28 ಜೀವಗಳನ್ನು ಬಲಿ ಪಡೆದ ಕಾಶ್ಮೀರದ, ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನ ಬೈಸರನ್ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಜಮ್ಮು ಮತ್ತು ಕಾಶ್ಮೀರದ ಇಡೀ ಪ್ರದೇಶ ಹಾಗೂ ಜಗತ್ತನ್ನು ಬೆಚ್ಚಿಬೀಳಿಸಿದ ತೀವ್ರ ದುರದೃಷ್ಟಕರ ಮತ್ತು ದುರಂತ ಘಟನೆಯಾಗಿದೆ. ಮತ್ತು ಈ ಭಯೋತ್ಪಾದಕ ದಾಳಿಯು ಮನುಷ್ಯತ್ವ ಇಲ್ಲದವರ ಮತೀಯ ಅಂಧಕಾರದ ಹೃದಯಹೀನ ಮನಸ್ಥಿಯು ಧೋತಕವಾಗಿದೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ಕಿಡಿಕಾರಿದೆ.
ಇದನ್ನು ಓದಿ :ಪಹಲ್ಗಾಂ ಉಗ್ರರ ದಾಳಿ ಖಂಡಿಸಿ ಮುಸ್ಲಿಂ ಸಮುದಾಯ ಪ್ರತಿಭಟನೆ
ಈ ಅಮಾನವೀಯ ನರಹಂತಕ ಘಟನೆಯನ್ನು ಭಾರತ ಜ್ಞಾನ ವಿಜ್ಞಾನ ಸಮಿತಿ, ಹಾಸನ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಆ ಪಾಪಿಗಳ ಕೃತ್ಯಕ್ಕೆ ಬಲಿಯಾದ ಎಲ್ಲ ಕುಟುಂಬಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ. ಭಯೋತ್ಪಾದನೆಗೆ ಯಾವುದೇ ಧರ್ಮ ಇಲ್ಲ ಮತ್ತದನ್ನು ಸಮರ್ಥಿಸಲೂ ಸಾಧ್ಯವಿಲ್ಲ . ಈ ದಾಳಿ ಭಾರತದ ಸಾರ್ವಭೌಮತ್ವದ ಮೇಲಿನ ದಾಳಿ, ಧರ್ಮ ಸಾಮರಸ್ಯದ ಮೇಲಿನ ದಾಳಿ ಹಾಗೂ ಮಾನವೀಯತೆಯ ಮೇಲಿನ ದಾಳಿಯಾಗಿದ್ದು, ಇಂತಹ ಕುಕೃತ್ಯಗಳನ್ನು ಮಾಡಿ ಭಾರತದೇಶದ ಸಾಮರಸ್ಯ ಹಾಗೂ ಅದರ ಸಾಮರ್ಥ್ಯವನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಇದನ್ನು ಓದಿ :ಪಹಲ್ಗಾಮ್ ದಾಳಿಗೆ ಪ್ರತಿಕ್ರಿಯೆ: 2 ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ
ಈ ದಾಳಿಯಿಂದ ಕಾಶ್ಮೀರದ ಜನತೆ , ಅಲ್ಲಿನ ಆರ್ಥಿಕತೆ ಹಾಗೂ ದುಡಿಯುವ ವರ್ಗದ ಬದುಕಿನ ಮೇಲೆ ತೀವ್ರವಾದ ಸಂಕಷ್ಟ ತಂದೊಡ್ಡಿದೆ. ಈ ಸಂದರ್ಭದಲ್ಲಿ ಬಿಜಿವಿಎಸ್ ರಾಷ್ಟಸಮಿತಿ ಮತ್ತು ರಾಜ್ಯ ಹಾಗೂ ಹಾಸನ ಜಿಲ್ಲಾಸಮಿತಿ ಭಾರತ ಸರ್ಕಾರದ ಜೊತೆಯಾಗಿ ಗಟ್ಟಿಯಾಗಿ ನಿಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.