ನಾಳೆ ದೇಶಾದ್ಯಂತ ಮುಷ್ಕರ : ಕೃಷಿ ಕಾನೂನು ಹಿಂಪಡೆಯುವವರೆಗೂ ರೈತ ಆಂದೋಲನ

ನವದೆಹಲಿ : ಕೇಂದ್ರದ ಬಿಜೆಪಿ ಸರಕಾರವು ತರಲು ಉದ್ದೇಶಿಸಿರುವ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ರೈತ ಕಿಸಾನ್‌ ಸಂಘಟನೆಗಳು ಜಂಟಿಯಾಗಿ ನಾಳೆ ದೇಶಾದ್ಯಂತ ಮುಷ್ಕರಕ್ಕೆ‌ ಕರೆ ನೀಡಿದೆ.

ಸೆಪ್ಟಂಬರ್‌ 2020ರಲ್ಲಿ ಜಾರಿಗೆ ತರಲಾದ ಮೂರು ಕೃಷಿ ಕಾನೂನುಗಳು ಕೃಷಿ ಕ್ಷೇತ್ರದಲ್ಲಿ ಅತ್ಯಂತ ಗಂಭೀರ ಪರಿಣಾಮ ಬೀರಲಿದೆ, ಇವುಗಳನ್ನು ಕೂಡಲೇ ಹಿಂಪಡೆಯಬೇಕೆಂದು ಕಳೆದ ನವೆಂಬರ್‌ 26ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಆಂದೋಲನವನ್ನು ಹಮ್ಮಿಕೊಂಡಿರುವ ಸಂಯುಕ್ತ ಕಿಸಾನ್‌ ಮೋರ್ಚಾ(ಎಸ್‌ಕೆಎಂ)  ಸಂಘಟನೆಗಳು ಮಾರ್ಚ್‌ 26ಕ್ಕೆ ನಾಲ್ಕು ತಿಂಗಳು ಪೂರ್ಣಗೊಳುತ್ತಿದ್ದು, ಸರಕಾರ ರೈತರ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸದೆ ಇರುವುದರಿಂದ ಮುಷ್ಕರಕ್ಕೆ ಕರೆ ನೀಡಲಾಗಿದೆ.

ಇದನ್ನು ಓದಿ : ‘ಬಡತನದ ವಿರುದ್ಧ ಚೀನಾದ ಪೂರ್ಣ ವಿಜಯ’

ನಾಳೆ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ರಸ್ತೆ, ರೈಲು, ಸಾರಿಗೆ, ಮಾರುಕಟ್ಟೆ ಪ್ರದೇಶಗಳು ಮತ್ತು ಸಾರ್ವಜನಿಕ ಸ್ಥಳಗಳು ಮುಚ್ಚಲ್ಪಟ್ಟಿರುತ್ತವೆ.

ಈ ಬಗೆ ಹೇಳಿಕೆ ನೀಡಿರುವ ರೈತ ಸಂಘಟನೆಗಳು ರೈತ ಸಮುದಾಯ ಮತ್ತು ದೇಶದ ಜನತೆ ಮುಷ್ಕರವನ್ನು ಯಶಸ್ವಿಗೊಳಿಸಲು ಕರೆ ನೀಡಿದ್ದಾರೆ. ಹಾಗೆಯೇ ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ಒಂದಷ್ಟು ಸಡಿಲಿಕೆ ಕ್ರಮಗಳನ್ನು ಪ್ರಕಟಿಸಿದೆ.

ಕೇಂದ್ರದ ಬಿಜೆಪಿ ಸರಕಾರವು ಕೃಷಿ ಕ್ಷೇತ್ರದ ಪ್ರಮುಖ ಸುಧಾರಣೆಗಳಲ್ಲಿ ಇದೊಂದು, ಇವು ಮಧ್ಯವರ್ತಿಗಳನ್ನು ತೆಗೆದುಹಾಕಲಿದೆ. ರೈತರು ತಮ್ಮ ಉತ್ಪನ್ನಗಳನ್ನು ದೇಶದ ಯಾವುದೇ ಭಾಗದಲ್ಲಾದರೂ ಮಾರಾಟ ಮಾಡಬಹುದು ಎಂಬ ನಿಲುವಿನಲ್ಲಿದೆ.

ಆದರೆ ಚಳುವಳಿಯ ಆಂದೋಲನವನ್ನು ಮುನ್ನಡೆಸುತ್ತಿರುವ ರೈತ ಸಂಘಟನೆಗಳು ಇದು ರೈತರ ಈ ಕಾನೂನಿಂದ ರೈತರಿಗೆ ಯಾವುದೇ ಭದ್ರತೆ ಇರುವುದಿಲ್ಲ. ಅಲ್ಲದೆ, ಕನಿಷ್ಠ ಬೆಂಬಲ ಬೆಲೆಯ ಸುರಕ್ಷತಾ ಸಮಿತಿ ತೆಗೆದುಹಾಕಲು ದಾರಿ ಮಾಡಿಕೊಡುತ್ತದೆ ಮತ್ತು ಮಂಡಿಗಳ ವ್ಯವಸ್ಥೆಯನ್ನು ದೂರವಿಡಲು ಕಾರಣವಾಗುತ್ತವೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ಕೃಷಿ ಕಾಯ್ದೆ ವಿರುದ್ಧ ವಿಧಾನಸೌಧದ ಸುತ್ತ ಮೊಳಗಿದ ರೈತ ಕಹಳೆ

