ʼರಾಮಾಯಣ ದರ್ಶನಂʼ ವಿಶ್ವಮಾನವ ಚಿಂತನೆಯ ಕೃತಿ – ಜ.ನಾ.ತೇಜಶ್ರಿ

ಹಾಸನ : ವಾಲ್ಮೀಕಿ ರಾಮಾಯಣ ಇದ್ದಾಗ ಇನ್ನೊಂದು ರಾಮಾಯಣದ ಅಗತ್ಯ ಇತ್ತೇ ಎನ್ನುವ ಪ್ರಶ್ನೆ ಶ್ರೀರಾಮಾಯಣದರ್ಶನಂ ಮಹಾಕಾವ್ಯ ಬರೆದಾಗ ಕೇಳಿದ್ದುಂಟು, ಆದರೆ ವಾಲ್ಮೀಕಿ ರಾಮಾಯಣದಲ್ಲಿ ಪಾತ್ರಗಳು ತನ್ನ ಕತೆಯನ್ನೆ ಹೇಳುತ್ತಾ ಹೋಗುತ್ತವೆ ಕುವೆಂಪು ಆ ಪಾತ್ರಗಳನ್ನು ಚಿಕಿತ್ಸಾತ್ಮಕ ದೃಷ್ಠಿಯಲ್ಲಿ ನೋಡುತ್ತಾ ಸಮಕಾಲೀನ ಪ್ರಪಂಚಕ್ಕೆ ಬೇಕಾದ ವೈಚಾರಿಕತೆಯನ್ನು ಕಟ್ಟಿಕೊಟ್ಟಿದ್ದಾರೆ ಎಂದು ಖ್ಯಾತ ಕವಯತ್ರಿ ಜ.ನಾ.ತೇಜಶ್ರಿ ತಿಳಿಸಿದರು.

ಅವರು ಇತ್ತೀಚೆಗೆ ಹಾಸನ ನಗರದ ಬಿ.ಜಿ.ವಿ.ಎಸ್., ಜಯನಗರ ಘಟಕ ವತಿಯಿಂದ ಬಿಜಿವಿಎಸ್ ಜಿಲ್ಲಾ ಸಹಕಾರ್ಯದರ್ಶಿ ನಾಗೇಶ್ ರವರ ಮನೆಯಲ್ಲಿಘಟಕ ಬಿಜಿವಿಎಸ್ “ಮನೆಯಂಗಳದಲ್ಲಿ ಮಾತುಕತೆ ಮಾಸಿಕ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ “ಸುಸ್ಥಿರ ಸಮಾಜಕ್ಕೆ ಕುವೆಂಪುರವರ ಚಿಂತನೆಗಳು” ಕುರಿತು ಸಂವಾದದಲ್ಲಿ ಸಂವಾದಕಿಯಾಗಿ ಭಾಗವಹಿಸಿ ಮಾತನಾಡುತ್ತಾ,  ಶಂಬೂಕ ಕ್ರೌಂಚಪಕ್ಕಿ ಕೊಂದು ಮನೆಗೆ ತೆಗೆದುಕೊಂಡು ಹೋಗುತ್ತಾನೆ, ಕುವೆಂಪು ಅವನಲ್ಲಿ ಪಶ್ಚಾತ್ತಾಪ ಭಾವನೆ ಮೂಡಿಸಿ ಪರಿಸರ, ಪಕ್ಷಿ ಪ್ರೇಮಿಯಾಗಿಸುತ್ತಾರೆ, ರಾಮಾಯಣದ ಕತೆಯಲ್ಲಿ ಶೂದ್ರತಪಸ್ಸನ್ನು ನಿಶೇಧಿಸುತ್ತದೆ ಆದರೆ ಕುವೆಂಪು ತಪಸ್ಸಿಗೆ ಎಲ್ಲರೂ ಅರ್ಹರೆನ್ನುವುದನ್ನ ಜಲಗಾರನೊಬ್ಬ ಸನ್ಯಾಸಿಯಾಗುವುದನ್ನ ಚಿತ್ರಿಸುತ್ತಾರೆ, ಹೀಗೆ ಅದರಲ್ಲಿನ ಯಾವ ಪಾತ್ರವನ್ನೂ ನಿರಾಕರಿಸದೆ ಸಮಾಜಮುಖಿಯಾಗಿ ಕಟ್ಟುವ ಚಿಂತನೆಯೇ ವಿಶ್ವಮಾನವತ್ವದ್ದು ಆ ಕಾರಣಕ್ಕಾಗಿ ಕುವೆಂಪು ರಾಮಾಯಣ ದರ್ಶನಂ ಈ ದೇಶದ ಮಹತ್ತರ ಕೃತಿಯಾಯಿತು ಎಂದು ಕುವೆಂಪುರವರ ವಿಶ್ವಮಾನವತ್ವದ ದೃಷ್ಠಿಕೋನವನ್ನು ವಿವರಿಸಿರು.

