ಭಯೋತ್ಪಾದನೆಯ ವಿರುದ್ಧದ ಹೋರಾಟಗಾರ ಬಲ್ವಿಂದರ್ ಸಿಂಗ್ ಭಿಕಿವಿಂಡ್ ಹತ್ಯೆ

 ಅಕ್ಟೋಬರ್ 16ರಂದು ಭಯೋತ್ಪಾದನೆಯ ವಿರುದ್ಧ ಕಳೆದ ಮೂರು ದಶಕಗಳಿಂದ ಹೋರಾಡುತ್ತಿರುವ ತರನ್‍ತಾರನ್‍ ಜಿಲ್ಲೆಯ  ಹೋರಾಟಗಾರ ಬಲ್ವಿಂದರ್ ಸಿಂಗ್ ಭಿಕಿವಿಂಡಿಯವರನ್ನು ಇಬ್ಬರು ಮೋಟಾರ್‍ ಸೈಕಲ್‍ ಗಳಲ್ಲಿ ಬಂದವರು ಗುಂಡಿಟ್ಟು ಕೊಂದಿದ್ದಾರೆ. ಅವರಿಗೆ 62 ವರ್ಷವಾಗಿತ್ತು.

ಪಂಜಾಬಿನಲ್ಲಿ 1980ರ ದಶಕದ  ಕೊನೆಯ ಭಾಗದಲ್ಲಿ ಖಾಲಿಸ್ತಾನೀ ಭಯೋತ್ಪಾದನೆ ತಾರಕಕ್ಕೆ ಏರಿದ್ದಾಗ ಬಲ್ವಿಂದರ್‍ ಸಿಂಗ್ ಮತ್ತು ಅವರ ಮನೆಯ ಮೇಲೆ ಕನಿಷ್ಟ 42 ಭಯೋತ್ಪಾದಕ ದಾಳಿಗಳು ನಡೆದಿದ್ದವು. ಅವನ್ನೆಲ್ಲಅವರು ಧೈರ್ಯದಿಂದ  ಹಿಮ್ಮೆಟ್ಟಿಸಿದ್ದರು.  ಒಮ್ಮೆಯಂತೂ, ಸೆಪ್ಟಂಬರ್‍ 30, 1990ರಂದು ಸುಮಾರು 200 ಜನ ಭಯೋತ್ಪಾದಕರು ಇವರ ಮನೆಯ ಮೇಲೆ ದಾಳಿ ಮಾಡಿದರು. ರಾಕೆಟ್‍ ಲಾಂಚರ್‍ ಗಳನ್ನು ಕೂಡ ಬಳಸಿದ್ದರು. ಆಗ ಬಲ್ವಿಂದರ್‍ ಸಿಂಗ್, ಅವರ ಪತ್ನಿ ಜಗದೀಶ್‍ ಕೌರ್, ,ಅಣ್ಣ ರಂಜಿತ್‍ ಸಿಂಗ್  ಮತ್ತು ಅವರ ಪತ್ನಿ ಬಲ್ರಾಜ್‍ ಕೌರ್  ಈ ನಾಲ್ಕು ಮಂದಿ ತಮ್ಮ ರಕ್ಷಣೆಗೆ  ಒದಗಿಸಿದ್ದ ಸ್ಟೆನ್‍ಗನ್‍ಗಳಿಂದಲೇ ಪ್ರತಿರೋಧಿಸಿ, ಕೊನೆಗೂ ಪ್ರತ್ಯೇಕತಾವಾದಿ ಭಯೋತ್ಪಾದಕರು ಓಡಿ ಹೋಗುವಂತೆ ಮಾಡಿದ್ದರು. ಇದಕ್ಕಾಗಿ ಇವರಿಗೆ ಶೌರ್ಯ ಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

