ಹಿಂದಿ ರಾಜ್ಯಗಳಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ 2 : ಸೀಟು ಉಳಿಸಿಕೊಂಡ 5 ರಾಜ್ಯಗಳು

ವಸಂತರಾಜ ಎನ್‌ಕೆ
ಬಿಜೆಪಿ ಮತ್ತು ಅದರ ನಾಯಕತ್ವದ ಎನ್.ಡಿ.ಎ ಕೂಟಕ್ಕೆ ಹಿಂದಿ ರಾಜ್ಯಗಳಲ್ಲಿ ಭಾರೀ ಹಿನ್ನಡೆಯಾಗಿರುವುದು 2024ರ 18ನೆಯ ಲೋಕಸಭಾ ಚುನಾವಣೆಗಳ ಅತಿ ದೊಡ್ಡ ಬೆಳವಣಿಗೆ ಎನ್ನಬಹುದು. ಹಿಂದಿ ರಾಜ್ಯಗಳೆಂದು ಕರೆಯಲಾಗುವ ಹತ್ತು ರಾಜ್ಯಗಳಲ್ಲಿ ಐದು ದೊಡ್ಡ ರಾಜ್ಯಗಳಲ್ಲಿ ಎನ್.ಡಿ.ಎ ಕೂಟದ ಸೀಟು ಮತ್ತು ಮತಗಳಿಕೆ ಎರಡರಲ್ಲೂ ಗಮನಾರ್ಹ ಇಳಿಕೆ  ಕಂಡು ಬಂದಿದೆ. ಆ 5 ರಾಜ್ಯಗಳೆಂದರೆ – ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಹರಿಯಾಣ, ಜಾರ್ಖಂಡ. ಮೂರು ರಾಜ್ಯಗಳಲ್ಲಿ ಎನ್.ಡಿ.ಎ ಕೂಟದ ಸೀಟು ಅಷ್ಟೇಯಿದೆ, ಆದರೆ ಮತಗಳಿಕೆಯಲ್ಲಿ ಇಳಿಕೆಯಾಗಿದೆ. ಆ 3 ರಾಜ್ಯಗಳೆಂದರೆ – ದೆಹಲಿ, ಹಿಮಾಚಲ, ಉತ್ತರಾಖಂಡ.  ಎನ್.ಡಿ.ಎ ಕೂಟಕ್ಕೆ ಸೀಟು ಮತ್ತು ಮತಗಳಿಕೆ ಎರಡರಲ್ಲೂ ಅಲ್ಪ ಏರಿಕೆಯಾಗಿರುವುದುಎರಡು ರಾಜ್ಯಗಳಲ್ಲಿ ಮಾತ್ರ -ಛತ್ತಿಸಗಢ, ಮಧ್ಯಪ್ರದೇಶ.

ಇದಕ್ಕೆ 2019ರ ಚುನಾವಣೆಗಳಲ್ಲಿ ಬಿಜೆಪಿ/ಎನ್.ಡಿ.ಎ ಕೂಟ ಗರಿಷ್ಠ ಮಟ್ಟ ಮುಟ್ಟಿದ್ದು ಒಂದು ಕಾರಣ ನಿಜ. ಆದರೆ ಜನತೆ ಬಿಜೆಪಿ/ಎನ್.ಡಿ.ಎ ಕೂಟ ಮತ್ತು ಅದರ ನಾಯಕ ಮೋದಿಯ ಸಾಧನೆಯನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ ಮತ್ತು ಗಂಭೀರ ಎಚ್ಚರಿಕೆ ಕೊಟ್ಟಿದ್ದಾರೆ ಎನ್ನುವುದು ಅಷ್ಟೇ ನಿಜ.

