ಪಣಜಿ: ತನ್ನ ನಾಲ್ಕು ವರ್ಷದ ಮಗನ ಹತ್ಯೆ ಮಾಡಿದ ಆರೋಪದ ಮೇಲೆ ಗೋವಾ ಪೊಲೀಸರು ಬೆಂಗಳೂರಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಂಪೆನಿಯೊಂದರ ಸಿಇಒ ಸುಚನಾ ಸೇಠ್ (39) ಎಂಬವರನ್ನು ಗೋವಾದ ಹೋಟೆಲ್ ಸೋಲ್ ಬನಿಯನ್ ಗ್ರಾಂಡೆ ಎಂಬ ಸರ್ವಿಸ್ ಅಪಾರ್ಟ್‌ಮೆಂಟ್‌ನಲ್ಲಿ ಸೋಮವಾರ ಬಂಧಿಸಿದ್ದಾರೆ. ಆರೋಪಿ ಸುಚನಾ ಚಿತ್ರದುರ್ಗ ಜಿಲ್ಲೆಯಲ್ಲಿ ಕ್ಯಾಬ್ ಮೂಲಕ ತನ್ನ ಮಗನ ಶವವನ್ನು ಬ್ಯಾಗ್‌ನಲ್ಲಿ ಬಚ್ಚಿಟ್ಟುಕೊಂಡು ಪರಾರಿಯಾಗುತ್ತಿದ್ದಾಗ ಬಂಧನಕ್ಕೆ ಒಳಗಾಗಿದ್ದಾರೆ. ಕೊಂದು
ಏರ್ ಬಿಎನ್‌ಬಿ ಮೂಲಕ ಬುಕ್ ಮಾಡಿದ್ದ ಅಪಾರ್ಟ್‌ಮೆಂಟ್‌ಗೆ ಮಹಿಳೆಯು ತನ್ನ 4 ವರ್ಷದ ಮಗನೊಂದಿಗೆ ಆಗಮಿಸಿದ್ದರು ಎಂದು ಉತ್ತರ ಗೋವಾದ ಪೊಲೀಸ್ ವರಿಷ್ಠಾಧಿಕಾರಿ ನಿಧಿನ್ ವಲ್ಸನ್ ಹೇಳಿದ್ದಾರೆ. ಆದರೆ ಜನವರಿ 7 ಮತ್ತು ಜನವರಿ 8 ರ ಮಧ್ಯರಾತ್ರಿಯ ಸಮಯದಲ್ಲಿ ತಾನು ತೆರಳುವುದಾಗಿ ಹಾಗೂ ತನಗೆ ಟ್ಯಾಕ್ಸಿಗೆ ವ್ಯವಸ್ಥೆ ಮಾಡುವಂತೆ ಅಲ್ಲಿನ ಸಿಬ್ಬಂದಿಗೆ ಆರೋಪಿ ವಿನಂತಿಸಿ, ಅಲ್ಲಿಂದ ತೆರಳಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.ಕೊಂದು
ಇದನ್ನೂ ಓದಿ: ‘ಮತ್ತೆ ಉಸಿರಾಡುವಂತಾಯಿತು’ | ಸುಪ್ರೀಂ ತೀರ್ಪಿಗೆ ಬಿಲ್ಕಿಸ್ ಬಾನೋ ಪ್ರತಿಕ್ರಿಯೆ
“ಈ ವೇಳೆ ಸಿಬ್ಬಂದಿ, ‘ಬೆಂಗಳೂರಿಗೆ ವಿಮಾನದಲ್ಲಿ ಹೋಗಬಹುದಲ್ಲವೆ’ ಎಂದು ಸಲಹೆ ನೀಡಿದ್ದರು. ಆದರೆ ಟ್ಯಾಕ್ಸಿಗಿಂತ, ವಿಮಾನ ಹೆಚ್ಚು ದುಬಾರಿಯಾಗಿದ್ದು, ತಾನು ಟ್ಯಾಕ್ಸಿಯಲ್ಲಿ ಪ್ರಯಾಣಿಸುವುದಾಗಿ ಹೇಳಿದ್ದರು. ಹೀಗಾಗಿ ಸಿಬ್ಬಂದಿ ಟ್ಯಾಕ್ಸಿ ವ್ಯವಸ್ಥೆ ಮಾಡಿದ್ದರು” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಅದಾಗ್ಯೂ, ಆರೋಪಿ ತೆರಳಿದ ನಂತರ ಕೊಠಡಿಯನ್ನು ಸ್ವಚ್ಛಗೊಳಿಸಲು ತೆರಳಿದಾಗ ಸ್ವಚ್ಛತಾ ಸಿಬ್ಬಂದಿಗೆ ಕೆಂಪು ಕಲೆಗಳು ಕಂಡುಬಂದಿತ್ತು. ಅದನ್ನು ರಕ್ತ ಎಂದು ಶಂಕಿಸಿದ ಅಪಾರ್ಟ್‌ಮೆಂಟ್‌ನ ಆಡಳಿತ ಮಂಡಳಿ ತಕ್ಷಣವೇ ಕಲಾಂಗಗುಟ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ. ಕೊಂದು
“ಪ್ರಥಮ ದೃಷ್ಟಿಯಲ್ಲೆ ನಮ್ಮ ತಂಡವು ಕೆಂಪು ಕಲೆಗಳು ರಕ್ತ ಎಂದು ಶಂಕಿಸಿವೆವು. ಹೀಗಾಗಿ ಮಹಿಳೆಯ ಚಾಲಕನನ್ನು ಸಂಪರ್ಕಿಸಿ ಅವರೊಂದಿಗೆ ಮಾತನಾಡಿದೆವು. ತನ್ನೊಂದಿಗೆ ಆಗಮಿಸಿದ್ದ ಮಗ ಕೆಲವು ದಿನಗಳಿಂದ ಮಾರ್ಗೋವಾದಲ್ಲಿ ತನ್ನ ಸ್ನೇಹಿತನೊಂದಿಗೆ ಇದ್ದಾನೆಂದು ತಿಳಿಸಿ ಅವರ ವಿಳಾಸವನ್ನು ಒದಗಿಸಿದ್ದರು” ಎಂದು ಪೊಲೀಸರು ಹೇಳಿದ್ದಾರೆ.
“ಕ್ಯಾಲಂಗುಟ್ ಪೊಲೀಸ್ ಇನ್ಸ್‌ಪೆಕ್ಟರ್ ಪರೇಶ್ ನಾಯ್ಕ್ ಅವರು ತಕ್ಷಣವೇ ಫಟೋರ್ಡಾ ಪೊಲೀಸರ ಸಹಾಯವನ್ನು ಪಡೆದು, ಆರೋಪಿ ಸುಚನಾ ಸೇಠ್ ನೀಡಿದ ವಿಳಾಸ ನಕಲಿ ಎಂದು ಅವರು ಕಂಡುಕೊಂಡಿದ್ದಾರೆ. ಅಷ್ಟೆ ಅಲ್ಲದೆ ಸಿಸಿಟಿವಿ ದೃಶ್ಯಾವಳಿಗಳು ಸುಚನಾ ತನ್ನ ಮಗನೊಂದಿಗೆ ಸ್ಥಳಕ್ಕೆ ಆಗಮಿಸಿ, ನಿರ್ಗಮಿಸುವಾಗ ಮಗನಿಲ್ಲದೆ ತೆರಳಿದ್ದು ದಾಖಲಿಸಿತ್ತು” ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಅಯ್ಯಪ್ಪ ವ್ರತಧಾರಿಗಳಿಗೆ ಮಸೀದಿಯಲ್ಲಿ ಆಸರೆ, ಪೂಜೆ ಮಾಡಲು ಅವಕಾಶ
ಈ ವೇಳೆ ಇನ್ಸ್‌ಪೆಕ್ಟರ್ ಅವರು ಬೆಂಗಳೂರಿಗೆ ತೆರಳುತ್ತಿದ್ದ ಟ್ಯಾಕ್ಸಿ ಡ್ರೈವರ್ ಜೊತೆಗೆ ದೂರವಾಣಿಯಲ್ಲಿ ಮಾತನಾಡಿದ್ದು, ಅವರು ಚಿತ್ರದುರ್ಗ ತಲುಪಿರುವ ಬಗ್ಗೆ ತಿಳಿದುಕೊಂಡಿದ್ದಾರೆ. ಹೀಗಾಗಿ ಆರೋಪಿಯನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯುವಂತೆ ಅವರು ಡ್ರೈವರ್‌ಗೆ ಸೂಚಿಸಿದ್ದಾರೆ. ಹಾಗಾಗಿ ಟ್ಯಾಕ್ಸಿ ಚಾಲಕ ಮಹಿಳೆಗೆ ಏನನ್ನೂ ಹೇಳದೆ ಟ್ಯಾಕ್ಸಿಯನ್ನು ಐಮಂಗಲ ಪೊಲೀಸ್ ಠಾಣೆಗೆ ಓಡಿಸಿದ್ದಾನೆ. ಅಷ್ಟರಲ್ಲಿ, ಗೋವಾ ಪೊಲೀಸರು ಚಿತ್ರದುರ್ಗ ಪೊಲೀಸರ ಸಹಾಯ ಪಡೆದು ಅವರ ಕೋರಿಕೆಯ ಮೇರೆಗೆ ಸುಚನಾ ಅವರ ವಸ್ತುಗಳನ್ನು ಪರಿಶೀಲಿಸಿದಾಗ ಅವರ ಬ್ಯಾಗ್‌ನಲ್ಲಿ ಮಗನ ಮೃತದೇಹ ಪತ್ತೆಯಾಗಿದೆ.
“ಹೋಟೆಲ್ ಮ್ಯಾನೇಜರ್ ದೂರಿನ ಆಧಾರದ ಮೇಲೆ, ನಾವು ತಕ್ಷಣ ದೂರು ಪಡೆದು, ಎಫ್ಐಆರ್ ದಾಖಲಿಸಿದ್ದೇವೆ, ಮಹಿಳೆಯ ಮೇಲೆ ಐಪಿಸಿ ಸೆಕ್ಷನ್ 302, 201 ಮತ್ತು ಗೋವಾ ಮಕ್ಕಳ ಕಾಯ್ದೆಯ ಸೆಕ್ಷನ್ 8 ರ ಆರೋಪ ಹೊರಿಸಲಾಗಿದೆ” ಎಂದು ಉತ್ತರ ಗೋವಾದ ಪೊಲೀಸ್ ವರಿಷ್ಠಾಧಿಕಾರಿ ನಿಧಿನ್ ವಲ್ಸನ್ ಹೇಳಿದ್ದಾರೆ. ಕೊಂದು
ಕೂಡಲೇ ಚಿತ್ರದುರ್ಗಕ್ಕೆ ತೆರಳಿದ ಗೋವಾ ಪೊಲೀಸರ ತಂಡ, ಸುಚನಾ ಸೇಠ್ ಅವರನ್ನು ಹಿರಿಯೂರಿನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಟ್ರಾನ್ಸಿಟ್ ರಿಮಾಂಡ್ ಪಡೆದಿದ್ದಾರೆ. “ನಂತರ ಆರೋಪಿಯನ್ನು ಗೋವಾಕ್ಕೆ ವರ್ಗಾಯಿಸಲಾಗಿದ್ದು, ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಚಿತ್ರದುರ್ಗದ ಹಿರಿಯೂರಿನಲ್ಲಿ ನಡೆಸಲಾಗುವುದು. ಸುಚನಾ ಅವರ ಪತಿ ಪ್ರಸ್ತುತ ಇಂಡೋನೇಷ್ಯಾದ ಜಕಾರ್ತಾದಲ್ಲಿದ್ದು, ಪೊಲೀಸರು ಸೂಚನೆ ನೀಡಿದ್ದಾರೆ. ಹತ್ಯೆಯ ಹಿಂದಿನ ಉದ್ದೇಶ ತಿಳಿದುಬಂದಿಲ್ಲ” ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೊ ನೋಡಿ: ಕಲಾಸಕ್ತರ ಕಣ್ಮನ ತಣಿಸಿದ ಚಿತ್ರಸಂತೆ : ಹರಿದು ಬಂದ ಕಲಾ ಪ್ರೇಮಿಗಳ ಸಾಗರ Janashakthi Media ಕೊಂದು