ಹರ್ಯಾಣದಲ್ಲಿ ಬಿಜೆಪಿ ಕೈ ಮೇಲೆ ಮತ್ತು ಜಮ್ಮು-ಕಾಶ್ಮೀರದಲ್ಲಿ ಮುಖಭಂಗ

ಜಮ್ಮು-ಕಾಶ್ಮೀರ: ಹರ್ಯಾಣ ಮತ್ತು ಜಮ್ಮು-ಕಾಶ್ಮೀರದಲ್ಲಿ ನಡೆದ ಚುನಾವಣೆಗಳ ಫಲಿತಾಂಶ ಅಕ್ಟೋಬರ್‍ 8 ರಸಂಜೆಯ ವೇಳೆಗೆ ಸುಮಾರಾಗಿ ದೃಢಗೊಂಡಿದೆ, ಜಮ್ಮುಮತ್ತು ಕಾಶ್ಮೀರದಲ್ಲಿ ಎಲ್ಲ 90 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದ್ದು ಇಂಡಿಯ ಬಣ ನಿಚ್ಚಳ ಬಹುಮತ ಗಳಿಸಿದೆ. ಅತ್ತ ಹರ್ಯಾಣದ 90 ಕ್ಷೇತ್ರಗಳಲ್ಲಿ 89ರ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗಿದ್ದು ಬಿಜೆಪಿ 48 ಸ್ಥಾನಗಳನ್ನು ಗಳಿಸಿ ನಿಚ್ಚಳ ಬಹುಮತ ಗಳಿಸಿದೆ. ಕಾಂಗ್ರೆಸ್‍ 36ಸ್ಥಾನಗಳನ್ನು ಪಡೆದಿದ್ದು, ಉಳಿದ 1ರಲ್ಲಿ  ಮುನ್ನಡೆಯಲ್ಲಿದೆ. ಹರ್ಯಾಣ

10 ವರ್ಷಗಳ ನಂತರ ಕೊನೆಗೂ ಚುನಾವಣೆ ನಡೆಸಿದ್ದನ್ನು,  ಅದರಲ್ಲಿ ಮತದಾರರು ಗಮನಾರ್ಹ ಸಂಖ್ಯೆಯಲ್ಲಿ ಭಾಗವಹಿಸಿದ್ದನ್ನುತಮ್ಮಸರಕಾರದ ಸಾಧನೆಯೆನ್ನುತ್ತ ನಿರುದ್ಯೋಗ ಮತ್ತು ಪ್ರತ್ಯೇಕತಾವಾದದ ವಿರುದ್ಧ ಮತನೀಡಿ ಎಂದು ಗೃಹಮಂತ್ರಿ ಅಮಿತ್‍ ಷಾ ನೀಡಿದ ಕರೆಗೆ ಈಗ ಕೇಂದ್ರಾಡಳಿತ ಪ್ರದೇಶವಾಗಿರುವ  ಈ ರಾಜ್ಯದ ಮತದಾರರು ಓಗೊಟ್ಟಂತೆ ಕಾಣುತ್ತದೆ. ಹರ್ಯಾಣ