ಕುವೆಂಪು ಅವರ ಮುಂದೆ ಬಾಲ್ಯದಲ್ಲಿ ತಾನು ಹಾಡಿದ “ ಓ ನನ್ನ ಚೇತನಾ ಆಗು ನಿ ಆನಿಕೇತನ” ಅವರನ್ನು ಮಂತ್ರಮುಗ್ಧರನ್ನಾಗಿಸಿ ಈ ಸಾಲು ನಾವು ಮೊದಲು ಎಲ್ಲ ಕೊಳಕುಗಳನ್ನ ಕೊಡವಿಕೊಂಡು ಅನಿಕೇತನಾ ಆಗಬೇಕು ಆನಂತರ ನೀನು ಈ ಸಮಾಜದ ಅನಿಕೇತನ ಆಗುತ್ತೀಯ ಎಂದು ಎಂದು ಅದರರ್ಥ ತಿಳಿಸಿ ಹೇಳಿದ್ದರು ಕುವೆಂಪು ಎಂದು ಜ್ಞಾಪಿಸಿಕೊಂಡ ಅವರು ಪ್ರತಿ ಘಟ್ಟದಲ್ಲೂ, ಪ್ರತಿ ಮಾತಿನಲ್ಲೂ, ಪ್ರತಿ ಕಾವ್ಯದಲ್ಲೂ ಕುವೆಂಪು ವಿಶ್ವ ಮಾನವ ಧೃಷ್ಠಿಯನ್ನು ಪೋಣಿಸಿದ್ದಾರೆ ಎಂದ ಅವರು ಅವರನ್ನು ಜಾತಿಗೆ ಕಟ್ಟಿಹಾಕುವುದು ಕುತ್ಸಿತ ಮನಸ್ಸು ಎಂದು ಕುವೆಂಪುರವರ ವಿಚಾರಧಾರೆಯನ್ನು ವಿವರಿಸುತ್ತಾ ಮಕ್ಕಳಿಗೆ ವೈಚಾರಿಕತೆ, ಪ್ರಶ್ನಿಸುವ ಗುಣ ಎಷ್ಟು ಮುಖ್ಯ, ನಾವು ಪರಂಪರೆ, ಸಂಪ್ರದಾಯವನ್ನು ಒರೆಗೆ ಹಚ್ಚಿ ವಿಶ್ಲೇಷಿಸುವ ಪ್ರಯತ್ನ ಮಾಡುವುದರಿಂದ ಮತಜಾತಿ ಹೆಸರಿನಲ್ಲಿ ನಡೆಯುವ ಅಪಾಯಕಾರಿ ಬೆಳವಣಿಗೆಯನ್ನು ದಮನ ಮಾಡಲು ಸಾಧ್ಯವಿದೆ ಇದನ್ನೇ ಕುವೆಂಪು ತನ್ನಜೀವಮಾನದುದ್ದಕ್ಕೂ ಸಾಧಿಸಿಕೊಂಡು ಬಂದದ್ದು ಎನ್ನುತ್ತಾ ಮಾತುಕತೆಯಲ್ಲಿ ಭಾಗವಹಿಸಿ ದವರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ಬೇರೆಯವರನ್ನು ತಿದ್ದುವ ಮೊದಲು ಬದಲಾವಣೆ ನನ್ನಿಂದ ಆರಂಭವಾಗಬೇಕು ಎಂಬುದಾಗಿ ಹೇಳಿದರು.