1990ರಲ್ಲಿ ಬಲ್ವಿಂದರ್ ಸಿಂಗ್ ಮತ್ತು ಅವರ ಪತ್ನಿ

ಅವರು ಆಗ ಡಿವೈಎಫ್ ಮುಖಂಡರಾಗಿದ್ದರು. ನಂತರ, ಸಿಪಿಐ(ಎಂ) ಪಂಜಾಬ್‍ ರಾಜ್ಯ ಸಮಿತಿ ಸದಸ್ಯರೂ ಆದರು. ಈ ಅವಧಿಯಲ್ಲಿ ಪಂಜಾಬಿನಲ್ಲಿ ಸಿಪಿಐ(ಎಂ) ನ ಹಲವಾರು ಯುವಜನರು ಪ್ರತ್ಯೇಕತಾವಾದಿ ಭಯೋತ್ಪಾದಕರ ವಿರುದ್ಧ ಹೋರಾಟದಲ್ಲಿ ಪ್ರಾಣಾರ್ಪಣೆ ಮಾಡಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಅಖಿಲ ಭಾರತ ಕಿಸಾನ್‍ ಸಭಾ(ಎಐಕೆಎಸ್) ಬಲ್ವಿಂದರ್‍ ಸಿಂಗ್ ಭಿಕಿವಿಂಡಿಯವರಿಗೆ ವೀರನಮನ ಸಲ್ಲಿಸುತ್ತ , ಅವರು ಮತ್ತು ಅವರ ಕುಟುಂಬದವರ ಮೇಲೆ ಈಗಲೂ ಪ್ರಾಣಬೆದರಿಕೆ ಇದ್ದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅವರಿಗೆ ಭಧ್ರತೆ ಒದಗಿಸುವುದರಲ್ಲಿ ವಿಫಲವಾಗಿರುವುದನ್ನು ಖಂಡಿಸಿದೆ. ಈ ವರ್ಷದ ಆರಂಭದಲ್ಲಿ ಅವರಿಗೆ ನೀಡಲಾಗಿದ್ದ ಪೋಲೀಸ್ ರಕ್ಷಣೆಯನ್ನು ಹಿಂತೆಗೆದುಕೊಳ್ಳಲಾಗಿತ್ತು. ಈ ಕುಟಂಬದವರು ಪೊಲಿಸ್ ಭದ್ರತೆಗೆ ರಾಜ್ಯದ ಡಿಜಿಪಿಗೆ ಮತ್ತೆ-ಮತ್ತೆ ವಿನಂತಿಗಳನ್ನೂ ಸಲ್ಲಿಸಿದ್ದರು.

ಬಲ್ವಿಂದರ್ ಸಿಂಗ್ ಭಿಕಿವಿಂಡ್ ಕುಟುಂಬ. ಇವರಲ್ಲಿ ನಾಲ್ವರು ಶೌರ್ಯಪ್ರಶಸ್ತಿ ವಿಜೇತರು

ಆದರೂ ಇದನ್ನು ಕೊಡುವಲ್ಲಿ ವಿಫಲವಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ‍್ಳಬೇಕು , ಭಯೋ್ತ್ಪಾದನೆಯ ವಿರುದ್ಧ ಹೋರಾಟ ನಡೆಸಿರುವ ಎಲ್ಲರಿಗೂ ಸುರಕ್ಷೆಯನ್ನು ಒದಗಿಸಬೇಕು ಮತ್ತು ಪಂಜಾಬ್ ‍ ಹೈಕೋರ್ಟ್‍ ಉಸ್ತುವಾರಿಯಲ್ಲಿ ಈ ದಾಳಿಯ ಹಿಂದಿರುವ ನಿಜವಾದ ಅಪರಾಧಿಗಳು ಮತ್ತು ಪಿತೂರಿಗಾರರು ಯಾರು ಎಂಬುದರ ತನಿ ಖೆ ನಡೆಸಬೇಕು ಎಂದೂ ಎಐಕೆಎಸ್ ಆಗ್ರಹಿಸಿದೆ. ಬಲ್ವಿಂದರ್ ಸಿಂಗ್‍ ಅವರಿಗೆ ಹುತಾತ್ಮನಿ ಗೆ ಸಲ್ಲಬೇಕಾಗಿರುವ  ಎಲ್ಲ ಗೌರವಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದೆ.

ದೇಶ  ಪಂಜಾಬಿನ ಅತ್ಯಂತ ಕಷ್ಟದಾಯಕ ಅವಧಿಯಲ್ಲಿ ಹೋರಾಟ ನಡೆಸಿದ್ದ ಒಬ್ಬ ದೇಶಪ್ರೇಮಿಯನ್ನು ಹೀಗೆ ಮರೆತು ಕೈಕೊಡಬಾರದಾಗಿತ್ತು ಎಂದು ಹಿರಿಯ ಪತ್ರಕರ್ತ ಶೇಖರ್‍ ತಮ್ಮ ವೆಬ್‍ಪತ್ರಿಕೆ ‘ದಿ ಪ್ರಿಂಟ್‍’ನಲ್ಲಿ ಕಟುವಾದ ಟಿಪ್ಪಣಿ ಮಾಡಿದ್ದಾರೆ.

ಅವರ ವಿವರವಾದ ವರದಿಯನ್ನು ಕೇಳಲು ಇಲ್ಲಿ ಕ್ಲಿಕ್ಕಿಸಿ

 

 

 

 

Donate Janashakthi Media

Leave a Reply

Your email address will not be published. Required fields are marked *