ಕೇಂದ್ರದಲ್ಲಿ ಮೂರನೇ ಬಾರಿಗೆ ಆಳ್ವಿಕೆ ಆರಂಭಿಸಿರುವ ಪಕ್ಷವನ್ನು ಈ ಹಿಂದಿನಂತೆ ಜಮ್ಮುವಿಗೇ ಸೀಮಿತಗೊಳಿಸಿದ್ದಾರೆ.  ಇಂಡಿಯ ಬಣಕ್ಕೆ ನಿಚ್ಚಳ ಬಹುಮತ ನೀಡಿದ್ದಾರೆ. ಇದರಲ್ಲಿ ನ್ಯಾಷನಲ್‍ ಕಾನ್ಫರೆನ್ಸ್ 42 ಸ್ಥಾನಗಳನ್ನು, ಕಾಂಗ್ರೆಸ್‍  6 ಸ್ಥಾನಗಳನ್ನು ಸಿಪಿಐ(ಎಂ) 1 ಸ್ಥಾನವನ್ನು ಪಡೆದಿವೆ. ಈ ಹಿಂದೆ ಬಿಜೆಪಿಯೊಂದಿಗೆ ಸರಕಾರ ನಡೆಸಿ, ಈ ಬಾರಿ ಪ್ರತ್ಯೇಕವಾಗಿ ಸ್ಪರ್ಧಿಸಿ, ಪರೋಕ್ಷವಾಗಿ ಬಿಜೆಪಿಗೆ ನೆರವಾದ  ಮಾಜಿ ಮುಖ್ಯಮಂತ್ರಿ ಮಹೆಬೂಬ ಮುಫ್ತಿ ನೇತೃತ್ವದ ಪಿಡಿಪಿ ಕೇವಲ 3ಸ್ಥಾನಗಳನ್ನು ಪಡೆದಿದೆ. ಇಂಡಿಯ ಬಣವ್ನನು ಸೋಲಿಸಲೆಂದೇ ದೊಡ್ಡ ಸಂಖ್ಯೆಯಲ್ಲಿ ನಿಲ್ಲಿಸಿದ್ದ ‘ಪಕ್ಷೇತರ’ರಲ್ಲಿಯೂ ಹೆಚ್ಚಿನವರು ಸೋತಿದ್ದು, ಒಟ್ಟು 6ಅಭ್ಯರ್ಥಿಗಳಷ್ಟೇ ಗೆದ್ದಿದ್ದಾರೆ.

ಇದನ್ನೂ ಓದಿ: ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು 3 ಕರಡಿಗಳು ಸಾವು

ಈ ಕೇಂದ್ರಾಡಳಿತ ಪ್ರದೇಶದ ಉಪರಾಜ್ಯಪಾಲರಿಗೆ  ಮತದಾನದ ಅಧಿಕಾರವಿರುವ 5 ಮಂದಿಯನ್ನು ನೇಮಿಸುವ ಅಧಿಕಾರವನ್ನು ಕೊಡಲಾಗಿದ್ದು, ಇದನ್ನು ಬಿಜೆಪಿಯೇತರ ಸರಕಾರ ರಚನೆಯಾಗದಂತೆ ತಡೆಯಲು ಬಳಸುವ ಬೆದರಿಕೆಯಿತ್ತು, ಈಗಲೂ ಇದೆ. ಆದರೆ ಪಿಡಿಪಿ ಕೂಡ ಈ ಬಾರಿ ಇಂಡಿಯ ಬಣಕ್ಕೆ ಬೆಂಬಲ ನೀಡುವ ನಿರೀಕ್ಷೆ ಇದೆ. ಪಕ್ಷೇತರರಲ್ಲಿಯೂ 4 ಮಂದಿ ಇಂಡಿಯ ಬಣಕ್ಕೆ ಬೆಂಬ ಲ ನೀಡುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಆದ್ದರಿಂದ ಈ ವಿಧಾನಸಭೆಯನ್ನು ಅತಂತ್ರಗೊಳಿಸುವುದು ಅಷ್ಟು ಸುಲಭವಲ್ಲ ಎಂದು ರಾಜಕೀಯ ವೀಕ್ಷಕರು ಹೇಳುತ್ತಿದ್ದಾರೆ.

