗ್ರೆಸ್ ಬನಾಸ್ಕಾಂಟಾ ಕ್ಷೇತ್ರವನ್ನು ಗೆದ್ದುಕೊಂಡಿದೆ. ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಶೂನ್ಯ ಸಂಫಾದನೆ ಮಾಡಿದ್ದ ಕಾಂಗ್ರೆಸ್ ಈ ಬಾರಿ ಖಾತೆ ತೆರೆದಿದೆ.

ಗುಜರಾತ್ -ಸೀಟು-ಮತ ಪ್ರಮಾಣ

ಗುಜರಾತಿನಲ್ಲಿ ಬಿಜೆಪಿಯ ಪ್ರಾಬಲ್ಯಕ್ಕೆ ಕಾರಣ ರಾಜ್ಯದ ಜನತೆಯ ದೊಡ್ಡ ವಿಭಾಗವನ್ನು ಕೋಮುವಾದಿಕರಣ ಮಾಡಿದ್ದು, ಎಲ್ಲ ರಾಜಕೀಯ ಮತ್ತಿತರ ವಿರೋಧವನ್ನು ದಮನ ಮಾಡಿದ್ದು ಮತ್ತು ಅದರ ಸಂಘಟನಾ ಶಕ್ತಿ ಮಾತ್ರವಲ್ಲ. ಕಾಂಗ್ರೆಸ್ ಕೋಮುವಾದ, ಪ್ರಜಾ ಸತ್ತೆಯ ದಮನಕ್ಕೆ ಸವಾಲೊಡ್ಡಿ ದೃಢವಾಗಿ ನಿಲ್ಲುವ ರಾಜಕೀಯ ಇಚ್ಛಾ ಶಕ್ತಿಯಾಗಲಿ, ಸಂಘಟನೆಯನ್ನಾಗಲಿ ಹೊಂದಿರದಿರುವುದು ಅಷ್ಟೇ ಕಾರಣ. ಕಾಂಗ್ರೆಸ್ ನ ಮೃದು ಹಿಂದುತ್ವ ಮತ್ತು ಅಹ್ಮದ್ ಪಟೇಲ್ ನಿಧನಾ ನಂತರ ಚುನಾವಣಾ ರಾಜಕೀಯವನ್ನಾದರೂ ನಡೆಸಬಲ್ಲ ನಾಯಕರ ಅಭಾವ ಅದನ್ನು ಕಾಡುತ್ತಿದೆ. ಈಗ ಎಎಪಿ ಸಕ್ರಿಯವಾಗಿದೆ. ಆದರೂ ಬಿಜೆಪಿಗೆ ಪರಿಣಾಮಕಾರಿ ಸವಾಲೊಡ್ಡಲು ಸಾಧ್ಯವಾಗಿಲ್ಲ.

ಈ ಪ್ರದೇಶದ ಇತರ ರಾಜ್ಯವಾದ ಗೋವಾದಲ್ಲಿ ಎನ್.ಡಿ.ಎ ಮತ್ತು ಕಾಂಗ್ರೆಸ್ ಕೂಟ ತಲಾ ಒಂದು ಸೀಟು ಉಳಿಸಿಕೊಂಡಿದೆ. ಕ್ರಾಂತಿಕಾರಿ ಗೋವಾ ಪಕ್ಷ ಎಂಬ ಹೊಸ ಪ್ರಾದೇಶಿಕ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ಎರಡೂ ಕೂಟಗಳ ಸ್ವಲ್ಪ ಮತ ಪ್ರಮಾಣ ಕಿತ್ತುಕೊಂಡು ಶೇ.7ರಷ್ಟು ಮತಗಳಿಸಿದೆ.

ಕೇಂದ್ರಾಢಳಿತ ಪ್ರದೇಶವಾದ ದಾದ್ರಾ ನಗರ ಹವೇಲಿಯಲ್ಲಿ ಬಿಜೆಪಿ ಗೆದ್ದು, ಕಾಂಗ್ರೆಸ್ ಎರಡನೆಯ ಸ್ಥಾನದಲ್ಲಿದ್ದು ಭಾರತೀಯ ಆದಿವಾಸಿ ಪಕ್ಷದ ಅಭ್ಯರ್ಥಿ 1 ಲಕ್ಷಕ್ಕೂ ಹೆಚ್ಚು ಮತ ಪಡೆದು ಮೂರನೇ ಸ್ತಾನದಲ್ಲಿದ್ದಾರೆ. ದಮನ್ದೀವ್ನಲ್ಲಿ ಒಬ್ಬ ಪಕ್ಷೇತರ ಅಭ್ಯರ್ಥಿ ಬಿಜೆಪಿ, ಕಾಂಗ್ರೆಸ್ ಎರಡೂ ಅಭ್ಯರ್ಥಿಗಳನ್ನು ಸೋಲಿಸಿ ಆಯ್ಕೆಯಾಗಿದ್ದಾರೆ. ಬಿಜೆಪಿ ಕಾಂಗ್ರೆಸೇ ತರ ಪಕ್ಷ ಮತ್ತು ಪಕ್ಷೇತರರ ಪ್ರಾಬಲ್ಯವಿದ್ದ ಈ ಎರಡು ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್ ಗಳು ತಮ್ಮ ಮತ ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸಿಕೊಂಡಿವೆ.

ಇದನ್ನೂ ನೋಡಿ: ಮಹಾರಾಷ್ಟ್ರದಲ್ಲಿ ಪ್ರಧಾನಿ ಮೋದಿ ಪ್ರಚಾರ ನಡೆಸಿದ್ದ 18 ಕ್ಷೇತ್ರಗಳಲ್ಲಿ 15ರಲ್ಲಿ ಎನ್‌ಡಿಎ ಗೆ ಸೋಲು

Donate Janashakthi Media

Leave a Reply

Your email address will not be published. Required fields are marked *