‘ಮೋಹನ್  ಭಾಗವತ್’ ಹಿತವಚನದ  ಹಿಂದೆ…

-ಸಿ.ಸಿದ್ದಯ್ಯ

ಅವರು ನಿರೀಕ್ಷಿಸಿದ  400 ಪ್ಲಸ್  ಸ್ಥಾನಗಳು ಬಾರದಿರುವುದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ಆಕ್ರೋಶಕ್ಕೆ ಕಾರಣವಾಗಿದೆ. 400 ಸ್ಥಾನಗಳು ಬಂದರೆ ಏನೇನು ಮಾಡಬೇಕು ಎಂದು ತಾವು ಹಾಕಿಕೊಂಡಿದ್ದ ಬ್ಲೂ ಪ್ರಿಂಟ್  ಕೈಬಿಡಬೇಕಾಗಿದೆಯಲ್ಲಾ ಎಂಬುದೇ ಅವರ ಚಿಂತೆಗೆ ಕಾರಣ. ಮೈಥಿಸ್ ಮತ್ತು ಕುಕಿಗಳ ನಡುವೆ ಘರ್ಷಣೆಯನ್ನು ಸೃಷ್ಟಿಸುವುದು ಆರೆಸ್ಸೆಸ್ ಆಟದ ಯೋಜನೆಯ ಒಳಸಂಚಿನ ಭಾಗವೇ ಆಗಿದೆ. ಮೋಹನ್  

ಈಗ ಅದರ ನಾಯಕರು ಇದ್ದಕ್ಕಿದ್ದಂತೆ  ಮಣಿಪುರದ ಬೆಂಕಿಯ ಬಗ್ಗೆ ಮಾತನಾಡುತ್ತಿರುವುದು ಅಚ್ಚರಿ ಮೂಡಿಸಿದೆ! ಸಾಲದೆಂಬಂತೆ ”ರಾಜಕೀಯದಲ್ಲಿ ಎದುರಿನ ಪಕ್ಷ ಯಾವಾಗಲೂ ವಿರೋಧ ಪಕ್ಷವಾಗುತ್ತದೆಯೇ ಹೊರತು ಶತ್ರುಪಕ್ಷ ಅಲ್ಲ. ಎದುರಾಳಿಯನ್ನು ವಿರೋಧಿಗಳಂತೆ ನೋಡಬೇಡಿ” ಎಂದೂ ಭಾಗವತ್ ಬಿಜೆಪಿಗೆ ಹಿತವಚನ ನೀಡುತ್ತಾರೆ!! ಇವೆಲ್ಲಾ ಈಗ ಯಾಕೆ? ಬಿಜೆಪಿಗೆ ಆದ ಸೋಲಿನಿಂದ ತಾನು ತಪ್ಪಿಸಿಕೊಳ್ಳಲೆಂದೇ? ಅಥವಾ ತಪ್ಪು ಬಿಜೆಪಿಯದ್ದೇ ಹೊರತು ತಮ್ಮದಲ್ಲ ಎಂದು ಹೇಳಿಕೊಳ್ಳುವುದಕ್ಕಾಗಿಯೇ? ಬಹುಶಃ ಜನರ ವಿಶ್ವಾಸ ಕಳೆದುಕೊಳ್ಳುತ್ತಿದ್ದೇವೆ ಎಂಬ ಸತ್ಯವನ್ನು ಮರೆಮಾಚಲು ಹೊರಟಿದ್ದಾರೇನೋ..!

ಇದನ್ನೂ ಓದಿ: ಬಾಬರಿ ಮಸೀದಿಯ ಹೆಸರು ಅಳಿಸಿದ ಎನ್‌ಸಿಇಆರ್‌ಟಿಯ ಹೊಸ ಪುಸ್ತಕ

“ಭಾರತೀಯ ಜೀವನ ವಿಧಾನದಲ್ಲಿ ಘನತೆ ಎನ್ನುವುದು ಒಂದು ಭಾಗ. ಆ ಘನತೆ ನಮ್ಮ ಸಂಸ್ಕೃತಿ. ನಮ್ಮ ಧರ್ಮ.  ಸೇವಕನಿಗೆ ಅಹಂಕಾರ ಇರಬಾರದು, ನಡವಳಿಕೆಯಲ್ಲಿ ಸಭ್ಯತೆ, ಘನತೆ ಇರಬೇಕು. ಸಭ್ಯತೆಯನ್ನು ಪಾಲಿಸುವವನು ಕೆಲಸ ಮಾಡಿಕೊಂಡೇ ಹೋಗುತ್ತಾನೆ ವಿನಃ ನಾನು ಮಾಡಿದೆನು ಎಂದು ಅಹಂಕಾರ ಪಡುವುದಿಲ್ಲ. ಹಾಗೆಯೇ ಎಲ್ಲವನ್ನೂ ನಾನೇ ಎಂದು ಅಹಂಕಾರ ಪಡುವವನಿಗೆ  ನಾನು ಪ್ರಜಾಸೇವಕ ಎಂದು ಹೇಳುವ ಅರ್ಹತೆ ಇಲ್ಲ”… ಮೋಹನ್ 

