ಮುಂಬೈ: 2018ರ ಎಲ್ಗರ್ ಪರಿಷತ್ – ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಕ್ರಾಂತಿಗಾರಿ ಕವಿ ವರವರ ರಾವ್ ಅವರ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ಹೈದರಾಬಾದ್‌ಗೆ ತೆರಳಲು ಮುಂಬೈನ ವಿಶೇಷ ಎನ್‌ಐಎ ನ್ಯಾಯಾಲಯವು ಬುಧವಾರ ಅನುಮತಿ ನೀಡಿದೆ. ನ್ಯಾಯಾಧೀಶ ರಾಜೇಶ್ ಕಟಾರಿಯಾ ಅವರು ವರವರ ರಾವ್ ಅವರಿಗೆ ಎಡಗಣ್ಣಿನ ಶಸ್ತ್ರಚಿಕಿತ್ಸೆಗಾಗಿ ಡಿಸೆಂಬರ್ 5 ಮತ್ತು 11 ರ ನಡುವೆ ತೆರಳಲು ಅನುಮತಿ ನೀಡಿದ್ದಾರೆ.
“ಶಸ್ತ್ರ ಚಿಕಿತ್ಸೆ ಮುಗಿಸಿ ಅವರು ಡಿಸೆಂಬರ್ 4 ರಂದು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಮುಂದೆ ವರದಿ ಮಾಡಬೇಕು. ಅವರ ಪ್ರಯಾಣದ ವಿವರಗಳನ್ನು ಹಾಗೂ ಅವರು ಹೈದರಾಬಾದ್‌ನಲ್ಲಿ ತಂಗಲಿರುವ ಸ್ಥಳದ ವಿಳಾಸ ಮತ್ತು ಸಂಪರ್ಕ ಸಂಖ್ಯೆಯನ್ನು ಒದಗಿಸಬೇಕು” ಎಂದು ನ್ಯಾಯಾಲಯ ಈ ವೇಳೆ ಹೇಳಿದೆ. ಜೊತೆಗೆ ನೀಡಿರುವ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳದಂತೆ ನ್ಯಾಯಾಲಯ ಎಚ್ಚರಿಕೆ ನೀಡಿದೆ. ಭೀಮಾ ಕೋರೆಗಾಂವ್
ಇದನ್ನೂ ಓದಿ: ಹೊಳೆನರಸೀಪುರ | ಚಿಟ್ಟನಹಳ್ಳಿ ಗ್ರಾಮದ ವಾಟರ್‌ಮನ್ ಭೈರಯ್ಯ ಬದುಕು ದುಸ್ತರ
ವರರವರ ರಾವ್ ಅವರನ್ನು 2018 ರಲ್ಲಿ ಎಲ್ಗರ್ ಪರಿಷತ್-ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಅದಾಗಿ 2021 ಮಾರ್ಚ್ ತಿಂಗಳಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಬಾಂಬೆ ಹೈಕೋರ್ಟ್ ಅವರಿಗೆ ತಾತ್ಕಾಲಿಕ ಜಾಮೀನು ನೀಡಿತ್ತು. ಭೀಮಾ ಕೋರೆಗಾಂವ್
ಆಗಸ್ಟ್ 2022 ರ ವೇಳೆಗೆ ವೈದ್ಯಕೀಯ ಕಾರಣಗಳಿಗಾಗಿ ಸುಪ್ರೀಂ ಕೋರ್ಟ್ ಅವರಿಗೆ ನಿಯಮಿತ ಜಾಮೀನು ನೀಡಿದೆ. ಈ ಜಾಮೀನು ಆದೇಶದಲ್ಲಿ, ನ್ಯಾಯಾಲಯದ ಅನುಮತಿಯಿಲ್ಲದೆ ಮುಂಬೈನ ವಿಶೇಷ ಎನ್‌ಐಎ ನ್ಯಾಯಾಲಯದ ವ್ಯಾಪ್ತಿಯನ್ನು ತೊರೆಯಬಾರದು ಎಂದು ಷರತ್ತು ವಿಧಿಸಲಾಗಿತ್ತು.
ಇದನ್ನೂ ಓದಿ: ತೆಲಂಗಾಣದಲ್ಲಿ ಇಂದು ವಿಧಾನಸಭೆ ಚುನಾವಣೆ 2023, ಆರಂಭ
ಕಳೆದ ತಿಂಗಳು, ಬಲಗಣ್ಣಿನ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಗೆ ಒಳಗಾಗಲು ವರವರ ರಾವ್ ಅವರಿಗೆ ಹೈದರಾಬಾದ್‌ಗೆ ಒಂದು ವಾರ ಪ್ರಯಾಣಿಸಲು ಹೈಕೋರ್ಟ್ ಅನುಮತಿ ನೀಡಿತ್ತು. ಈ ವೇಳೆ ನ್ಯಾಯಮೂರ್ತಿ ಎ. ಎಸ್. ಗಡ್ಕರಿ ನೇತೃತ್ವದ ವಿಭಾಗೀಯ ಪೀಠವು ಅವರು ಚಿಕಿತ್ಸೆ ಮುಗಿಸಿ ಹಿಂದಿರುಗಿದ ನಂತರ ಮತ್ತೊಂದು ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಮತ್ತೊಮ್ಮೆ ಪ್ರಯಾಣಿಸಲು ಅನುಮತಿ ಕೋರಿ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಹೇಳಿತ್ತು.
2017ರ ಡಿಸೆಂಬರ್ 31ರಂದು ಪುಣೆಯಲ್ಲಿ ನಡೆದ ಎಲ್ಗಾರ್ ಪರಿಷತ್ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ವರವರ ರಾವ್ ಮತ್ತು ಇತರ ಹಲವು ಚಿಂತಕರು, ಹೋರಾಟಗಾರರು ಹಾಗೂ ಪ್ರಾಧ್ಯಾಪಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಸಮಾವೇಶಕ್ಕೆ ಮಾವೋವಾದಿಗಳ ಬೆಂಬಲವಿದೆ ಎಂದು ಪುಣೆ ಪೊಲೀಸರು ಪ್ರತಿಪಾದಿಸಿದ್ದರು. ಅಲ್ಲಿ ಮಾಡಿದ ಭಾಷಣಗಳು ಮರುದಿನ ಪುಣೆ ಜಿಲ್ಲೆಯ ಕೋರೆಗಾಂವ್-ಭೀಮಾ ಯುದ್ಧ ಸ್ಮಾರಕದ ಬಳಿ ಹಿಂಸಾಚಾರವನ್ನು ಪ್ರಚೋದಿಸಿತು ಎಂದು ಆರೋಪಿಸಿದ್ದಾರೆ. ನಂತರ ಪ್ರಕರಣದ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿತ್ತು.
ವಿಡಿಯೊ ನೋಡಿ: ದುಡಿವ ಜನರ ಮಹಾಧರಣಿ ಹೇಗಿತ್ತು? ಮೂರು ದಿನಗಳ ಕಾಲ ಅಲ್ಲಿ ಏನು ನಡೆಯಿತು. ವಿಶೇಷ ಸುದ್ದಿ Janashakthi Media