ಭೀಮ-ಕೊರೆಗಾಂವ್ ಆರೋಪಿಗಳ ವಿರುದ್ಧ ಸಾಕ್ಷ್ಯ ನೆಡುವಲ್ಲಿ ಪುಣೆ ಪೊಲೀಸ್ ಪಾತ್ರವಿದೆಯೇ?!

ಭೀಮ-ಕೊರೆಗಾಂವ್ ಪ್ರಕರಣದಲ್ಲಿ ಪುಣೆ ಪೊಲೀಸರು ಬಂಧಿಸಿರುವ ಕನಿಷ್ಟ ಇಬ್ಬರ – ರಾನ ವಿಲ್ಸನ್ ಮತ್ತು ವರವರ ರಾವ್-ಲ್ಯಾಪ್‌ಟಾಪ್‌ಗಳಲ್ಲಿ ಅವರ ವಿರುದ್ಧ ‘ಸಾಕ್ಷ್ಯ’ಗಳನ್ನು ಕೆಲವು ಅನಾಮಧೇಯ ಹ್ಯಾಕರ್‌ಗಳು ನೆಟ್ಟಿದಾರೆ ಎಂದು ಅಪರಾಧ ಪತ್ತೆ ವಿಶ್ಲೇಷಕರು (ಫೊರೆನ್ಸಿಕ್ ಅನಾಲಿಸ್ಟ್) ಹೇಳಿರುವುದಾಗಿ ಒಂದು ವರ್ಷದ ಹಿಂದೆ ವರದಿಯಾಗಿತ್ತು.

ಇಂತಹ ಕೆಲಸ ಮಾಡಲು ನೆರವಾಗುವ ಪೆಗಸಸ್ ಗೂಢಚರ್ಯೆ ತಂತ್ರಾಂಶವನ್ನು ತಾನು ಸರಕಾರೀ ಸಂಸ್ಥೆಗಳಿಗೆ ಮಾತ್ರ ಮಾರುವುದು ಎಂದು ಆ ತಂತ್ರಾಂಶದ ಮಾಲಕ ಕಂಪನಿ ಎನ್‌ಎಸ್‌ಒ ಗ್ರುಪ್ ಹೇಳಿದ್ದರೂ, ಭಾರತದಲ್ಲಿ ಯಾವ ಸರಕಾರೀ ಸಂಸ್ಥೆಯೂ ಅದನ್ನು ಖರೀದಿಸಿದ ದಾಖಲೆ ಇಲ್ಲ ಎನ್ನಲಾಗಿತ್ತು. ಅದೇ ರೀತಿ ಆ ಅನಾಮಧೆಯ ಹ್ಯಾಕರ್‌ಗಳು ಯಾವುದೇ ಸರಕಾರೀ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದಾರೆಯೇ ಎಂದೂ ತಿಳಿದಿರಲಿಲ್ಲ.

ಇದನ್ನು ಓದಿ: ದೇಶದ ನಾಲ್ಕನೇ ಅಂಗ ಮಾಧ್ಯಮ ನಿಜ ಸಮಸ್ಯೆ ಹೊರತರುತ್ತಿದೆಯೇ: ಜಸ್ಟೀಸ್‌ ಕೆ.ಚಂದ್ರು ಪ್ರಶ್ನೆ

ಈಗ ಬಂದಿರುವ ಸುದ್ದಿಯ ಪ್ರಕಾರ, ‘ಸೆಂಟಿನೆಲ್ ಒನ್’ ಎಂಬ ಭದ್ರತಾ ಕಂಪನಿಯ ಸಂಶೋಧಕರ ತಂಡದ ಒಬ್ಬರು ಆ ಹ್ಯಾಕರ್‌ಗಳು ಒಂದು ಭಾರತೀಯ ಸರಕಾರೀ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದರು ಎಂದು ಕಂಡು ಬಂದಿರುವುದಾಗಿ ಹೇಳಿದ್ದಾರೆ. ಆ ಸಂಸ್ಥೆ ಬೇರಾವುದೂ ಅಲ್ಲ, ಸ್ವತಃ ಪುಣೆ ಪೋಲೀಸ್, ಇಂತಹ ‘ಸಾಕ್ಷ್ಯ’ದ ಆಧಾರದಲ್ಲೇ ಈ ಪ್ರಕರಣದಲ್ಲಿ ಆರೋಪಿಗಳೆಂದು ಬಂಧಿಸಿದ್ದ ಪುಣೆ ಪೊಲೀಸರು! (ವೈರ್ಡ್.ಕಾಂ, ಜೂನ್ 26)