ಕೇಂದ್ರದಲ್ಲಿ ಹೊಸ  ಸಮ್ಮಿಶ್ರ ಸರ್ಕಾರ ರಚನೆಯಾಗಿ, ಹೊಸ ಸಚಿವ ಸಂಪುಟ ರಚನೆಯಾಗುತ್ತಿದ್ದ ಸಂದರ್ಭದಲ್ಲಿ, ಆರ್‌ಎಸ್‌ಎಸ್  ನ ಸರಸಂಘಚಾಲಕ ಮೋಹನ್ ಭಾಗವತ್ ಮಾಡಿದ ವ್ಯಾಖ್ಯಾನಗಳಿವು.  ಈ ಮಾತುಗಳು ಯಾರನ್ನು ಉದ್ದೇಶಿಸಿವೆ? ಅವರು ಅಷ್ಟಕ್ಕೇ ನಿಲ್ಲಲಿಲ್ಲ. “ವರ್ಷಗಳಿಂದ ಮಣಿಪುರ ಶಾಂತಿಗಾಗಿ ಎದುರು ನೋಡುತ್ತಿದೆ. 10 ವರ್ಷಗಳಿಂದ ಅಲ್ಲಿ ಶಾಂತಿ ನೆಲೆಸಿತ್ತು. ಹಳೆಯ ಬಂದೂಕು ಸಂಸ್ಕೃತಿ ಮುಗಿದಿದೆ. ಆದರೆ ಒಂದು ವರ್ಷದ ಹಿಂದೆ ಅಲ್ಲಿ ಹೇಗೆ ಅಶಾಂತಿ ಉಂಟಾಯಿತೋ ಗೊತ್ತಿಲ್ಲ, ಆದರೆ ಆ ಬೆಂಕಿ ಇನ್ನೂ ಉರಿಯುತ್ತಿದೆ… ” ಎಂದು ಹೇಳಿದರು. ಇವರು ಯಾರ ಬಗ್ಗೆ ಹೇಳುತ್ತಿದ್ದಾರೆಂದು ಈಗ ಅರ್ಥವಾಗಿರಬೇಕಲ್ಲವೇ?…!

ಭಾಗವತ್ ಇನ್ನೂ ಮುಂದುವರಿದು: ”ರಾಜಕೀಯದಲ್ಲಿ ಎದುರಿನ ಪಕ್ಷ ಯಾವಾಗಲೂ ವಿರೋಧ ಪಕ್ಷವಾಗುತ್ತದೆಯೇ ಹೊರತು ಶತ್ರುಪಕ್ಷ ಅಲ್ಲ. ಎದುರಾಳಿಯನ್ನು ವಿರೋಧಿಗಳಂತೆ ನೋಡಬೇಡಿ. ಅವರು ಇನ್ನೊಂದು ಕೋನವನ್ನು ತೋರಿಸುತ್ತಾರೆ. ವ್ಯವಸ್ಥೆಯಲ್ಲಿ ಆ ಅವಕಾಶ ಸದಾ ಇರಬೇಕು. ಎರಡು ಪಕ್ಷಗಳ ನಡುವೆ ಇರಬೇಕಿರುವುದು ಪೈಪೋಟಿಯೇ ವಿನಃ  ಯುದ್ಧವಲ್ಲ”  ​​ಎಂಬ ಹಿತವಚನವನ್ನೂ ನೀಡಿದರು!! ಮೋಹನ್

“ರಾಷ್ಟ್ರೀಯ ಸ್ವಯಂಸೇವಕ ಸಂಘ ಸಿದ್ಧಾಂತಿ ಇಂದ್ರೇಶ್ ಕುಮಾರ್ ಅವರು “ಹೆಚ್ಚು ಅಹಂಕಾರ ತೋರಿದ ಆಡಳಿತ ಪಕ್ಷ ಬಹುಮತದ ಕೊರತೆ ಅನುಭವಿಸಿದೆ. ರಾಮ ಅವರನ್ನು 241 ಸ್ಥಾನಕ್ಕೆ ನಿಲ್ಲಿಸಿದ” ಎಂದಿತ್ತಾರೆ.

