ಬಿಹಾರ: ಮೊದಲ ಹಂತದ ಚುನಾವಣೆಯಲ್ಲಿ ಶೇ.53.54 ಮತ ದಾಖಲು

 – 

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಪ್ರಸ್ತುತ ಇಡೀ ದೇಶದ ಗಮನ ಸೆಳೆದಿದೆ. ರಾಜ್ಯಕ್ಕೆ ಮೂರು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಬುಧವಾರ ಮೊದಲ ಹಂತದ ಮತನದಾನ ನಡೆದಿದೆ. ಆದರೆ, ಕೊರೋನಾ ವೈರಸ್ ಭೀತಿಯ ಕಾರಣದಿಂದಾಗಿ ಬಾರಿ ಅಧಿಕ ಸಂಖ್ಯೆಯಲ್ಲಿ ಜನ ಮತಗಟ್ಟೆಗಳ ಕಡೆಗೆ ಬರುವುದು ಅನುಮಾನ ಎಂದು ಹೇಳಲಾಗುತ್ತಿತ್ತು. ಆದರೆ, ಎಲ್ಲಾ ಊಹೆಗಳೂ ಇಂದು ಸುಳ್ಳಾಗಿವೆ ಏಕೆಂದರೆ ಭಾರಿಯ ಬಿಹಾರ ಚುನಾವಣೆಯಲ್ಲಿ ಕೊರೋನಾ ಭೀತಿ ಅಷ್ಟಾಗಿ ಪರಿಣಾಮ ಕಾರಿಯಾಗಿಲ್ಲ ಎನ್ನುತ್ತಿವೆ ಅಂಕಿಅಂಶಗಳು. ಏಕೆಂದರೆ ಅಂಕಿಅಂಶಗಳ ಪ್ರಕಾರ ನಿನ್ನೆ ಮತದಾನ ನಡೆದಿದ್ದ ಅದೇ ಕ್ಷೇತ್ರಗಳಲ್ಲಿ 2015 ಚುನಾವಣೆಯಲ್ಲಿ ಶೇ 54.75 ರಷ್ಟು ಮತದಾನವಾಗಿತ್ತು. ಆದರೆ, ಬಾರಿ ಶೇ. 53.54 ರಷ್ಟು ಮತದಾನವಾಗಿದೆ. ಹೀಗಾಗಿ ಕೊರೋನಾ ಬಿಹಾರದ ಚುನಾವಣೆ ಮೇಲೆ ಪರಿಣಾಮ ಬೀರದು ಎಂದು ವಿಶ್ಲೇಷಿಸಲಾಗುತ್ತಿದೆ.

COVID-19 ಸಾಂಕ್ರಾಮಿಕ ರೋಗದ ಮಧ್ಯೆಯೂ ದೇಶದಲ್ಲಿ ನಡೆಯುತ್ತಿರುವ ಮೊದಲ ಪ್ರಮುಖ ಚುನಾವಣೆ ಇದಾಗಿದೆ. ಚುನಾವಣಾ ಆಯೋಗವು 16 ಜಿಲ್ಲೆಗಳ 71 ಕ್ಷೇತ್ರಗಳಿಗೆ ಬುಧವಾರ ಮೊದಲ ಹಂತದ ಚುನಾವಣೆ ನಡೆಸಿತ್ತು. ಇದೀಗ ಮೊದಲ ಹಂತದ ಮತದಾನದ ಅಂಕಿಅಂಶಗಳನ್ನು ಚುನಾವಣಾ ಆಯೋಗ ನೀಡಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಶೇಕಡಾವಾರು ಮತದಾನ ಮತ್ತಷ್ಟು ಹೆಚ್ಚಾಗಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಮೊದಲ ಹಂತದ ಮತದಾನ ನಡೆದಿರುವ ಕ್ಷೇತ್ರಗಳಲ್ಲಿ 2015 ರಲ್ಲಿ ಶೇ. 54.75 ರಷ್ಟು ಮತಗಳು ಚಲಾವಣೆಯಾಗಿದ್ದರೆ, ಈ ವರ್ಷ ಶೇ.53.54 ರಷ್ಟು ಮತದಾನವಾಗಿದೆ (ತಾತ್ಕಾಲಿಕ ಅಂಕಿ ಅಂಶಗಳು) ಎಂದು ಚುನಾವಣಾ ಆಯೋಗ ತಿಳಿಸಿದೆ.

