ಬೆಂಗಳೂರು: ಹೊಳೆನರಸೀಪುರ ನಿವಾಸದಲ್ಲಿನ ಮನೆ ಕೆಲಸದ ಮಹಿಳೆ ಅಪರಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣಗೆ ಹೈಕೋರ್ಟ್ ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಇಂದು ಮಧ್ಯಾಹ್ನ 1 ಗಂಟೆಯೊಳಗೆ ಎಸ್ಐಟಿ ಮುಂದೆ ಹಾಜರಾಗುವಂತೆ ಯೂ ಹಾಗೂ ಎಸ್ಐಟಿಯ ತನಿಖೆಗೆ ಸಹಕರಿಸುವಂತೆ ಉಚ್ಚ ನ್ಯಾಯಾಲಯ ಸೂಚಿಸಿದೆ. ಮುಖ್ಯವಾಗಿ ಹಾಸನ ಜಿಲ್ಲೆ ಪ್ರವೇಶ ಮಡುವಂತಿಲ್ಲ, ಕೆ.ಆರ್.ನಗರಕ್ಕೂ ಹೋಗುವಂತಿಲ್ಲ ಎಂದಿದೆ.
ಇದನ್ನೂ ಓದಿ: ಬೆಂಗಳೂರು; ವೈದ್ಯನ ಎಡವಟ್ಟಿಂದ 7 ವರ್ಷದ ಬಾಲಕ ಸಾವು
ಪ್ರಕರಣದ ಹಿನ್ನೆಲೆ ಏನು? ರಾಜ್ಯಾದ್ಯಂತ ಸದ್ದು ಮಾಡಿದ್ದ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆಗಳು ಇರುವ ಪೆನ್‌ಡ್ರೈನ್ ನಲ್ಲಿ ತಮ್ಮ ತಾಯಿಯ ಚಿತ್ರವು ಇದೆ. ಸದ್ಯ ನಮ್ಮ ತಾಯಿ ಕಣ್ಮರೆ ಆಗಿದ್ದಾರೆ ಎಂದು ಅವರ ಪುತ್ರ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದರು. ಇದೇ ಪ್ರಕರಣ ವಿಚಾರವಾಗಿ ಎಚ್‌ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಅವರ ಸಂಬಂಧಿಯನ್ನು ಬಂಧಿಸಿ ಎರಡನೇ ಆರೋಪಿಯಾಗಿ ಮಾಡಲಾಗಿದೆ.
ಪ್ರಜ್ವಲ್ ರೇವಣ್ಣ ಅವರ ತಾಯಿ ಭವಾನಿ ಅವರಿಗೆ ತನಿಖಾ ತಂಡ ಮೂರು ಬಾರಿ ನೋಟಿಸ್ ನೀಡಿದ್ದರೂ ಎಸ್‌ಐಟಿ ಎದುರು ಹಾಜರಾಗಲು ವಿಫಲರಾಗಿದ್ದಾರೆ. ಹದಿನೈದು ದಿನಗಳಿಂದ ತಲೆಮರೆಸಿಕೊಂಡಿರುವ ಭವಾನಿಯನ್ನು ಬಂಧಿಸಲು ಎಸ್‌ಐಟಿ ಪೊಲೀಸ್ ತಂಡಗಳನ್ನು ರಚಿಸಿದೆ. ಬೆಂಗಳೂರಿಗೆ ಹಿಂದಿರುಗುವ ಮೊದಲು ಎಸ್‌ಐಟಿ ಇತ್ತೀಚೆಗೆ ಹೊಳೆನರಸೀಪುರದ ಅವರ ನಿವಾಸದಲ್ಲಿ ಭವಾನಿಗಾಗಿ ಕನಿಷ್ಠ ಏಳು ಗಂಟೆಗಳ ಕಾಲ ಕಾದು ವಾಪಾಸಾಗಿತ್ತು.
ಇದನ್ನೂ ನೋಡಿ: ಪರಿಸರ ಸಂರಕ್ಷಣೆ ನಮ್ಮ ಹೊಣೆ : ಮರುಭೂಮಿಯಾಗದಂತೆ ನೋಡಿಕೊಳ್ಳೋಣ Janashakthi Media