ಬೆಂಗಳೂರು: ಹೊಸ ಹೊಸ ಟೆಕ್ನಾಲಜಿ ಬಂದಂತೆ ನಾವು ಈಗ ಸಾಮಾನ್ಯವಾಗಿ ಬಳಸುವ ವಾಟ್ಸಪ್ ಕೂಡ ಅಪ್ಡೇಟ್ ಆಗ್ತಾನೆ ಇರತ್ತೆ. ಇದು ನಮಗೆ ಒಮ್ಮೊಮ್ಮೆ ಗೊತ್ತಾಗತ್ತೆ ಒಂದೊಂದ್ಸಲ. ಅಲ್ಲದೇ ಈ ವಾಟ್ಸಪ್ ಗ್ರೂಪ್‌ಗಳಲ್ಲೋ ಅಥವಾ ಇನ್ಯಾರೋ ನಮ್ಮ ವಾಟ್ಸಪ್‌ಲಿ ಲಿಂಕ್‌ಗಳನ್ನು ಕಳಿಸ್ತಾನೆ ಇರ್ತಾರೆ. ಅವು ಏನು ಎತ್ತಾ? ಅಂತ ನಮಗೆ ಕೆಲವು ಗೊತ್ತೇ ಇರಲ್ಲ.
ಚಿತ್ರದುರ್ಗದಲ್ಲೊಂದು ಇದೇ ವಿಚಾರವಾಗಿ ನಡೆದ ಘಟನೆ ನಮಗೆಲ್ಲಾ ಒಂದು ಕಡೆ ಪಾಠ ಕಲಿಯುವಂತೆಯೂ, ಮತ್ತೊಂದುಕಡೆ ವಾಟ್ಸಪ್ ಲಿಂಕ್‌ಗಳನ್ನ ಕ್ಲಿಕ್ ಮಾಡೋ ಮೊದ್ಲು ಜೋಪಾನ ಅಂತಿದೆ. ಯಾಕಂದ್ರೆ, ಅಪ್ಪಿತಪ್ಪಿ ಇಂತಹ ಕೆಲವು ಕ್ಲಿಕ್‌ಗಳು ನಮ್ಮ ಬ್ಯಾಂಕ್ ಖಾತೆಗಳಲ್ಲಿರೋ ಹಣವನ್ನ ಗುಳುಂ ಮಾಡಿ ಮಾಯಬಿಡ್ತಾವೆ ಅನ್ನೋದು.
ಇದನ್ನೂ ಓದಿ: ಬಂಡವಾಳ ಹೂಡಿಕೆ ವಿಚಾರವಾಗಿ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ನಾಯಕರಿಗೆ ನಾಚಿಕಯಾಗಬೇಕು: ಡಿಸಿಎಂ ಡಿ.ಕೆ. ಶಿವಕುಮಾರ್
ಹೀಗೆ ಅಮಾಯಕರ ಹಣಕ್ಕೆ ಸೈಬರ್ ವಂಚಕರು ಕನ್ನ ಹಾಕಲು ಮುಂದಾಗುತ್ತಿದ್ದಾರೆ. ರಿಮೋಟ್ ಆಕ್ಸಿಸ್ ಟೂಲ್ (ಆರ್‌ಎಟಿ)ಗಳ ಸಹಾಯದಿಂದ ಎಪಿಕೆ ಫೈನ್ ಅಥವಾ ಆಪ್ ಸಿದ್ಧಪಡಿಸಿ, ವಾಟ್ಸಪ್ ಅಥವಾ ಟೆಕ್ಸ್ಟ್ ಮೆಸೇಜ್ ಮುಖಾಂತರ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗಳಿಗೆ ಕಳುಹಿಸುತ್ತಿದ್ದು ಅದನ್ನು ಓಪನ್ ಮಾಡಿದರೆ ಸಾರ್ವಜನಿಕರಿಗೆ ಬರುವ ಎಲ್ಲಾ ಟೆಕ್ಸ್ಟ್ ಮೆಸೇಜ್‌ಗಳು ವಂಚಕರ ಮೊಬೈಲ್‌ಗಳಿಗೆ ರವಾನೆಯಾಗುವ ಮೂಲಕ ವಂಚಕರು ಸುಲಭವಾಗಿ ಓಟಿಪಿ ಪಡೆದುಕೊಂಡು ಸಾವರ್ಜನಿಕರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ಅಂದಹಾಗೆ ಕೆನರಾ ಬ್ಯಾಂಕಿನ ಗ್ರಾಹಕರಿಗೆ ಈ ರೀತಿಯ ತೊಂದರೆ ಆಗುತ್ತಿರುವುದು ಕಂಡುಬರುತ್ತಿದೆ.
ಇನ್ನು ಲಿಂಕ್‌ಗಳನ್ನು ಕ್ಲಿಕ್ ಮಾಡಿದ್ದಲ್ಲಿ ತಕ್ಷಣ ತಮ್ಮ ಮೊಬೈಲ್‌ನ್ನು ಸ್ವಿಚ್ ಆಫ್ ಮಾಡಿಕೊಂಡು ನಿಮ್ಮ ಬ್ಯಾಂಕ್‌ಗೆ ಸಂಪರ್ಕಿಸಿ ನಿಮ್ಮ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸುವುದು ಅಥವಾ ತಮ್ಮ ಖಾತೆಯಿಂದ ಹಣ ವರ್ಗಾವಣೆಗೊಂಡಿದ್ದಲ್ಲೇ ಸೈಬರ್ ಕ್ರೈಂ ಸಹಾಯವಾಣಿ 1930 ಕರೆ ಮಾಡಿ ದೂರು ದಾಖಲಿಸಬಹುದಾಗಿದೆ.
ಇದನ್ನೂ ನೋಡಿ: ಲೈಂಗಿಕ ಹತ್ಯಾಕಾಂಡ : ದೌರ್ಜನ್ಯಕ್ಕೊಳಗಾದವರಿಗೆ ನಾವು ಧ್ವನಿಯಾಗುತ್ತೇವೆJanashakthi Media