ದೊಡ್ಡವರೋ ಸಣ್ಣವರೋ !

ದೊಡ್ಡವರೋ ಸಣ್ಣವರೋ !
– ಜ್ಯೋತಿ ಎ
ಇಡೀ ಲೋಕಕೇ
ತಿಳಿದವರೆನಿಸಿದವರು
ದೊಡ್ಡವರೆನಿಸಿಕೊಂಡವರು
ಮೆರೆವ ಕಡುಸಣ್ಣತನ
ಕಠೋರ ಹೃದಯಿಗಳಿಗೆ
ಚುಚ್ಚುವುದಿಲ್ಲವೋ ಅಣ್ಣ

ಕೋಮಲ ಮನಗಳ
ಆಳದಲ್ಲದು ಬೇರುಬಿಟ್ಟು
ನೋವಿನ ಕೊಂಬೆಗಳಾಗಿ
ಬೃಹದಾಕಾರವಾಗಿ
ಬೆಳೆವಾಗಲೂ ತಡೆಯುವ
ಮಾನವರಾರೂ ಇಲ್ಲಿಲ್ಲವಣ್ಣ

ಇದನ್ನೂ ಓದಿ: ಕೊಟ್ಟೂರು | ಪುಸ್ತಕ ಗೂಡು ಓದುಗರನ್ನು ಸೆಳೆಯುವಲ್ಲಿ ಯಶಸ್ವಿ

ಈ ಮುಸುಕಿನ ವಿಷಮಯ
ದೊಡ್ಡತನ ಬೇಕಾದರೂ ಏಕಣ್ಣ?
ವಯಸ್ಸಿನಲಿ ಸಣ್ಣವರಾದರೂ
ಮುಗುದ ಮಕ್ಕಳ ದೊಡ್ಡತನ
ನಿಷ್ಕಲ್ಮಶವಾದ ಕಂಗಳು
ನನಸಾಗಲಿ ಈ ಮನಸುಗಳ ಸವಿಕನಸುಗಳು

ಇದನ್ನೂ ನೋಡಿ: “ದುಡಿಯುವ ವರ್ಗದ ಆಕ್ರೋಶ: ಫೆಬ್ರವರಿ 12ಕ್ಕೆ ಸಾರ್ವತ್ರಿಕ ಮುಷ್ಕರ ಘೋಷಣೆ” Janashakthi Media

Donate Janashakthi Media

Leave a Reply

Your email address will not be published. Required fields are marked *