ಬೆಂಗಳೂರು: ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ನಗರದ ಹಲವು ರಸ್ತೆಗಳಲ್ಲಿ ನೀರು ತುಂಬಿ ನದಿಯಂತೆ ಹರಿಯುತ್ತಿದೆ.
ಈ ಪರಿಸ್ಥಿತಿಯನ್ನು ಲೇವಡಿ ಮಾಡುವ ರೀತಿಯಲ್ಲಿ, ಊಬರ್ ಕಂಪನಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ “ಟೈಟಾನಿಕ್ ಬೋಟ್” ಸೇವೆಯ ಫೋಟೋವನ್ನು ಹಂಚಿಕೊಂಡಿದೆ.
ಇದನ್ನು ಓದಿ:ಬೆಂಗಳೂರು ಮಳೆ: ತಗ್ಗು ಪ್ರದೇಶ ಸಂಪೂರ್ಣ ಜಲಾವೃತ
ಈ ಪೋಸ್ಟ್ನಲ್ಲಿ, “ಒಂದು ನಿಮಿಷದಲ್ಲಿ ಟೈಟಾನಿಕ್ ಬೋಟ್ ಸೇವೆ ಲಭ್ಯವಿದೆ – ಕೇವಲ ₹149ಕ್ಕೆ!” ಎಂಬ ವ್ಯಂಗ್ಯಾತ್ಮಕ ಸಂದೇಶವಿದೆ. ಈ ಮೂಲಕ, ಊಬರ್ ಬೆಂಗಳೂರಿನ ರಸ್ತೆಗಳಲ್ಲಿನ ಜಲಾವೃತ ಸ್ಥಿತಿಯನ್ನು ಹಾಸ್ಯಾತ್ಮಕವಾಗಿ ಚಿತ್ರಿಸಿದೆ.
ಈ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗಿದೆ.
ಇದನ್ನು ಓದಿ:ನ್ಯಾಯಾಂಗ ಸೇವೆಗೆ ಸೇರಲು 3 ವರ್ಷಗಳ ವಕೀಲ ವೃತ್ತಿ ಕಡ್ಡಾಯ: ಸುಪ್ರೀಂ ಕೋರ್ಟ್