ಇದನ್ನೂ ಓದಿ: ರಾಮೋಜಿ ಫಿಲ್ಮ್ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಹಿಂದಿ ರಾಜ್ಯಗಳಲ್ಲಿ ಒಟ್ಟು 225 ಸೀಟುಗಳು ಇದ್ದು, ಅದರಲ್ಲಿ ಎನ್.ಡಿ.ಎ ಕೂಟ 2019ರಲ್ಲಿ ಗಳಿಸಿದ್ದ 63 ಸೀಟುಗಳನ್ನು ಕಳೆದುಕೊಂಡು 149 ಸೀಟುಗಳಿಗೆ ಕುಸಿದಿದೆ. ಅದರಲ್ಲಿ ಅರ್ಧದಷ್ಟು (28) ಸೀಟು ಕಳೆದುಕೊಂಡದ್ದು ಉತ್ತರ ಪ್ರದೇಶದಲ್ಲಿ. ಇಂಡಿಯಾ ಕೂಟ 74 ಸೀಟುಗಳನ್ನು ಗಳಿಸಿದ್ದು 61 ಹೆಚ್ಚು ಸೀಟುಗಳನ್ನು ಗಳಿಸಿದೆ. ಎನ್.ಡಿ.ಎ ಕೂಟ ಈ 10 ಹಿಂದಿ ರಾಜ್ಯಗಳಲ್ಲಿ ಶೇ.2.3 ಮತ ಕಳೆದುಕೊಂಡು ಶೇ.48.9 ಮತ ಗಳಿಸಿದೆ. ಇಂಡಿಯಾ ಕೂಟ ಶೇ.11.2 ಎಷ್ಟು ಮತಗಳಿಕೆ ಹೆಚ್ಚಿಸಿಕೊಂಡು ಶೇ. 41.0 ಮತ ಗಳಿಸಿದೆ. ಇತರರು ಶೇ.9 ಮತ ಕಳೆದುಕೊಂಡು ಶೇ,.10 ಮತ ಗಳಿಸಿದ್ದಾರೆ.

ಹಿಂದಿ ರಾಜ್ಯಗಳ ಸೀಟು-ಮತಪ್ರಮಾಣ ಗಳಿಕೆ

 

ಸೀಟು ಉಳಿಸಿಕೊಂಡ ಮತ ಕಳೆದುಕೊಂಡ 3 ರಾಜ್ಯಗಳು

ದೆಹಲಿ

ದೆಹಲಿಯ ಚುನಾವಣೆಗಳಲ್ಲಿ ಹಿಂದಿನಂತೆ ಬಿಜೆಪಿ ‘ಕ್ಲೀನ್ ಸ್ವೀಪ್’ ಮಾಡಿದರೂ ಅದರ ಮತಗಳಿಕೆಯ ಪ್ರಮಾಣದಲ್ಲಿ ಕಡಿಮೆಯಾಯಿತು ಎಂಬುದನ್ನು ಗಮನಿಸಬೇಕು. ದೆಹಲಿ ಯಲ್ಲಿ ರಾಜ್ಯ/ಸ್ಥಳೀಯ ಚುನಾವಣೆಗಳಲ್ಲಿ ಎಎಪಿ ಭಾರೀ ಬಹುಮತ ಗಳಿಸಿದರೂ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಸೇರಿದಂತೆ ಶೂನ್ಯ ಸಂಪಾದನೆಯೇ ಅದರ ಪಾಲಿಗೆ ಬಂದಿತ್ತು. ಇದುವರೆಗೆ ಕಾಂಗ್ರೆಸ್ ಮತ್ತು ಎಎಪಿ ಎರಡೂ ಬಿಜೆಪಿ ವಿರುದ್ಧ ಸೆಣಸುತ್ತಿದ್ದು ಅದು ಬಿಜೆಪಿ ‘ಕ್ಲೀನ್ ಸ್ವೀಪ್’ ಗೆ ಕಾರಣವಾಗಿರಬಹುದು ಎಂದು ಹೇಳಲಾಗಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಮತ್ತು ಎಎಪಿ ತೀವ್ರ ಚೌಕಾಶಿಯ ನಂತರ 3 ಮತ್ತು 4 ಸೀಟುಗಳನ್ನು ಹಂಚಿಕೊಂಡು ಹೊಂದಾಣಿಕೆ ಮಾಡಿಕೊಂಡಿದ್ದವು. ಚುನಾವಣಾ ಪ್ರಚಾರದಲ್ಲೂ ತಳಮಟ್ಟದಲ್ಲಿ ಹೋಮದಾಣಿಕೆ ಚೆನ್ನಾಗಿಯೇ ಇತ್ತು ಎಂದು ಹೇಳಳಾಗಿದೆ. ಆದರೂ ಬಿಜೆಪಿ ಕಡಿಮೆ ಮತಗಳೊಂದಿಗೆ ಮತ್ತೆ ಕ್ಲೀನ್ ಸ್ವೀಪ್ ಮಾಡಿದೆ.

