ಗಂಗಾವತಿ :: ಡೋನೆಷನ್ ಹಾವಳಿ ತಡೆಗಟ್ಟಲು ಹಾಗೂ ಸರಕಾರದ ನಿಯಮ ಗಾಳಿಗೆ ತೂರಿದ ಖಾಸಗಿ ಶಾಲೆಗಳ ಮಾನ್ಯತೆ ರದ್ದು ಮಾಡಲು ಆಗ್ರಹಿಸಿ, ಅಧಿಕೃತ ಶಾಲೆಗಳ ಮಾಧ್ಯಮ ಸಹಿತ ಪಟ್ಟಿ ಬಿಡುಗಡೆಗೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್.ಎಫ್.ಐ ಪ್ರತಿಭಟನೆ ನಡೆಸಿತು.
ಗಂಗಾವತಿಯ ಬಿಇಎ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ್ ಕಡಗದ್ ಮಾತನಾಡಿ, ಇತ್ತೀಚೆಗೆ ಗಂಗಾವತಿಯ ಖಾಸಗಿ ಶಾಲೆಗಳು 2024-25 ನೇ ಸಾಲಿನ ಪ್ರವೇಶ ಶುಲ್ಕ, ಬಟ್ಟೆ, ಶೂ ಸಾಕ್ಸ್, ಟೈ ಬೆಲ್ಟ್ ಸ್ಮಾರ್ಟ ಕ್ಲಾಸ್ ಶುಲ್ಕ ಟ್ಯೂಷನ್ ಶುಲ್ಕವನ್ನು ಹೆಚ್ಚಿಗೆ ಮಾಡಿ ಡೋನೆಷನ್ ವಸೂಲಿ ಮಾಡಲು ಮುಂದಾಗಿವೆ ಎಂದು ಆರೋಪಿಸಿದರು.
ಅಖಂಡ ಗಂಗಾವತಿ ತಾಲೂಕಿನ ಬಹುತೇಕ ಎಲ್ಲಾ ಶಾಲೆಗಳು ಇನ್ನು ಅಧಿಕ ಶಾಲೆಗಳಲ್ಲಿ ಈಗಾಗಲೇ ಬೇಬಿ ಕ್ಲಾಸ್ ನಿಂದ ಎಲ್ಲಾ ತರಗತಿಯ ಪ್ರವೇಶಾತಿಯನ್ನು ಪ್ರಾರಂಭಿಸಿ ವಿದ್ಯಾರ್ಥಿಗಳ ಪಾಲಕರಿಂದ ಡೋನೆಷನ್ ವಸೂಲಿಗೆ ಮುಂದಾಗಿವೆ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಸರಕಾರದ ನಿಯಮ ಮೀರಿ ಹಣ ವಸೂಲಿಗೆ ಮುಂದಾದರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೌನವಾಗಿರುವುದೇಕೆ? ಎಂದು ಪ್ರಶ್ನಿಸಿದರು.
ಸರಕಾರ ಇನ್ನೂ ಈ ವರ್ಷದ ಶೈಕ್ಷಣಿಕ ಪ್ರವೇಶಾತಿಯನ್ನು ಆರಂಭ ಮಾಡದಿದ್ದರೂ ಖಾಸಗಿ ಶಾಲೆಗಳು ತುದಿಗಾಲಲ್ಲಿ ನಿಂತು ಪ್ರವೇಶಾತಿ ಶುಲ್ಕ ಹಾಗೂ ಬಟ್ಟೆ, ಶೂ, ಸಾಕ್ಸ, ನೋಟ್ ಬುಕ್ಸ್ ಶಾಲೆಗಳಲ್ಲಿ ಮಾಡುತ್ತಿರುವುದು ಕಾನೂನು ಬಾಹಿರ ಇಂತಹ ಶಾಲೆಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಮತ್ತು 2024-25 ನೇ ಶೈಕ್ಷಣಿಕ ವರ್ಷದ ವಾರ್ಷೀಕ ಶುಲ್ಕದಲ್ಲಿ ಕೇವಲ ಬೋಧನಾ ಶುಲ್ಕ ಮಾತ್ರ ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿ : ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸೇರಲಿರುವ ಬಿಜೆಪಿ-ಜೆಡಿಎಸ್‌ನ 20 ಶಾಸಕರು
