ನವದೆಹಲಿ: ಸುಪ್ರೀಂ ಕೋರ್ಟ್ ಶುಕ್ರವಾರ (ಏಪ್ರಿಲ್ 11, 2025) ಒಂದು ಐತಿಹಾಸಿಕ ತೀರ್ಪೊಂದನ್ನು ಪ್ರಕಟಿಸಿದ್ದು, ರಾಜ್ಯಪಾಲರು ಕಳುಹಿಸುವ ವಿಧೇಯಕಗಳಿಗೆ ಮೂರು ತಿಂಗಳೊಳಗೆ ಅಂಕಿತ ಹಾಕುವಂತೆ ಆದೇಶಿಸಿದೆ. ಈ ತೀರ್ಪು ಸಂವಿಧಾನದ ಆರ್ಟಿಕಲ್ 201ರಡಿಯಲ್ಲಿ ರಾಷ್ಟ್ರಪತಿಗಳ ಅಂಕಿತಕ್ಕೆ ಯಾವುದೇ ಕಾಲಮಿತಿ ಇಲ್ಲದೆ ಇರುವ ಸ್ಥಿತಿಯನ್ನು ಬದಲಾಯಿಸುತ್ತದೆ. ಇದು ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಯನ್ನು ತರುವ ತೀರ್ಪಾಗಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಈ ತೀರ್ಪನ್ನು ಸುಪ್ರೀಂ ಕೋರ್ಟ್ನ ವಿಭಾಗೀಯ ಪೀಠ (ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲ ಮತ್ತು ಆರ್. ಮಹಾದೇವನ್) ಪ್ರಕಟಿಸಿದೆ. ತಮಿಳುನಾಡಿನ ರಾಜ್ಯಪಾಲ್ ಎನ್ ರವಿ ಅವರು ತಮಿಳುನಾಡು ಸರ್ಕಾರ ಕಳುಹಿಸಿರುವ ವಿಧೇಯಕಗಳಿಗೆ ಅಂಕಿತ ಹಾಕದೇ ಇರುವ ಪ್ರಕರಣವನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ರಾಷ್ಟ್ರಪತಿಗಳಿಗೂ ಕಾಲಮಿತಿಯನ್ನು ಪ್ರಕಟಿಸಿದೆ.
ರಾಜ್ಯಪಾಲರು ಕಳುಹಿಸುವ ವಿಧೇಯಕಗಳಿಗೆ ರಾಷ್ಟ್ರಪತಿಗಳು ಅವುಗಳನ್ನು ಸ್ವೀಕರಿಸಿದ ದಿನಾಂಕದಿಂದ 3 ತಿಂಗಳ ಒಳಗೆ ಅಂಕಿತ ಹಾಕಬೇಕು. ಈ ಅವಧಿಗಿಂತ ಹೆಚ್ಚು ತಡವಾದರೆ, ಆ ತಡೆಗೆ ಸೂಕ್ತ ಕಾರಣಗಳನ್ನು ದಾಖಲಿಸಿ ಮತ್ತು ಸಂಬಂಧಿಸಿದ ರಾಜ್ಯಕ್ಕೆ ಮಾಹಿತಿ ನೀಡಬೇಕು ಎಂದಿದೆ.
ಇದರಿಂದಾಗಿ ವಿಧೇಯಕಗಳ ಮೇಲೆ “ಪಾಕೆಟ್ ವೀಟೋ” (ಅನಿಶ್ಚಿತ ತಡೆ) ಅಥವಾ “ಅಬ್ಸಲ್ಯೂಟ್ ವೀಟೋ” (ನಿರಾಕರಣೆ) ಅಧಿಕಾರವನ್ನು ಉಪಯೋಗಿಸುವ ಸಾಧ್ಯತೆಯನ್ನು ಇಲ್ಲವಾಗಿಸುತ್ತದೆ.
ಇದನ್ನೂ ಓದಿ: ಜನಾಂಗೀಯ ಕೊಲೆಗಳ ರಕ್ತದ ಕಲೆಗಳನ್ನು ಹಚ್ಚಿಕೊಂಡ ಮೈಕ್ರೋಸಾಫ್ಟ್ ಎಂಬ ಬಹುರಾಷ್ಟ್ರೀಯ ಕಂಪನಿ
ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯಪಾಲ ರವಿ ವಿರುದ್ಧ ತಮಿಳುನಾಡು ಸರ್ಕಾರ ಪ್ರಕರಣ ದಾಖಲಿಸಿದ್ದೂ, ವಿಧಾನಸಭೆಯಲ್ಲಿ ತಮಿಳುನಾಡು ಸರ್ಕಾರವು ಅಂಗೀಕಾರವಾದ ಮಸೂದೆಗಳನ್ನು ಅಂಗೀಕರಿಸದೆ ತಡೆದಿದೆ ಎಂದು ಆರೋಪಿಸಿದ ನಂತರ ಈ ಪ್ರಕರಣವು ಇತ್ತೀಚೆಗೆ ವಿಚಾರಣೆಗೆ ಬಂದಿತು. ರಾಷ್ಟ್ರಪತಿಗಳಿಗೆ
ಆ ಸಂದರ್ಭದಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ರಾಜ್ಯಪಾಲರ ಕ್ರಮಗಳು ಕಾನೂನುಬಾಹಿರ ಮತ್ತು ಅವರಿಗೆ ಪ್ರತ್ಯೇಕ ಅಧಿಕಾರವಿಲ್ಲ ಎಂದು ತೀರ್ಪು ನೀಡಿತು ಮತ್ತು ರಾಷ್ಟ್ರಪತಿಗಳಿಗೆ ಕಳುಹಿಸಲಾದ ಮಸೂದೆಗಳು ಅಸಿಂಧು ಎಂದು ತೀರ್ಪು ನೀಡಿತು.
ಇದರ ಜೊತೆಗೆ, ತಮಿಳುನಾಡು ಸರ್ಕಾರವು ಆ ಮಸೂದೆಗಳನ್ನು ಅನುಮೋದಿಸಲು ತಮ್ಮ ವಿಶೇಷ ಅಧಿಕಾರವನ್ನು ಬಳಸುವುದಾಗಿ ಘೋಷಿಸಿದ ನಂತರ, ಎಲ್ಲಾ 10 ಮಸೂದೆಗಳು ಇಂದು ಕಾನೂನುಗಳಾಗಿ ಜಾರಿಗೆ ಬಂದಿವೆ ಎಂದು ಘೋಷಿಸಿದೆ.
ಇದನ್ನೂ ನೋಡಿ: ಬ್ಯಾಟಿಂಗ್ ಪಿಚ್‌ನಲ್ಲಿ RR ಸೋತಿದ್ದ್ಯಾಕೆ? DC ಓಟಕ್ಕೆ ಬ್ರೇಕ್ ಹಾಕುತ್ತಾ RCB! #ipl2025 #RCB #DC