ಇದನ್ನೂ ಓದಿ : ದೇಶದಲ್ಲಿ ವಿಜ್ಞಾನಕ್ಕಿಂತ ಮೌಢ್ಯಾಚರಣೆ ಹೆಚ್ಚು ಬೆಳೆಯುತ್ತಿವೆ: ಪ್ರೊ.ಪಾಲಹಳ್ಳಿ ವಿಶ್ವನಾಥ್‌

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ಮನೆಯಂಗಳದ ಮಾತುಕತೆ ಎನ್ನುವುದು ಮನೆ ಮನೆಯಲ್ಲೇ ಕುಳಿತು ನಮ್ಮಗಳ ವೈಚಾಋಇಕ ಪ್ರಜ್ಞೆಯನ್ನು ಉತ್ತಮಪಡಿಸಿಕೊಂಡು ಸಮಾಜವನ್ನು ವೈಜ್ಞಾನಿಕ ಧೃ಼ಷ್ಠಿಕೋನದಲ್ಲಿ ಕೊಂಡೊಯ್ಯುವ ಆಲೋಚನೆಯನ್ನು ಬೆಳೆಸಿಕೊಳ್ಳುವ ವೇದಿಕೆ ಈ ವೇದಿಕೆ ಒಂದು ಮಾದರಿಯ ಅನುಭವ ಮಂಟಕ ಇದರಲ್ಲಿ ಗೃಹಿಣಿಯರ ಅನುಭವ ಕಾವ್ಯಪಡೆದುಕೊಳ್ಳುತ್ತದೆ, ನೌಕರರ ಮನದ ಮಾತು ಅಕ್ಷರ ಪಡೆಯುತ್ತದೆ, ಒಟ್ಟಾರೆ ಪ್ರಜಾಫ್ರಭುತ್ವದ ಮೌಲ್ಯಗಳನ್ನ ಸಾಂಘಿಕವಾಗಿ ಹೃನ್ಮನಗಳಿಸಿಕೊಳ್ಳುವ ಸರಳ ವೇದಿಕೆ ಎಂದು ವಿವರಿಸಿ ಇಲ್ಲಿ ಯಾರೂ ಮುಖ್ಯರಲ್ಲ ಯಾರೂ ಅಮುಖ್ಯರಲ್ಲ ಎಲ್ಲವೂ ಮಹತ್ತರವೇ ಎಂದು ಕುವೆಂಪು ಚಿಂತನೆ ಹಂಚುವ ಅನಿವಾರ್ಯತೆಯನ್ನು ವಿವರಿಸಿದರು.

ಸಂವಾದದಲ್ಲಿ ಭಾಗವಹಿಸಿದ್ದ ಸ್ಥಳೀಯರು ಹಾಗೂ ತೇಜಶ್ರೀ ಕುವೆಂಪು ಗೀತೆಗಳನ್ನು ಹಾಡಿದರು, ಹಲವಾರು ಕುತೂಹಲಕಾರಿ ಪ್ರಶ್ನೆಗಳಿಗೆ ಕವಯತ್ರಿ ತೇಜಶ್ರಿ ಜನರಿಗೆ ಉತ್ತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯನಗರ ಘಟಕ ಬಿಜಿವಿಎಸ್ ಅಧ್ಯಕ್ಷೆ ಶಾರದಾ ವಹಿಸಿದ್ದರು, ಸಹ ಕಾರ್ಯದರ್ಶಿ ಆಶಾ ನಿರೂಪಿಸಿ, ಅತಿಥೇಯ ನಾಗೇಶ್ ಸ್ವಾಗತಿಸಿದರು, ಘಟಕ ಉಪಾಧ್ಯಕ್ಷೆ ಭಾನುಮತಿ ಜ.ನಾ.ತೇಜಶ್ರೀ ಯವರ ಕಿರುಪರಿಚಯ ಮಾಡಿದರೆ, ಘಟಕದ ಸದಸ್ಯರ ಜಾನಕಿ ವಂದಿಸಿದರು. ಕಾರ್ಯಕ್ರಮದಲ್ಲಿ, ಜಿಲ್ಲಾ ಸಹಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ, ರೈತ ನಾಯಕ ನವೀನ್‌ಕುಮಾರ್, ಜಯನಗರ ಘಟಕ ಕಾರ್ಯದರ್ಶಿ ಮೋನಿಕಾ, ಖಜಾಂಚಿ ಸುರೇಶ್, ಸಹಕಾರ್ಯದರ್ಶಿ ಶ್ರೀನಿವಾಸ್ ಮತ್ತು ಜಯನಗರ ಹಾಗೂ ಚಿಕ್ಕ ಹೊನ್ನೇನಹಳ್ಳಿ ವಾಸಿಗಳು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *