ಪರ್ಯಾಯ, ಪರಿಹಾರ, ಕಾರ್ಮಿಕ ಕಾನೂನು ಜಾರಿಗಾಗಿ ಬೀಡಿ ಕಾರ್ಮಿಕರ 10ನೇ ರಾಜ್ಯ ಸಮ್ಮೇಳನ

ಮಂಗಳೂರು : ಕಳೆದ ಹತ್ತಾರು ದಶಕಗಳಿಂದ ರಾಜ್ಯದ 22 ಜಿಲ್ಲೆಗಳಲ್ಲಿ ಸರಿಸುಮಾರು 6-7 ಲಕ್ಷ  ಬೀಡಿ ಕಾರ್ಮಿಕರು ಬೀಡಿ ಕೈಗಾರಿಕೆಯಲ್ಲಿ  ತಮ್ಮ ಬದುಕು  ಕಟ್ಟಿಕೊಂಡಿದ್ದಾರೆ. ಉದ್ಯಮದಲ್ಲಿ ದುಡಿದು ಬದುಕು ಸಾಗಿಸುವ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ, ಪರಿಹಾರ ಮತ್ತು ಕಾರ್ಮಿಕ ಕಾನೂನುಗಳ ಜಾರಿಗಾಗಿ 10ನೇ ರಾಜ್ಯ ಸಮ್ಮೇಳನವು ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ರಾಜ್ಯ  ಬೀಡಿ ಕಾರ್ಮಿಕರ ಫೆಡರೇಶನ್ (ಸಿಐಟಿಯು), 10ನೇ ರಾಜ್ಯ ಸಮ್ಮೇಳನವು ಇದೇ ಅಕ್ಟೋಬರ್, 31 ಮತ್ತು ನವೆಂಬರ್ 1ರಂದು ನಡೆಯಲಿದೆ ಎಂದು ಪ್ರಕಟಣೆ ನೀಡಿದೆ.

ಹತ್ತಾರು ದಶಕಗಳಿಂದ ದುಡಿಮೆ ಮಾಡಿಕೊಂದು ಬರುತ್ತಿರುವ ಕಾರ್ಮಿಕರಲ್ಲಿ ಮಹಿಳೆಯರು, ಒಂಟಿ ಮಹಿಳೆಯುರು, ಸಂಸಾರದ ನಿರ್ವಹಣೆಯ ಹೊಣೆ ಹೊತ್ತ ಮಹಿಳೆಯರು ಶೇ 90ರಷ್ಟು ಇದ್ದಾರೆ. ಇತ್ತೀಚೆಗೆ ಒಂದೆರಡು ದಶಕಗಳಿಂದ ಕೇಂದ್ರ – ರಾಜ್ಯ ಸರ್ಕಾರಗಳು ಧೂಮಪಾನ ನೀಷೆಧದ ಹಿನ್ನೆಲೆಯಲ್ಲಿ ಬೀಡಿ ಉದ್ಯಮವು ಸಮಸ್ಯೆಗಳಲ್ಲಿ ಸಿಲುಕಿದೆ. ಧೂಮಪಾನ ನಿಷೇದಕ್ಕೆ  ಕಾನೂನು ತಂದು ಕಠಿಣವಾಗಿ ಜಾರಿಗೊಳಿಸುವ ಸರ್ಕಾರ ನಡೆಯಿಂದ ಬೀಡಿ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ.

ಈ ಉದ್ಯಮದಲ್ಲಿ ದುಡಿದು, ಬದುಕು ಸಾಗಿಸುವ ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗವನ್ನು ಒದಗಿಸಬೇಕು,  ಭವಿಷ್ಯದ ಜೀವನ ನಿರ್ವಹಣೆಗಾಗಿ ಪರಿಹಾರವನ್ನು ಒದಗಿಸಲು ಯೋಜನೆ ರೂಪಿಸಬೇಕೆಂದು ಸಮ್ಮೇಳನದ ಪ್ರಮುಖ ಆಗ್ರಹವಾಗಿದೆ.