ಸಂಘ ಮತ್ತು ಅದರ ಎಲ್ಲಾ ಪರಿವಾರವನ್ನು ಬದಿಗೆ ಸರಿಸಿ  “ಮೋದಿ ಗ್ಯಾರಂಟಿ” ಎಂದು ಘೋಷಿಸಿದವರು ಯಾರು? ಸುಳ್ಳು, ಅರ್ಧಸತ್ಯ, ವಿಭಜಕ, ದ್ವೇಷಪೂರಿತ ಭಾಷಣಗಳಿಂದ ವಿಷವನ್ನು ಉಗುಳಿದ್ದು ಯಾರು? ಮಣಿಪುರದ ಹತ್ಯಾಕಾಂಡವನ್ನು ಕಣ್ಣೆತ್ತಿಯೂ ನೋಡದೆ ಇದ್ದವರು ಯಾರು? ಕೇಸುಗಳ ಮೂಲಕ, ಜೈಲಿಗೆ ಕಳುಹಿಸಿ, ವಿವಿದ ರೀತಿಯಲ್ಲಿ ಕಿರುಕುಳ ನೀಡಿ, ಹಲವರನ್ನು ಭಯಭೀತರನ್ನಾಗಿಸಿದ್ದು, ಕೊನೆಗೆ ಕೆಲವು ಪ್ರತಿಪಕ್ಷಗಳ ಬ್ಯಾಂಕ್ ಖಾತೆಗಳನ್ನು ಸ್ತಬ್ಧಗೊಳಿಸಿದ್ದು… ಚುನಾವಣೆಯಲ್ಲಿ ಪ್ರತಿ ಪಕ್ಷಗಳು ಹೋರಾಡುವ ಅವಕಾಶವೇ ಇಲ್ಲದಂತೆ ಮಾಡುವಲ್ಲಿ ಯಾರ ಕುತಂತ್ರವಿದೆ? ಎಲ್ಲವೂ ಬಹಿರಂಗ ರಹಸ್ಯವೇ ಅಲ್ಲವೇ. ಆದ್ದರಿಂದ ಭಾಗವತ್ ಅವರ ಆಕ್ರೋಶ ಯಾರನ್ನು ಉದ್ದೇಶಿಸಿದೆ ಎಂದು ಪ್ರತ್ಯೇಕವಾಗಿ  ಹೇಳಬೇಕಾಗಿಲ್ಲ. ಮೋದಿ ಅಥವಾ ಬಿಜೆಪಿಯ ಯಾವುದೇ ನಾಯಕರಾದರೂ ಆರೆಸ್ಸೆಸ್ ಒಪ್ಪಿಗೆ ಪಡೆಯದೇ ಇವೆಲ್ಲವನ್ನೂ ಮಾಡಲಾದೀತೇ? ಅಥವಾ ಜನರು ಇದನ್ನೆಲ್ಲಾ ನಂಬಬೇಕು ಎನ್ನುತ್ತಾರೆಯೇ?

ಸೋಲುವ ಮುನ್ಸೂಚನೆ ಸಿಕ್ಕಿತ್ತು

ಚುನಾವಣೆ ಸಮಯದಲ್ಲಿ ಹೊಸ ರೀತಿಯ ಪ್ರಚಾರ ಮುನ್ನೆಲೆಗೆ ಬಂದಿತ್ತು. ಮೋದಿ ತಂಡ ಮತ್ತು ಆರೆಸ್ಸೆಸ್  ನಾಯಕತ್ವದ ನಡುವೆ ಭಿನ್ನಾಭಿಪ್ರಾಯ ಹೆಚ್ಚುತ್ತಿದೆ ಎಂಬುದು ಆ ಪ್ರಚಾರದ ಸಾರಾಂಶ. ಈ ಬಾರಿ ಮೋದಿಯವರು ಕೇಳುತ್ತಿರುವ 400 ಸ್ಥಾನಗಳನಲ್ಲ, ಅವರು ಹೇಗೆ ಬಹುಮತ ಪಡೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಎರಡನೇ ಶ್ರೇಯಾಂಕದ ಆರೆಸ್ಸೆಸ್ ನಾಯಕರೊಬ್ಬರು ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿರುವ ವಿಡಿಯೋ ವೈರಲ್ ಆಗುವಂತೆ ನೋಡಿಕೊಂಡರು. ಆರೆಸ್ಸೆಸ್ ಅನ್ನು ಮರೆತು ಮೋದಿಯವರು ತಮ್ಮ ಸ್ವಂತ ಇಮೇಜನ್ನು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ, … ಹೀಗೆ  ಪ್ರಚಾರ ನಡೆಯಿತು.

ಆರೆಸ್ಸೆಸ್ ಸಹಾಯವಿಲ್ಲದೆ ಬಿಜೆಪಿ ….

ಆರೆಸ್ಸೆಸ್ ಮತ್ತು ಬಿಜೆಪಿ ನಡುವಿನ ಸಂಬಂಧದ ಬಗ್ಗೆ ವಾಜಪೇಯಿ ಯುಗ ಮತ್ತು ಮೋದಿ ಯುಗ ನಡುವಿನ ವ್ಯತ್ಯಾಸದ ಬಗ್ಗೆ ಕಳೆದ ವಾರ ಇಂಡಿಯನ್ ಎಕ್ಸ್  ಪ್ರೆಸ್ ಮ್ಯಾಗಜೀನ್  ನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೆಪಿ ನಡ್ಡಾ, ”ಬಿಜೆಪಿ ಶಕ್ತಿ ಕಡಿಮೆ ಇದ್ದ ಆರಂಭದಲ್ಲಿ ಆರೆಸ್ಸೆಸ್ ಅಗತ್ಯವಿತ್ತು. ಈಗ ಬಿಜೆಪಿ ಬಲ ಹೆಚ್ಚಿದೆ. ಹಾಗಾಗಿ ಆರೆಸ್ಸೆಸ್ ಸಹಾಯವಿಲ್ಲದೆ ಬಿಜೆಪಿ ಕಾರ್ಯ ನಿರ್ವಹಿಸಲಿದೆ ಎಂದರು. ಬಿಜೆಪಿ ರಾಜಕೀಯ ಕ್ಷೇತ್ರದಲ್ಲಿ ಮತ್ತು ಆರೆಸ್ಸೆಸ್ ಸೈದ್ಧಾಂತಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಘಟನೆಯಾಗಿದೆ ಎಂದು ಹೇಳಿದರು. ನಡ್ಡಾ ಅವರ ಪ್ರತಿಕ್ರಿಯೆಗಳು ಎರಡು ಅಂಶಗಳನ್ನು ಪ್ರಸ್ತುತಪಡಿಸುತ್ತವೆ. ಬಿಜೆಪಿಗೆ ಆರೆಸ್ಸೆಸ್ ಬೆಂಬಲ ಅಗತ್ಯವಿಲ್ಲ ಎಂಬುದು ಒಂದು. ಎರಡನೆಯದು ಆರೆಸ್ಸೆಸ್  ಪುರೋಹಿತಶಾಹಿ ಸಂಘಟನೆಯಲ್ಲ! ಇದಕ್ಕೆ ವ್ಯತಿರಿಕ್ತವಾಗಿ, ಬಿಜೆಪಿ ರಾಜಕೀಯ ಸಂಘಟನೆಯಂತೆ, ಆರೆಸ್ಸೆಸ್ ಸೈದ್ಧಾಂತಿಕ ಸಂಘಟನೆಯಾಗಿದೆ. ಇದುವರೆಗೆ ಬಿಜೆಪಿಯ ಯಾವ ನಾಯಕರೂ ಆರೆಸ್ಸೆಸ್ ಸಂಘಟನೆಯನ್ನು ಕೀಳಾಗಿ ಕಂಡಿಲ್ಲ. ಆರೆಸ್ಸೆಸ್ ಅನುಮತಿ ಇಲ್ಲದೆ ನಡ್ಡಾ ಈ ರೀತಿ ಮಾತನಾಡುವ ಸಾಧ್ಯತೆ ಇಲ್ಲ. ಇದು, ಆರೆಸ್ಸೆಸ್ ಪ್ರಚಾರದಲ್ಲಿ ತೊಡಗಿದ್ದರೆ ಬಿಜೆಪಿ 400 ಸ್ಥಾನಗಳನ್ನು ಗೆಲ್ಲುತ್ತಿತ್ತು ಎಂದು ಬಿಂಬಿಸುವ ಪ್ರಯತ್ನವಲ್ಲದೆ ಬೇರೇನಲ್ಲ.

ಇದನ್ನೂ ಓದಿಬೆಂಗಳೂರಿನಲ್ಲೂ ಬಸ್ಸುಗಳ ಕಾರ್ಯಾಚರಣೆಗೆ ಇಳಿಯಲಿದೆ ಉಬರ್: ಬಿಎಂಟಿಸಿ, ಕೆ.ಎಸ್.ಆರ್.ಟಿ.ಸಿ. ಇನ್ನೆಷ್ಟು ಸಮಯ ಉಳಿಯಲಿವೆ?

ಭಾಗವತ್ ಹೇಳಿದ್ದು ಅಕ್ಷರಶಃ ಸತ್ಯವಾದರೂ…

ಭಾಗವತ್ ಅವರ ಇಂತಹ ‘ಆಕ್ರಮಣ’ದ  ಮಾತುಗಳಲ್ಲಿ ಇರುವ ಅಂಶಗಳು ಅಕ್ಷರಶಃ ಸತ್ಯವಾದರೂ, ಇದರಲ್ಲಿ ಪ್ರಾಮಾಣಿಕತೆಯಂತೂ ಕಾಣುವುದಿಲ್ಲ. ಯಾಕೆಂದರೆ ಇದೆಲ್ಲಾ ಅವರ ಒಳಗೊಳ್ಳುವಿಕೆ ಇಲ್ಲದೆ  ನಡೆದಿದೆಯೇ? ಹಾಗೆ ನಡೆಯಲು ಸಾಧ್ಯವಿದೆಯೇ?  ಆರೆಸ್ಸೆಸ್‌ ನ ಕೈವಾಡವಿಲ್ಲದೆ ಮೋದಿಯವರು ತಮ್ಮನ್ನು ತಾವು ದೈವಾಂಶಸಂಭೂತ ಎಂದು ಘೋಷಿಸಿಕೊಂಡಿದ್ದಾರೆಯೇ? ಆದರೂ ಈ ಹತ್ತು ವರ್ಷದಿಂದ ಇಲ್ಲದಿದ್ದದ್ದು ಇವರಿಗೆ ಪಲಿತಾಂಶ ಬಂದ ನಂತರ ಏಕೆ ಜ್ಞಾನೋದಯವಾಗಿದೆ? ಜೂನ್ 4 ರ ಮೊದಲು, ಯಾಕೆ ಈ ರೀತಿಯ ಹಿತೋಪದೇಶದಲ್ಲಿ ದೋಷಾರೋಪಣೆ ಹೊರಗೆ ಬರಲಿಲ್ಲ? ಅಸಲಿಗೆ ವಿಭಜಕ ದ್ವೇಷಸಿದ್ಧಾಂತ ಮತ್ತು ಫ್ಯಾಸಿಸ್ಟ್ ಪ್ರವೃತ್ತಿಗಳ ಮೂಲ ಆರೆಸ್ಸೆಸ್  ನವರೇ ಅಲ್ಲವೇ?