ಅಲ್ಲದೆ ಇದು ಸ್ಪಷ್ಟವಾಗಿ ಕಾರ್ಪೋರೇಟ್‌ ಕೃಷಿಗೆ ದಾರಿ ಮಾಡಿಕೊಡುತ್ತದೆ ಹಾಗೂ ರೈತರನ್ನು ಮತ್ತಷ್ಟು ಸಂಕಷ್ಟ ಈಡು ಮಾಡುತ್ತದೆ ಮತ್ತು ಗುಲಾಮಗಿರಿಗೆ ದಾರಿ ಮಾಡಿಕೊಡುತ್ತದೆ ಎಂದು ಖಂಡಿಸಿದರು.

ಕೇಂದ್ರ ಸರಕಾರ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವವರೆಗೆ ಮತ್ತು ಎಂಎಸ್‌ಪಿ ಗೆ ಕಾನೂನಾತ್ಮಕ ಖಾತರಿ ನೀಡುವವರೆಗೂ ರೈತ ಆಂದೋಲನ ಮುಂದುವರೆಯಲಿದೆ ಎಂದು ಮುಖಂಡರು ತಿಳಿಸಿದ್ದಾರೆ. ದೆಲಿಯ ಗಡಿಗಳಲ್ಲಿ ನಡೆಯುತ್ತಿರುವ ಈ ಆಂದೋಲನವನ್ನು ಮುಂದಿನ 8-9 ತಿಂಗಳವರೆಗೆ ಮುಂದುವರೆಯಲಿದೆ ಎಂದು ಅಖಿಲ ಭಾರತ ಕಿಸಾನ್‌ ಸಭಾದ ಮುಖಂಡರು ತಿಳಿಸಿದ್ದಾರೆ.

ರಾಷ್ಟ್ರೀಯ ನಾಯಕ ರಾಕೇಶ್‌ ಟಿಕಾಯತ್‌ ಅವರು ʻʻಜನವರಿ 26ರಂದು ನಡೆದ ಘಟನೆಯ ನಂತರ ಅನೇಕ ರೈತರ ವಿರುದ್ಧ ಮೊಕದ್ದಮೆ ದಾಖಲಿಸಲಾಗುತ್ತಿದೆ. ಆದರೆ, ರೈತರು ಇಂತಹ ಪ್ರಕರಣಗಳಿಗೆ ಹೆದರುವವರಲ್ಲ. ಕೇಂದ್ರವು ಕಾನೂನು ಹಿಂಪಡೆದು ಎಂಎಸ್‌ಪಿ ಕಾನೂನಾತ್ಮಕ ಖಾತರಿಯನ್ನು ಕಾನೂನು ರಚನೆ ಮಾಡುವವರೆಗೂ ನಮ್ಮ ರೈತ ಆಂದೋಲನ ಮುಂದುವರೆಯಲಿದೆʼʼ ಎಂದು ಹೇಳಿದರು.

ಇದನ್ನು ಓದಿ : ದೆಹಲಿಯಂತೆ ಬೆಂಗಳೂರಿನಲ್ಲಿ ಹೋರಾಟ ಆರಂಭಿಸುವಂತೆ ಟಿಕಾಯತ್ ಕರೆ

ವ್ಯಾಪಾರೀಗಳ ಸಂಘಟನೆಗಳೂ ಸಹ ಭಾರತ್‌ ಬಂದ್‌ ನಲ್ಲಿ ಭಾಗವಹಿಸುವುದು ವ್ಯಾಪಾರಿಗಳಿಗೆ ಬಿಟ್ಟ ವಿಚಾರ ನಾವು ಯಾವುದೇ ನಿರ್ಧಿಷ್ಟ ಸೂಚನೆಯನ್ನು ಕೊಡುವುದಿಲ್ಲ ಎಂದು ಸಂಘಟನೆ ಪರವಾಗಿ ಶೈಲೇಂದ್ರ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ಮಹಾನಗರದ ವ್ಯಾಪಾರ್‌ ಮಂಡಲ್‌ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ್‌ ಚಾವ್ಲಾ ರವರು ಸಹ ಸಂಘವು ತಟಸ್ಥವಾಗಿ ಉಳಿಯಲಿದೆ. ಸಂಘವು ಯಾರನ್ನೂ ಅಂಗಡಿಗಳನ್ನು ಮುಚ್ಚುವಂತೆ ಒತ್ತಾಯಿಸುವುದಿಲ್ಲ. ವ್ಯಾಪಾರಿಗಳು ತಮ್ಮದೇ ಆದ ನಿರ್ಧಾರವನ್ನು ಕೈಗೊಳ್ಳಲು ಮುಕ್ತರಾಗಿರುವುದರಿಂದ ಅವರು ಸ್ವತಂತ್ರರು ಎಂದು ತಿಳಿಸಿದರು.

Donate Janashakthi Media

Leave a Reply

Your email address will not be published. Required fields are marked *