ಜೈನ್ ವಿವಿಯಲ್ಲಿ ಅಂಬೇಡ್ಕರ್‌ಗೆ ಉದ್ದೇಶಪೂರ್ವಕವಾಗಿ ಅವಮಾನ: ಘಟನೆಯನ್ನು ನಿವೃತ್ತ ನ್ಯಾಯಾಮೂರ್ತಿಯಿಂದ ತನಿಖೆಯಾಗಲಿ

ಬೆಂಗಳೂರು : ಜೈನ್ ವಿವಿಯಲ್ಲಿ ಅಂಬೇಡ್ಕರ್‌ಗೆ ಅವಮಾನ ಮಾಡಿದ ಘಟನೆಯನ್ನು ಗಂಬೀರವಾಗಿ ಪರಿಗಣಿಸಿ ಸರಕಾರವು ನಿವೃತ್ತ ನ್ಯಾಯಾದೀಶರನ್ನು ಒಳಗೊಂಡ ಸಮಿತಿಯಿಂದ ವರದಿಯನ್ನು ಪಡೆಯಬೇಕು ಎಂದು ಬೆಂಗಳೂರು ವಿವಿಯ ವಿದ್ಯಾರ್ಥಿಗಳು ಪ್ರತಿಭಟನೆ ಮೂಲಕ ಒತ್ತಾಯಿಸಿದ್ದಾರೆ.

ಬುಧವಾರ ಬೆಂಗಳೂರು ವಿವಿಯ ಜ್ಞಾನಭಾರತಿ ಆವರಣದಲ್ಲಿರುವ ಎಲ್ಲ ವಿಭಾಗಗಳಿಗೆ, ಕಚೇರಿಗಳಿಗೆ ಬೀಗ ಜಡಿದು, ಆಡಳಿತ ಕಚೇರಿಯ ಮುಂಭಾಗ ಸ್ವಾಭಿಮಾನಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ವೇದಿಕೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ದಲಿತ ಸಮುದಾಯಕ್ಕೆ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಉದ್ದೇಶದಿಂದಲೇ ಜೈನ್ ವಿವಿಯ ಉತ್ಸವದಲ್ಲಿ ವಿವಾದಿತ ಕಿರು ಚಿತ್ರವನ್ನು ಪ್ರದರ್ಶನ ಮಾಡಿದ್ದಾರೆ. ಹಾಗಾಗಿ ಘಟನೆನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡದ ಹೊರತು ಪ್ರಕರಣಕ್ಕೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ದೇಶಕ್ಕೆ ಸಂವಿಧಾನವನ್ನು ರಚನೆ ಮಾಡಿದ ಅಂಬೇಡ್ಕರ್ ಅವರಿಗೆ ಇತ್ತೀಚೆಗೆ ಉದ್ದೇಶಪೂರ್ವಕವಾಗಿ ಅವಮಾನವನ್ನು ಮಾಡಲಾಗುತ್ತಿದೆ. ರಾಯಚೂರಿನಲ್ಲಿ ಗಣರಾಜ್ಯೋತ್ಸವದಂದೇ ಅಂಬೇಡ್ಕರ್ ಭಾವಚಿತ್ರವನ್ನು ಕೆಳಗೆ ಇಳಿಸಿ ಅವಮಾನ ಮಾಡಲಾಗಿದೆ. ಜೈನ್ ವಿವಿಯಲ್ಲಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡಲಾಗಿದೆ. ಆದರೆ ಸರಕಾರ ಯಾವುದೇ ಕ್ರಮವನ್ನು ಜರುಗಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದ್ದಾರೆ.

ಕಿರು ನಾಟಕವೊಂದರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿ, ಜೈನ್ ವಿವಿಯ ಉತ್ಸವದಲ್ಲಿ ಅದನ್ನು ಪ್ರದರ್ಶನ ಮಾಡಿ ಸಂಭ್ರಮಿಸಿದೆ. ಈ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯದ ಮಾನ್ಯತೆಯನ್ನು ಕೂಡಲೇ ರದ್ದು ಮಾಡಬೇಕು. ಯುಜಿಸಿ ಇದನ್ನು ಗಂಬೀರವಾಗಿ ಪರಿಗಣಿಸಿ ಯುಜಿಸಿ ನಿಯಮಗಳ ಅಡಿ ವಿವಿಗೆ ನಿರ್ಬಂಧ ವಿಧಿಸಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದ್ದಾರೆ.

