ಬೆಂಗಳೂರು: ಬಿಜೆಪಿಯಲ್ಲಿನ ಮುಖಂಡರನ್ನು ಬಿಜಪಿಯೇ ಮುಗಿಸಲು ಹೊರಟಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬಿಜೆಪಿಯಿಂದ ಬೇಸರಗೊಂಡಿರುವ ಮಾಜಿ ಸಿಎಂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಡಿ.ವಿ.ಸದಾನಂದಗೌಡ ಅವರು ಬಿಜೆಪಿ ಟಿಕೇಟ್ ನೀಡದ ಹಿನ್ನಲೆಯಲ್ಲಿ ಕಾಂಗ್ರೆಸ್‌ಗೆ ಬರುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿರುವ, ಬಿಜೆಪಿಯಲ್ಲಿ ಯಾವ ಮುಖಂಡರಿಗೂ ಗೌರವ ಇಲ್ಲ. ಮಾರ್ಮಿಕವಾಗಿ ನುಡಿದಿದ್ದಾರೆ.
ನಗರದಲ್ಲಿ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಪಕ್ಷಕ್ಕೆ ಬರುವ ಹೋಗುವ ಸನ್ನಿವೇಶ, ಸಂದರ್ಭಗಳು ರಾಜಕೀಯದಲ್ಲಿ ಎದುರಾಗುವುದು ಸಹಜ. ಹಿಂದೆ ಜಗದೀಶ್ ಶೆಟ್ಟರ್ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದುಹೋದರು. ಲಕ್ಷ್ಮಣ್ ಸವದಿ ಬಂದಿದ್ದಾರೆ. ಅವರದ್ದೇ ಪಕ್ಷದಲ್ಲಿ ಅವಮಾನ ಆದಾಗ ಹೀಗಾಗುವುದು ಸಹಜ. ಬಿಜೆಪಿಯ ನಾಯಕರು ಅವರ ಮಾತನ್ನಷ್ಟೇ ಕೇಳುವ ಕೈಗೊಂಬೆಗಳನ್ನು ಮಾತ್ರವೇ ಆಯ್ಕೆ ಮಾಡಿಕೊಳ್ಳುತ್ತಾರೆ.
ಇದನ್ನೂ ಓದಿ : ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆದಿಲ್ಲ: ಪೊಲೀಸರ ಸ್ಪಷ್ಟನೆ
ಲೋಕಸಭೆ ಗೆಲ್ಲದವರೇ ಅವರ ಪಾರ್ಟಿಯಲ್ಲಿ ಪವರ್ ಫುಲ್ ಯಡಿಯೂರಪ್ಪ ಅವರನ್ನು ಕೂಡ ತೆಗೆದುಹಾಕಿದರು. ಈಗ ಅನಿವಾರ್ಯ ಕಾರಣದಿಂದ ಚುನಾವಣೆಗೋಸ್ಕರ ಇಟ್ಟುಕೊಂಡಿದ್ದಾರೆ ಅಷ್ಟೇ. ಬಿಜೆಪಿಯವರ ಕಾರ್ಯವೈಖರಿ ಹೇಗೆ ಅಂದ್ರೆ ಅವರ ಕೈಕೆಳಗೆ ಕೆಲಸ ಮಾಡುವವರು ಜೀತದಾಳುಗಳು ಇದ್ದಂತೆ. ಅವರು ಹೇಳಿದ ಮಾತು ಕೇಳಿಕೊಂಡು ಇರಬೇಕು.
ಬಿಜೆಪಿ ನಾಯಕರಿಗೆ ಅವರ ಪಾರ್ಟಿಯಲ್ಲೇ ಹ್ಯುಮಿಲಿಯೇಷನ್ ಆಗುತ್ತಿದೆ. ಬಹಳಷ್ಟು ಜನರಿಗೆ ಹೀಗೆ ಆಗಿದೆ. ಡಿ.ವಿ ಸದಾನಂದ ಗೌಡ, ನಳೀನ್ ಕಟೀಲ್, ಈಶ್ವರಪ್ಪ ಎಲ್ಲರಿಗೂ ಹೀಗೇ ಆಗಿದೆ. ಸದಾನಂದ ಗೌಡ ಮುಂದಿನ ರಾಜಕೀಯ ನಿರ್ಧಾರ ಏನು ಮಾಡುತ್ತಾರೆ ಎನ್ನುವುದನ್ನು ನೋಡಬೇಕು ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.