ಯಾವುದೇ ಕಾರಣಕ್ಕೂ ಆನ್ ಲೈನ್ ನಲ್ಲಿ ಶಿಕ್ಷಣ ನೀಡುವುದು ಸರಿಯಾದ ಕ್ರಮವಲ್ಲ 1983 ಆರ್ ಟಿ ಈ ಕಾಯ್ದೆ ಪ್ರಕಾರ ಎಲ್ಲಾ ಖಾಸಗಿ ಶಾಲೆಗಳು ಪ್ರವೇಶಾತಿಗೆ ಖಾಲಿಯಿರುವ ಸೀಟುಗಳನ್ನು ನೋಟಿಸ್ ಬೋರ್ಡ ಗೆ ಹಾಕಬೇಕು ಮತ್ತು ರೋಸ್ಟರ್ ವಾರು ಶುಲ್ಕವನ್ನು ನಿಗದಿಗೊಳಿಸಿ ಶಾಲಾ ಮುಂಭಾಗದಲ್ಲಿ ಹಾಕಬೇಕೆಂದು ನಿಯಮ ಇದ್ದರೂ ತಾಲೂಕಿನ ಯಾವ ಶಾಲೆಗಳು ಸಹ ಹಾಕಿರುವುದಿಲ್ಲಾ. ಅನೇಕ ಬಾರಿ ತಾಲೂಕಿನ ಬಿ. ಇ ಓ ಗೆ ಮನವಿ ಮಾಡಿದರು ಕ್ರಮ ಜರುಗಿಸಲು ಮುಂದಾಗಿಲ್ಲ. ಸರಕಾರದ ಅಧೀಕೃತ ಶಾಲೆಗಳ ಪಟ್ಟಿ ಬಿಡುಗಡೆ ಮಾಡಲು ಆದೇಶ ವಿದ್ದರೂ ಬಿಇಓ ಪ್ರಕಟಿಸಿಲ್ಲ ಯಾಕೆ? ಖಾಸಗಿ ಶಾಲೆಗಳ ಜೊತೆ ಹೊಂದಾಣಿಕೆ ಆಗಿದ್ದಾರೆಯೇ ಎಂಬ ಪ್ರಶ್ನೆ ಬರುತ್ತದೆ. ಆದ್ದರಿಂದ ಶಾಲೆಗಳ ಮೇಲೆ ಕಾನೂನು ಕ್ರಮ ಜರುಗಿಸಿ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ರೆಗ್ಯೂಲೇಟಿಂಗ ಪ್ರಾಧಿಕಾರ ರಚಿಸಿ ಶಾಲೆಗಳ ಮೇಲೆ ಕ್ರಮ ಜರುಗಿಸಬೇಕು ಹಾಗೂ ಸಂಘಟನೆಯ ಮುಖಂಡರನ್ನುಒಳಗೊಂಡಂತೆ ಜಂಟಿ ಸಭೆ ಸೇರಿಸಬೇಕೆಂದು ತಾಲ್ಲೂಕ ಅಧ್ಯಕ್ಷ ಗ್ಯಾನೇಶ್ ಆಗ್ರಹಿಸಿದರು.
ಬೇಡಿಕೆಗಳು
1 ಡೋನೆಷನ್ ಹಾವಳಿ ನಿಯಂತ್ರಣ ಮಾಡಬೇಕು
2. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ರೇಗ್ಯುಲೇಟಿಂಗ್ ಪ್ರಾಧಿಕಾರ ರಚಿಸಿ.
3. ಸರಕಾರದ ನಿಯಮ ಗಾಳಿಗೆ ತೂರಿದ ಶಾಲೆಗಳ ಮಾನ್ಯತೆ ರದ್ದು ಮಾಡಿ.
4. ಅನಧಿಕೃತವಾಗಿ ಶಾಲೆಗಳ ಮಾನ್ಯತೆ ಇಲ್ಲದೆ ಐಸಿಐಸಿ/ಸಿಬಿಎಸ್ಸಿ ನಡೆಸುವ ಶಾಲೆಗಳ ಮಾನ್ಯತೆ ರದ್ದು ಗೊಳಿಸಿ
5. ಅಧೀಕೃತ ಶಾಲೆಗಳ ಕನ್ನಡ ಮಾಧ್ಯಮ& ಇಂಗ್ಲೀಷ ಮಾಧ್ಯಮ ಶಾಲೆಗಳ ಪಟ್ಟಿ ಬಿಡುಗಡೆ ಮಾಡಬೇಕು
ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡರಾದ ನಾಗರಾಜ, ಯು. ರಮೇಶ, ಮಂಜುನಾಥ, ಶಂಕರ, ಬಸಯ, ಪಂಪಾಪತಿ, ಸಂತೋಷ, ಬಸವರಾಜ ರುದ್ರಗೌಡ , ಚಂದ್ರು ಇತರರು ಇದ್ದರು.
ಇದನ್ನು ನೋಡಿ : ಚಪಾತಿ ನಂಗೆ ಅಲರ್ಜಿ ಅಂತಾ ಗೊತ್ತಾಗಿದ್ದೆ ಡಾಕ್ಟರ್ ಹತ್ರ ಹೋದಮೇಲೆ! – ರವೀಂದ್ರ ಭಟ್ಟ ಮಾತುಗಳು Janashakthi Media