ವಿರೋಧ ಪಕ್ಷಗಳಿಂದ ಬೆಂಬಲ ಇರುವಾಗಲೂ ಸರಕಾರ ಸಂಸತ್ತನ್ನು ಎದುರಿಸಲು, ಮತ್ತು ಒಂದು ಕಾರ್ಯನಿರತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎತ್ತುವ ಮತ್ತು ಎತ್ತಬೇಕಾದ ಪ್ರಶ್ನೆಗಳನ್ನು ಎದುರಿಸಲು ಹಿಂದೇಟು ಹಾಕುತ್ತಿದೆ. ವಿದೇಶಾಂಗ ಕಾರ್ಯದರ್ಶಿ ಮತ್ತು ಸಶಸ್ತ್ರಪಡೆಗಳ ಪ್ರತಿನಿಧಿಗಳು ಭಾರತ ಒಂದು ಜಾತ್ಯತೀತ ದೇಶ ಮತ್ತು ಕಾರ್ಯನಿರತ ಪ್ರಜಾಪ್ರಭುತ್ವವಾಗಿದೆ ಎಂದು ವಿವರಿಸಲು ಶ್ರಮಿಸಿದರು. ಆದ್ದರಿಂದ, ತಮ್ಮ `ನಾಯಕ’ರನ್ನು ಪ್ರಶ್ನಿಸಲಾಗದ ಅವರ ಅನುಯಾಯಿಗಳು ವಿದೇಶಾಂಗ ಕಾರ್ಯದರ್ಶಿಯವರನ್ನು ಗುರಿಯಾಗಿಸುತ್ತಿರುವುದರಲ್ಲಿ ಅಚ್ಚರಿಯೇನಿಲ್ಲ. ಸರ್ಕಾರದ ಮುಂದಿರುವ ಏಕೈಕ ಮಾರ್ಗವೆಂದರೆ ನಡೆದಿರುವ ವಿಷಯಗಳನ್ನು ಮುಚ್ಚುಮರೆಯಿಲ್ಲದೆ ಪ್ರಸ್ತುತಪಡಿಸುವುದು. ಎಂದಿನ ಕಟ್ಟುಕಥೆಗಳು ಮತ್ತು ಭಾವಾವೇಶದ ಮಾತುಗಳು, ಸಂಸತ್ತಿನಲ್ಲಿ ನಡೆಯುವ ವಿಷಯವಾರು ಚರ್ಚೆಗೆ ಪರ್ಯಾಯವಾಗಲಾರವು. ಒಂದು ಕಾರ್ಯನಿರತ ಪ್ರಜಾಪ್ರಭುತ್ವದಲ್ಲಿ ಇಂತಹ ಚರ್ಚೆ ನಡೆಸುವುದು ಕನಿಷ್ಠ ಅವಶ್ಯಕತೆಯಾಗಿದೆ. ಈ ನಡುವೆದಕ್ಷಿಣ ಏಷ್ಯಾದಲ್ಲಿ ಅಮೆರಿಕನ್ ಸಾಮ್ರಾಜ್ಯಶಾಹಿಯು ತನ್ನ ಪ್ರಾಬಲ್ಯವನ್ನು ಮತ್ತೆ ಎತ್ತಿತೋರಲು ಎಂತಹದೊಂದು ಹೊಸ ಆತಂಕಕಾರಿ ಕ್ರೂರ ವಿಧಾನಕ್ಕೆ ಇಳಿಯುತ್ತಿದೆ ಎಂಬುದು ಅನಾವರಣಗೊಳ್ಳುತ್ತಿದೆ. ಕದನ
–ಪ್ರಕಾಶ ಕಾರಟ್
–ಅನು: ಸಿ.ಸಿದ್ದಯ್ಯ
ಭಾರತ ಮತ್ತು ಪಾಕಿಸ್ತಾನ ಗಡಿಯ ಎರಡೂ ಬದಿಗಳಲ್ಲಿರುವ ಜನರು ನಿಟ್ಟುಸಿರು ಬಿಟ್ಟರು. ಎರಡು ದೇಶಗಳ ನಡುವೆ ನಾಲ್ಕು ದಿನಗಳ ಕಾಲ ನಡೆದ ಮಿಲಿಟರಿ ಮುಖಾಮುಖಿ ಮೇ 10 ರ ಮಧ್ಯಾಹ್ನ ಕೊನೆಗೊಂಡಿತು. ಆದರೂ, ರಾತ್ರಿಯಾದ ನಂತರವೂ ಗುಂಡಿನ ಸದ್ದು ಕೇಳಿಬರುತ್ತಿತ್ತು. ಆದರೆ ನಂತರ ಎರಡೂ ದೇಶಗಳ ಡಿಜಿಎಂಒ(ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು)ಗಳು ಕದನ ವಿರಾಮ ಮುಂದುವರಿದಿದೆ ಎಂದು ದೃಢೀಕರಿಸಿದರು. ಯುದ್ಧದ ಕಾರ್ಮೋಡಗಳು ಸದ್ಯಕ್ಕೆ ಚದುರಿವೆ. ಕದನ
ಆದಾಗ್ಯೂ, ಈ ಮೂರು ವಾರಗಳು ದಕ್ಷಿಣ ಏಷ್ಯಾದಲ್ಲಿ ನಾಟಕೀಯವಾದ ಬೆಳವಣಿಗೆಗಳ ಒಂದು ಸರಣಿಯನ್ನು ಅನಾವರಣಗೊಳಿಸಿ ಒಂದು ವಿನಾಶಕಾರಿ ವಿಧಾನದ ಮೇಲೆ ಬೆಳಕು ಚೆಲ್ಲಿದೆ. 26 ಅಮಾಯಕರ ಜೀವಗಳನ್ನು ಬಲಿತೆಗೆದುಕೊಂಡ ಅಮಾನುಷ ಹತ್ಯಾಕಾಂಡದೊಂದಿಗೆ ಈ ಘಟನೆಗಳ ಸರಣಿಯು ಪ್ರಾರಂಭವಾಯಿತು. ಅಮಾಯಕರಾದ ಪ್ರವಾಸಿಗರನ್ನು ರಕ್ಷಿಸಲು ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಸ್ಥಳೀಯ ಕಾಶ್ಮೀರಿ ಕುದುರೆ-ಸವಾರಿ ನಿರ್ವಾಹಕನೂ ಇವರಲ್ಲಿ ಒಬ್ಬರು. ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಅವರ ಧಾರ್ಮಿಕ ನಂಬಿಕೆಗಳ ಆಧಾರದ ಮೇಲೆ ಅವರನ್ನು ಆಯ್ಕೆ ಮಾಡುವ ಮೂಲಕ ಭಯೋತ್ಪಾದಕರು ಈ ಹತ್ಯಾಕಾಂಡವನ್ನು ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಸೇನೆ ಬಿಡುಗಡೆ ಮಾಡಿರುವ ಪುರಾವೆಗಳು ಲಷ್ಕರ್-ಎ-ತೈಬಾ (ಎಲ್ಇಟಿ) ಇದರಲ್ಲಿ ಭಾಗಿಯಾಗಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತವೆ. ಅವರು ಹಂತಕರೊಂದಿಗೆ ದೂರವಾಣಿ ಸಂಪರ್ಕದಲ್ಲಿದ್ದರು. ನಂತರದ ಮಿಲಿಟರಿ ಮುಖಾಮುಖಿಯಲ್ಲಿ, ಪಾಕಿಸ್ತಾನಿ ಆಳುವ ವ್ಯವಸ್ಥೆ ಮಿಲಿಟರಿ ಕಾರ್ಯಾಚರಣೆಯಲ್ಲಿ ಹತರಾದ ಭಯೋತ್ಪಾದಕರನ್ನು ಗೌರವಿಸುವ ಚಿತ್ರಗಳು ಅದನ್ನು ದೃಢಪಡಿಸಿದವು. ಕದನ
ಇದನ್ನೂ ಓದಿ: ಮೈಸೂರು| ಕೆಎಸ್ಆರ್ಟಿಸಿ ಬಸ್ ಗಳ ನಡುವೆ ಢಿಕ್ಕಿ; 35 ಮಂದಿಗೆ ಗಾಯ
