ಬೆಳಗಾವಿ ಉಪಚುನಾವಣೆ : ನಾಮಪತ್ರ ಸಲ್ಲಿಕೆಗೆ ಆಯೋಗ ಅಧಿಸೂಚನೆ

ಬೆಳಗಾವಿ : ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಇಂದಿನಿಂದ ಮಾರ್ಚ್ 30ರ ತನಕ ನಾಮಪತ್ರಗಳನ್ನು ಸಲ್ಲಿಸಲು ಅವಕಾಶವಿದೆ ಎಂದು ಚುನಾವಣಾ ಆಯೋಗ ಅಧಿಸೂಚನೆ ಪ್ರಕಟಿಸಿದೆ.

2019ರ ಚುನಾವಣೆಯಲ್ಲಿ ಬಿಜೆಪಿಯ ಸುರೇಶ್ ಅಂಗಡಿ ಬೆಳಗಾವಿಯಲ್ಲಿ ಗೆಲುವು ಸಾಧಿಸಿದ್ದರು. ಅವರು ಕೋವಿಡ್ ಸೋಂಕಿನಿಂದಾಗಿ ಮೃತಪಟ್ಟ ಕಾರಣ ಉಪ ಚುನಾವಣೆ ನಡೆಯುತ್ತಿದೆ.

ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರವಾಗಿ ಸ್ಪರ್ಧೆ  ಏರ್ಪಡುವ ಸಾಧ್ಯತೆ ಇದ್ದರೂ, ಈ ವರೆಗೆ ಯಾವುದೇ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿಲ್ಲ.

ಕಾಂಗ್ರೆಸ್‌ನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಸತೀಶ್ ಜಾರಕಿಹೊಳಿ ಕಣಕಿಳಿಯುವುದು ಬಹತೇಕ ಖಚಿತವಾಗಿದೆ. ಆದರೆ ಅಧಿಕೃತವಾಗಿ ಘೋಷಣೆಯಾಗಿಲ್ಲ. ಇನ್ನೂ  ಬಿಜೆಪಿಯಲ್ಲಿ 30ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಯಾರಿಗೆ ಟಿಕೇಟ್‌ ಕೊಡಬಹುದು ಎಂಬ ಚರ್ಚೆಗಳು ದಿನೆ ದಿನೆ ಹರಿದಾಡುತ್ತಿವೆ. ಇತ್ತ ಸಚಿವ ಜಗದೀಶ್‌ ಶೆಟ್ಟರ್‌ ತಮ್ಮ ಮಗಳಿಗೆ ಟಿಕೆಟ್‌ ನೀಡುವಂತೆ ಹೈ ಕಮಾಂಡ್‌ ಗೆ ದೊಂಬಾಲು ಬಿದ್ದಿದ್ದಾರೆ. ಪ್ರಖರ ಹಿಂದುತ್ವ ವ್ಯಕ್ತಿಗೆ ನೀಡಲು ತೆರೆಮರೆಯ ಕಸರತ್ತೂ ನಡೆದಿದೆ ಎಂದು ಬಿಜೆಪಿ ವಲಯದಲ್ಲಿ ಚರ್ಚೆಯಾಗುತ್ತಿದೆ.  ಯಾರಿಗೆ ಟಿಕೇಟ್‌ ಸಿಗಬಹುದು ಕಾದು ನೋಡಬೇಕಿದೆ?

ಶಿವಸೇನೆ ಕೂಡ ತನ್ನ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧರಿಸಿದ್ದು, ಕಳೆದ ಎರಡು ತಿಂಗಳಿಂದ ಭಾಷೆ ಮತ್ತು ಗಡಿ ವಿವಾದವನ್ನೇ ಬಂಡವಾಳ ಮಾಡಿಕೊಂಡಿರುವ ಮರಾಠಿ ಭಾಷಿಕರ ಮತ ಸೆಳೆಯಲು ಮುಂದಾಗಿದೆ.

  • ಮಾ.31ರಂದು ನಾಮಪತ್ರಗಳ ಪರಿಶೀಲನೆ
  • ಏಪ್ರಿಲ್ 3ರಂದು ನಾಮಪತ್ರ ಹಿಂದಕ್ಕೆ ಪಡೆಯಲು ಅಂತಿಮ ದಿನ.
  • ಏಪ್ರಿಲ್ 17ರಂದು ಮತದಾನ
  • ಮೇ 2ರಂದು ಮತಗಳ ಎಣಿಕೆ ನಡೆಯಲಿದೆ.
Donate Janashakthi Media

Leave a Reply

Your email address will not be published. Required fields are marked *