ಬಿಜೆಪಿ ಆರೆಸ್ಸೆಸ್  ನ ರಾಜಕೀಯ ವಿಭಾಗ

ವಾಸ್ತವವಾಗಿ, ಆರೆಸ್ಸೆಸ್‌ ಅಡಿಯಲ್ಲಿರುವ 250 ಸಂಸ್ಥೆಗಳಲ್ಲಿ ಬಿಜೆಪಿಯೂ ಒಂದು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಬಿಜೆಪಿ ಎನ್ನುವುದು ಆರೆಸ್ಸೆಸ್  ನ ರಾಜಕೀಯ ವಿಭಾಗ ಮಾತ್ರ. ಬಿಜೆಪಿಗೆ ಸೈದ್ಧಾಂತಿಕ ನಾಯಕತ್ವ ನೀಡುವುದು ಆರೆಸ್ಸೆಸ್. ಅದಕ್ಕೆ ಸರ್ವೋಚ್ಚ ನಾಯಕ ಸರಸಂಘಚಾಲಕ . ಆದ್ದರಿಂದ ಬಿಜೆಪಿ ಮತ್ತು ಆರೆಸ್ಸೆಸ್ ಅನ್ನು ಬೇರೆಬೇರೆಯಾಗಿ ನೋಡಲಾಗುವುದಿಲ್ಲ. ಮೇಲಾಗಿ ಈ ಸರಸಂಘಚಾಲಕರ ಎದುರು ಮತ್ತು ಅವರ ಪ್ರಮುಖ ಸ್ಥಾನವಾದ ನಾಗ್ಪುರ ಕೇಂದ್ರಕ್ಕೆ  ಎದುರು ಬಿಜೆಪಿಯಲ್ಲಿ ಯಾರೂ ನಿಲ್ಲುವಂತಿಲ್ಲ ಎಂಬ ಪ್ರತೀತಿ ಇದೆ. ಹೀಗಿರುವಾಗ, ಸಂಘದ ಈ ಸರ್ವೋಚ್ಚ ನಾಯಕ ಈಗ ಯಾಕಾಗಿ ಚಿಂತಿಸುತ್ತಿದ್ದಾರೆ? ನಾಗ್ಪುರಕ್ಕೂ ದೆಹಲಿಗೂ ನಡುವೆ ಅಂತರ ಹೆಚ್ಚುತ್ತಿದೆಯೇ? ನಾಗ್ಪುರದ ಆಧಿಪತ್ಯಕ್ಕೆ ಸವಾಲಾಗಿ ದೆಹಲಿಯಲ್ಲಿ ಅಧಿಕಾರ ಬಲವರ್ಧನೆಯಾಗುತ್ತಿದೆಯೇ? ಇದನ್ನು ಯಾರಾದರೂ ನಂಬಬಹದೇ?

400 ಪ್ಲಸ್  ಬಾರದಿರುವುದೇ ಆಕ್ರೋಶಕ್ಕೆ ಕಾರಣ

ಇನ್ನು ಆರೆಸ್ಸೆಸ್ ಅಧಿಕೃತ ನಿಯತಕಾಲಿಕೆ ‘ಆರ್ಗನೈಸರ್’ ಪ್ರಕಟಿಸಿದ ಒಂದು ಲೇಖನವನ್ನು ಕೂಡಾ ಇಲ್ಲಿ ಉಲ್ಲೇಖಿಸಬಹುದಾಗಿದೆ. ಸಂಘದ ಹಿರಿಯ ನಾಯಕ ರತನ್ ಶಾರ್ದ ಅವರು ಬರೆದಿರುವ ಈ ಲೇಖನದಲ್ಲಿ ಅತಿಯಾದ ಆತ್ಮವಿಶ್ವಾಸವೇ ಬಿಜೆಪಿ ಹೆಚ್ಚು ಸ್ಥಾನ ಗಳಿಸಲಾಗಿಲ್ಲ ಎಂದು  ಪ್ರಸ್ತಾಪಿಸಿದ್ದಾರೆ. ವಾಸ್ತವವಾಗಿ ಬಿಜೆಪಿ ಅಧಿಕಾರ ಕಳೆದುಕೊಂಡಿಲ್ಲ. ಅವರು ನಿರೀಕ್ಷಿಸಿದ  400 ಪ್ಲಸ್  ಬಾರದಿರುವುದೇ ಅವರ ಆಕ್ರೋಶಕ್ಕೆ ಕಾರಣವಾಗಿದೆ. 400 ಸ್ಥಾನಗಳು ಬಂದರೆ ಏನೇನು ಮಾಡಬೇಕು ಎಂದು ತಾವು ಹಾಕಿಕೊಂಡಿದ್ದ ಬ್ಲೂ ಪ್ರಿಂಟ್  ಕೈಬಿಡಬೇಕಾಗಿದೆಯಲ್ಲಾ ಎಂಬುದೇ ಅವರ ಚಿಂತೆಗೆ ಕಾರಣ. ಮೈಥಿಸ್ ಮತ್ತು ಕುಕಿಗಳ ನಡುವೆ ಘರ್ಷಣೆಯನ್ನು ಸೃಷ್ಟಿಸುವುದು ಆರೆಸ್ಸೆಸ್ ಆಟದ ಯೋಜನೆಯ ಒಳಸಂಚಿನ ಭಾಗವೇ ಆಗಿದೆ. ಈಗ ಆರೆಸ್ಸೆಸ್ ನಾಯಕರು ಇದ್ದಕ್ಕಿದ್ದಂತೆ  ಮಣಿಪುರದ  ಅಶಾಂತಿಯ ಬಗ್ಗೆ ಮಾತನಾಡುತ್ತಿರುವುದು ಅಚ್ಚರಿ ಮೂಡಿಸಿದೆ!