ತಾತ್ಕಾಲಿಕ ಮಾಹಿತಿಯ ಪ್ರಕಾರ, ಬಂಕಾ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನದವಾಗಿದೆ ಎಂದು ಹೇಳಲಾಗುತ್ತಿದೆ. ಈ ಜಿಲ್ಲೆಯಲ್ಲಿ ಕಳೆದ ಬಾರಿ ಶೇ.59.57 ರಷ್ಟು ಮತದಾನವಾಗಿತ್ತು. ಆದರೆ, ಈ ಬಾರಿ ಶೇ 56.43 ರಷ್ಟು ಮತಗಳು ದಾಖಲಾಗಿದೆ. ಮುಂಗರ್ ಜಿಲ್ಲೆಯಲ್ಲಿ ಕಳೆದ ಬಾರಿ ಶೇ.47.36 ರಷ್ಟು ಮತದಾನವಾಗಿತ್ತು. ಆದರೆ, ಈ ಬಾರಿ ಶೇ.52.24 ರಷ್ಟು ಮತದಾನವಾಗಿದೆ.

71 ಕ್ಷೇತ್ರಗಳ ಪೈಕಿ ನಕ್ಸಲ್ ಪೀಡಿತ ಕೆಲ ಪ್ರದೇಶಗಳಲ್ಲಿ ಮತದಾನದ ಸಮಯವನ್ನು ಕಡಿತಗೊಳಿಸಲಾಗಿತ್ತು. ಚೈನ್ಪುರ್, ನಬಿನಗರ, ಕುತುಂಬಾ ಮತ್ತು ರಫಿಗಂಜ್​ನ ನಾಲ್ಕು ನಕ್ಸಲ್ ಪೀಡಿತ ಕ್ಷೇತ್ರಗಳಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಮತದಾನ ನಡೆಸಲಾಯಿತು ಮತ್ತು ಇತರ ಐದು ನಕ್ಸಲ್ ಪೀಡಿತ ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ.
 
ಉಳಿದ 26 ನಕ್ಸಲ್ ಪೀಡಿತ ಕ್ಷೇತ್ರಗಳಲ್ಲಿ ಸಂಜೆ 4 ಗಂಟೆಯವರೆಗೆ ಮತದಾನ ನಡೆದಿದೆ. ಚುನಾವಣಾ ಘೋಷಣೆಯ ನಂತರ, ಮೊದಲ ಹಂತದಲ್ಲಿ ಮತದಾನ ನಡೆದ ಪ್ರದೇಶಗಳಿಂದ 534 ಪಿಸ್ತೂಲು, 193 ಕಂಟ್ರಿ ಗನ್​ಗಳು ಮತ್ತು ಮೂರು ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಮೀಕ್ಷಾ ಸಮಿತಿ ತಿಳಿಸಿದೆ.

ಮತದಾನದ ವೇಳೆ ನಡೆಯಬಹುದಾದ ಅಹಿತಕರ ಘಟನೆಗಳನ್ನು ತಡೆಯುವ ಸಲುವಾಗಿ ಚುನಾವಣೆಗೂ ಮುನ್ನವೇ ಸುಮಾರು 159 ಜನರನ್ನು ವಶಕ್ಕೆ ಪಡೆಯಲಾಗಿದೆ ಮತ್ತು ಮತ ಕೇಂದ್ರಗಳಲ್ಲಿ 1,708 ವಿಡಿಯೋ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು ಎಂದು ಸಮೀಕ್ಷಾ ವರದಿ ತಿಳಿಸಿದೆ.

 

Donate Janashakthi Media

Leave a Reply

Your email address will not be published. Required fields are marked *