ಅಸ್ಸಾಂ, ಮಣಿಪುರಕ್ಕೆ ರಾಹುಲ್ ಗಾಂಧಿ ಭೇಟಿ – ಜನರ ಅಹವಾಲು ಆಲಿಸಿದ ವಿಪಕ್ಷ ನಾಯಕ

ನವದೆಹಲಿ: ಲೋಕಸಭೆ  ವಿರೋಧ ಪಕ್ಷದ ನಾಯಕರಾದ ಬಳಿಕ ಮೊದಲ ಬಾರಿಗೆ ರಾಹುಲ್ ಗಾಂಧಿ  ಈಶಾನ್ಯ ರಾಜ್ಯಗಳ ಪ್ರವಾಸ ಆರಂಭಿಸಿದ್ದಾರೆ. ಅಸ್ಸಾಂ (Assam) ಮತ್ತು ಮಣಿಪುರಕ್ಕೆ (Manipur) ಭೇಟಿ ನೀಡಿದ ಅವರು ಪ್ರವಾಹದಲ್ಲಿ ಸಿಲುಕಿರುವ ಜನರು ಮತ್ತು ಕೋಮು ಗಲಭೆಯಲ್ಲಿ ಸಂತ್ರಸ್ತರಾದ ಜನರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ರಾಹುಲ್ ಗಾಂಧಿ ಮೊದಲು ಅಸ್ಸಾಂನ ಸಿಲ್ಚಾರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು, ಅಲ್ಲಿ ಅವರನ್ನು ಅಸ್ಸಾಂ ಮತ್ತು ಮಣಿಪುರದ ಕಾಂಗ್ರೆಸ್ ನಾಯಕರು ಅಭಿನಂದಿಸಿದರು. ಅಲ್ಲಿಂದ ಫುಲೆರ್ಟಲ್‌ಗೆ ತೆರಳಿ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿರುವ ಪ್ರವಾಹ ಪೀಡಿತ ಜನರೊಂದಿಗೆ ಸಂವಾದ ನಡೆಸಿದರು.

ಅಸ್ಸಾಂನಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಾಜ್ಯವು ಭೀಕರ ಪ್ರವಾಹವನ್ನು ಎದುರಿಸುತ್ತಿದ್ದು, ಭೂಕುಸಿತಗಳು ಮತ್ತು ನದಿಗಳು ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರ ಅಸ್ಸಾಂಗೆ ಭೇಟಿ ನೀಡಲಾಯಿತು. 28 ಜಿಲ್ಲೆಗಳಲ್ಲಿ ಸುಮಾರು 22.70 ಲಕ್ಷ ಜನರು ಪ್ರವಾಹದಿಂದ ಸಂತ್ರಸ್ತರಾಗಿದ್ದಾರೆ. ರಾಜ್ಯದಲ್ಲಿ ಈ ವರ್ಷದ ಪ್ರವಾಹ, ಭೂಕುಸಿತ ಮತ್ತು ಚಂಡಮಾರುತಕ್ಕೆ ಒಟ್ಟು 78 ಜನರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಮೇಲೆ ಇಟ್ಟಿರುವ ನಂಬಿಕೆಗೆ ಎಂದಿಗೂ ದ್ರೋಹ ಆಗುವುದಿಲ್ಲ- ಗೃಹ ಸಚಿವ ಡಾ. ಜಿ. ಪರಮೇಶ್ವರ್

ಬಳಿಕ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಿಂದ ಹಾನಿಗೊಳಗಾಗಿದ್ದ ಚುರಚಂದಪುರಕ್ಕೆ ತೆರಳಿ ಅಲ್ಲಿನ ಜನರೊಂದಿಗೆ ಸಂವಾದ ನಡೆಸಿದರು. ಮಹಿಳೆಯರು ಮತ್ತು ಮಕ್ಕಳ ಜೊತೆಗೆ ಮಾತನಾಡಿ, ಅಹವಾಲು ಸ್ವೀಕರಿಸಿದರು. ಇದೇ ವೇಳೆ ಅಸ್ಸಾಂನಲ್ಲಿ ಉಂಟಾದ ಪ್ರವಾಹದ ಬಗ್ಗೆ ಸಂಸತ್‌ನಲ್ಲಿ ಚರ್ಚೆ ನಡೆಸುವಂತೆ ಕಾಂಗ್ರೆಸ್ ನಾಯಕರು ಮನವಿ ಮಾಡಿದರು.

ಈ ನಡುವೆ ರಾಹುಲ್ ಗಾಂಧಿ ಪ್ರವಾಸದ ಬಗ್ಗೆ ಬಿಜೆಪಿ ಕಾಂಗ್ರೆಸ್ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡಿವೆ. ಈ ಬಗ್ಗೆ ಟ್ವಿಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ರಾಹುಲ್ ಗಾಂಧಿ ಮಣಿಪುರಕ್ಕೆ ಭೇಟಿ ನೀಡುವ ಸಮಯದಲ್ಲಿ ಜೈವಿಕ ಪ್ರಧಾನಿ ಮಾಸ್ಕೊಗೆ ತೆರಳುತ್ತಿದ್ದಾರೆ. ಮಣಿಪುರಕ್ಕೆ ರಾಹುಲ್ ಗಾಂಧಿಯವರ ಮೂರನೇ ಭೇಟಿ ಇದಾಗಿದೆ.

ಮಣಿಪುರಕ್ಕೆ ಭೇಟಿ ನೀಡಲು ಜೈವಿಕವಲ್ಲದ ಪ್ರಧಾನಮಂತ್ರಿಗೆ ಸಮಯ ಸಿಕ್ಕಿಲ್ಲ ಅಥವಾ ಒಲವು ತೋರಲಿಲ್ಲ. 2023ರಲ್ಲಿ ಅವರ ಪಕ್ಷದವರಾದ ರಾಜ್ಯದ ಮುಖ್ಯಮಂತ್ರಿಯನ್ನು ಭೇಟಿ ಮಾಡಿಲ್ಲ. ಇದರ ಜೊತೆಗೆ ರಾಜ್ಯದ ಇತರ ರಾಜಕೀಯ ನಾಯಕರನ್ನು, ಶಾಸಕರು ಮತ್ತು ಸಂಸದರನ್ನು ಭೇಟಿ ಮಾಡಿಲ್ಲ ಎಂದು ಕಿಡಿಕಾರಿದರು

ಇದನ್ನೂ ನೋಡಿ: ಕತ್ತಿಯ ಎರಡೂ ಬದಿಯ ಅಲಗುಗಳಾದ ಮೋ-ಶಾ ಕ್ರಿಮಿನಲ್ ಕಾಯ್ದೆಗಳ ಆಳ ಅಗಲ Janashakthi Media

Donate Janashakthi Media

Leave a Reply

Your email address will not be published. Required fields are marked *