ವಾಸ್ತವವಾಗಿ, ಸಂಘದ ಹಿರಿಯ ನಾಯಕರ ‘ಕಾಳಜಿ’ ಹೊಂದಿರುವಂತೆ  ತೋರಿಕೆಗಳು ಇದೇ ಮೊದಲನೆಯದೇನಲ್ಲ. ಇದು ಹತ್ತು ವರ್ಷಗಳ ಹಿಂದೆಯೇ ಪ್ರಾರಂಭವಾಗಿದೆ. ಕೇಸರಿ ಹಿರಿಯರ ಕಣ್ಣೆದುರೇ ಅವರ ಕಣ್  ಸನ್ನೆಯಲ್ಲೇ ಎಲ್ಲವೂ ನಡೆಯುತ್ತಿವೆ. ಆದರೆ ಈ ಕೆಲಸಗಳು ಈಗಷ್ಟೇ ಶುರುವಾಗಿದ್ದು, ಈಗಷ್ಟೇ ಗುರುತಿಸಿದವರಂತೆ ಸಂಘದ ಹಿರಿಯರು ಮಾತನಾಡುತ್ತಿರುವುದು ವಿಪರ್ಯಾಸ. ಇಷ್ಟಕ್ಕೂ ಈ ರೀತಿಯ ಗದ್ದಲವೆಲ್ಲಾ ಯಾಕೆ? ಬಿಜೆಪಿಗೆ ಆದ ಸೋಲಿನಿಂದ ತಾನು ತಪ್ಪಿಸಿಕೊಳ್ಳಲೆಂದೇ? ಅಥವಾ ತಪ್ಪು ಬಿಜೆಪಿಯದ್ದೇ ಹೊರತು ತಮ್ಮದಲ್ಲ ಎಂದು ಹೇಳಿಕೊಳ್ಳುವುದಕ್ಕಾಗಿಯೇ? ಬಹುಶಃ ಜನರ ವಿಶ್ವಾಸ ಕಳೆದುಕೊಳ್ಳುತ್ತಿದ್ದೇವೆ ಎಂಬ ಸತ್ಯವನ್ನು ಮರೆಮಾಚಲು ಹೊರಟಿದ್ದಾರೇನೋ..! ಮೋಹನ್ 

ಆರ್‌ಎಸ್‌ಎಸ್‌ಗೆ ಹೊಸದೇನಲ್ಲ

ಇದೇನೂ ಆರ್‌ಎಸ್‌ಎಸ್‌ಗೆ ಹೊಸದೇನಲ್ಲ. ಆ ಸಂಘ ಕಪಟತನದಿಂದಲೇ ಹುಟ್ಟಿದ್ದು. ಸಾವರ್ಕರ್  ಅಂಡಮಾನ್ ಜೈಲಿನಲ್ಲಿದ್ದಾಗ ಕ್ಷಮೆಯಾಚನೆಗಾಗಿ ಬರೆದ  ಪತ್ರಗಳು, ಅದರಲ್ಲಿ ಬ್ರಿಟಿಷ್ ವಸಾಹತುಶಾಹಿ ಆಡಳಿತಗಾರರಿಗೆ ಅವರು ತೋರಿದ ರಾಜಭಕ್ತಿ ಈ ಕಪಟತನಕ್ಕೆ ಮೊದಲ ಉದಾಹರಣೆಯಾಗಿದೆ. ಜನರಲ್ಲಿ ಸ್ವಾತಂತ್ರ್ಯದ ಹಂಬಲ ಇದ್ದುದರಿಂದ ಅವರು ಮೊದಲು ಸ್ವಾತಂತ್ರ್ಯ ಹೋರಾಟದ ಕ್ಷೇತ್ರಕ್ಕೆ ಪ್ರವೇಶಿಸಿದರು. ಬಂಧನವನ್ನು ಅನುಭವಿಸಿ ಹೊರ ಬಂದ ಸಾವರ್ಕರ್ ನಂತರ ವಸಾಹತುಶಾಹಿ ದೊರೆಗಳಿಗೆ ಸೇವಕರಾದರು. ಆರ್‌.ಎಸ್‌.ಎಸ್‌ .ನ ಮೂಲ ಸಂಸ್ಥಾಪಕ ಮತ್ತು ಸಿದ್ಧಾಂತವಾದಿ ಎಂದು ಪರಿಗಣಿಸಲ್ಪಟ್ಟಿರುವ ಸಾವರ್ಕರ್ ತೋರಿದ ಬೂಟಾಟಿಕೆ ಆರ್‌.ಎಸ್‌.ಎಸ್. ಸಂಘಟನೆಯ ನರನಾಡಿಗಳಲ್ಲಿ ಬೆರೆತುಹೋಗಿದೆ.

