ಕೇರಳ: ಸರ್ವಾಧಿಕಾರಿ ಆಡಳಿತಗಳು ಯಾವಾಗಲೂ ಮಾಧ್ಯಮವನ್ನು ನಿಯಂತ್ರಿಸಲು ಪ್ರಯತ್ನಿಸುತ್ತವೆ, ಸಂಘ ಪರಿವಾರವು ತಮ್ಮ ಆಡಳಿತವನ್ನು ಹೊಗಳದ ಮಾದ್ಯಮಗಳನ್ನು ನಿರಂತರವಾಗಿ ಗುರಿಯಾಗಿಸುತ್ತದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.ವಿಜಯನ್
ಬಿಬಿಸಿಯ ಭಾರತೀಯ ನ್ಯೂಸ್ ರೂಂ ಕಾರ್ಯಾಚರಣೆಯನ್ನು ನಿಲ್ಲಿಸಿದೆ ಎಂಬ ಸುದ್ದಿ ವರದಿಗಳಿಗೆ ಪ್ರತಿಕ್ರಿಯಿಸಿದ ಪಿಣರಾಯ್ ವಿಜಯನ್,ಬಿಜೆಪಿ ಮತ್ತು ಸಂಘಪರಿವಾರವನ್ನು ಹೊಗಳುವ ಮಾಧ್ಯಮಗಳನ್ನು ಮಾತ್ರ ಬೆಂಬಲಿಸುತ್ತಿದೆ. ತಮ್ಮನ್ನು ಹೊಗಳದ ಮಾಧ್ಯಮಗಳಿಗೆ ನಿರಂತರವಾಗಿ ಗುರಿಯಾಗಿಸಿಕೊಂಡು ಹಾನಿಮಾಡುತ್ತಿದೆ. ಮಾಧ್ಯಮಗಳ ಸ್ವಾತಂತ್ರ್ಯ ಹರಣವಾಗಿದೆ ಎಂದರು. ಪಿಣರಾಯಿ-ವಿಜಯನ್
ಸಂವಿಧಾನದ ನಾಲ್ಕನೇ ಅಂಗವಾದ ಮಾಧ್ಯಮಗಳ ಸ್ವಾತಂತ್ರವನ್ನು ಕಸಿದುಕೊಂಡು ಯಾರೂ ಪ್ರಶ್ನಿಸದಂತೆ ಬಿಜೆಪಿ ಮಾಡುತ್ತಿದೆ. ಬ್ರಿಟನ್ ಮೂಲದ ಸುದ್ದಿಸಂಸ್ಥೆ ಬಿಬಿಸಿ ಭಾರತದಲ್ಲಿನ ತನ್ನ ಕಚೇರಿಗೆ ಬೀಗ ಹಾಕಬೇಕಾಯಿತು. ಆದಾಯ ತೆರಿಗೆ ಇಲಾಖೆಯ ನಿರಂತರ ಪ್ರತೀಕಾರದ ಕ್ರಮಗಳಿಂದಾಗಿ ಬಿಬಿಸಿಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲು ಒತ್ತಾಯಿಸಲಾಗಿದೆ ಎಂದು ಹೇಳಿದ್ದಾರೆ. ಪಿಣರಾಯಿ-ವಿಜಯನ್
ಇದನ್ನು ಓದಿ : ಕರ್ನಾಟಕ ಸರ್ಕಾರದ ಬರಪರಿಹಾರ ಮನವಿ ಅರ್ಜಿಯನ್ನು ಆಲಿಸಿದ ಸುಪ್ರೀಂಕೋರ್ಟ್
ಸಂಘಪರಿವಾರದ ವಿರುದ್ಧ ವರದಿ ಮಾಡುವ ಧೈರ್ಯ ತೋರುವ ಪತ್ರಕರ್ತರ ಮೇಲೆ ನಿರಂತರ ದಾಳಿ ನಡೆಸುತ್ತಿರುವುದಕ್ಕೆ ರಾಷ್ಟ್ರ ಸಾಕ್ಷಿಯಾಗಿದೆ. ವಿಜಯನ್ ಅವರು 2020ರಲ್ಲಿ ದೆಹಲಿ ಗಲಭೆಗಳ ಬಗ್ಗೆ ಪ್ರಸಾರ ಮಾಡಿದ್ದಕ್ಕೆ ಕೇರಳದ ಎರಡು ಸುದ್ದಿವಾಹಿನಿಗಳ ಪರವಾನಗಿಯನ್ನು ರದ್ದುಗೊಳಿಸಿದ ಘಟನೆಯನ್ನು ಉಲ್ಲೇಖಿಸಿದ್ದಾರೆ. ಸರ್ವಾಧಿಕಾರಿ ಸರ್ಕಾರಗಳು ಮಾಧ್ಯಮಗಳನ್ನು ತನ್ನ ಮುಷ್ಠಿಯಲ್ಲಿ ಇಟ್ಟುಕೊಳ್ಳಲು ಸದಾ ಪ್ರಯತ್ನಿಸುತ್ತವೆ. ಪಿಣರಾಯಿ-ವಿಜಯನ್
ಕೇಂದ್ರ ಸರ್ಕಾರದ ಆಡಳಿತ ವೈಖರಿಯನ್ನು ಹಾಡಿ ಹೊಗಳದ ಮಾಧ್ಯಮಗಳನ್ನು ನಿರ್ದಾಕ್ಷಿಣ್ಯವಾಗಿ ಗುರಿ ಮಾಡಲಾಗುತ್ತಿದೆ ಸರ್ವಾಧಿಕಾರಿ ಆಡಳಿತಗಳು ಯಾವಾಗಲೂ ಮಾಧ್ಯಮವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದು, ಆ ಮೂಲಕ ಭಾರತದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ಲಕ್ಷಣಗಳನ್ನು ಬಿಜೆಪಿಯಿಂದ ಎದುರಾಗಿದೆ. 2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು ನಿರಂತರವಾಗಿ ಕುಸಿಯುತ್ತಿದೆ. ಪ್ಯಾರಿಸ್ ಮೂಲದ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್‌ನ 2023ರ ವರದಿಯ ಪ್ರಕಾರ, ಭಾರತದ ಪತ್ರಿಕಾ ಸ್ವಾತಂತ್ರ್ಯ ಶ್ರೇಯಾಂಕವು 180 ದೇಶಗಳಲ್ಲಿ 150ರಿಂದ 161ಕ್ಕೆ ಇಳಿದಿದೆ ಎಂದಿದ್ದಾರೆ.ಪಿಣರಾಯಿ-ವಿಜಯನ್
ಇದನ್ನು ನೋಡಿ : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಹಿನ್ನೆಲೆ ಮತ್ತು ಮತಲೆಕ್ಕಾಚಾರ Janashakthi Media