ಬಿಜೆಪಿ ಅವರಿಗೆ ಸರ್ಕಾರ ನಡೆಸಲು ತಾಕತ್ತಿಲ್ಲ: ಸಂಸದ ಡಿ ಕೆ ಸುರೇಶ್

ಮಡಿಕೇರಿ: ಬಿಜೆಪಿ ಪಕ್ಷದವರಿಗೆ ಸರ್ಕಾರ ನಡೆಸುವ ತಾಕತ್ತಿಲ್ಲ. ಅವರಿಗೆ ಜನರ ಸಮಸ್ಯೆಗಳ ಬಗ್ಗೆ ಹರಿವಿಲ್ಲ. ಅವರಿಗೆ ಯಾರಿಗೆ ಯಾವ ಖಾತೆ, ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ ಸಿಗುತ್ತದೆ. ಎಲ್ಲಿ ಹೇಗೆ ಹಣ ಮಾಡಬಹುದು ಎನ್ನೋದರಲ್ಲೇ ಕಾಲ ಕಳೆಯುತ್ತಿದ್ದಾರೆ. ಅವರಿಗೆ ಹಣದ ಮೇಲೆ ಕಣ್ಣಿದೆಯೇ ಹೊರತ್ತು ಜನರ ಸಮಸ್ಯೆಗಳ ಮೇಲೆ ಕಣ್ಣಿಲ್ಲ ಎಂದು ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಕಾಂಗ್ರೆಸ್ಸಿನಲ್ಲಿ ಬಣ ರಾಜಕೀಯವಿಲ್ಲ: ಶಾಸಕ ಯತೀಂದ್ರ

ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರಕ್ಕೆ ಕಲ್ಲಿದ್ದಲು ಕೊರತೆ ಆಗಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ‌ ಡಿ.ಕೆ.ಸುರೇಶ್‌ ʻಡಿ.ಕೆ.ಶಿವಕುಮಾರ್ ಅವರು ಇಂಧನ ಸಚಿವರಾಗಿದ್ದಾಗ ಎಲ್ಲಾ ವ್ಯವಸ್ಥೆ ಮಾಡಿದ್ದರು. ರಾಜ್ಯದಲ್ಲಿ ಕೇಂದ್ರದಲ್ಲಿ ಇವರದೇ ಸರ್ಕಾರ ಇರುವಾಗ ಶಾಖೋತ್ಪನ್ನ ವಿದ್ಯುತ್ ಘಟಕಕ್ಕೆ ಎಷ್ಟು ಕಲ್ಲಿದ್ದಲು ಬೇಕು‌ ಮತ್ತು ಎಷ್ಟು ಶೇಖರಣೆ ಮಾಡಬೇಕಾಗಿದ್ದದ್ದು ಎಂಬುದು ಸಚಿವರುಗಳ ಜವಾಬ್ದಾರಿ. ಆದರೆ ರಾಜ್ಯವನ್ನು ಕತ್ತಲೆಯಲ್ಲಿ ಮುಳುಗಿಸುವ ಸ್ಥಿತಿಗೆ ತಲುಪಿಸುತ್ತಿರುವುದು ಬಿಜೆಪಿಯವರ ಆಡಳಿತ ವೈಖರಿಯನ್ನು ತೋರಿಸಲಿದೆ ಎಂದರು.

ಇದು ಅವರ ಆಡಳಿತದ ವೈಫಲ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದ ಡಿ.ಕೆ.ಸುರೇಶ್‌ ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೂರು ಲಕ್ಷಕೋಟಿಯ ಗತಿಶಕ್ತಿ ಯೋಜನೆ ಘೋಷಿಸುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿ ಇದು ಮುಂದಿನ ಮೂವತ್ತು ವರ್ಷಗಳ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆ ಇರಬಹುದು. ಆದರೆ ಅದು ಜನರ ಕೈಗೆ ಏನೂ ಸಿಗುವುದಿಲ್ಲ. 2024 ಚುನಾವಣೆಗೆ ಬೇಕಾಗಿ ಜನರಲ್ಲಿ ಕನಸು ಬಿತ್ತಲು ಹೊರಟಿದ್ದಾರೆ ಎಂದರು.

ಏನೋ ಮಾಡಿಬಿಡುತ್ತೇನೆಂದು ಹೊರಟ ಪ್ರಧಾನಿ ಮೋದಿ ಪ್ರತಿನಿತ್ಯ ಬಿಳಿ ಬಟ್ಟೆಯಿಂದ ಕೆಂಪು ಬಟ್ಟೆ… ಹೀಗೆ ಬಟ್ಟೆಯ ಬಣ್ಣ ಬದಲಾಯಿಸುತ್ತಿರುವುದನ್ನು ಬಿಟ್ಟರೆ ಮತ್ತೇನನ್ನು ಮಾಡಿಲ್ಲವೆಂದು ಆಕಾಶದಲ್ಲಿ ಏನೋ ಒಂದು ಅದ್ಭುತ ಹಾರಿಸುತ್ತಿದ್ದೇವೆ ಎಂದು ತೋರಿಸಿ ಜನರಿಗೆ ಮೋಸ ಮಾಡುವ ವ್ಯವಸ್ಥಿತ ಪಿತೂರಿ ಇದು ಅಷ್ಟೇ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

Donate Janashakthi Media

Leave a Reply

Your email address will not be published. Required fields are marked *