ಮುಸ್ಲಿಂ ಲೀಗ್‌ ಜೊತೆಗೆ ಅಧಿಕಾರ ಹಂಚಿಕೊಂಡಿತ್ತು

ಜನರಲ್ಲಿ ಮುಸ್ಲಿಮರ ವಿರುದ್ಧ ವಿಷಪೂರಿತ ಪ್ರಚಾರವನ್ನು ಹರಡಿದ ಸಂಘಪರಿವಾರ, ಸಿಂದ್ ಮತ್ತು ಬಂಗಾಳದ ಪ್ರಾಂತೀಯ ಸರ್ಕಾರಗಳಲ್ಲಿ (Provincial Government) 1946 ರಲ್ಲಿ ಮುಸ್ಲಿಂ ಲೀಗ್‌ ಜೊತೆಗೆ ಅಧಿಕಾರವನ್ನು  ಹಂಚಿಕೊಂಡ ಹಿಂದೂ ಮಹಾಸಭಾ ಸಮ್ಮಿಶ್ರ ಸರ್ಕಾರಗಳನ್ನು ರಚಿಸಿತು. ಮೋಹನ್ 

ಅಖಂಡ ಭಾರತದ ಬಗ್ಗೆ ಪ್ರಚಾರ ಮಾಡಿ ಅಫ್ಘಾನಿಸ್ತಾನದಿಂದ ಬರ್ಮಾದವರೆಗೆ ಇರುವ ಇಡೀ ಉಪಖಂಡ ಎಂದಿಗೂ ಹಿಂದೂ ದೇಶ ಎಂದು ಸುಳ್ಳು ಪ್ರಚಾರ ಮಾಡುವುದು ಆರ್‌.ಎಸ್‌.ಎಸ್. ನೀತಿಯಾಗಿದೆ. ಆದರೆ ಮುಸ್ಲಿಮ್ ಲೀಗ್ ನಂತೆ  ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಬಲಪಡಿಸಿ  ದೇಶದ ವಿಭಜನೆಗೆ ಕೊಡುಗೆ ನೀಡಿತು. ಮೋಹನ್ 

ದೇಶದ ವಿಭಜನೆಯ ನಂತರ, ಆರ್.ಎಸ್.ಎಸ್. ದೇಶಾದ್ಯಂತ ಕೋಮುಗಲಭೆಗಳಿಗೆ  ತೆರೆದುಕೊಂಡಿತು. ಮಹಾತ್ಮ ಗಾಂಧಿ ನಿರಶನ ದೀಕ್ಷೆಯನ್ನು ಕೈಗೊಂಡು ಜನರಲ್ಲಿ ಸಾಮರಸ್ಯ ನೆಲೆಸುವಂತೆ ಮನವಿ ಮಾಡಿದಾಗ, ಇದಕ್ಕೆ ದೇಶದೆಲ್ಲೆಡೆಯಿಂದ ಬಂದ ಸ್ಪಂದನೆ ಕಂಡು ಸಂಘಪರಿವಾರದ ಮುಖಂಡರು ಗಾಂಧೀಜಿ ಬಳಿ ತೆರಳಿ ನಿರಸನಕ್ಕೆ ಬೆಂಬಲ ಘೋಷಿಸಿದರು. ಮೋಹನ್ 

ಸಾವರ್ಕರ್ ಗೂ, ಆರ್ ಎಸ್ ಎಸ್ ಗೂ ಸಂಬಂಧವಿಲ್ಲ ಎಂದರು

ಕೆಲವೇ ದಿನಗಳಲ್ಲಿ ಎಲ್ಲವೂ ಇತ್ಯರ್ಥವಾಯ್ತು ಅಂದುಕೊಳ್ಳುತ್ತಿರುವಾಗಲೇ ಗಾಂಧೀಜಿಯವರ ಹತ್ಯೆ ಮಾಡಿದರು. ಈ ಷಡ್ಯಂತ್ರದ ಹಿಂದೆ ಸಾವರ್ಕರ್ ಅವರ ಕೈವಾಡ ಇರುವುದು ಸ್ಪಷ್ಟವಾಗಿದೆ. ತಕ್ಷಣ ಆರೆಸ್ಸೆಸ್ ತಮ್ಮ ಸಂಘಟನೆಗೂ ಗಾಂಧಿ ಹತ್ಯೆಗೂ ಸಂಬಂಧವಿಲ್ಲ ಎಂದೂ, ಸಾವರ್ಕರ್ ಗೂ, ಆರೆಸ್ಸೆಸ್ ಗೂ ಸಂಬಂಧವಿಲ್ಲ ಎಂದು ಘೋಷಿಸಿತು. ಕೆಟ್ಟ ಹೆಸರು ಬಂದರೆ  ಗೋಡ್ಸೆಗೂ ಮತ್ತು ಸಾವರ್ಕರ್‌ ಗೂ ಬರಬೇಕೇ ಹೊರತು ಆ ಮಸಿ ಆರೆಸ್ಸೆಸ್  ಗೆ ಮೆತ್ತಿಕೊಳ್ಳಬಾರದು ಎಂಬುದು ಅವರ ನೀತಿ. ಮೋದಿ ಪ್ರಧಾನಿಯಾದ ನಂತರ ಸಾವರ್ಕರ್ ಅವರನ್ನು ಮತ್ತು ಗೋಡ್ಸೆಯನ್ನು ಆಕಾಶದೆತ್ತರ ಪ್ರಚಾರವನ್ನು ಆರಂಭಿಸಿದರು. ಅವಕಾಶವಾದವು ಆರೆಸ್ಸೆಸ್  ನ ತಂತ್ರವಾಗಿದೆ. ಮೋಹನ್ 