ಜಗತ್ತಿನಾದ್ಯಂತ ಪೊಲೀಸಿನವರು ಪ್ರತಿಭಟನಾಕಾರರ ಜಾಡು ಹಿಡಿಯಲು, ರಾಜಕೀಯ ಭಿನ್ನಮತೀಯರ ರಹಸ್ಯಗಳನ್ನು ಹೊರತರಲು ಮತ್ತು ಸಕ್ರಿಯ ಚಟುವಟಕೆಗಳಲ್ಲಿ ತೊಡಗಿರುವವರ  ಕಂಪ್ಯೂಟರ್ ಗಳು, ಫೋನ್‍ಗಳ ಮೂಲಕ ಗೂಢಚರ್ಯೆ ನಡೆಸಲು ಹೆಚ್ಚೆಚ್ಚಾಗಿ ಹ್ಯಾಕಿಂಗ್‍ ಸಾಧನಗಳನ್ನು ಬಳಸುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ವಿದ್ಯಮಾನದ ಬಗ್ಗೆ ಅಧ್ಯಯನ, ಸಂಶೋಧನೆ ನೆಡೆಯುತ್ತಿದ್ದು ಭಾರತದ ಈ ಪ್ರಕರಣದಲ್ಲಿ ಕಾನೂನು ಅನುಷ್ಠಾನದ ಸಂಸ್ಥೆಗಳು ಮತ್ತು ಹ್ಯಾಕಿಂಗ್‍ ಅಭಿಯಾನದ ನಡುವಿನ ಸಂಪರ್ಕದ ಸುಳಿವುಗಳು ದೊರೆತವು ಎನ್ನಲಾಗಿದೆ. ಇಲ್ಲಿ ಪೊಲೀಸಿನವರು ಇನ್ನೂ ಮುಂದೆ ಹೋಗಿ ಅಂಜಿಕೆ ಉಂಟುಮಾಡುವಂತಹ ಹೆಜ್ಜೆ ಇಟ್ಟಿರುವುದು ಅಂದರೆ, ತಾವು ಗುರಿಯಿಟ್ಟ ಕಂಪ್ಯೂಟರುಗಳಲ್ಲಿ ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸುವ ಕಡತಗಳನ್ನು ಹಾಕಿ, ಅವನ್ನೇ ಆ ವ್ಯಕ್ತಿಗಳನ್ನು ಬಂಧಿಸಲು ಮತ್ತು ಜೈಲಿಗೆ ಹಾಕಲು ಬಳಸಿರುವುದು ಕಂಡು ಬರುತ್ತದೆ ಎಂದು ಹೇಳಲಾಗಿದೆ.

ಈ ‘ಆರೋಪಿ’ಗಳನ್ನು ಬಂಧಿಸಿದ ವ್ಯಕ್ತಿಗಳು ಮತ್ತು ಅದಕ್ಕೆ ಆಧಾರವಾದ ‘ಸಾಕ್ಷ್ಯ’ವನ್ನು ನೆಟ್ಟ ವ್ಯಕ್ತಿಗಳ ನಡುವೆ ಸಾಬೀತು ಮಾಡಬಹುದಾದ ಸಂಪರ್ಕ ಇತ್ತು ಎಂದು ಈ ಸಂಶೋಧಕರಲ್ಲಿ ಒಬ್ಬರಾದ ಯುವಾನ್ ಆಂದ್ರೆಸ್ ಗುವೆರೋ ಸಾದೆ ಎಂಬವರು ಹೇಳಿರುವುದಾಗಿ ವರದಿಯಾಗಿದೆ.

ಇದನ್ನು ಓದಿ: ಪೆಗಾಸಸ್: ಸರ್ವಾಧಿಕಾರಶಾಹಿಯ ಸೈಬರ್ ಆಯುಧ

ಅಂದರೆ ಈ 16 ಮಂದಿಯನ್ನು ಬಂಧಿಸುವ ಒಂದು ಪಿತೂರಿ ಇತ್ತೇ, ಪುಣೆ ಪೊಲೀಸರು ಸಾಕ್ಷ್ಯ ಎಂದು ಸಲ್ಲಿಸಿರುವುದು ಸುಳ್ಳು ಸಂಗತಿ ಎಂದು ಗೊತ್ತಿದ್ದೂ ಈ ರೀತಿ ಉದ್ದೇಶಪೂರ್ವಕವಾಗಿ ದುಷ್ಟತನದಿಂದ ವರ್ತಿಸಿದ್ದಾರೆಯೇ? ಮೇಲ್ನೋಟಕ್ಕೆ ಹಾಗೆಂದೇ ಕಾಣುತ್ತದೆ. ಆದರೆ ಇದನ್ನು ಸ್ವತಂತ್ರವಾಗಿ ಪುಷ್ಟೀಕರಿಸಬೇಕಾಗಿದೆ ಎಂದು ಈ ‘ಆರೋಪಿಗಳಲ್ಲಿ ಹಲವರ ಪರವಾಗಿ ವಾದಿಸುತ್ತಿರುವ ಮಿಹಿರ್ ದೇಸಾಯಿ ಹೇಳಿದ್ದಾರೆ.

ಇದು ಪೊಲೀಸ್ ಮುಂತಾದ ಕಾನೂನು ಅನುಷ್ಠಾನ ಸಂಸ್ಥೆಗಳ ಕೈಗಳಲ್ಲಿ ಇಂತಹ ಹ್ಯಾಕಿಂಗ್ ಸಾಧನಗಳ ಅಪಾಯದ ಹೊಸ  ಕಳವಳಕಾರಿ ಉದಾಹರಣೆ, ಎನ್ನುವ ಈ ಸಂಶೋಧಕರು, ಇಂತಹ, ಕಂಪ್ಯೂಟರ್‌ಗಳಿಂದ ಪೋಲಿಸರು ಪಡೆಯುವ ಸಾಕ್ಷ್ಯಗಳು ನಂಬಲರ್ಹವೇ ಎಂದೂ ಕೇಳುತ್ತಾರೆ.

Donate Janashakthi Media

Leave a Reply

Your email address will not be published. Required fields are marked *