ಈ ವಾಸ್ತವ ಬಯಲಾದ ನಂತರ, ದಂಡನಾತ್ಮಕ ಕ್ರಮವನ್ನು ಪ್ರಾರಂಭಿಸುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ನ್ಯಾಯವಾಗಿಯೇ ಬಹಳ ಆಕ್ರೋಶಗೊಂಡ ಜನರ ಗಮನಾರ್ಹ ಒಗ್ಗಟ್ಟು ವ್ಯಾಪಕವಾಗಿ ಕಾಣಬಂತು. ದೇಶದ ರಾಜಕೀಯ ಪಕ್ಷಗಳು ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಗೆ ಸರ್ಕಾರಕ್ಕೆ ಬೆಂಬಲವನ್ನು ನೀಡಿದವು. ಅದೇ ಸಮಯದಲ್ಲಿ, ಅಂತಹ ಕಾರ್ಯಾಚರಣೆಗಳನ್ನು ಭಯೋತ್ಪಾದಕರ ವಿರುದ್ಧ ನಿರ್ದೇಶಿಸಬೇಕೇ ಹೊರತು ಪೂರ್ಣ ಪ್ರಮಾಣದ ಯುದ್ಧವಾಗಬಾರದು ಎಂದು ಸುಸ್ಪಷ್ಟಪಡಿಸಲಾಯಿತು. ಕದನ
ದ್ವೇಷ-ಅಭಿಯಾನ
ಈ ಸಮಯದಲ್ಲಿಯೇ ಪ್ರಾರಂಭವಾಯಿತು ಒಂದು ಜುಗುಪ್ಸೆ ಉಂಟುಮಾಡುವ ದ್ವೇಷ ಅಭಿಯಾನ- ನಿರ್ದಿಷ್ಟವಾಗಿ ಕಾಶ್ಮೀರಿಗಳ ವಿರುದ್ಧ, ಒಟ್ಟಾರೆಯಾಗಿ ಮುಸ್ಲಿಮರ ವಿರುದ್ಧ. ಬಹುಕಾಲ ಪೋಷಿಸಿಕೊಂಡು ಬಂದ ದ್ವೇಷದ ಮೂಲರಚನೆ ಸಕ್ರಿಯಗೊಂಡಿತು. ದಾಳಿಯು ಮುಸ್ಲಿಮರನ್ನು ಗುರಿಯಾಗಿಸಿಕೊಂಡು, ಅಷ್ಟೇ ಅಲ್ಲ, ಪೂರ್ಣ ಯುದ್ಧದ ವಿರುದ್ಧ ಮಾತನಾಡಿದ ಯಾರನ್ನಾದರೂ ಗುರಿಯಾಗಿಸಿಕೊಂಡು ಪ್ರಾರಂಭವಾಯಿತು. ಹಾಗೆ ನೋಡಿದರೆ, ಇಂತಹದೊಂದು ಸಂಭವಿಸಿದ್ದರಲ್ಲಿಅಚ್ಚರಯೇನಲ್ಲ. ಕದನ
ಸಮಾಧಾನದ ಸಂಗತಿಯೆಂದರೆ, ಸಶಸ್ತ್ರಪಡೆಗಳು ತಮ್ಮ ಗುರಿ ಭಯೋತ್ಪಾದನೆಯ ಮೂಲಸೌಕರ್ಯವನ್ನು ಕಳಚಿ ಹಾಕುವುದೇ ಹೊರತು, ಪಾಕಿಸ್ತಾನದ ಜನರು ಅಥವಾ ಆಡಳಿತದ ಮೇಲಿನ ದಾಳಿಯಲ್ಲ ಎಂಬುದನ್ನು ಒತ್ತಿ ಹೇಳುವ ರೀತಿಯಲ್ಲಿ ವರ್ತಿಸಿದವು. ಅದಕ್ಕಾಗಿಯೇ ಸಶಸ್ತ್ರಪಡೆಗಳ ಪ್ರತಿನಿಧಿಗಳು ಮಾಧ್ಯಮಗಳಿಗೆ ಮಾಹಿತಿಗಳನ್ನು ವೃತ್ತಿಪರತೆಯಿಂದ ಈ ಗುರಿಯ ಮೇಲೆ ಒತ್ತು ಕೊಡುತ್ತ ನೀಡುತ್ತಿದ್ದರು. ಸಹಜವಾಗಿಯೇ ಇದರಿಂದ ದ್ವೇಷ ಪ್ರಚಾರಕರು ಕೋಪಗೊಂಡರು. ಈ ದ್ವೇಷಪೂರಿತ ಕೃತ್ಯಗಳ ಬಗ್ಗೆ ಸರ್ಕಾರವನ್ನು ನಡೆಸುವ ರಾಜಕೀಯ ನಾಯಕತ್ವದ ಅನಿಷ್ಟಕಾರಿ ಮೌನ ಕೂಡ ಸ್ಪಷ್ಟಗೊಂಡಿತ್ತು. ಕದನ
ಗಡಿಯ ಎರಡೂ ಬದಿಗಳಲ್ಲಿರುವ ಜನರು ಮಿಲಿಟರಿ ಮುಖಾಮುಖಿ ಕೊನೆಗೊಳ್ಳಲಿ ಎಂದು ಹಾರೈಸುತ್ತಿದ್ದರು. ಗಡಿ ಸಮೀಪದ ಸ್ಥಳಗಳಲ್ಲಿ ಬದುಕುತ್ತಿರುವವರು, ಜನಸಾಮಾನ್ಯರು ಸಂಕಷ್ಟಗಳಿಗೆ ಈಡಾಗುತ್ತಿದ್ದಾರೆ ಎಂಬುದು ಸ್ಪಷ್ಟವಾಗಿತ್ತು. ಪೂಂಚ್ ಮತ್ತು ರಜೌರಿ ಪ್ರದೇಶಗಳಲ್ಲಿ ಜನರು ಇದರಿಂದ ಕಂಗಾಲಾಗಿದ್ದರು. ವಿದ್ಯಾರ್ಥಿಗಳು ಮತ್ತು ವಲಸೆ ಕಾರ್ಮಿಕರು ಅತಿ ಹೆಚ್ಚು ತೊಂದರೆ ಅನುಭವಿಸಿದರು. ಅಂತಿಮವಾಗಿ ಪರಿಸ್ಥಿತಿ ಕೈ ಮೀರುವ ಮುನ್ನವೇ ಕದನ ವಿರಾಮವನ್ನು ಜಾರಿಗೆ ತರಬೇಕಾಗಿತ್ತು. ಕದನ
ನಿಜವಾದ ರಹಸ್ಯ ಬಯಲಾಗಿದ್ದು ಇದೇ ಕ್ಷಣದಲ್ಲಿ. ಯಾವುದೇ ಅಧಿಕೃತ ಘೋಷಣೆಯ ಮೊದಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಆಡಳಿತದ ಮಧ್ಯಸ್ಥಿಕೆಯಲ್ಲಿ ಎರಡೂ ಕಡೆಯವರು ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಟ್ವೀಟ್ ಮಾಡಿದರು. ಇದು ಭಾರತ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಎರಡು ಬಾರಿ ನಡೆದ ಸರ್ವಪಕ್ಷ ಸಭೆಗಳಿಗೆ ಹಾಜರಾಗದಿರುವ ಹಿನ್ನೆಲೆಯಲ್ಲಿ. ಅಧಿಕೃತ ಕಥನ ಮನವರಿಕೆಯಾಗುವಂತೆ ಇಲ್ಲ ಎಂಬುದು ಸ್ಪಷ್ಟ. ಕದನ
ಪ್ರಧಾನಿ ಮೌನ
ಈ ಹಿನ್ನೆಲೆಯಲ್ಲಿ, ಈ ಸಂಪೂರ್ಣ ಬೆಳವಣಿಗೆಯನ್ನು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯಲು ಪ್ರತಿಪಕ್ಷಗಳ ಸಾಮೂಹಿಕ ಆಗ್ರಹ ಹೊಮ್ಮಿ ಬಂತು. ಸರ್ಕಾರ ತನ್ನನ್ನು ರಕ್ಷಿಸಿಕೊಳ್ಳಬೇಕಾಗಿತ್ತು. ಸಂಸತ್ ಭವನದ ಮೆಟ್ಟಿಲುಗಳಿಗೆ ನಮಸ್ಕರಿಸಿ, ಅದನ್ನು `ಪ್ರಜಾಪ್ರಭುತ್ವದ ದೇಗುಲ’ ಎಂದು ಬಣ್ಣಿಸಿ, ತಮ್ಮ ವಿನಮ್ರ ನಿಷ್ಠೆಯನ್ನು ಘೋಷಿಸುವ ಮೂಲಕ ಪ್ರಧಾನಿಯಾಗಿ ತಮ್ಮ ಪ್ರಯಾಣವನ್ನು ಆರಂಭಿಸಿದ ನರೇಂದ್ರ ಮೋದಿ ಈಗ ಮೌನಕ್ಕೆ ಸರಿದರು. ಈ ಪಲ್ಲಟ ಏಕೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾವು ಕಳೆದ ಹತ್ತು ವರ್ಷಗಳ ಸಂಪೂರ್ಣ ಇತಿಹಾಸವನ್ನು ಪರಿಶೀಲಿಸಬೇಕಾಗಿಲ್ಲ. ಆದರೆ, ಸಂಸತ್ತಿನ ಅಧಿವೇಶನವನ್ನು ಕರೆಯುವುದು ಅನಿವಾರ್ಯ ಎಂಬುದAತೂ ಎದ್ದು ಕಾಣುತ್ತದೆ. ಟ್ರಂಪ್ರ ಸಾಮ್ರಾಜ್ಯಶಾಹಿ ಘೋಷಣೆಯು ಮೋದಿಯವರ ಭಾವ-ಭಂಗಿಗಳನ್ನು ಛಿದ್ರಗೊಳಿಸಿತು.
ಏನೇ ಆಗಲಿ, ಸರ್ಕಾರ ಕ್ರಮ ಕೈಗೊಳ್ಳಲೇ ಬೇಕಿತ್ತು. ಆದರೆ ವಿರೋಧ ಪಕ್ಷಗಳಿಂದ ಬೆಂಬಲ ಇರುವಾಗಲೂ ಸರಕಾರ ಸಂಸತ್ತನ್ನು ಎದುರಿಸಲು, ಮತ್ತು ಒಂದು ಕಾರ್ಯನಿರತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎತ್ತುವ ಮತ್ತು ಎತ್ತಬೇಕಾದ ಪ್ರಶ್ನೆಗಳನ್ನು ಎದುರಿಸಲು ಹಿಂದೇಟು ಹಾಕುತ್ತಿದೆ. ಕದನ
ಸಂಭಾವ್ಯ ಮುಜುಗರವನ್ನು ತಪ್ಪಿಸಲು, ಪ್ರಧಾನಿಯವರು ಸಂಸತ್ತನ್ನು ಬದಿಗೊತ್ತುವುದೇ ವಾಸಿ ಎಂದು ಬಗೆದರು, ಮತ್ತು ನೇರವಾಗಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವ ಮಾರ್ಗವನ್ನು ಆಯ್ಕೆ ಮಾಡಿಕೊಂಡರು. ಆದರೆ ಪ್ರಧಾನಿಯವರು ತಮ್ಮ ನಿಕಟ ಸ್ನೇಹಿತ ಎಂದು ಘಂಟಾಘೋಷವಾಗಿ ಸಾರಿರುವ ಡೊನಾಲ್ಡ್ ಟ್ರಂಪ್ರಿಂದ ಮುಂದಿನ ನಿರ್ಣಾಯಕ ಆಘಾತ ಬಂದಿತು. ಭಾರತ ಮತ್ತು ಪಾಕಿಸ್ತಾನದ ಸರಕಾರಗಳು ಮಿಲಿಟರಿ ತಿಕ್ಕಾಟಗಳನ್ನು ಕೈಬಿಡಲು ಒಪ್ಪುವ ಬಲವಂತಕ್ಕೆ ಒಳಗಾದ ಘಟನಾ ಸರಣಿಯನ್ನು ಅವರು ಬಿಚ್ಚಿಟ್ಟರು. ಟ್ರಂಪ್ರವರ ಈ ಎರಡು ಮಧ್ಯಪ್ರವೇಶಗಳು ಒತ್ತಡವನ್ನು ಎದುರಿಸಲಾರದ ಸರ್ಕಾರದ ಅಸಮರ್ಥತೆಯನ್ನು ಬಹಿರಂಗಪಡಿಸಿದವು. ಒಂದು ಬಿಲಿಯನ್ ಡಾಲರ್ ಸಾಲ ನೀಡಬೇಕೆಂಬ ಪಾಕಿಸ್ತಾನದ ವಿನಂತಿಯನ್ನು ಐಎಂಎಫ್ ತ್ವರಿತವಾಗಿ ಸ್ವೀಕರಿಸುವ ಮೂಲಕ ಪಾಕಿಸ್ತಾನಿ ಆಡಳಿತವನ್ನು ಆಶೀರ್ವದಿಸಲಾಯಿತು. ಪಾಕಿಸ್ತಾನದಲ್ಲಿ ಆಡಳಿತದಲ್ಲಿ ಅಲ್ಲಿನ ಸಶಸ್ತ್ರಪಡೆಗಳೇ ಪ್ರಬಲ ಪಾತ್ರ ವಹಿಸುತ್ತಿರುವಾಗ ಈ ಹಣ ಯಾರ ಕೈಗಳಿಗೆ ಹೋಗುತ್ತದೆ ಎಂಬುದನ್ನು ಯಾರಾದರೂ ಊಹಿಸಬಹುದು. ಕದನ
ದುರಂತವೆಂದರೆ, ಮಿಲಿಟರಿ ಕಾರ್ಯಾಚರಣೆಯಲ್ಲದೆ, ರಾಜತಾಂತ್ರಿಕ ಸಂಪರ್ಕದಂತಹ ಇತರ ಮಾರ್ಗಗಳನ್ನು ಅನ್ವೇಷಿಸಬೇಕು ಎಂಬ ವಿರೋಧ ಪಕ್ಷಗಳ ಸೂಚನೆಯನ್ನು ನಿರ್ಲಕ್ಷಿಸಲಾಯಿತು. ಈ ಸಲಹೆಯನ್ನು ನಿರ್ಲಕ್ಷಿಸಿದ ಪರಿಣಾಮ ಏನೆಂಬುದು ಈಗ ಎಲ್ಲರಿಗೂ ಸ್ಪಷ್ಟವಾಗಿದೆ. 25 ಸದಸ್ಯರ ಐಎಂಎಫ್ ಕಾರ್ಯಕಾರಿ ಮಂಡಳಿಯಲ್ಲಿ ಮತದಾನದಿಂದ ದೂರ ಉಳಿದ ಏಕೈಕ ಸದಸ್ಯ ಭಾರತ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ಕೃತ್ಯದ ಪುರಾವೆಗಳಿದ್ದರೂ, ಪಾಕಿಸ್ತಾನಕ್ಕೆ ಸಾಲ ಸರ್ವಾನುಮತದಿಂದ ಸಿಕ್ಕಿತು. ಕದನ
ಮೋದಿ ಭಾಷಣದ ಮೊದಲು ಟ್ರಂಪ್ ಉದ್ಗಾರ
ಪ್ರಧಾನಿಯವರ ರಾಷ್ಟ್ರವನ್ನುದ್ದೇಶಿಸಿ ಮಾಡುವ ಭಾಷಣಕ್ಕೆ ಕೆಲವೇ ಗಂಟೆಗಳ ಮೊದಲು ಟ್ರಂಪ್ ಇಂತಹ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದರು. ಇಲ್ಲಿ ಯಾವುದೇ ಊಹೆಗೆ ಅವರು ಅವಕಾಶವನ್ನೇ ನೀಡಲಿಲ್ಲ, ಎರಡು ನೆರೆಹೊರೆಯ ದೇಶದವರನ್ನು ಮಣಿಯುವಂತೆ ಬಲವಂತ ಪಡಿಸಲು ಹೇಗೆ ಹಣಕಾಸು ಮತ್ತು ವ್ಯಾಪಾರದ ವಿಷಯಗಳನ್ನು ಅಮೆರಿಕವು ಬಳಸಿತು ಎಂದು ಅವರು ಹೇಳಿದರು.
ಹೀಗೆ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಭಾರತೀಯರ ಸಾವು ನೋವುಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ, ಪಹಲ್ಗಾಮ್ ದಾಳಿಯ ಅಪರಾಧಿಗಳನ್ನು ಹಸ್ತಾಂತರಿಸಬೇಕೆಂಬ ಬೇಡಿಕೆಯೂ ಇಲ್ಲ, ಸಾಮಾನ್ಯ ಭಾರತೀಯ ನಾಗರಿಕರು ಎದುರಿಸುತ್ತಿರುವ ತೀವ್ರ ಒತ್ತಡದ ಬಗ್ಗೆಯಂತೂ ಏನೂ ಇಲ್ಲ್ಲ. ಇದೆಲ್ಲ ನಮ್ಮ ಶೋಚನೀಯ ಸ್ಥಿತಿಯನ್ನು ಬಿಂಬಿಸಿತಷ್ಟೇ.
ವಿದೇಶಾಂಗ ಕಾರ್ಯದರ್ಶಿ ಮುಚ್ಚುಮರೆಯಿಲ್ಲದೆ ಒಪ್ಪಿಕೊಂಡಂತೆ, ಭಯೋತ್ಪಾದಕರು ಕೋಮು ಧ್ರುವೀಕರಣವನ್ನು ಪ್ರಚೋದಿಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿರುವುದರಿಂದ, ದ್ವೇಷದ ವಿರುದ್ಧದ ಸಮರವು ಭಯೋತ್ಪಾದನೆಯ ವಿರುದ್ಧದ ವಿಶಾಲ ಹೋರಾಟದ ಅವಿಭಾಜ್ಯ ಅಂಗವಾಗುವುದು ಅತ್ಯಗತ್ಯವಾಗಿತ್ತು. ಆದರೆ ದುರದೃಷ್ಟವಶಾತ್, ಹಿಂದುತ್ವ ಬ್ರಿಗೇಡ್ನ ದ್ವೇಷದ ಮೂಲರಚನೆ ತನ್ನ ರಕ್ತದಾಹವನ್ನು ತೀರಿಸಿಕೊಳ್ಳಲು ಹವಣಿಸುತ್ತಿತ್ತು. ಈ ಬ್ರಿಗೇಡಿನವರು ಈ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ, ಅವರ ಕೋಪವು ಸ್ಪಷ್ಟವಾಗಿ ಕಾಣುತ್ತಿತ್ತು. ಮೇ 8ರ ಸಂಜೆ ಅವರು ವೀರಾವೇಶದಿಂದ ಕೂಗಾಡಿದರು, ಮುಖ್ಯವಾಹಿನಿಯ ಮಾಧ್ಯಮ ವಿಭಾಗಗಳು ಸಹ ಶುದ್ಧ ಸುಳ್ಳು ಕತೆಗಳನ್ನು ಕಟ್ಟಿ ಕೈಜೋಡಿಸಿದವು. ಸಾಮಾಜಿಕ ಮಾಧ್ಯಮಗಳ ದ್ವೇಷಕೋರರು ಇದನ್ನು ಇನ್ನಷ್ಟು ವಿಸ್ತರಿಸುತ್ತ ಪಾಕಿಸ್ತಾನ ಎಂತಹ ವಿನಾಶಲೀಲೆಗೆ ಈಡಾಗಿದೆ ಎಂದು ಬಿಂಬಿಸಲು ಕತೆಗಳನ್ನು ಹರಡಿದರು.