ತುರ್ತು ಪರಿಸ್ಥಿತಿಯನ್ನು ಬೆಂಬಲಿಸಿದರು

ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ 1974 ರಲ್ಲಿ ಇಂದಿರಾ ಗಾಂಧಿಯವರ ಸರ್ವಾಧಿಕಾರದ ವಿರುದ್ಧ ಚಳುವಳಿ ಪ್ರಾರಂಭವಾಯಿತು. ಭಾರತೀಯ ಜನಸಂಘ (ಈಗಿನ ಬಿಜೆಪಿಯ ಅಂದಿನ ಹೆಸರು) ಅದರಲ್ಲಿ ಪಾಲುದಾರರಾದರು. 1975ರಲ್ಲಿ ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿ ಆರೆಸ್ಸೆಸ್  ಅನ್ನು ನಿಷೇಧಿಸಿದರು. ತಕ್ಷಣವೇ ಆರೆಸ್ಸೆಸ್ ಮುಖ್ಯಸ್ಥ ಬಾಳಾ ಸಾಹೇಬ್ ದೇವರಸ್ ತುರ್ತು ಪರಿಸ್ಥಿತಿಗೆ ಬೆಂಬಲ ಘೋಷಿಸಿದರು. ಜೆಪಿ ಚಳವಳಿಗೂ ಆರೆಸ್ಸೆಸ್  ಗೂ ಯಾವುದೇ ಸಂಬಂಧವಿಲ್ಲ ಎಂದು ಘೋಷಿಸಿದರು. ಜನರು ತುರ್ತು ಪರಿಸ್ಥಿತಿಯನ್ನು ತಿರಸ್ಕರಿಸಿದ ನಂತರ, ಆರೆಸ್ಸೆಸ್ ನಾಯಕರು ಸರ್ವಾಧಿಕಾರವನ್ನು ಸೋಲಿಸಿದ್ದೇವೆ ಎಂದು ಹೇಳಿಕೊಳ್ಳಲಾರಂಭಿಸಿದರು. ಮೋಹನ್ 

ಸರ್ವಾಧಿಕಾರವನ್ನು ಸೋಲಿಸಿ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿದ ಜನತಾ ಪಕ್ಷವನ್ನು ಇಂದಿರಾ ಗಾಂಧಿಯವರು ಮತ್ತೆ ಛಿದ್ರಗೊಳಿಸಿದರು. ಜನತಾ ಪಕ್ಷದ ವಿಘಟನೆಗೆ ಆರೆಸ್ಸೆಸ್ ಪ್ರಮುಖ ಕಾರಣ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಮೋಹನ್ 

400 ಸೀಟುಗಳನ್ನು ಗೆದ್ದಿದ್ದರೆ….

ಮೋದಿ ಅವರನ್ನು ಹಿಂದೂ ಹೃದಯ ಸಾಮ್ರಾಟ ಎಂದು ಮೆರವಣಿಗೆ ಮಾಡಿದ್ದ ಆರೆಸ್ಸೆಸ್ ಈಗ ಒಮ್ಮಿಂದೋಮೇಲೆ ಅವರಲ್ಲಿ ಅಹಂಕಾರ. ಉದ್ಘಟತನ, ಸ್ವಾರ್ಥದಂತಹ ಅವಗುಣಗಳೆಲ್ಲ ಕಾಣಿಸಿಕೊಂಡಿದ್ದು ಹೇಗೆ? ಒಂದೊಮ್ಮೆ 400 ಸೀಟುಗಳನ್ನು ಗೆದ್ದಿದ್ದರೆ ಆಗಲೂ ಭಾಗವತ್ ಈಗಿನ ಬುದ್ದಿವಾದ ಹೇಳುತ್ತಿದ್ದರೆ? ಖಂಡಿತಾ ಇಲ್ಲ. ಮೋದಿಯವರನ್ನು ಇನ್ನಷ್ಟು ಹೊಗಳಿ ಅಟ್ಟಕ್ಕೇರಿಸುತ್ತಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ, ಜನರ ವಿಶ್ವಾಸ ಕಳೆದುಕೊಳ್ಳುತ್ತಿದ್ದೇವೆ ಎಂಬ ಸತ್ಯವನ್ನು ಮರೆಮಾಚಲು, ಭಾಗವತ್ ಸೇರಿದಂತೆ ಕೇಸರಿ ನಾಯಕರೆಲ್ಲಾ ಇಂತಹ ನಾಟಕವಾಡುತ್ತಿದ್ದಾರೆ. ಮೋಹನ್ 

ಇದನ್ನೂ ನೋಡಿ: “ನಾವು ಮಾಡಿದ ದೇವ್ರು ನೀನು, ನಮಗೆ ದೇವ್ರು ಅಂತಿಯೇನೋ” ಸಿದ್ದಯ್ಯ ಸ್ವಾಮಿ ಬನ್ಯೂ Janashakthi Media

Donate Janashakthi Media

Leave a Reply

Your email address will not be published. Required fields are marked *