ದೆಹಲಿ – ಸೀಟು-ಮತಪ್ರಮಾಣ

ಚುನಾವಣೆಗೆ ಮೊದಲೇ ಅಬಕಾರಿ ನೀತಿ ಹಗರಣದ ಹುಸಿ ಆರೋಪದ ಮೇಲೆ (ಸಚಿವರೂ ಸೇರಿದಂತೆ) ಹಲವು ಹಿರಿಯ ಎಎಪಿ ನಾಯಕರನ್ನು ಬಂಧಿಸಲಾಗಿತ್ತು. ಯಾವುದೇ ಪುರಾವೆಯಿಲ್ಲದೆ ಜನತೆಯಲ್ಲಿ ಅವರ ವಿರುದ್ಧ ‘ಭ್ರಷ್ಟರು’ ಎಂಬ ತಪ್ಪು ಅಭಿಪ್ರಾಯ ರೂಪಿಸಲಾಯಿತು. ಹಲವು ಶಾಸಕರ ಸಂಸದರ ಪಕ್ಷಾಂತರಕ್ಕೆ ಆಮಿಷ.ಬೆದರಿಕೆ ಒಡ್ಡಲಾಗಿತ್ತು.  ಪಕ್ಷದ ಅಕೌಂಟ್  ಸ್ಥಗಿತಗೊಳಿಸಲಾಗಿತ್ತು. ಪಕ್ಷದ ಕಚೇರಿಗೆ ಹೋಗಲು ನಿರ್ಬಂಧಗಳನ್ನು ಹಾಕಲಾಗಿತ್ತು. ಚುನಾವಣೆ ಘೋಷಣೆಯಾದ ಮೇಲೆ ಮುಖ್ಯಮಂತ್ರಿ ಕೇಜ್ರೀವಾಲ್ ಅವರನ್ನು ಬಂಧಿಸಲಾಯಿತು.  ಇವೆಲ್ಲ ಎಎಪಿಯ ಚುನಾವಣೆಯ ತಯಾರಿಗೆ, ಪ್ರಚಾರಕ್ಕೆ ತೀವ್ರ ಅಡೆತಡೆಗಳನ್ನು ತಂದಿತು. ಮುಂದೆ ಪ್ರಮುಖ ನಾಯಕರಾದ ಕೇಜ್ರಿವಾಲ್ ಮತ್ತು ಸಂಜಯ ಸಿಂಗ್  ಗೆ ಸುಪ್ರೀಂ ಕೋರ್ಟ್ ಬೈಲ್ ಕೊಟ್ಟರೂ  ಎಎಪಿ ಗೆ ‘ಸಮನಾದ ರಾಜಕೀಯ ಅವಕಾಶ’ ನಿರಾಕರಿಸಲಾಯಿತು ಎಂದೇ ಹೇಳಬೇಕು. ಅಷ್ಟರ ಮಟ್ಟಿಗೆ ಈ ರಾಜ್ಯದ ಫಲಿತಾಂಶ ಬಿಜೆಪಿ ಪರವಾಗಿ ವಿರೂಪಗೊಂಡದ್ದು ಎಂದೇ ಹೇಳಬೇಕಾಗುತ್ತದೆ.  ಆದರೂ ಬಿಜೆಪಿಯ ಮತಪ್ರಮಾಣದಲ್ಲಿ ಇಳಿಕೆಯಾಯಿತು ಎಂದು ಗಮನಿಸಬೇಕು.