ಇದನ್ನೂ ನೋಡಿ: ಬಿಡದಿ : ಮೂಕ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ Janashakthi Media
ಇದು ದೇಶದ ಹಿತಾಸಕ್ತಿಗಳಿಗೆ ಹಾನಿ ಮಾಡಿದೆ. ಈ ಮೂಲಕ ಅಂತರರಾಷ್ಟ್ರೀಯ ಸಮುದಾಯದಲ್ಲಿ ಭಾರತದ ಪ್ರತಿಷ್ಠೆಗೆ ಹಾನಿ ಉಂಟಾಗಿದೆ. ಆದರಿಂದಾಗಿಯೇ, ವಿದೇಶಾಂಗ ಕಾರ್ಯದರ್ಶಿ ಮತ್ತು ಸಶಸ್ತ್ರಪಡೆಗಳ ಪ್ರತಿನಿಧಿಗಳು ಭಾರತ ಒಂದು ಜಾತ್ಯತೀತ ದೇಶ ಮತ್ತು ಕಾರ್ಯನಿರತಪ್ರಜಾಪ್ರಭುತ್ವವಾಗಿದೆ ಎಂದು ವಿವರಿಸಲು ಶ್ರಮಿಸಿದರು. ಆದ್ದರಿಂದ, ತಮ್ಮ `ನಾಯಕ’ರನ್ನು ಪ್ರಶ್ನಿಸಲಾಗದ ಅವರ ಅನುಯಾಯಿಗಳು ವಿದೇಶಾಂಗ ಕಾರ್ಯದರ್ಶಿಯವರನ್ನು ಗುರಿಯಾಗಿಸುತ್ತಿರುವುದರಲ್ಲಿ ಅಚ್ಚರಿಯೇನಿಲ್ಲ. ಅವರ ಕೆಟ್ಟ ಟ್ರೋಲಿಂಗ್ಗೆ ಹಿಮಾಂಶಿ ನರ್ವಾಲ್ ನಂತರ, ಬಲಿಯಾದವರು ವಿದೇಶಾಂಗ ಕಾರ್ಯದರ್ಶಿ.
ಈ ಬಿಕ್ಕಟ್ಟಿನಿಂದ ಹೊರಬರಲು ಸರ್ಕಾರಕ್ಕೆ ಇರುವ ಏಕೈಕ ಮಾರ್ಗವೆಂದರೆ ನಡೆದಿರುವ ವಿಷಯಗಳನ್ನು ಮುಚ್ಚುಮರೆಯಿಲ್ಲದೆ ಪ್ರಸ್ತುತಪಡಿಸುವುದು. ಸಮೂಹಗಾನಂದಂತಿರುವಕಥನಗಳು ಮತ್ತು ಭಾವಾವೇಶದ ಮಾತುಗಳು, ಸಂಸತ್ತಿನಲ್ಲಿ ನಡೆಯುವ ವಿಷಯವಾರು ಚರ್ಚೆಗೆ ಪರ್ಯಾಯವಾಗಲಾರವು. ಒಂದು ಕಾರ್ಯನಿರತ ಪ್ರಜಾಪ್ರಭುತ್ವದಲ್ಲಿ ಇಂತಹ ಚರ್ಚೆ ನಡೆಸುವುದು ಕನಿಷ್ಠ ಅವಶ್ಯಕತೆಯಾಗಿದೆ.
ಏತನ್ಮಧ್ಯೆ, ದಕ್ಷಿಣ ಏಷ್ಯಾದಲ್ಲಿ ಅಮೆರಿಕನ್ ಸಾಮ್ರಾಜ್ಯಶಾಹಿಯು ತನ್ನ ಪ್ರಾಬಲ್ಯವನ್ನು ಮತ್ತೆ ಎತ್ತಿತೋರಲು ಎಂತಹದೊಂದು ಹೊಸ ಆತಂಕಕಾರಿ ಕ್ರೂರ ವಿಧಾನಕ್ಕೆ ಇಳಿಯುತ್ತಿದೆ ಎಂಬುದು ಅನಾವರಣಗೊಳ್ಳುತ್ತಿದೆ. ಭಾರತದ ಜನತೆಗೆ ಗಂಭೀರ ಅಪಾಯವನ್ನು ತಂದೊಡ್ಡುವ ಪರಿಸ್ಥಿತಿ ಉಂಟಾಗಿದೆ. ಈ ಪೀಡೆಯನ್ನು ಎದುರಿಸುವ ನಮ್ಮ ದೃಢನಿರ್ಧಾರ ಮತ್ತು ಸಂಕಲ್ಪ ದ್ವಿಗುಣಗೊಳ್ಳಬೇಕಾದ ಸಮಯ ಇದು.
ನಾನು! ನಾನು!
ವ್ಯಂಗ್ಯಚಿತ್ರ:
ಸತೀಶ ಆಚಾರ್ಯ@ ಫೇಸ್ಬುಕ್