ಬೆಂಗಳೂರು: 2 ದಿನಗಳ ‘ಕಾರ್ನಾಡ್ ರಂಗೋತ್ಸವ’ ಕಾರ್ಯಕ್ರಮಕ್ಕೆ ಚಾಲನೆ

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರ ನೆನಪು ಮತ್ತು ತುಘಲಕ್ 100ರ ಸಂಭ್ರಮ ಎರಡು ದಿನಗಳ “ಕಾರ್ನಾಡ್ ರಂಗೋತ್ಸವ” ಕಾರ್ಯಕ್ರಮ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಚಾಲನೆಗೊಂಡಿತು. ಕಾರ್ಯಕ್ರಮವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಹಿರಿಯ ಚಿಂತಕರಾದ ಡಾ.ವಿಜಯಮ್ಮ ಅವರು, ನಾಟಕಗಳು ಹೆಚ್ಚೆಚ್ಚು ಬೆಳೆದು ಪ್ರದರ್ಶನಗಳು ವ್ಯಾಪಕಗೊಳ್ಳಬೇಕು ಎಂದು ಹೇಳಿದರು.

“ಸಂದಿಗ್ಧ ಕಾಲದಲ್ಲಿ ನಾವಿದ್ದೇವೆ ಇಂತಹ ಸನ್ನಿವೇಶದಲ್ಲಿ ಸಮುದಾಯ ಸಂಘಟನೆ ನಾಟಕಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಕಲಾವಿದರನ್ನು ಗಟ್ಟಿಗೊಳಿಸುವ ಭರವಸೆ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಸಂಘಟನೆ ಇನ್ನಷ್ಟು ಬಲಗೊಳ್ಳಬೇಕು. ಕನ್ನಡ ರಂಗಭೂಮಿ ಯಾವ ದಿಕ್ಕೆನೆಡೆ ನಡೆಯಬೇಕು ಎಂಬ ಚಿಂತನೆ ಇಂದಿನ ಕಾಲದ ಅಗತ್ಯ, ನಾವೆಲ್ಲ ಆ ಮಹತ್ವದ ಕೆಲಸದಲ್ಲಿ ತೊಡಗಬೇಕು” ಎಂದು ವಿಜಯಮ್ಮ ಅವರು ಹೇಳಿದರು. ಕಾರ್ನಾಡ್ ರಂಗೋತ್ಸವ

ಇದನ್ನೂ ಓದಿ: ಪೆನ್​ಡ್ರೈವ್ ಪ್ರದರ್ಶನ ವಿಚಾರ| ​ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ದೂರು ದಾಖಲು

ರಂಗತಜ್ಞ ಸಿ. ಬಸವಲಿಂಗಯ್ಯ ಅವರು ಮಾತನಾಡಿ, “ಸ್ವಾತಂತ್ರ್ಯ ಬಂದ ನಂತರವೂ ಹೇರಿಕೆಯ ಕೆಲಸ ಮುಂದುವರೆದಿದೆ. ಅದರ ಭಾಗವಾಗಿಯೇ ಒಂದು ದೇಶ, ಒಂದು ಭಾಷೆ, ಒಂದು ಧರ್ಮ, ಒಂದು ಚುನಾವಣೆ ಎಂಬ ಚರ್ಚೆಗಳು ಹುಟ್ಟಿಕೊಂಡಿವೆ” ಎಂದು ಕಳವಳ ವ್ಯಕ್ತಪಡಿಸಿದರು.

“ನಮ್ಮ ಸಂವಿಧಾನ ಏಳು ಧರ್ಮಗಳನ್ನು ಮಾನ್ಯ ಮಾಡಿದೆ. ಹೀಗಿರುವಾಗ ಒಂದೇ ದೇಶ, ಭಾಷೆ, ಧರ್ಮ ಇರಬೇಕು ಎಂಬ ವಾದವನ್ನು ಸರ್ಕಾರವೇ ಮುನ್ನೆಲೆಗೆ ತರುತ್ತಿರುವುದು ಸಂವಿಧಾನ ಹಾಗೂ ದೇಶದ ಜನರಿಗೆ ಎಸಗುತ್ತಿರುವ ದ್ರೋಹವಾಗಿದೆ” ಎಂದು ಬಸವಲಿಂಗಯ್ಯ ಅವರು ಹೇಳಿದರು.

ಬೆಂಗಳೂರು: 2 ದಿನಗಳ 'ಕಾರ್ನಾಡ್ ರಂಗೋತ್ಸವ' ಕಾರ್ಯಕ್ರಮಕ್ಕೆ ಚಾಲನೆ | Bengaluru: 2-day 'Karnad Rangotsava' program begins

“ಕಾರ್ನಾಡರು, 12 ನೇ ಶತಮಾನದ ಕ್ರಾಂತಿಯನ್ನು ಆಧರಿಸಿ ನಾಟಕಗಳನ್ನು ಬರೆದರು, ಭಾರತದ ರಾಜಕಾರಣವನ್ನು ಹೋಲಿಸಿ ತುಘಲಕ್ ನಾಟಕವನ್ನು ರಚಿಸಿದರು. ಕಥೆ ಹೇಳುವ ಅವರ ಶೈಲಿ ಮಾದರಿಯಾಗಿದೆ. ಈ ಹಿಂದೆಯೂ ಚರಿತ್ರೆ ಕುರಿತು ನಾಟಕಗಳನ್ನು ಬರೆದಿದ್ದರೂ ಕಾರ್ನಾಡರ ನಾಟಕಗಳು ಗಮನ ಸೆಳೆದವು. ಜಾತ್ಯಾತೀತ ಪರವಾದ ಅವರ ನಿಲುವು ಸಾಕಷ್ಟು ಜನಪರ ಹೋರಾಟಗಳಲ್ಲಿ ಭಾಗಿಯಾಗುವಂತೆ ಮಾಡಿತ್ತು” ಎಂದು ಅವರು ತಿಳಿಸಿದರು.

