ಬೆಂಗಳೂರು: ರಾಜ್ಯ ಉಚ್ಛ ನ್ಯಾಯಾಲಯ ನೀಡಿದ ಸೂಚನೆ ಬಳಿಕ ಕಣ್ಮರೆಯಾಗಿದ್ದ ಭವಾನಿ ರೇವಣ್ಣ ಎಸ್‌ಐಟಿ ತನಿಖೆಗೆ ಹಾಜರಾಗಿದ್ದಾರೆ. ನಂತರ
ಇಂದಿನಿಂದ ಮುಂದಿನ ಶುಕ್ರವಾರದೊಳಗೆ ನಿರೀಕ್ಷಣಾ ಜಾಮೀನಿನನ್ನು ಹೈಕೋರ್ಟ್‌ನಿಂದ ಪಡೆದಿರುವ ಭವಾನಿ ರೇವಣ್ಣಗೆ ನ್ಯಾಯಾಲಯ, ಎಸ್‌ಐಟಿ ತನಿಖೆಗೆ ಸಹಕರಿಸಬೇಕೆಂದು ಆದೇಶಿಸಿತ್ತು. ಇಂದು ಮಧ್ಯಾಹ್ನ ಒಂದು ಗಂಟೆಯೊಳಗೆ ಎಸ್‌ಐಟಿ ತನಿಖೆಗೆ ಹಾಜರಾಗಬೇಕು ಎಂದು ಹೈಕೋರ್ಟ್ ಖಡಕ್ ಸೂಚಿಸಿತ್ತು.
ಇದನ್ನೂ ಓದಿ: ಬಿಜೆಪಿ ಸಂಸದೆ ಕಂಗನಾ ರಾನಾವತ್‌ಗೆ ಕಪಾಳಮೋಕ್ಷ
ಈ ಹಿನ್ನೆಲೆಯಲ್ಲಿ ಇಂದು ಭವಾನಿ ರೇವಣ್ಣ ಎಸ್‌ಐಟಿ ತನಿಖೆಗೆ ಹಾಜರಾಗಿದ್ದಾರೆ. ಸಂಜೆ ಐದರವರೆಗೆ ಅವರನ್ನು ಎಸ್‌ಐಟಿ ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ.
ಭವಾನಿ ರೇವಣ್ಣ ಗೆ ಎರಡು ಬಾರಿ ನೋಟಿಸ್ ನೀಡಿದ್ದ ಎಸ್‌ಐಟಿ ಮನೆಯಲ್ಲೇ ವಿಚಾರಣೆ ನಡೆಸುವುದಾಗಿ ಹೇಳಿತ್ತು. ಆದರೆ ಎಸ್‌ಐಟಿ ಕೈಗೆ ಸಿಗದೆ ಬಂಧನ ಭೀತಿಯಿಂದ ಭವಾನಿ ರೇವಣ್ಣ ತಲೆ ಮರೆಸಿಕೊಂಡು ಓಡಾಡುತ್ತಿದ್ದರು. ಅವರನ್ನು ತಕ್ಷಣವೇ ಬಂಧಿಸದಂತೆ ಇಂದು ಹೈಕೋರ್ಟ್ ಎಸ್‌ಐಟಿಗೆ ಆದೇಶ ನೀಡಿದ್ದು, ವಿಚಾರಣೆಯನ್ನು ಮುಂದಿನ ಶುಕ್ರವಾರಕ್ಕೆ ಮುಂದೂಡಿತ್ತು. ನಂತರ
ರೇವಣ್ಣ ವಿರುದ್ದ ಮಹಿಳೆಯೊಬ್ಬರು ಅತ್ಯಾಚಾರದ ಆರೋಪದ ಮೇಲೆ ದೂರು ನೀಡಿದ್ದ, ಸಂತ್ರಸ್ತೆಯನ್ನು ಅಪಹರಿಸಿರುವ ಪ್ರಕರಣದಲ್ಲಿ ಭವಾನಿ ರೇವಣ್ಣ ಆರೋಪಿಯಾಗಿದ್ದಾರೆ. ನಂತರ
ಇದನ್ನೂ ನೋಡಿ: NDA ಮೈತ್ರಿಕೂಟ ಅಧಿಕಾರಕ್ಕೆ ಬರುತ್ತಾ? ಆಶಾಭಾವದತ್ತ ಇಂಡಿಯಾ ಒಕ್ಕೂಟ Janashakthi Media