ಭಾರತದಲ್ಲಿ ಶತಶತಮಾನಗಳಿಂದಲೂ ಅಸ್ತಿತ್ವದಲ್ಲಿದ್ದಂತಹ ಅಸ್ಪೃಶ್ಯತೆ, ಜಾತಿ ಪದ್ಧತಿಯನ್ನು ತೊಡೆದು ಹಾಕಿ ಸಮಾನತೆಯನ್ನು ಸಾರಿ, ಇಡೀ ವಿಶ್ವಕ್ಕೆ ಮಾದರಿಯಾದಂತಹ ಡಾ. ಬಿ.ಆರ್ ಅಂಬೇಡ್ಕರ್ ರವರನ್ನು ಅತ್ಯಂತ ಕೀಳಾಗಿ ಚಿತ್ರಿಸಿರುವುದು ದಲಿತರ ಮನಸ್ಸಿಗೆ ಅಶಾಂತಿಯನ್ನು ಉಂಟು ಮಾಡಿದ್ದು, ಅವರು ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನವನ್ನು ಮಾಡಿದವರ ವಿರುದ್ಧ ಹೋರಾಟ ಮಾಡುವಂತೆ ಮಾಡಿದೆ. ಭಾರತದಲ್ಲಿ ಶತಶತಮಾನಗಳಿಂದಲೂ ಅಸ್ತಿತ್ವದಲ್ಲಿದ್ದಂತಹ ಅಸ್ಪೃಶ್ಯತೆ, ಜಾತಿ ಪದ್ಧತಿಯನ್ನು ತೊಡೆದು ಹಾಕಿ ಸಮಾನತೆಯನ್ನು ಸಾರಿ, ಇಡೀ ವಿಶ್ವಕ್ಕೆ ಮಾದರಿಯಾದಂತಹ ಡಾ. ಬಿ.ಆರ್ ಅಂಬೇಡ್ಕರ್ ರವರನ್ನು ಅತ್ಯಂತ ಕೀಳಾಗಿ ಚಿತ್ರಿಸಿರುವುದು ದಲಿತರ ಮನಸ್ಸಿಗೆ ಅಶಾಂತಿಯನ್ನು ಉಂಟು ಮಾಡಿದ್ದು, ಅವರು ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನವನ್ನು ಮಾಡಿದವರ ವಿರುದ್ಧ ಹೋರಾಟ ಮಾಡುವಂತೆ ಮಾಡಿದೆ ಎಂದು ವಿದ್ಯಾರ್ಥಿಗಳು ಬೇಸರ  ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿಜೈನ್‌ ವಿವಿಯಲ್ಲಿ ಅಂಬೇಡ್ಕರ್‌ಗೆ ಅವಮಾನ: ವಿದ್ಯಾರ್ಥಿಗಳ ಅಮಾನತು; ಪ್ರಕರಣ ದಾಖಲು

ಜೈನ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ವಿರುದ್ಧ ಎಸ್ಸಿಎಸ್ಟಿ ದೌರ್ಜನ್ಯ ಕಾಯ್ದೆ 1989ರ ಅಡಿಯಲ್ಲಿ ಮತ್ತು ಭಾರತೀಯ ದಂಡ ಸಂಹಿತೆ  1860ರ ಅಡಿಯಲ್ಲಿ ದೇಶದ್ರೋಹದ ಪ್ರಕರಣವನ್ನು ದಾಖಲಿಸಿ, ಕಾನೂನಿನ ಅನುಸಾರ ಕ್ರಮವನ್ನು ಕೈಗೊಳ್ಳಬೇಕು. ದೇಶದ ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಸರಕಾರ ಎಚ್ಚರಿಕೆಯನ್ನು ವಹಿಸಬೇಕು ಎಂದು ತಿಳಿಸಿದ್ದಾರೆ.

ಪ್ರತಿಭಟನೆಯಲ್ಲಿ ಉರಿಲಿಂಗಿ ಪೆದ್ದಿ ಮಠದ. ಜ್ಞಾನ ಪ್ರಕಾಶ್ ಸ್ವಾಮೀಜಿ, ಬಿಯುಟಿಸಿ ಅಧ್ಯಕ್ಷ ಪ್ರೊ.ಮುರಳೀಧರ್, ಬಿ. ಗೋಪಾಲ್, ಡಾ. ರಾಮಕೃಷ್ಣಯ್ಯ, ಪ್ರೊ. ಹೊನ್ನು ಸಿದ್ದಾರ್ಥ, ಟಿ.ಚ್.ಮೂರ್ತಿ, ಡಾ.ಪ್ರಭಾಕರ್, ಪ್ರೊ. ಕೃಷ್ಣಸ್ವಾಮಿ, ಹಾ.ರಾ. ಮಹೇಶ್, ಡಾ.ದೇವಾನಂದ್, ಸುರೇಶ್ ಗೌತಮ್, ವಿದ್ಯಾರ್ಥಿ ಮುಖಂಡರಾದ ಲೋಕೇಶ್ ಎನ್, ಶಶಿಕುಮಾರ್ ಪಿ, ಬೈರಾಜ್, ನಂದೀಶ್, ಚಂದ್ರ ಮಿಡ್ಲಮನೆ, ಈಶ್ವರ್ ಸಿರಿಗೇರಿ, ಲಿಂಗರಾಜು, ಅರಣ್, ಶುಭಾಕರ್, ಪ್ರಭಾಕರ್, ತಿಲಾಕ್, ರಾಜೇಶ್, ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು, ವಿವಿಯ ಬೋಧಕ-ಬೋಧಕೇತರ ನೌಕಕರ ಸಂಘದ ಪದಾಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

 

Donate Janashakthi Media

Leave a Reply

Your email address will not be published. Required fields are marked *