ಹರ್ಯಾಣದಲ್ಲಿ ನಿರೀಕ್ಷೆಯನ್ನು ಮೀರಿ ಬಿಜೆಪಿ 48 ಸ್ಥಾನಗಳನ್ನು ಪಡೆದಿದೆ

ಕಾಂಗ್ರೆಸ್‍ 37 ಸ್ಥಾನಗಳನ್ನು ಪಡೆದಿದೆ. ಈ ಎರಡೂ ಪಕ್ಷಗಳು ಕಳೆದ ವಿಧಾನಸಭೆಯಲ್ಲಿ ಇದ್ದುದಕ್ಕಿಂತ ಹೆಚ್ಚುವರಿ ಸ್ಥಾನಗಳನ್ನು ಪಡೆದಿರುವುದು ಗಮನಾರ್ಹ. ಇದಕ್ಕೆ ಕಾರಣ ಕಳೆದ ಬಾರಿ ಬಹುಮತ ಗಳಿಸಲು ವಿಫಲವಾಗಿದ್ದ ಬಿಜೆಪಿಗೆ ಸರಕಾರ ರಚಿಸಲು ನೆರವಾದ ಜೆಜೆಪಿ ಈ ಬಾರಿ ಹಿಂದೆ ಇದ್ದ ತನ್ನ ಎಲ್ಲ ಸ್ಥಾನಗಳನ್ನು ಕಳೆದುಕೊಂಡಿದೆ. ಅಂದರೆ ಇನ್ನೊಂದು  ಪ್ರಾದೇಶಿಕ ಪಕ್ಷ ಬಿಜೆಪಿ ಮೈತ್ರಿಯ ಫಲವುಣ್ಣಬೇಕಾಗಿ ಬಂದಿದೆ.

ಮತಗಳಿಕೆಯಲ್ಲಿ  ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್‍ ಸುಮಾರಾಗಿ ಸಮಬಲ ಹೊಂದಿವೆ. ಬಿಜೆಪಿ 39.94% ಮತ ಗಳಿಸಿದರೆ, ಕಾಂಗ್ರೆಸ್ 39.09% ಮತ ಗಳಿಸಿದೆ. 2019ಕ್ಕೆ ಹೋಲಿಸಿದರೆ  ಬಿಜೆಪಿ ಮತಗಳಿಕೆ  3% ದಷ್ಟು ಹೆಚ್ಚಿದ್ದರೆ, ಕಾಂಗ್ರೆಸ್‍ ಮತಗಳಿಕೆಯಲ್ಲಿ  11ಶೇ.ದಷ್ಟು ಹೆಚ್ಚಳವಾಗಿದೆ. ಇಲ್ಲಿಯೂ ಬಿಜೆಪಿ ಯ ಮಾಜಿ ಮಿತ್ರಪಕ್ಷ ಜೆಜೆಪಿಯ ಕೃಪೆ ಎದ್ದು ಕಾಣುತ್ತದೆ.

ಇತ್ತೀಚಿನ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ 10ರಲ್ಲಿ 7 ಸ್ಥಾನಗಳನ್ನು ಪಡೆದಿದ್ದರೂ, ಬಿಜೆಪಿ-ಜೆಜೆಪಿ ಪಕ್ಷದ ಕಳಪೆ ಆಳ್ವಿಕೆಯಿಂದಾಗಿ, ಮುಖ್ಯವಾಗಿ ರೈತರ ಹೋರಾಟಕ್ಕೆ ಅದು ಬಗೆದ ದ್ರೋಹದ ಹಿನ್ನೆಲೆಯಲ್ಲಿ ಈ ಎರಡೂ ಪಕ್ಷಗಳು  ಭಾರೀ ಪರಾಭವವನ್ನು ಎದುರಿಸುತ್ತವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಬಿಜೆಪಿಯ ಜಾತಿ ಕಸರತ್ತುಗಳಿಂದಾಗಿ ಕಳಪೆ ಆಳ್ವಿಕೆಯ ದುಷ್ಫಲವನ್ನು ಅದರ ಮಿತ್ರಪಕ್ಷವಾಗಿದ್ದ  ಜೆಜೆಪಿ ಮಾತ್ರವೇ ಅನುಭವಿಸಬೇಕಾಗಿ ಬಂದಿದೆ. ಕಾಂಗ್ರೆಸಿನ ಬೇರೆ ರೀತಿಯ ಜಾತಿ ಲೆಕ್ಕಾಚಾರವೂ ಬಿಜೆಪಿಗೆ ನೆರವಾಗಿದೆ ಎಂದು ರಾಜಕೀಯ ವೀಕ್ಷಕರು ಅಂದಾಜು ಮಾಡಿದ್ದಾರೆ.