ತುಘಲಕ್ 100 ನೇ ಪ್ರದರ್ಶನವನ್ನು ರವೀಂದ್ರ ಕಲಾ ಕ್ಷೇತ್ರದಲ್ಲಿ ಅಕ್ಟೋಬರ್ 29 ರ ಭಾನುವಾರ ಸಂಜೆ 6:30 ಕ್ಕೆ ಪ್ರದರ್ಶನಗೊಳ್ಳಲಿದೆ.
ಟಿಕೆಟ್ ದರ 100 ರೂ.

ಇದನ್ನೂ ಓದಿ: ಗಾಜಾದಲ್ಲಿ ನರಮೇಧದ ಆಕ್ರಮಣವನ್ನು ನಿಲ್ಲಿಸಿ-ಸಿಪಿಐ(ಎಂ)-ಸಿಪಿಐ ಜಂಟಿ ಆಗ್ರಹ

ನಾಟಕಕಾರ, ಬೆಂಗಳೂರು ವಿವಿ ಪ್ರಾಧ್ಯಾಪಕ ನಟರಾಜ ಹುಳಿಯಾರ್ ಮಾತನಾಡಿ, ಮೋದಿ, ಜೋ ಬೈಡೆನ್ ಇವರುಗಳನ್ನು ನೋಡಿದಾಗ ತುಘಲಕ್ ಶ್ರೇಷ್ಠ ಎಂದು ಅನಿಸುತ್ತದೆ ಎಂದ ಅವರು, “ಕಾರ್ನಾಡರ ನಾಟಕ ಜನಪರವಾಗಿ ಜನಪ್ರಿಯಗೊಂಡವು. ಅವರ ನಾಟಕಗಳು ಯಾವತ್ತು ಸೋಲಲಿಲ್ಲ ಅದು ಅವರ ಬರವಣಿಗೆಯ ತಾಕತ್ತು. ನಾಟಕಗಳು ಜೀವಂತವಾಗಿರುವ ಕ್ರಿಯೆಯಾಗಿದೆ” ಎಂದು ಅವರು ಪ್ರತಿಪಾದಿಸಿದರು.

ಬೆಂಗಳೂರು: 2 ದಿನಗಳ 'ಕಾರ್ನಾಡ್ ರಂಗೋತ್ಸವ' ಕಾರ್ಯಕ್ರಮಕ್ಕೆ ಚಾಲನೆ | Bengaluru: 2-day 'Karnad Rangotsava' program begins

“ನಾಟಕ ರಚನೆಕಾರರಿಗೆ ಕಾರ್ನಾಡ್ ಮಾದರಿಯಾಗಿದ್ದಾರೆ. ವಸ್ತು ಪ್ರತಿರೂಪವಾಗಿ ಅವರ ನಾಟಕಗಳು ಎಲ್ಲರನ್ನೂ ಪರೀಕ್ಷೆಗೊಳಪಡಿಸುವ ಕೆಲಸ ಮಾಡಿದವು. ಈ ರೀತಿ ಸಾಹಿತ್ಯವನ್ನು ಪರೀಕ್ಷೆಗೊಳಪಡಿಸುವುದು ಪ್ರಜಾಪ್ರಭುತ್ವದ ಹಕ್ಕು ಎಂಬುದನ್ನು ಕಾರ್ನಾಡ್ ತೋರಿಸಿಕೊಟ್ಟರು” ಎಂದು ಹುಳಿಯಾರ್ ಅವರು ಹೇಳಿದರು.

ಹಿರಿಯ ಸಾಹಿತಿ, ಸಮುದಾಯ ಬೆಂಗಳೂರು ಅಧ್ಯಕ್ಷರಾದ ಅಗ್ರಹಾರ ಕೃಷ್ಣಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ನಾಡ್ ರ ಅಭಿಮಾನಿಗಳು, ಸಾಹಿತ್ಯಾಸಕ್ತರು, ಹಿರಿಯ ಸಾಹಿತಿಗಳು, ಚಿಂತಕರು ಭಾಗವಹಿಸಿದ್ದರು. ಕಾರ್ನಾಡ್ ರಂಗೋತ್ಸವ

ವಿಡಿಯೊ ನೋಡಿ: ಪ್ಯಾಲಿಸ್ತೇನ್‌ ಪರ ಪ್ರತಿಭಟನೆ ಮಾಡುವುದು ಅಪರಾಧವೆ? ಕಾರ್ನಾಡ್ ರಂಗೋತ್ಸವ

Donate Janashakthi Media

Leave a Reply

Your email address will not be published. Required fields are marked *