ಸಮ್ಮೇಳನವು ಬೀಡಿ ಕಾರ್ಮಿಕರು ದಶಕಗಳ ಕಾಲ ಹೋರಾಟದ ಫಲವಾಗಿ ರೂಪಿಸಲಾಗಿದ್ದ ಬೀಡಿ ಮತ್ತು ಸೀಗಾರ್ ಕಾರ್ಮಿಕರ ಸೇವಾ ಷರತ್ತು ಕಾಯಿದೆ-1966, ಬೀಡಿ ಕಾರ್ಮಿಕರ ಕ್ಷೇಮಾಭಿವೃದ್ದಿ ನಿಧಿ ಕಾಯಿದೆಗಳನ್ನು ಇಲ್ಲದಂತೆ ಮಾಡಿ ಹೊಸ ಸಂಹಿತೆಗಳನ್ನು  ಜಾರಿತರುತ್ತಿರುವ ಬಗ್ಗೆ, ಬೀಡಿ/ತಂಬಾಕು ಉದ್ಯಮದಿಂದ ಇಂದು ಜಿ.ಎಸ್‌.ಟಿ. ರೂಪದಲ್ಲಿ ಲಕ್ಷಂತಾರ ಕೋಟಿ ತೆರಿಗೆ ಪಡೆಯುವ  ಕೇಂದ್ರ-ರಾಜ್ಯ ಸರ್ಕಾರಗಳು ಬೀಡಿ ಕಾರ್ಮಿಕರ ಕಲ್ಯಾಣ ಯೋಜನೆಗಳಿಗೆ ಅಗತ್ಯವಾದ ಆರ್ಥಿಕ ಅನುದಾನವನ್ನು ನೀಡದೆ ವಂಚಿಸುತ್ತಿರುವ ಬಗ್ಗೆ ಸಹ ಸಮ್ಮೇಳನವು ಮುಂದಿನ ಹೋರಾಟಗಳನ್ನು ರೂಪಿಸುವ ಕುರಿತು ಚರ್ಚೆಯಾಗಲಿದೆ.

ರಾಜ್ಯ ಸರ್ಕಾರ ಬೀಡಿ ಕಾರ್ಮಿಕರಿಗೆ ಹಾಲಿ ಚಾಲ್ತಿಯಲ್ಲಿರುವ ಕಾಮಿಕರ ಕಾನೂನುಗಳನ್ನು ಜಾರಿಗೊಳಿಸುತ್ತಿಲ್ಲ, ಸರ್ಕಾರ ಅಂಕಿ- ಅಂಶಗಳ ಪ್ರಕಾರ ರಾಜ್ಯದಲ್ಲಿ ಕೇವಲ 1,05,807 ಬೀಡಿ ಕಾರ್ಮಿಕರಿದ್ದಾರೆ. ಕಾರ್ಮಿಕರ ಭವಿಷ್ಯ ನಿಧಿಗೆ ಒಳಪಟ್ಟಿರುವ ಬೀಡಿ ಕಾರ್ಮಿಕರ ಸಂಖೈ 2,08,587 ಅದರೆ ಬೀಡಿ ಕಾರ್ಮಿಕರ ಕ್ಷೇಮಾಬಿವೃದ್ದಿ ನಿಧಿಯಿಂದ ನಡೆಸಲಾಗುವ ಚಿಕಿತ್ಸಾಲಯಗಳಲ್ಲಿ ನೊಂದಾಯಿತರ ಸಂಖ್ಯೆಯು 2,57,061 ಎಂದಿದೆ. ಸರ್ಕಾರಕ್ಕೆ ರಾಜ್ಯ ಬೀಡಿ ಕಾರ್ಮಿಕರ ಬಗ್ಗೆ ನಿಖರವಾದ ಅಂಕಿ–ಅಂಶಗಳೇ ಇಲ್ಲದಂತ ತಾತ್ಸರ ಭಾವನೆಯನ್ನು ಇದು ಎತ್ತಿತೋರುತ್ತದೆ. ವಾಸ್ತವದಲ್ಲಿ ರಾಜ್ಯದಲ್ಲಿ ಸರಿ-ಸುಮಾರು 6-7 ಲಕ್ಷ ಬೀಡಿ ಕಾರ್ಮಿಕರಿದಾರೆ ಇವರ ಪುರ್ನರ್ ವಸತಿ/ ಪರ್ಯಾಯ ಮತ್ತು ಪರಿಹಾರಕ್ಕೆ ರಾಜ್ಯ ಸಮ್ಮೇಳನವು ಸಮ್ಮೆಳನವು ಚರ್ಚಿಸಿ ಹೋರಾಟ  ರೂಪಿಸಲಿದೆ.

ಸಮ್ಮೆಳನವನ್ನು ಆಖಿಲ ಭಾರತ ಬೀಡಿ ಕಾರ್ಮಿಕರ ಫೆಡರೆಷನ್ (ಸಿಐಟಿಯು) ಪ್ರಧಾನ ಕಾರ್ಯದರ್ಶಿ ದೇಬಶಿಶ್ ರಾಯ್ ಉದ್ಘಾಟಿಸಲಿದ್ದಾರೆ. ಅಥಿತಿಗಳಾಗಿ ಸಿಐಟಿಯು ರಾಷ್ಟ್ರೀಯ ಕಾರ್ಯದರ್ಶಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ರಾಜ್ಯ ಬೀಡಿ ಕಾರ್ಮಿಕರ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್, ಸಿಐಟಿಯು ದಕ್ಷಿಣ ಕನ್ನಡ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ರಾಜ್ಯ ಖಜಾಂಚಿ ಪದ್ಮವತಿ ಶೆಟ್ಟಿ ಭಾಗವಹಿಸಲಿದ್ದಾರೆ. ಸಮ್ಮೇಳನದ ಅಧ್ಯಕ್ಷತೆಯನ್ನು ಫೆಡೆರೇಷನ್ ರಾಜ್ಯಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ವಹಿಸಿ ನಡೆಸಿಕೊಡಲಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *