ವಿಜಯಪುರ: ಬಸ್ ನಿಲುಗಡೆಗೆ ಇರುವ ಸ್ಥಳದಲ್ಲಿ ಬೈಕ್‌ಗಳನ್ನು ನಿಲ್ಲಿಸುತ್ತಿರುವುದರಿಂದ ಬಸ್ ಚಾಲಕರು ಪರದಾಡುತ್ತಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬಸ್‌ಗಳ ನಿಲುಗಡೆಗೆ ಜಾಗೆವೇ ಇಲ್ಲದಂತಹ ಪರಿಸ್ಥಿತಿ ನಿತ್ಯವೂ ಕಂಡು ಬರುತ್ತಿದ್ದು, ಇದೇನು ಬಸ್‌ಗಳ ನಿಲುಗಡೆಗೆ ನಿರ್ಮಿಸಿರುವ ಸ್ಥಳವೋ ಅಥವಾ ಬೈಕ್‌ಗಳ ನಿಲುಗಡೆಗಾಗಿ ಮಾಡಿದ ಜಾಗವೋ ಎಂಬುದು ಪ್ರಯಾಣಿಕರಿಗೆ ಗೊಂದಲ ಉಂಟು ಮಾಡಿದೆ.
ಬಸ್ ನಿಲ್ದಾಣದ ಅಂಕಣ ಸಂಖ್ಯೆ 9 ರಿಂದ 12ರ ವರೆಗೆ ಬಸ್ ನಿಲುಗಡೆ ಆಗುವ ಬದಲು ಅಲ್ಲಿ ಬೈಕ್‌ಗಳ ನಿಲುಗಡೆ ಮಾಡಲಾಗಿರುತ್ತದೆ. ಬೈಕ್‌ಗಳನ್ನು ನಿಲ್ಲಿಸುತ್ತಿರುವ ಕಾರಣ ಸಾಕಷ್ಟು ತೊಂದರೆಯೂ ಪ್ರಯಾಣಿಕರಿಗೆ ಆಗುತ್ತಿದೆ.
ಇದನ್ನೂ ಓದಿ: ಸಿಪಿಐ(ಎಂ) ಸದಸ್ಯೆ ಶ್ರೀಮತಿ ಟೀಚರ್ ಗೆ ಕ್ಷಮೆಯಾಚಿಸಿದ ಬಿಜೆಪಿ ನಾಯಕ ಬಿ ಗೋಪಾಲಕೃಷ್ಣನ್
ವಿಜಯಪುರ, ಸೋಲಾಪುರ, ಇಚಲಕರಂಜಿ ಸೇರಿದಂತೆ ದೂರದ ಊರುಗಳಿಗೆ ತೆರಳುವ ಬಸ್‌ಗಳೆಲ್ಲ ಇದೇ ಫ್ಲಾಟ್‌ಫಾರಂನಲ್ಲಿ ನಿಲುಗಡೆ ಆಗಬೇಕು. ಆದರೆ ವಿಜಯಪುರ, ಬಸವನ ಬಾಗೇವಾಡಿ ಮಾರ್ಗದಲ್ಲಿ ಹೋಗುವ ಬಸ್‌ಗಳನ್ನು ಫ್ಲಾಟ್‌ಫಾರಂ ಬಿಟ್ಟು ಬೇರೆ ಕಡೆಗೆ ನಿಲ್ಲಿಸಲಾಗುತ್ತಿದ್ದು ಪ್ರಯಾಣಿಕರು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ.
ಬೇರೆ ಊರುಗಳಿಂದ ಮುದ್ದೇಬಿಹಾಳ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು, ವಿಜಯಪುರ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾದ ಪ್ರಯಾಣಿಕರು ತಾವು ಹೋಗುವ ಬಸ್ ಎಲ್ಲಿ ನಿಲುಗಡೆ ಆಗುತ್ತಿವೆ ಎಂಬ ಗೊಂದಲಕ್ಕೆ ಒಳಗಾಗುವಂತಾಗಿದೆ.
ಇಲ್ಲಿರುವ ಸಾರಿಗೆ ನಿಯಂತ್ರಕರು, ಸಾರಿಗೆ ಸಂಸ್ಥೆಯ ಸಿಬ್ಬಂದಿ, ಚಾಲಕರು, ನಿರ್ವಾಹಕರು ನಿಲ್ದಾಣದ ಬಸ್ ನಿಲುಗಡೆ ಆಗುವ ಅಂಕಣಗಳಲ್ಲಿ ಬೈಕ್‌ಗಳನ್ನು ನಿಲುಗಡೆ ಮಾಡಬಾರದು ಎಂದು ಬೈಕ್ ಸವಾರರಿಗೆ ಕಟ್ಟುನಿಟ್ಟಿನ ತಿಳಿವಳಿಕೆ ಹೇಳಬೇಕಿದೆ ಎಂಬುದು ಪ್ರಯಾಣಿಕರು ಒತ್ತಾಯವಾಗಿದೆ.
ಬೈಕುಗಳ ನಿಲುಗಡೆಗೂ ನೆರಳಿನ ವ್ಯವಸ್ಥೆಯನ್ನು ಹುಡುಕಾಡುವ ಬೈಕ್ ಸವಾರರು ನೇರವಾಗಿ ಖಾಲಿ ಇರುವ ಫ್ಲಾಟಫಾರ್‌ಂನಲ್ಲಿ ಬೈಕ್‌ಗಳನ್ನು ನಿಲ್ಲಿಸುತ್ತಿದ್ದಾರೆ.
ಮೊದಲು ಸಾರಿಗೆ ಘಟಕದ ವಿಜಯಪುರ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳನ್ನು ಇಲ್ಲಿ ನಿಲುಗಡೆ ಮಾಡಿಸಿದರೆ ಈ ತೊಂದರೆಗೆ ವಿರಾಮ ಬೀಳಬಹುದು ಎಂಬುದು ಪ್ರಜ್ಞಾವಂತರ ಅಭಿಮತ.
ಇದನ್ನೂ ನೋಡಿ: ರಂಗಭೂಮಿ ದಿನ| ಜಲಗಾರ ನಾಟಕ – ರಂಗ ವಿನ್ಯಾಸ ನಿರ್ದೇಶನ – ಮೈಕೋ ಶಿವಶಂಕರ್ Janashakthi Media