ಹಿಮಾಚಲ

ಹಿಮಾಚಲದ ಚುನಾವಣೆಗಳಲ್ಲಿ ಹಿಂದಿನಂತೆ ಬಿಜೆಪಿ ‘ಕ್ಲೀನ್ ಸ್ವೀಪ್’ ಮಾಡಿದರೂ ಅದರ ಮತಗಳಿಕೆಯ ಪ್ರಮಾಣದಲ್ಲಿ ಭಾರೀ (12.7%ರಷ್ಟು) ಕಡಿತವಾಗಿದೆ  ಎಂಬುದನ್ನು ಗಮನಿಸಬೇಕು. ಹಿಮಾಚಲದ ವಿಧಾನಸಬಾ ಚುನಾವಣೆಗಳಲ್ಲಿ ಕಾಂಗ್ರೆಸ್ ಬಹುಮತ ಗಳಿಸಿದ್ದರೂ ಇತ್ತೀಚೆಗೆ ‘ಆಪರೇಶನ ಕಮಲ’ ದ ಪ್ರಯತ್ನ ನಡೆದಿದೆ. ಕಾಂಗ್ರೆಸ್ ಬಣ ಸಂಘರ್ಷಗಳ ಪ್ರಯೋಜನ ಪಡೆದು ಬಿಜೆಪಿ ರಾಜಕಿಐ ಅಸ್ಥಿರತೆ ತಂದಿದೆ. ಈ ಹಿನ್ನೆಲೆಯಲ್ಲಿ ಈ ಫಲಿತಾಂಶ ಬಂದಿದೆ. ಆದರೂ ಹಿಂದಿಗಿಂತ ಬಿಜೆಪಿ ಭಾರಿ ಪ್ರಮಾಣಧಲ್ಲಿ (ಶೇ.12.7%) ಮತಗಳಿಕೆ ಕಳೆದುಕೊಂಡಿದೆ ಎಂದು ಗಮನಿಸಬೇಕು.  ಕಾಂಗ್ರೆಸ್ ಮತಗಳಿಕೆಯನ್ನು ಶೇ.14.2ರಷ್ಟು ಏರಿಸಿಕೊಂಡಿದೆ.

ಹಿಮಾಚಲ – ಸೀಟು-ಮತಪ್ರಮಾಣ

 ಉತ್ತರಾಖಂಡ. 

ಉತ್ತರಾಖಂಡದ ಚುನಾವಣೆಗಳಲ್ಲಿ ಹಿಂದಿನಂತೆ ಬಿಜೆಪಿ ‘ಕ್ಲೀನ್ ಸ್ವೀಪ್’ ಮಾಡಿದರೂ ಅದರ ಮತಗಳಿಕೆ ಬಾರೀ ಪ್ರಮಾಣದಲ್ಲಿ (12.7ರಷ್ಟು) ಕಡಿತವಾಗಿದೆ  ಎಂಬುದನ್ನು ಗಮನಿಸಬೇಕು. ಉತ್ತರಾಖಂಡದಲ್ಲಿ ಬಿಜೆಪಿ ರಾಜ್ಯ ಸರಕಾರವಿದೆ.  ಕಾಂಗ್ರೆಸ್ ಮತಗಳಿಕೆಯನ್ನು ಭಾರೀ ಪ್ರಮಾಣದಲ್ಲಿ (ಶೇ.14.4ರಷ್ಟು) ಏರಿಸಿಕೊಂಡಿದೆ.

