ಮಹಾರಾಷ್ಟ್ರದಲ್ಲಿ ಸುರಿತ್ತಿರುವ ಧಾರಕಾರ ಮಳೆಯಿಂದಾಗಿ ಅಫಜಲಪುರ ತಾಲೂಕಿನ ಭೀಮಾನದಿಗೆ ಪ್ರವಾಹ ಭೀತಿ
ಅಫಜಲಪುರ: ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಧಾರಕಾರವಾಗಿ ಮಳೆಯಾಗುತ್ತಿದೆ. ತಾಲೂಕಿನ ಭೀಮಾನದಿಗೆ ಅಧಿಕ ಪ್ರಮಾಣದಲ್ಲಿ ನೀರು ಬರುತ್ತಿದ್ದು, ಪ್ರವಾಹ ಉಂಟುಮಾಡುವ ಸಾಧ್ಯತೆಯಿದೆ ತಾಲೂಕ ಆಡಳಿತ ಅಧಿಕಾರಿಗಳು ಮುಂಜಾಗ್ರತವಾಗಿ ಎಚ್ಚರ ವಹಿಸಿ ಎಂದು ಶಾಸಕ ಎಂ.ವೈ.ಪಾಟೀಲ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ ಕಲ್ಬುರ್ಗಿ, ತಾಲೂಕ ಪಂಚಾಯತ ಕಾರ್ಯಾಲಯದಲ್ಲಿ ಇತ್ತೀಚಿಗೆ ನಡೆದ ತ್ರೈಮಾಸಿಕ ಕೆ.ಡಿ.ಪಿ. ತಾಲೂಕ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ತಾಲೂಕಿನಲ್ಲಿ ಮಳೆ ಕಡೆಮೆ ಇದೆ. ಆದರೆ ಬೇರೆಡೆ ಜಾಸ್ತಿ ಮಳೆಯಿದೆ. ಅಲ್ಲದೇ ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಭೀಮಾನದಿಗೆ ದೊಡ್ಡ ಪ್ರಮಾಣದಲ್ಲಿ ನೀರು ಬರುವ ಸಾಧ್ಯತೆ ಇರುವುದರಿಂದ ತಾಲೂಕಿನ ಭೀಮಾನದಿ ದಡದಲ್ಲಿರುವ ವಿವಿಧ ಗ್ರಾಮಗಳ ಜನರು ನದಿಯತ್ತ ಹೋಗದಂತೆ ಸೂಚಿಸಬೇಕೆಂದು ತಹಸೀಲ್ದಾರರಿಗೆ ತಿಳಿಸಿದರು.
ತಾಲೂಕಿನಲ್ಲಿ ಒಂದು ವಾರದಿಂದ ಜಿಟಿಜಿಟಿ.ಮಳೆಯಾಗುತ್ತಿದೆ. ತಾಲೂಕಿನ ವಿವಿದಡೆ ಮನೆಗಳು ನೆನೆದು ಕುಸಿತ್ತಿವೆ. ಹಾನಿಯಾದ ಮನೆಗಳ ಕುರಿತು ಅಧಿಕಾರಿಗಳು ಮಾಹಿತಿ ಸಂಗ್ರಹಿಸಿ ಸರಕಾರಕ್ಕೆ ವರದಿ ಸಲ್ಲಿಸಬೇಕು ಮತ್ತು ಹಾನಿಯಾದ ಮನೆಗಳಿಗೆ ಪರಿಹಾರ ಕೊಡಿಸುವ ಕೆಲಸ ಮಾಡೋಣ ಎಂದರು.
ನಿರಂತರವಾಗಿ ಒಂದು ವಾರದಿಂದ ತುಂತುರು ಮಳೆಯಾಗುತ್ತಿದೆ, ಇದು ಮಳೆಗಾಲ ದಿನ. ಶಾಲಾ ಮಕ್ಕಳ ಸುರಕ್ಷಿತ ಹಿತದೃಷ್ಟಿಯಿಂದ 30 ರಿಂದ 40 ವರ್ಷಗಳ ಹಿಂದೆ ಕಟ್ಟಿದಂತ ಹಳೇ ಶಾಲಾ ಕಟ್ಟಡಗಳು ಸೂರಿಕೆ ಹಾಗೂ ಶಿಥಿಲ ವ್ಯವಸ್ಥೆಯಿರುವ ತಾಲೂಕಿನಲ್ಲಿ ಎಲ್ಲಿಯಾದರೂ ಕಂಡುಬಂದರೆ ಕ್ಷೇತ್ರ ಶಿಕ್ಷಣ ಇಲಾಖೆ ಅಧಿಕಾರಿಗಳು ತಕ್ಷಣವೇ ಮಾಹಿತಿ ನೀಡಿ ಎಂದರು.
ತಾಲೂಕಿನಲ್ಲಿ ಈ ಬಾರಿ ಮುಂಗಾರು ಮಳೆ ಕೊರತೆಯಿಂದ ಮುಂಗಾರು ಬೆಳೆಗಳು ಎಷ್ಟು ಬಿತ್ತನೆಯಾಗಬೇಕು, ಅಷ್ಟು ಬಿತ್ತನೆಯಾಗಿಲ್ಲ. ಹೀಗಾಗಿ ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ ಸರಕಾರ ವರದಿ ಕಳಿಸಿ ರೈತರಿಗೆ ಪರಿಹಾರ ಕೊಡುವ ಮಾಡಬೇಕಾಗಿದೆ ಎಂದರು.
ಮಳೆಯಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆಗಳು ಹಾಳಾಗಿವೆ ಎಂಬುದರ ಕುರಿತು ತುರ್ತಾಗಿ ಮಾಹಿತಿ ಕೊಡಿ ಎಲ್ಲಿಲ್ಲಿ ರಸ್ತೆ ಬೇಡಿಕೆ ಇದೆ ಎಂಬುದು ಪಟ್ಟಿ ಮಾಡಿ ಕೊಟ್ಟಲ್ಲಿ ರಸ್ತೆ ಅಭಿವೃದ್ಧಿ ಕೆಲಸ ಮಾಡಲು ಕ್ರಮವಹಿಸಲಾಗುವುದು.
ವಿದ್ಯುತ್ ಸರಬರಾಜು ಗ್ರಾಮೀಣ ಭಾಗದಲ್ಲಿ ಸರಿಯಾಗಿ ಸರಬರಾಜು ಮಾಡುತ್ತಿಲ್ಲ ಎಂಬುವುದು ಜನರಿಂದ ಆರೋಪ ಕೇಳಿ ಬಂದಿದ್ದೆ. ಹೀಗಾಗಿ ಯಾವುದೇ ಅಡೆತಡೆಯಾಗದೇ ಸರಿಯಾದ ರೀತಿಯಲ್ಲಿ ವಿದ್ಯುತ್ ಸರಬರಾಜು ಮಾಡಿ ಎಂದು ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ವರದಿ: ಪರಶುರಾಮ ಮ್ಯಾಕೇರಿ, ಆಫಜಲಪುರ