ತನ್ನ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ನಡೆಸಿದ್ದದ್ದು ಸಾಬೀತಾಗಿ  20 ವರ್ಷಗಳ ಶಿಕ್ಷೆ ಅನುಭವಿಸುತ್ತಿರುವ ದೇರಾ ಸಚ್ಚಾ ಸೌದ ಮುಖ್ಯಸ್ಥ ಗುರ್ಮಿತ್ ರಾಮ್‍ ರಹೀಮ್ ಈ ಚುನಾವಣೆ ವೇಳೆಗೆ ಮತ್ತೆ 20 ದಿನಗಳ ಪೆರೋಲ್‍ ಮೇಲೆ ಹೊರಗೆ ಬಿಟ್ಟಿರುವುದೇ ಬಿಜೆಪಿಗೆ ಚುನಾವಣಾ ಲಾಭ ಪಡೆಯುವುದಕ್ಕಾಗಿ, ಅದರ ಪ್ರಯೋಜನವೂ ಬಿಜೆಪಿಗೆ ಸಿಕ್ಕಿದೆ ಎಂದು ಹೇಳಲಾಗಿದೆ. ಏಕೆಂದರೆ ಈ ಬಾರಿಯೂ ಆತ ತನ್ನ ಹಿಂಬಾಲಕರಿಗೆ ಬಿಜೆಪಿಗೆ ಮತ ನೀಡುವಂತೆ ಸೂಚಿಸಿದ್ದು, ಅದು ಕಾರ್ಯಗತಗೊಳ್ಳುವಂತೆಯೂ ಮಾಡಲಾಗಿತ್ತು ಎನ್ನಲಾಗಿದೆ. ಚುನಾವಣಾ ಸಮಯಗಳಲ್ಲೇ ಆತನಿಗೆ ಪೆರೋಲ್‍ ಸಿಗುತ್ತಿರುವುದರತ್ತ ವಿಶ್ಲೇಷಕರು ಗಮನ ಸೆಳೆದಿದ್ದಾರೆ.

ಇನ್ನೊಂದೆಡೆಯಲ್ಲಿ ಈ ಫಲಿತಾಂಶಗಳನ್ನು ಒಪ್ಪಲು ಸಾಧ್ಯವಿಲ್ಲ, ಮತಗಣನೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಕಾಂಗ್ರೆಸ್‍ ಆರೋಪ ಮಾಡಿದೆ. ಕಳೆದ ಲೋಕಸಭಾ ಚುನಾವಣೆಯಂತೆ ಈ ಬಾರಿಯೂ ಮತದಾನದ ವಿವರಗಳನ್ನು ಚುನಾವಣಾ ಆಯೋಗ ಪ್ರಕಟಿಸಲಿಲ್ಲ. ಅಷ್ಟೇ ಅಲ್ಲ, ಮತಗಣನೆಯಲ್ಲಿಯೂ ಆರಂಭದಲ್ಲಿ ಭಾರೀ ಮುನ್ನಡೆಯಲ್ಲಿದ್ದ ಕಾಂಗ್ರೆಸ್‍ ಇದ್ದಕ್ಕಿದ್ದಂತೆ ಹಿನ್ನಡೆಗೆ ಇಳಿದದ್ದು ಹೇಗೆ, ಚುನಾವಣಾ ಆಯೊಗದ ವೆಬ್‍ಸೈಟಿನಲ್ಲಿ ಮತಗಣನೆಯ ವಿವರಗಳನ್ನು ಅಪ್‍ಲೋಡ್‍ ನಿಧಾನಗೊಂಡದ್ದು ಯಾಕೆ ಎಂದು ಪ್ರಶ‍್ನಿಸಿರುವ ಕಾಂಗ್ರೆಸ್‍ ವಕ್ತಾರರು  ಕನಿಷ್ಟ ಮೂರು ಜಿಲ್ಲೆಗಳಿಂದ ಮತಗಣನೆಯಲ್ಲಿ ಅಕ್ರಮ ನಡೆದಿರುವ ದೂರುಗಳೂ ಬಂದಿವೆ, ಇಂತಹ ದೂರುಗಳನ್ನು ಕಲೆ ಹಾಕಲಾಗುತ್ತಿದೆ ಎಂದಿದ್ದಾರೆ.

ಇದನ್ನೂ ನೋಡಿ: ಜಮ್ಮು ಕಾಶ್ಮೀರಕ್ಕೆ ಇಂಡಿಯಾ ಕೂಟ, ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್‌Janashakthi Media

 

Donate Janashakthi Media

Leave a Reply

Your email address will not be published. Required fields are marked *