ಉತ್ತರಾಖಂಡ- ಸೀಟು-ಮತಪ್ರಮಾಣ

ಸೀಟು ಮತ ಬೆಳೆಸಿಕೊಂಡ  2 ರಾಜ್ಯಗಳು

ಛತ್ತಿಸಗಢ

ಛತ್ತಿಸಗಡ ದಲ್ಲಿ ಬಿಜೆಪಿ ಈ ಚುನಾವಣೆಯಲ್ಲಿ ಸೀಟುಗಳಿಕೆಯನ್ನೂ (9ರಿಂದ 10ಕ್ಕೆ) ಮತಗಳಿಕೆ ಪ್ರಮಾಣವನ್ನೂ (ಶೇ/1.6ರಷ್ಟು) ಏರಿಸಿಕೊಂಡಿದೆ. ಇತ್ತೀಚಿಗಿನ ವಿಧಾನಸಭೆಯ ಚುನಾವಣೆಯಲ್ಲೂ ಕಾಂಗ್ರೆಸ್ ಸೋತಿದ್ದು2 ಸೀಟುಗಳಿಂದ 1 ಸೀಟಿಗೆ ಇಳಿದಿದೆ. ಮೃದು ಹಿಂದುತ್ವ ಧೋರಣೆ ಅನುಸರಿಸಿದ್ದರಿಂದ ಬಿಜೆಪಿ ಗೆ ಸವಾಲು ಹಾಕಲು ಕಾಂಗ್ರೆಸ್ ಗೆ ಸಾಧ್ಯವಾಗಿಲ್ಲ.

ಛತ್ತಿಸಗಢ – ಸೀಟು-ಮತಪ್ರಮಾಣ

 ಮಧ್ಯಪ್ರದೇಶ

ಮಧ್ಯಪ್ರದೇಶದಲ್ಲಿ ಸಹ ಬಿಜೆಪಿ ಈ ಚುನಾವಣೆಯಲ್ಲಿ ಸೀಟುಗಳಿಕೆಯನ್ನೂ (28ರಿಂದ 29ಕ್ಕೆ) ಮತಗಳಿಕೆ ಪ್ರಮಾಣವನ್ನೂ ಸ್ವಲ್ಪವಾದರೂ (ಶೇ.1.2ರಷ್ಟು) ಏರಿಸಿಕೊಂಡಿದೆ. ಇತ್ತೀಚಿಗಿನ ವಿಧಾನಸಭೆಯ ಚುನಾವಣೆಯಲ್ಲೂ ಕಾಂಗ್ರೆಸ್ ಸೋತಿದ್ದುಇದ್ದ (ಕಮಲನಾಥ್ ಅವರ ಚಿಂದವಾರ) 1  ಸೀಟನ್ನೂ ಕಳೆದುಕೊಂಡಿದೆ. ಮೃದು ಹಿಂದುತ್ವ ಧೋರಣೆ ಅನುಸರಿಸಿದ್ದರಿಂದ ಬಿಜೆಪಿ ಗೆ ಸವಾಲು ಹಾಕಲು ಕಾಂಗ್ರೆಸ್ ಗೆ ಸಾಧ್ಯವಾಗಿಲ್ಲ.  ಕಮಲನಾಥ್ ಅವರ ದುರ್ಬಲ ನಾಯಕತ್ವ, ಬಣಸಂಘರ್ಷ ಹಾಗೂ ವಿಧಾನಸಭೆ ಸೋಲಿನಿಂದ  ಕಾಂಗ್ರೆಸ್ ಇನ್ನೂ ಚೇತರಿಸಿಕೊಂಡಿಲ್ಲ. ಇತರರಲ್ಲಿ ಬಿ.ಎಸ್.ಪಿ ಮತ್ತಿತರ ಸಣ್ಣ ಪಕ್ಷಗಳು ಪಕ್ಷೇತರರು ಇದ್ದಾರೆ. ಅವರೂ ಮತಪ್ರಮಾಣ ೇರಿಸಿಕೊಂಡಿದ್ದು, ಕಾಂಗ್ರೆಸ್ ಶೇ.2.1 ಮತ ಕಳೆದುಕೊಂಡಿದೆ.

ಛತ್ತಿಸಗಢ – ಸೀಟು-ಮತಪ್ರಮಾಣ

ಇದನ್ನೂ ನೋಡಿ: ಚುನಾವಣಾ ಫಲಿತಾಂಶ : ಬಿಜೆಪಿಯ ಗರ್ವಭಂಗವೇ? ಕಾಂಗ್ರೆಸ್ ಗೆ ಶಾಪ ವಿಮೋಚನೆಯೇ? Janashakthi Media

Donate Janashakthi Media

Leave a Reply

Your email address will not be published. Required fields are marked *